ಕವಿಯ ಮಾತನ್ನು ಯಾರು ಕೇಳುತ್ತಾರೆ?

ಅವರು ತ್ರಿಶೂಲಗಳನ್ನು ಹಿಡಿದಿದ್ದಾರೆ ಇವರು ತಲವಾರಗಳನ್ನು ಹಿಡಿದಿದ್ದಾರೆ ಕಿಚ್ಚು ಹಾಯಿಸುವ ಹಬ್ಬದಲಿ ಇಬ್ಬರೂ ಹುರುಪಿನಲಿ ಪಾಲ್ಗೊಂಡಿದ್ದಾರೆ! 'ಅಲ್ಲಾ' ಎಂದರೆ ನೇರ ಸ್ವರ್ಗಕ್ಕೆ ಅಟ್ಟುತ್ತಾರೆ 'ರಾಮ' ಎಂದರೆ ಇಲ್ಲೇ ನರಕದಲ್ಲಿ ಉಳಿಸುತ್ತಾರೆ! ***** ಗುಜರಾತ್‌ಗೆ ಕವಿ...

ಕವಿಯ ಕಳವಳ

ನಸುಕಿನಲ್ಲಿ ಹಲ್ಲು ಮೂಡದ ಹಸುಳೆಯನ್ನು ಅವರು ಹೊಸಕಿ ಹಾಕಿದರು ಹಾಡು ಹಗಲೇ ಹರೆಯದ ಹುಡುಗಿಯನ್ನು ಎಳೆದಾಡಿದರು ಮುಸ್ಸಂಜೆಯಲ್ಲಿ ಮನೆಗೆ ಮರಳುತ್ತಿದ್ದ ಮುದುಕನನ್ನು ಮುಗಿಸಿದರು. ಬಲಿಯಾದವರು-ಬಲಿಗೈದವರು ಇಬ್ಬರೂ ನನ್ನ ಒಡಹುಟ್ಟುಗಳು ಅಯ್ಯೋ, ದ್ವೇಷವೊಂದೇ ಉಸಿರಾಡುತ್ತಿದೆ ರಾತ್ರಿ-ಹಗಲು......

ಕರೆ

ಚೆಲುವ ಬಣ್ಣಿಸಬಹುದು ಒಲವ ಬಣ್ಣಿಸಬಹುದೆ? ಹೇಗೆ ಬಣ್ಣಿಸಲದನು ನಲುಗದಂತೆ... ಬಣ್ಣನೆಗೆ ಮೀರಿದುದು ಹೀಗೆಂದು ತೋರುವುದು ಚಂದಿರನ-ನೈದಿಲೆಯ ಸ್ನೇಹದಂತೆ ನದಿಯ ಬಣ್ಣಿಸಬಹುದು ಒಳಗುದಿಯ ಬಣ್ಣಿಸಬಹುದೆ ಹೇಗೆ ಬಣ್ಣಿಸಲಿ ಕುದಿಯ ಕಲಕದಂತೆ... ಬಣ್ಣನೆಗೆ ಮೀರಿದುದು ಹೀಗೆಂದು ತೋರುವುದು...

ಹೇಗೆ ದಂಡಿಸಿದ್ದಾರೆ ನೋಡಿ…

ನುಜ್ಜುಗುಜ್ಜಾಗಿದೆ ಪ್ರೀತಿ ಸಿಲುಕಿ ಈ ಚಕ್ರದಡಿ ಬೂದಿಯಾಗಿದೆ ಸುಟ್ಟು ಬೆಟ್ಟದ ಆ ತಪ್ಪಲಲಿ ಅಗೋ ಅಲ್ಲಿ ತೂಗುತಿದೆ ಮರದಲಿ ಇಗೋ ಇಲ್ಲಿ ತೇಲುತ್ತಿದೆ ಹುಚ್ಚು ಹೊಳೆಯಲಿ. ಕೊಚ್ಚಿ ಹಾಕಿಹರು ಅದನು ಕೂಡು ರಸ್ತೆಯಲಿ ವಿಷಕೆ...

ಏನದು ಪ್ರೇಮ?

ಏನದು ಪ್ರೇಮ... ಅಪೂರ್ವವಾದ ವಸ್ತುವೆ ಅಪರಿಮಿತವಾದ ಚೈತನ್ಯವೆ ಅಸದೃಶ ಅನುಭೂತಿಯೆ? ಏನದು ಪ್ರೇಮ... ಜಾಜ್ವಲ್ಯಮಾನ ಬೆಳಕೆ ಪರಮ ಪರಿಮಳದ ಹೂವೆ? ಪ್ರೇಮಕ್ಕೆ ಸಪ್ತವರ್ಣವಂತೆ ಮಕರಂದಕಿಂತಲೂ ಸಿಹಿಯಂತೆ ನಿಜವೇನು? ಪ್ರೇಮಕ್ಕೆ ನಕ್ಷತ್ರ ಖಚಿತ ಕಣ್ಣಂತೆ ಮುತ್ತು...

ಏನಾಗುವೆ?

ಇಷ್ಟ ದೇವತೆಯೆಂದು ಅಷ್ಟ ಸ್ತೋತ್ರವ ಹಾಡಿ ಧನ-ಕನಕ ಅರ್ಪಿಸಿ ಪೂಜಿಸಿದವರೆ... ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳ ಹಾಜರಿ ಪ್ರಮಾಣಿಸಿದವರೇ... 'ತಾಯಿಗಿಂತ ದೇವರಿಲ್ಲ... ಜನನಿ ತಾನೆ ಮೊದಲ ಗುರುವು' ಕಂಠಪಾಠ ಒಪ್ಪಿಸಿ ಉದ್ದಂಡ ನಮಸ್ಕರಿಸಿ...

ನೀನು ದೇವಾ ಒಳಗಣವನು…

ಬುಡವಿಲ್ಲದಿರೆ ಮರ ಫಲ ನೀಡುವುದೇನು? ತಳವಿಲ್ಲದಿರೆ ಶಿರ ಬಲ ಪಡೆವುದೇನು ? ಕೆಸರ ಬಸಿರಲ್ಲಿ ಕಮಲ ಉಸಿರಾಡಿದರೆ ಕುಂದೇನು? ಕಟ್ಟಕಡೆಯವ ದೀಪವಾಗಿ ದಾರಿ ತೋರಿದೊಡೆ ತಪ್ಪೇನು? ಅಡಿ ಮುಡಿಯೆಂಬ ಭೇದ ಲಿಂಗಕ್ಕೆ ಸಮ್ಮತವೇನು? ಕಿರಿ-ಹಿರಿದೆನ್ನದೆ...

ಸೂತ್ರ

ಯಾರಿಗೆ ಏನೆಲ್ಲ ಕೊಟ್ಟೆ ಯಾರಿಂದ ಏನೆಲ್ಲ ಪಡೆದೆ? ಪ್ರೀತಿ, ಸ್ನೇಹ, ಕರುಣೆ ಕೂಡಿದೆ. ಸೇಡನ್ನು ಕೇಡಿನಿಂದಲೂ ಸಂಚನ್ನು ವಂಚನೆಯಿಂದಲೂ ಗುಣಿಸಿದೆ ಪ್ರೇಮವನ್ನು ಕಾಮನೆಯಿಂದ ಭಾಗಿಸಿದೆ. ಆನಂದ-ಅನುಭೂತಿಯ ಮೂಲ? ತಡಕಾಡಿದೆ... ಲೆಕ್ಕ ಪಕ್ಕಾ ಹೌದೋ ಅಲ್ಲವೋ...

ಲೋಕದಲಿ ಪುಟ್ಟಿದ ಬಳಿಕ…..

ಸೀರೆ ಸುತ್ತಿಕೊಳ್ಳುವಾಗ ದ್ರೌಪದಿ ಉಂಗುರ ಎತ್ತಿಕೊಳ್ಳುವಾಗ ಶಕುಂತಲೆ ಒಲೆ ಹೊತ್ತಿಕೊಳ್ಳುವಾಗ ಸೀತೆ ಯಾಕೆ, ಯಾಕೆ ನೆನಪಾಗಬೇಕು? ಕೆರೆಯ ಏರಿಯ ಮೇಲೆ ಭಾಗೀರಥಿ ಎಡವಿದ ಕಲ್ಲುಗಳಲ್ಲಿ ಒಬ್ಬಬ್ಬಳೂ ಮಹಾಸತಿ ಯಾಕೆ, ಯಾಕೆ ಕಾಣಬೇಕು? ಚಿತೆಯಿಂದ ಎದ್ದು...

ಹೆಚ್ಚಾಗಲಿ ಆಯಸ್ಸು

ನೀವು ಶಿವಮೊಗ್ಗೆಯಲ್ಲಿದ್ದ ಹೊತ್ತು- ನಾವು ಆಗ ತಾನೆ ಕಣ್ಣು ಬಿಟ್ಟಿದ್ದೆವು-ಪುಟ್ಟ ಸಸಿಗಳು ಸಹ್ಯಾದ್ರಿಯ ಸಂಜೆ ಐದರ ಮಳೆಯಲ್ಲಿ ತೇಲಿಬಿಟ್ಟ ಕಾಗದದ ದೋಣಿ ಕೆಸರುಗಾಲಲ್ಲೆ ಲಾಗಾ ಹಾಕಿದ್ದೆವು! ನೀವು ಕವಿಯೆಂದು, ನಿಮ್ಮ ಕರೆಯ ಮನ್ನಿಸಿ ಸುರಿದ...