ಏನೆ? ಏನೆ? ಏನದು?
ಬಾತಿದೆ? ಕೊಳೆತಿದೆ?

ಮೇಗಡೆ ಹಾರುತ್ತಿದೆ ಡೇಗೆ
ನರಿಯೊಂದು ಊಳಿಡುತ್ತಿದೆ
ನಾಯೊಂದು ಹೊಂಚು ಹಾಕಿದೆ
ಕಾಗೆಗಳು ತಾರಾಡುತ್ತಿವೆ
ಇರುವೆಗಳು ದಂಡೆತ್ತಿವೆ
ನೊಣಗಳು ಗುಂಯ್‌ ಗುಡುತ್ತಿವೆ
ಮಿಜಿ ಮಿಜಿ ಮಿಜಿ ಮಿಜಿ
ಮೂಗು ಮುಚ್ಚಿಕೊಂಡರೂ
ಮಂದಿಯ ನೋಟ ಅತ್ತಲೇ….

ಹೌದೇನೇ? ಹೌದೇನೇ? ನಿಜವೇನೇ?
ದೇಹವೋ? ದೇಶವೋ?
ಕಾಯವೋ? ಕನಸೋ?

ಅದೇ…. ಅದೇ….
ಆತ್ಮದ ತುಣುಕು ಕಣೇ….
ಹೇಳಲಾರೆ…. ತಾಳಲಾರೆ….

ಹೂಂ….
ಇರಲಿ ಹಚ್ಚೋಣ ಬಾ
ತುಣುಕಿನೊಂದರ ಮೇಲೆ
ಮಿಣುಕು ದೀಪ…
*****