ನಮ್ಮವಳು
ನಾನು ನನ್ನ ಮಕ್ಕಳ, ನಮ್ಮ ಬಾಳುವೆಯ
ಚೆಂಬೆಳಕು .. ಚೆಂಬೆಳಕು .. ಚೆಂಬೆಳಕು.
ಹೊತ್ತುಟ್ಟ, ಹೊತ್ತು ಮುಳುಗ, ನಮಗೆ ಅವಳಿರಬೇಕು
ಅವಳಿರುವಳು ಎಂತಲೆ ಆಗಿದೆ ನೇರುಪ ನಮ್ಮ ಬದುಕು…
ನಿಜ ಹೇಳುವುದಾದರೆ
ನಮಗೇ ಇಲ್ಲರಿ ನಮ ಬಗ್ಗೆ… ಅವಳಿಗಿರುವಷ್ಟು ಜವಾಬ್ದಾರಿ
ನಮ್ಮ ಮಂಡೆ, ಭಾಂಡೆ
ಸರಿಯಾಗಿ ತೋರು ಗೊಂಡರೆ
ಅದೆಲ್ಲಾ ಅವಳ ಪರಿಶ್ರಮ, ಪರಿಣತಿ ನೇರ ಫಲಶ್ರುತೀರಿ
ಒಂದು ಪಕ್ಷ
ಶಿವನ ಶಿರವೂ ಹೂ ಕಾಣದೆ ಹೋಗಬಹುದು
ಆದರೆ ಅವಳಿಗೆ ಎಂದೆಂದಿಗೂ ತಪ್ಪದು ಮನೆ ಬದುಕು,
ಇಷ್ಟೆಲ್ಲಾ ಆದರೂ ಅವಳಿಗಿಲ್ಲ ಪರಾಕು
ನಮಗೊಂದು ಅವಳು ಜೀವಂತ ಸರಕು.
*****