ಉಂಗುರ ತೊಡಿಸಿದನಲ್ಲ
ಎಂಥಾ ತಳಮಳ!
ಏನಂದ? ಏನಂದ?
ನೆನಪಿಲ್ಲ!
ಏನಂದ? ಏನಂದ?
ನೋಡಿಲ್ಲ!
ಗುರುತಿಲ್ಲ…. ಕಲೆತಿಲ್ಲ….
ಅಂದನಲ್ಲ… ಇಲ್ಲ
ಅವ…. ನಲ್ಲ ಅಲ್ಲವೇ ಅಲ್ಲ!
ಉಂಗುರ
ನೀರು ಪಾಲಾಯಿತೋ
ಮೀನು ಪಾಲಾಯಿತೋ
ತಾನೇ ಕಳಚಿಕೊಂಡಿತೋ
ನಾನೇ ಕಳೆದುಕೊಂಡೆನೋ…
ಹೇಳೊಲ್ಲ!
*****
ಕನ್ನಡ ನಲ್ಬರಹ ತಾಣ
ಉಂಗುರ ತೊಡಿಸಿದನಲ್ಲ
ಎಂಥಾ ತಳಮಳ!
ಏನಂದ? ಏನಂದ?
ನೆನಪಿಲ್ಲ!
ಏನಂದ? ಏನಂದ?
ನೋಡಿಲ್ಲ!
ಗುರುತಿಲ್ಲ…. ಕಲೆತಿಲ್ಲ….
ಅಂದನಲ್ಲ… ಇಲ್ಲ
ಅವ…. ನಲ್ಲ ಅಲ್ಲವೇ ಅಲ್ಲ!
ಉಂಗುರ
ನೀರು ಪಾಲಾಯಿತೋ
ಮೀನು ಪಾಲಾಯಿತೋ
ತಾನೇ ಕಳಚಿಕೊಂಡಿತೋ
ನಾನೇ ಕಳೆದುಕೊಂಡೆನೋ…
ಹೇಳೊಲ್ಲ!
*****