ನಾನೇ ಇರುವೆ ನನ್ನ ಪರವಾಗಿ

ನಾನೇ ಇರುವೆ ನನ್ನ ಪರವಾಗಿ
ಪಾರ್ಲಿಮೆಂಟಿನಲ್ಲಿ ವಿ-
ಧಾನ ಸೌಧದಲ್ಲಿ
ನಾನೆ ಆಗಿಹೆ ನನ್ನ ವಿರೋಧಿ
ಇರುವುದ ಬಾಚುವಲಿ
ದೇಶವ ತೊಳೆಯುವಲಿ

ಗಾಂಧಿ ಇಷ್ಟ ತತ್ವವೂ ಇಷ್ಟ
ಎಲ್ಲ ಕಂಠಪಾಠ
ಮೈಕು ಹಿಡಿದರೆ ಬರಿ ಚಪ್ಪಾಳೆ
ಇದೇ ನಿತ್ಯದಾಟ

ಅಲ್ಲವೇ ಹೇಳಿ ನಾನೆ ಸಮರ್ಥ
ಪ್ರಜಾಪ್ರಭುತ್ವದ ಪ್ರತಿನಿಧಿ
ನಂಬುವ ನೀವು ಇರುವ ತನಕ
ಭಾರತ ನನಗೆ ತವನಿಧಿ!

ಬದಲಾವಣೆಗೆ ಬೇಕು ಚುನಾವಣೆ
ತಾಕತ್ತಿದ್ದರೆ ಸ್ಪರ್ಧಿಸಿರಿ
ನನ್ನದೋ ಹಲ ಸಾವಿರ ಕೋಟಿ
ಮೈಗಾವಲಿಗೆ ಧರ್‍ಮಸಿರಿ

ಜಾತಿ ಉಳಿಯಲಿ ಜಾತಿಯೆ ಜಗತ್ತು
ಮಠಮಾನ್ಯಗಳೆ ಕೋಟೆಗಳು
ಇಲ್ಲಿದೆ ನನ್ನ ರಹಸ್ಯ ಬೇರು
ಭೇದಿಸೆ ನಿಮಗೆ ಸವಾಲುಗಳು

ಎಲ್ಲೆಡೆ ಬಿತ್ತುವೆ ನನ್ನಯ ಹೆಸರನು
ನಿಮ್ಮಯ ಬೆವರಿನಲಿ
ಇಂತಹ ನನ್ನನು ಕೊಂಡಾಡಿರುವಿರಿ
ಚರಿತೆಯ ಪುಟಗಳಲಿ

ಇಂತಹ ಚರಿತೆಗೂ ಇಂದಿನ ಕತೆಗೂ
ಎಲ್ಲಿದೆ ವ್ಯತ್ಯಾಸ
ಸುವರ್‍ಣಾಕ್ಷರದೆ ಬರೆಸುವೆ ಇದನು
ಇನ್ನು ಕ್ರಾಂತಿಗೆ ಸನ್ಯಾಸ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಹಿತ್ಯ ಮತ್ತು ಧರ್ಮ
Next post ಮಳೀ ಹಾಡು

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys