
ಕಾಣುವ ಕಣ್ಣಿಗೆ ಇರುವಳು ರುಕ್ಮಿಣಿ ಕೃಷ್ಣನ ಬದಿಯಲ್ಲಿ; ರಾಧೆಯು ಎದೆಯಲ್ಲಿ. ಬಲ್ಲವರಾರು ಇರುವವರೆಂದು ರುಕ್ಮಿಣಿ ಎದೆಯಲ್ಲಿ; ಕೃಷ್ಣನ ಗಾಳಿಯಲಿ! || ತುಟಿಯಲಿ ರಾಮ ಮನದಲಿ ಕೃಷ್ಣ ಇದು ಗಂಡಿಗೆ ಪ್ರೀತಿ; ನಾವೊಪ್ಪಿದ ರೀತಿ. ನುಡಿಯದೆ ಹೋದ ಮಾತುಗಳ...
ಸೀರೆ ಸುತ್ತಿಕೊಳ್ಳುವಾಗ ದ್ರೌಪದಿ ಉಂಗುರ ಎತ್ತಿಕೊಳ್ಳುವಾಗ ಶಕುಂತಲೆ ಒಲೆ ಹೊತ್ತಿಕೊಳ್ಳುವಾಗ ಸೀತೆ ಯಾಕೆ, ಯಾಕೆ ನೆನಪಾಗಬೇಕು? ಕೆರೆಯ ಏರಿಯ ಮೇಲೆ ಭಾಗೀರಥಿ ಎಡವಿದ ಕಲ್ಲುಗಳಲ್ಲಿ ಒಬ್ಬಬ್ಬಳೂ ಮಹಾಸತಿ ಯಾಕೆ, ಯಾಕೆ ಕಾಣಬೇಕು? ಚಿತೆಯಿಂದ ಎದ್ದು ...














