ಎಂಥ ಚಂದದ
ಬಳ್ಳಿ ಬೆಳೆದಿಹುದಿಲ್ಲಿ
ಮೊಗ್ಗರಳಿ ಕನ್ನಡ
ಕಂಪು ಸೂಸುತಿಹುದಿಲ್ಲಿ
ತೊದಲು ನುಡಿಯಲಿ
ಪ್ರೀತಿಯೆಲ್ಲೆ ಮೀರಿಹುದಿಲ್ಲಿ
ಅವ್ವ ಅಪ್ಪ ಎಂದ್ಹೇಳಲು ಬಿಡದೆ
ಮಮ್ಮಿ ಡ್ಯಾಡಿ ಗೋ ಕಮ್ ಕಲಿಸಿ
ಚಿಗುರಿನ ಗೋಣ ಮುರಿವವರಿಲ್ಲಿ
ನಾಡು ನುಡಿಯ ಮೊಗ್ಗು
ಅರಳುವುದೆಂತು ಬಳ್ಳಿಯಲಿ
ವಿದ್ಯೆ ಕಲೆ ಸಂಸ್ಕೃತಿಯಲಿ
ಮೆರೆದಿಹ ನಾಡು
ಕನ್ನಡದ ಮೊಗ್ಗಿನ ಸೌಂದರ್ಯ
ಕನ್ನಡಿಗರಾಂತರ್‍ಯದಲ್ಲಿಹುದು
ಮನಕೊನರಿ ಸೆಟೆದು ನಿಂತರೆ
ಕನ್ನಡದ ಡಮರು ಮೊಳಗುವುದು
ಮಲ್ಲಿಗೀ ಮೊಗ್ಗುಗಳು
ಕನ್ನಡ ತಾಯ್ಗೊರಳ ಸರದಲಿ ಸಲುವವು
*****
೧-೯-೨೦೦೯ ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟ