ಡಾ|| ಬಿ. ಎಸ್. ಯಡಿಯೂರಪ್ಪ ನಮ್ಮ ಪ್ರೀತಿಯ ಮುಖ್ಯಮಂತ್ರಿ

ಡಾ|| ಬಿ. ಎಸ್. ಯಡಿಯೂರಪ್ಪ ನಮ್ಮ ಪ್ರೀತಿಯ ಮುಖ್ಯಮಂತ್ರಿ

೨೦೦೮ನೇ ಮೇ ತಿಂಗಳು ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಕನ್ನಡ ಜನತೆಗೆ ಮುಖ್ಯವಾದ ಚುನಾವಣೆಯಾಗಿತ್ತು. ಭಾರತದಲ್ಲಿ ಕೆಲವೊಂದು ಜನಕ್ಕೆ ಚುನಾವಣೆ ಎಂದರೆ ಹಸಿರು ಶೀಶೆಗಳ ಹಾಗು ಹಸಿರು ಸೀರೆಗಳ ಪ್ರವಾಹ. ಆದರೆ ೨೦೦೮ರ ಮೇ ಚುನಾವಣೆ ಕನ್ನಡ ಜನರಿಗೆ ಹಾಗಾಗಿರಲಿಲ್ಲ. ಕಳೆದ ಮೈತ್ರಿ ಸರ್ಕಾರ ಬಹಳ ಚೆನ್ನಾಗಿತ್ತು. ಆದರೆ ಅವರಿತ್ತ ಸೂಚನೆಗಳು ಸಮರ್ಪಕವಾಗಿರಲಿಲ್ಲ ಮತ್ತು ಕನ್ನಡ ಮತದಾರ ಏಕಪಕ್ಷ ಆಡಳಿತದ ಬಗ್ಗೆ ತೀರ್ಮಾನಿಸಿದ. ಆದರೆ ಯಾವ ಪಕ್ಷಕ್ಕೆ ಮತ ನೀಡಬೇಕೆಂಬುದು ಗಂಭೀರ ಪ್ರಶ್ನೆಯಾಗಿತ್ತು. ನಮ್ಮೆಲ್ಲರಿಗೂ ಗೊತ್ತಿತ್ತು ಕರ್ನಾಟಕದ ಮೂರು ರಾಜಕೀಯ ಪಕ್ಷಗಳು ಶ್ರೇಷ್ಠ ಮುಂದಾಳುಗಳನ್ನು ಹೊಂದಿದೆ ಅವರು ಗೌರವಾನ್ವಿತರು ಮತ್ತು ಅವರನ್ನು ಕರ್ನಾಟಕದ ಜನತೆ ಗೌರವದಿಂದ ಕಾಣುತ್ತದೆ. ಪ್ರತಿಯೊಂದು ಪಕ್ಷವೂ ತನ್ನದೇ ಆದ ಆಕರ್ಷಕವಾದ ಪ್ರಣಾಳಿಕೆಗಳನ್ನು ಹೊಂದಿತ್ತು. (ಸಾಂದರ್ಭಿಕವಾಗಿ ನಾನು ಹೇಳಲಿಚ್ಛಿಸುವುದೇನೆಂದರೆ ಕಳೆದ ೫೦ ವರ್ಷಗಳಲ್ಲಿ ನನ್ನ ಉತ್ತಮ ಪ್ರಯತ್ನಗಳ ನಂತರವೂ ಯಾವುದೇ ಪಕ್ಷದ ಒಂದೂ ಪ್ರಣಾಳಿಕೆ ನನಗೆ ದೊರೆಯಲಿಲ್ಲ.) ಹಾಗೇ ಎಲ್ಲರೂ ಕೇಂದ್ರದಲ್ಲಿ ಬಹಳ ಪ್ರಭಾವಿಗಳಾಗಿದ್ದವರು. ಹೀಗಾಗಿ ಅಧಿಕಾರಕ್ಕೆ ಚುನಾಯಿಸಬೇಕಾದ ಪಕ್ಷದ ಆಯ್ಕೆ ಕಠಿಣವಾದ ಕೆಲಸವಾಗಿತ್ತು. ಇದರೊಂದಿಗೆ ಕರ್ನಾಟಕದ ಮತದಾರ ಯಾವಾಗಲೂ ಒಂದು ಗಂಭೀರ ರಾಜಕೀಯ ಮೋಡಿಗೊಳಗಾಗಿದ್ದು ಕರ್ನಾಟಕದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿತ್ತು.

ಒಂದು ವೇಳೆ ಕರ್ನಾಟಕ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ಚುನಾಯಿಸಿದ್ದರೆ ಆಗ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿತ್ತು. ಹಾಗೆಯೇ ಒಂದು ವೇಳೆ ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರದ ಮತ ನೀಡಿದರೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿತ್ತು. ಫಲಿತಾಂಶವಾಗಿ ಕರ್ನಾಟಕ ಸುಮಾರು ೨ ದಶಕಗಳ ಕಾಲ ಮಲತಾಯಿ ನಡವಳಿಕೆಗೆ ಒಳಗಾಗಿದೆ. ನಾವು ದೇವರನ್ನು ಬೆಂಬಲಿಸುವುದರಿಂದ ಅಸುರರು ಪ್ರಹಾರ ಮಾಡುವ ಜೈವಿಕಯುದ್ಧಕ್ಕೆ ಕಾಲ ಕಾಲದಲ್ಲಿ ಸಂಕಟಪಟ್ಟಿದ್ದೇವೆ. ಮನುಷ್ಯರು ಯಾವಾಗಲೂ ಶನಿಕಾಟದಿಂದ ಸಂಕಟಪಟ್ಟಿದ್ದಾರೆ ಮತ್ತು ವ್ಯಕ್ತಿಗಳ ವೈಯಕ್ತಿಕ ಪ್ರತಿರೋಧದಿಂದ. ಆದರೆ ನಾನು ಸಂಪೂರ್ಣ ರಾಜ್ಯ ವಿಚಿತ್ರ ಶಾಪದ ಭಯಂಕರ ಹಿಡಿತದಿಂದ ನರಳುವುದನ್ನು ನೋಡಿಲ್ಲ.

ಈ ರೀತಿ ೨೦೦೮ ಮೇ ೩೦ ಶನಿವಾರದಂದು ಮಧ್ಯಾಹ್ನ ೧.೫೦ಕ್ಕೆ ಜಯಶೀಲರಾದ ಶ್ರೀ ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಂಡಾಗ ಅದು ಕರ್ನಾಟಕದ ಜನತೆಯ ಮಹತ್ತರವಾದ ಜಯವಾಗಿತ್ತು, ಬಿಜೆಪಿಯದಲ್ಲ. ಏಕೆಂದರೆ ಕರ್ನಾಟಕದ ಜನತೆ ಕರ್ನಾಟಕ ರಾಜ್ಯದಲ್ಲಿ ಒಂದು ಪಕ್ಷದ ಅಧಿಕಾರವನ್ನು ಖಚಿತಗೊಳಿಸಿತು.

ಶ್ರೀ ಬಿ. ಎಸ್. ಯಡಿಯೂರಪ್ಪ ನಮ್ಮ ಪ್ರೀತಿಯ ಮುಖ್ಯಮಂತ್ರಿ ದೈವಕ್ಕೆ ಹೆದರುವ ವ್ಯಕ್ತಿ. ಅವರಿಗೆ ಭಾರತದ ಎಲ್ಲಾ ದೇವಸ್ಥಾನದ ದೇವ ದೇವಿಯರ ಅನುಗ್ರಹ ಇದೆ. ಅವರ ಪ್ರಾರ್ಥನೆಯ ಶಕ್ತಿ ಪ್ರಸಿದ್ಧವಾಗಿದೆ. ಅವರ ಪ್ರಾರ್ಥನೆ ದೇವ ದೇವಿಯರನ್ನು ಸೆಕೆಂಡಿಗೆ ೫ ಬೆಳಕು ವರ್ಷ ವೇಗದಲ್ಲಿ ತಲುಪುತ್ತದೆ. ದೇವರಿಗೆ ಹತ್ತಿರವಾಗಿರುವ ಅವರ ಗುಣದಿಂದಾಗಿ ಅವರು ಬಗೆ ಬಗೆಯ ವರಗಳಿಂದ ಆಶೀರ್ವಾದಿತರು. ಆದರೆ ಈ ವರಗಳು ಅವರಿಗೆ ಒಂದು ಆಜ್ಞೆಯೊಂದಿಗೆ ಬಂದಿದೆ. ಅದು ನಗರಾಭಿವೃದ್ದಿ, ಗ್ರಾಮಾಭಿವೃದ್ಧಿಗಳ ಬಗ್ಗೆ ವಿಶೇಷವಾಗಿ ಅಭಿವೃದ್ಧಿಗೆ ಆದ್ಯತೆ ಯೊಂದಿಗೆ ಗಮನ ಕೊಡಬೇಕೆಂದು.

ನಾನು ಕರ್ನಾಟಕದಲ್ಲಿ ಅನೇಕ ಗ್ರಾಮಗಳನ್ನು ನೋಡಿದ್ದೇನೆ. ಅವುಗಳಲ್ಲಿ ಬಹುತೇಕ ಅಸ್ತವ್ಯಸ್ತವಾಗಿ ಯೋಜಿಸಿರುವುದು. ಮೂಲಭೂತ ಸೌಕರ್ಯದ ಕೊರತೆಯಿದೆ. ನಾನು ಎಂದೂ ಯಾವ ಹಳ್ಳಿಯಲ್ಲೂ ಯಾವ ಎಂ.ಜಿ. ರಸ್ತೆಯನ್ನು ನೋಡಿಲ್ಲ (ರಸ್ತೆ ಅಗಲವಿಲ್ಲದಿರಬಹುದು. ಆದರೆ ಮಹಾತ್ಮರ ಹೆಸರು ಅದು. ಸ್ವಚ್ಛವಾಗಿರಬೇಕೆಂದು ಸೂಚಿಸುತ್ತದೆ). ಆದರೆ ಗ್ರಾಮಗಳ ಸಹಜ ಪರಿಸರ ಅವುಗಳ ಗುಡ್ಡಗಳು, ಬೆಟ್ಟಗಳು ದೊಡ್ಡ ಮರಗಳು, ಹೂ ಗಿಡಗಳು ಹೊಳೆ ತೊರೆಗಳಿಂದ ತುಂಬಾ ರಮ್ಯ ಕೆರೆಗಳಿವೆ, ಕೊಳಗಳಿವೆ. ಅವುಗಳಲ್ಲಿನ ಬಣ್ಣ ಬಣ್ಣದ ಮೀನುಗಳು ನಿಮ್ಮೊಂದಿಗೆ ಆಡಲಿಚ್ಛಿಸುತ್ತವೆ. ಅಲ್ಲಿ ನೀವು ಹಸಿರು ಹುಲ್ಲಿನ ಮೇಲೆ ಸುಳಿಗಾಳಿಯ ಶಬ್ದವನ್ನು ಆಲಿಸುತ್ತ ನಡಿಯುತ್ತೀರಿ. ಹದ್ದುಗಳು ಕೆಳಗೆ ಹಾರಿ ಹರಿವ ಹಾವುಗಳನ್ನು ಹಿಡಿದುಕೊಳ್ಳುವ ಧೈರ್ಯ ಮಾಡುವುದು ಅಲ್ಲೇ ನಾವು ಗಮನಿಸದಿರುವುದು.

ಕೆಲವು ದಶಕಗಳ ಹಿಂದೆ ಭರಮಸಾಗರದ ಬಳಿಯಲ್ಲಿ ಒಂದು ಯೋಜನೆಯ ಕೆಲಸಕ್ಕಾಗಿ ಶಿಬಿರ ಮಾಡಿದ್ದೆ. ನನ್ನ ಸ್ವಿಸ್ ಕಾಟೇಜಿನಿಂದ (ಗುಡಿಸಿಲಿಗೆ ಭವ್ಯ ಹೆಸರು) ಹೊರಬಂದೆ, ರಾತ್ರಿಯೂಟವಾದ ಮೇಲೆ ಪರಿಸರವೆಲ್ಲ ಬೆಳಕಾಗಿತ್ತು. ನಾನು ಮೇಲೆ ನೋಡಿದೆ. ನಕ್ಷತ್ರಭರಿತ ಆಕಾಶವನ್ನು ನೋಡಿ ಚಕಿತನಾದೆ. ಕೋಟ್ಯಂತರ ನಕ್ಷತ್ರಗಳು ಗ್ರಾಮವನ್ನು ಸ್ವರ್ಗೀಯ ಬೆಳಕಿನಿಂದ ಬೆಳಗಿಸಲು ಬಂದಂತೆ ಕಾಣಿಸಿತು. ಈ ಪ್ರಕೃತಿಯ ಸುಂದರ ವಸ್ತುಗಳ ಮಧ್ಯೆ ಮನುಷ್ಯ ಕೊಳಕು ಗ್ರಾಮವನ್ನು ಕೊಳಕು ಪಟ್ಟಣವನ್ನು ನಿರ್ಮಿಸಿದರೆ ಅದು ಪ್ರಕೃತಿಯ ವಿರುದ್ಧ, ಮನುಷ್ಯನ ಕ್ರೌರ್ಯವಲ್ಲದೆ ಬೇರೇನು ಅಲ್ಲ. ನಾನು ಡೆಟ್ರಾಯ್ಟ್ನಲ್ಲಿದ್ದಾಗ ಗುಪ್ತರ ಕಾಲದ ಬಗ್ಗೆ ಒಂದು ಪುಸ್ತಕ ಓದಿದ್ದೆ. ಒಂದು ಪ್ಯಾರಾದಲ್ಲಿ ಗ್ರಂಥಕರ್ತ ಭಾರತದಲ್ಲಿ ಕಳೆದ ೨,೦೦೦ ವರ್ಷಗಳಲ್ಲಿ ಗ್ರಾಮಗಳು ಹಾಗು ಗ್ರಾಮಜೀವನ ಬದಲಾಗಲಿಲ್ಲವೆಂದು ತಿಳಿಸಿದ್ದಾನೆ. ಆದರೆ ನಮ್ಮ ಪ್ರೀತಿಯ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ಬದಲಾಯಿಸುತ್ತಾರೆ. ಅವರು ಈಗಾಗಲೇ ಘೋಷಿಸಿದ್ದಾರೆ ಎಲ್ಲ ಗ್ರಾಮಗಳು ಗುಡಿಸಲು ರಹಿತ ಗ್ರಾಮ ಗಳಾಗುತ್ತವೆ ಎಂದು. ಕರ್ನಾಟಕ ಬಹುಬೇಗ ಬೃಹತ್ ಸಂಖ್ಯೆಯ ಸುವರ್ಣ ಗ್ರಾಮಗಳಾಗುತ್ತವೆ. ಏಕೆಂದರೆ ನಮ್ಮ ಪ್ರೀತಿಯ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಮಾದರಿ ಗ್ರಾಮ ಹೇಗಿರಬೇಕೆಂದು ತಿಳಿದಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೆಲೆ
Next post ನನ್ನಾಕೆ ಸುಂದರಿ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…