ಸವಿತಾ ನಾಗಭೂಷಣ

#ಕವಿತೆ

ಕೋವಿಯಲಿ

0

ಕೋವಿಯಲಿ ಜೀವ ಅಂಕುರಿಸುವ ಮೊದಲು… ಮನುಷ್ಯನ ಮಮಕಾರದ ಹಲ್ಲು ಉದುರುವುದು ಎದೆಯು ಕಲ್ಲಾಗುವುದು ಮೈಯೊಳಗೆ ರಕ್ತ ಪ್ರವಾಹವು ಹಿಮ್ಮುಖವಾಗಿ ಏರುವುದು ತೋಳುಗಳ ಮಾಂಸ ಖಂಡಗಳು ಸೊಕ್ಕಿ ಕುಣಿಯುವವು ಮೂಗಿನ ಹೊಳ್ಳೆಗಳು ಬಿರಿದು ಕಣ್ಣುಗಳು ನಿಚ್ಚಳ ಬೇಸಿಗೆಯ ಆಕಾಶವಾಗುವುದು ಹೂ ಬೆರಳುಗಳು ಕಟ್ಟಿಗೆಯಾಗಿ ಸೆಟೆದು ಸಜ್ಜಾಗುವವು -೨- ಕೋವಿಯಲಿ ಜೀವ ಸಂಚಾರವಾಯಿತೆಂದರೆ… ಅದು ಮೊದಲು ದಯೆಯನ್ನು ಬಲಿ […]

#ಕವಿತೆ

ಸಾವು

0

ಅವನು ಹಾಗೆಯೆ ಮಾತಿನಿಂದ ಮೈಥುನದವರೆಗೆ ಎಲ್ಲವೂ ಹಿತಮಿತ ತೂಕದ ವ್ಯವಹಾರ ಅರವತ್ತರ ಇಳಿವಯಸ್ಸಿನಲ್ಲೂ ಕಪ್ಪನೆಯ ಒತ್ತಾದ ಕೂದಲು ಉಬ್ಬರಿಸದ ಹೊಟ್ಟೆ ಸಂಯಮ ಫಲ ಇವನದು ಆತಿಯೆ ಆಡಂಬರ ಮೋಸ ದಗಾ ವಂಚನೆಯಲಿ ಹೆಚ್ಚು ಗೊಂದಲವಿಲ್ಲ ತುಂಬಿದ ಸಂಸಾರ ಹೆಣ್ಣು ಹೊನ್ನೂ ಮಣ್ಣಿನಲಿ ಹೆಚ್ಚು ರುಚಿ ಬಾಗಿದ ಬೆನ್ನು ಮಂಜು ಕಣ್ಣು ಚಪಲವೇ ಬಲ ಇದು- ಮರದ […]

#ಕವಿತೆ

ನಾಳೆ

0

ನಾಳೆ ಕೊಯ್ಲಾಗುವುದು ಹಕ್ಕಿಗಳಿಗೆ ಹುತ್ತರಿ ಹಾಡು ವಿದಾಯ ಹೇಳುವುದು ತೆನೆಗಳೊಡನೆ ಆಟವಾಡಲು ಬರುವ ಸುಳಿಗಾಳಿ ನಿರಾಶೆಯಿಂದ ಮರಳಬೇಕಾಗುವುದು ಇನ್ನಿಲ್ಲಿ ನರಿ ಊಳಿಡದು ಇಲಿ ಬಿಲ ತೋಡದು ಕವಣೆ ಬೀಸುವ ಹುಡುಗರಿಗಿನ್ನು ಕೆಲಸವಿರದು ಬೆದರು ಬೊಂಬೆಯೂ ನಾಳೆ ತನ್ನ ವೇಷ ಕಳಚಿಡುವುದು ಸದ್ದುಗದ್ದಲ ಸಂಭ್ರಮ ತನಗೆ ತಾನೆ ಇಲ್ಲವಾಗುವುದು ಘನವಾದ ಮೌನ ಇಡೀ ಹೊಲವ ಆವರಿಸುವುದು. *****

#ಕವಿತೆ

ಕಣ್ಣು, ಬೂದಿ ಮತ್ತು ಜಗತ್ತು

0

ಆ ಕಣ್ಣು ನೀರು ನೆಲ ಆಕಾಶ ತನ್ನಲ್ಲೆ ಅಂದಿತು ಆ ಕಣ್ಣು ಮೋಹ ಮದ ಮತ್ಸರ ತನ್ನಲ್ಲೆ ಅಂದಿತು ಆ ಕಣ್ಣು ಕ್ರಿಮಿ ಕೀಟ ಪಶು ಪಕ್ಷಿಗೆ ಕನ್ನಡಿ ತಾನೆಂದಿತು ಆ ಕಣ್ಣು ಹುಟ್ಟು-ಸಾವು ತನ್ನಲ್ಲೆ ಎಂದಿತು ಆ ಕಣ್ಣು ಜಗತ್ತು ತಾನೆಂದಿತು ೨ ಧಗ ಧಗ ಧಗ ಧಗ ಉರಿಯುವ ಬೆಂಕಿಯಲ್ಲಿ ಹೂವಿನ ಎಸಳುಗಳಂತಹ […]

#ಕವಿತೆ

ಬೇಡ…

0

ಭಯ ಹುಟ್ಟಿಸಬೇಡ… ಬೆಂಕಿಯ ಮುಟ್ಟಿ ನೋಡುತ್ತೇನೆ ತಡೆಯಬೇಡ… ಕಡಲೊಳಗೆ ಧುಮುಕಿ ಈಜುತ್ತೇನೆ ನಗಬೇಡ… ಬಿಸಿಲುಗುದುರೆಯನೇರಿ ಹೋಗುತ್ತೇನೆ ಅಣಕಿಸಬೇಡ… ಮರಳೊಳಗೆ ಗೂಡು ಕಟ್ಟುತ್ತೇನೆ ಎಚ್ಚರಿಸಬೇಡ… ಮೊಟ್ಟೆಗೆ ಕಾವಿಟ್ಟು ಮರಿ ಮಾಡುತ್ತೇನೆ ಮುನಿಯಬೇಡ… ಮಾರನಿಗೊಲಿದು ಮೈ ಮರೆಯುತ್ತೇನೆ ಕೀಳಬೇಡ… ಮೈದುಂಬಿ ಅರಳುತ್ತೇನೆ ಕರೆಯಬೇಡ… ಇಲ್ಲಿರಲು ಆಶೆ ಪಡುತ್ತೇನೆ ಬೇಡ… ಬೇಡ… ಬೇಡ…! ಹಿಂಬಾಲಿಸಬೇಡ ಸುಮ್ಮನೆ… *****

#ಕವಿತೆ

ಮಾತನಾಡಿಸಬೇಕು

0

ಹೊರಳುತ್ತಿರುವ ಭೂಮಿಯನ್ನೂ ಉರುಳುತ್ತಿರುವ ಸಾಗರವನ್ನೂ ಮಾತನಾಡಿಸಬೇಕು ಉರಿಯುತ್ತಿರುವ ಬೆಂಕಿಯನ್ನೂ ಮೊರೆಯುತ್ತಿರುವ ಗಾಳಿಯನ್ನೂ ಮಾತನಾಡಿಸಬೇಕು ಮರಳುತ್ತಿರುವ ಹಕ್ಕಿಗಳನ್ನೂ ಅರಳುತ್ತಿರುವ ಹೂವುಗಳನ್ನೂ ಮಾತನಾಡಿಸಬೇಕು ಚಿಗುರುತ್ತಿರುವ ಮರವನ್ನೂ ಕರಗುತ್ತಿರುವ ಮಂಜನ್ನೂ ಮಾತನಾಡಿಸಬೇಕು ಆಕಾಶ-ಕಾಯದೊಳಗೆ ಅವಿನಾಶಿ ಸೂರ್‍ಯ! ದೇವರೆ… ಇವರದ್ದು ಯಾವ ಭಾಷೆ?! ಎಂದಾದರೂ ಕೈಗೂಡುವುದೇ ಆಶೆ? *****

#ಕವಿತೆ

ಕಾಲು ದಾರಿಯೆ ಸಾಕು…

0

ಹಸಿವಾಯಿತು ಶರಣಾದೆ ಮರಗಳಿಗೆ ಬಾಯಾರಿತು ತಲೆಬಾಗಿದೆ ನದಿಗಳಿಗೆ ಮನಸೊಪ್ಪಿತು ಸುಲಿಪಲ್ಲ ಗೊರವಂಗೆ ಒಲಿದೆ ಗಿರಿಗಳಿಗೆ ಗವಿಗಳಿಗೆ ಗಿಳಿ ಕೋಗಿಲೆ ನವಿಲುಗಳಿಗೆ ಮಂದ ಮಾರುತಗಳಿಗೆ ಕೈಯ ಮುಗಿದೆ ನಡೆವವಳಿಗೆ ನುಡಿಯ ಹಂಗೇಕೆ? ಕಡೆಯ ನುಡಿಯನೂ ಕೊಡವಿ …ಮುನ್ನಡೆದೆ ಕೂಡಿ ಬಂದಿರಲು ಗಳಿಗೆ ಕಾಲು ದಾರಿಯೆ ಸಾಕು ಕರೆದೊಯ್ಯಲು ಕದಳಿಗೆ… ಇದನರಿಯದಿಹನೆ ಚೆನ್ನಮಲ್ಲಿಕಾರ್‍ಜುನ? *****

#ಕವಿತೆ

ಮೋಂಬತ್ತಿ

0

ಒಂದು ಗಂಟೆ ಪುಟ್ಟ ಕೋಣೆಯ ಬೆಳಗಿದೆ ಗೋಡೆಯ ಮೇಲೆ ಸುಂದರಿಯ ಪಟವಿತ್ತು ಪರಿಶೀಲಿಸಿದೆ ಹೂದಾನಿಯಲ್ಲಿ ತಾಜಾ ಹೂಗುಚ್ಚವಿತ್ತು ಆಘ್ರಾಣಿಸಿದೆ ಮರುಳೆ… ಬೂದಿಯಾಗಿರು ಎಂದು ಬೆಂಬತ್ತಿದ ಪತಂಗಕ್ಕೆ ತಿಳಿಯ ಹೇಳಿದೆ ಮೂಲೆಯಲ್ಲಿ ಮುದುಡಿ ಮಲಗಿದ್ದ ಮುದುಕನ ಮರಣಕ್ಕೂ ಸಾಕ್ಷಿಯಾದೆ ಉರಿದೂ ಉರಿದೆ ಕೊನೆವರೆಗೆ ದೇಹದೊಂದಿಗೆ ಆತ್ಮನೊಂದಿಗೆ. *****

#ಕವಿತೆ

ಎಲ್ಲಿ ಹೋದವೋ….

0

ಮುಡಿಯ ಸಿಂಗರಿಸಿದ ಹೂವುಗಳು…. ಕೆನ್ನೆಯ ನುಣುಪಾಗಿಸಿದ ಬಣ್ಣಗಳು… ಮೂಗನು ಸೆಳೆದ ಸುಗಂಧಗಳು… ನಾಲಗೆಯ ಮುದಗೊಳಿಸಿದ ರಸಗಳು… ಕಿವಿಯ ತಣಿಸಿದ ಸ್ವರಗಳು… ಕಣ್ಣನು ಅರಳಿಸಿದ ನೋಟಗಳು… ಎಲ್ಲಿ ಹೋದವೋ? ಎಣ್ಣೆ ತೀರಿದೆ ಎಂದು ತೋರುವುದು… ಬೆಂಕಿಯ ಕರುಣೆ ಬತ್ತಿ ಮತ್ತೂ ಉರಿಯುವುದು. *****

#ಕವಿತೆ

ವ್ಯತ್ಯಾಸ

0

ರೆಕ್ಕೆಗಳಿಲ್ಲ ಎಂದು ಆಕಾಶ ಅವಮಾನಿಸಲಿಲ್ಲ ಗಿಡದೆತ್ತರ ಎಂದು ಮರ ಮೂದಲಿಸಲಿಲ್ಲ ಏನು ನಡೆಯೊ ಎಂದು ನದಿ ಅಣಕವಾಡಲಿಲ್ಲ ಸಣ್ಣವಳೆಂದು ಶಿಖರ ತಿರಸ್ಕರಿಸಲಿಲ್ಲ ಕೃಷ್ಣೆ ಎಂದು ಬೆಳದಿಂಗಳು ನಗೆಯಾಡಲಿಲ್ಲ ಮಾತು ಬರುವುದಿಲ್ಲ ಎಂದೇನೂ ಅಲ್ಲ ಮತ್ತೆ? ಎದೆಯಲ್ಲಿ ವಿಷವಿಲ್ಲ ನಾಲಗೆಯು ಮುಳ್ಳಲ್ಲ ಪ್ರೀತಿಗೆ-ಮೈತ್ರಿಗೆ ಮಿಗಿಲಿಲ್ಲ. *****