ಕುಂಟೋಬಿಲ್ಲೆ ಆಡುತ್ತಿದ್ದಾಗ
ಬಾಲ್ಯದಲ್ಲಿ ಕುಂಟುವುದೆಂ
ದರೇನೆಂದೇ ತಿಳಿಯದು
ಬಡಿಯಿತಂತೆ ಬಾಲ್ಯದಲ್ಲೇ
ಪೋಲಿಯೋ ಬೆಳೆಯಬೇಕಿದ್ದ
ಕಾಲು ಕುಂಟಿತು – ಕಲ್ಪನಾ
ಶಕ್ತಿ ಗರಿಗೆದರಿತು ಬಾಗಿಲೊಂದು
ಹಾಕಿಕೊಂಡಾಗ ಇನ್ನೊಂದು
ತೆರೆಯಿತು. ನಮ್ಮ ಸಿಜಿಕೆ
ನಮಗೆ ದಕ್ಕಿದರು. ಇದಲ್ಲವೇ
ಬದುಕೆಂದರೆ ನಡೆಯುವುದು
ಎಲ್ಲಗೋ ತಲುಪುವುದೆಲ್ಲಿಗೋ.
*****