ನಾನೇ ಇರುವೆ ನನ್ನ ಪರವಾಗಿ ಪಾರ್ಲಿಮೆಂಟಿನಲ್ಲಿ ವಿ- ಧಾನ ಸೌಧದಲ್ಲಿ ನಾನೆ ಆಗಿಹೆ ನನ್ನ ವಿರೋಧಿ ಇರುವುದ ಬಾಚುವಲಿ ದೇಶವ ತೊಳೆಯುವಲಿ ಗಾಂಧಿ ಇಷ್ಟ ತತ್ವವೂ ಇಷ್ಟ ಎಲ್ಲ ಕಂಠಪಾಠ ಮೈಕು ಹಿಡಿದರೆ ಬರಿ ಚಪ್ಪಾಳೆ ಇದೇ ನಿತ್ಯದಾಟ ಅಲ್ಲವೇ ಹೇಳಿ ನಾನೆ ...

ದ್ವಾ ಸುಸರ್‍ಣಾ ಯುಯುಜಾ….. ಉಪನಿಷತ್ತಿನ ಶ್ಲೋಕದ ಅವಿನಾಭಾವದ ಹಕ್ಕಿಗಳೇ ಈ ಸಾಹಿತ್ಯ ಮತ್ತು ಧರ್ಮ ಅದನ್ನು ಬಿಟ್ಟು ಇದಿಲ್ಲ ಇದನ್ನು ಬಿಟ್ಟು ಅದಿಲ್ಲ ಬೀಜ ವೃಕ್ಷ ನ್ಯಾಯದಂತೆ ಗುದ್ದಾಡಲಿಲ್ಲ ಇವು ಒಂದನ್ನೊಂದು ಒರಗಿ ನಿಂತವು ಗುದಮುರಿಗೆ ...

ಏನೆ? ಏನೆ? ಏನದು? ಬಾತಿದೆ? ಕೊಳೆತಿದೆ? ಮೇಗಡೆ ಹಾರುತ್ತಿದೆ ಡೇಗೆ ನರಿಯೊಂದು ಊಳಿಡುತ್ತಿದೆ ನಾಯೊಂದು ಹೊಂಚು ಹಾಕಿದೆ ಕಾಗೆಗಳು ತಾರಾಡುತ್ತಿವೆ ಇರುವೆಗಳು ದಂಡೆತ್ತಿವೆ ನೊಣಗಳು ಗುಂಯ್‌ ಗುಡುತ್ತಿವೆ ಮಿಜಿ ಮಿಜಿ ಮಿಜಿ ಮಿಜಿ ಮೂಗು ಮುಚ್ಚಿಕೊಂಡರ...

ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? “ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು” ಅಂತ. “ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ ಬೇಡ” ಅಂತು. ಆದ್ರೂ ಕೇಳದಿದ್ದೆ ...

ಎಂಥ ಚಂದದ ಬಳ್ಳಿ ಬೆಳೆದಿಹುದಿಲ್ಲಿ ಮೊಗ್ಗರಳಿ ಕನ್ನಡ ಕಂಪು ಸೂಸುತಿಹುದಿಲ್ಲಿ ತೊದಲು ನುಡಿಯಲಿ ಪ್ರೀತಿಯೆಲ್ಲೆ ಮೀರಿಹುದಿಲ್ಲಿ ಅವ್ವ ಅಪ್ಪ ಎಂದ್ಹೇಳಲು ಬಿಡದೆ ಮಮ್ಮಿ ಡ್ಯಾಡಿ ಗೋ ಕಮ್ ಕಲಿಸಿ ಚಿಗುರಿನ ಗೋಣ ಮುರಿವವರಿಲ್ಲಿ ನಾಡು ನುಡಿಯ ಮೊಗ್ಗು ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....