ನನ್ನ ಅಜ್ಜನ ಕುಲ ಯಾವುದೋ
ಅವನ ಅಜ್ಜನ ನೆಲೆ ಯಾವುದೋ

ನನ್ನ ಅಪ್ಪನ ಸೆಲೆ ಯಾವುದೋ
ನಾನೇನು ಬಲ್ಲೆ?

ನಾನು ಕಸಿ ಮಾವಿನ ಮರ
ಕಡಲಂಥ ಹೆಣ್ಣು
ತೆರೆಯಣ್ಣ…… ಕಣ್ಣು!
*****