ಇದೊಂದು ಬಗೆಯ ಹೂ
ಮುಟ್ಟುವಂತಿಲ್ಲ ಮೂಸುವಂತಿಲ್ಲ
ನೋಡಿ ಅನಂದಿಸು
ಪಕಳೆ ಎಣಿಸಬೇಡ
ದಳವ ದಣಿಸಬೇಡ
ದಳ ದಳವಾಗಿ ಉದುರುವ
ವರೆಗೆ ಕಾದರೆ ಅಂತ
ರಾಳದಲ್ಲೇನಿದೆಯೋ
ನೋಡಬಹುದು,
ಅಲ್ಲಿಯವರೆಗೆ ಕಾಯಬೇಕು.
*****