ಮಂಗ ಮನಸ್ಸಿನ ಎರಡು ಮುಖಗಳು

ಮಂಗ ಮನಸ್ಸಿನ ಎರಡು ಮುಖಗಳು

ಒಂದು ಬೆಳಗು, ಒಂದು ದಿನದಂತೆ ಮತ್ತೂಂದು ದಿನ. ಅದರಂತೆ ಯಾವುದೋ ಬೆಳಗಿನಂತೆ ಇದೂ ಒಂದು ಬೆಳಗು. ಇದರಲ್ಲಿ ಹೊಸತನವೇನು ಬಂತು ಮಣ್ಣು? ನಾನು ಹಾಸಿಗೆಯನ್ನು ಬಿಟ್ಟು ಎದ್ದೆನೆಂದು ಬೆಳಗಾಗಲಿಲ್ಲ, ಬೆತ್ನಿಷೆಗಾಯಿತು ಎಂದು ಏಳಬೇಕಾಯಿತು ಅಷ್ಟೇ. ‘ಇದು ಬರಿ ಬೆಳಗಲ್ಲೋ ಅಣ್ಣ’ ಎಂದು ಹರ್‍ಷೋದ್ಗಾರವನ್ನೇನೂ ನಾನು ತೆಗೆಯಲಿಲ್ಲ. ಹಾಸಿಗೆಯನ್ನು ಜೋರಾಗಿ ಒದ್ದು ಹೊದಿಕೆಯನ್ನು ಬೀಸಿ ಮೂಲೆಗೆ ಒಗೆದು ವೇಳೆಯಾದರೂ ಎಷ್ಟು ಆಗಿದೆ ಎಂದು ತಿಳಿಯಲು ವಾಚನ್ನು ಕಿವಿಗೆ ಹಿಡಿದೆ ‘ಟಿಕ್ ಟಿಕ್’ ಎಂಬ ಉತ್ತರ ತಾನೇತಾನಾಗಿ ಬಂತು. ದೇಪನಿರ್‍ಮಿತ ಮಾನವಯಂತ್ರ ನಿಲ್ಲಬಹುದು. ಆದರೆ ಮಾನವನಿರ್‍ಮಿತ ಯಂತ್ರಕ್ಕೆ ಸಾವೆಂಬುದು ಇಲ್ಲ ಎಂದು ಅಂದುಕೊಳ್ಳುತ್ತ, ಮಾನವ ದೇವನಿಗಿಂತ ಒಂದು ಮೇಲೆ ಎಂದು ನಿರ್‍ಣಯಕ್ಕೆ ಬರುತ್ತ ಮು೦ಜಾನೆಯ ಕಾರ್‍ಯಕಲಾಪಗಳನ್ನು ಸಂಕ್ಷೇಪವಾಗಿ ಮುಗಿಸಲು ಸಜ್ಜಾಗಿ ನಿಂತೆ.

ಮುಖ ತೊಳೆಯಲು ನಮ್ಮ ರೊಮಿನ ಎದುರಿನ ಕಟ್ಟೆಗೆ ಹೋಗಿನಿಂತೆ. ಮುನ್ನಾದಿನ ‘ಜಾನವರ’ ಸೆಕೆಂಡ್ ಶೋ ನೋಡಿದ ಗಾಯ ಮಾಯ್ದಿರಲಿಲ್ಲ. ಮಾನುಷ್ಯನೆಂದರೆ ‘ದ್ವಿಪಾದಪಶು’ ಎಂದು ಮನಸ್ಸು ತರ್‍ಕವಿತರ್‍ಕ ಮಾಡುತ್ತಿತ್ತು. ನನ್ನ ಎದುರಿಗೇನೇ ಮಂಗರಾಯನೊಬ್ಬ ಕುಳಿತಿದ್ದ. ನಮ್ಮ ಕುಲಬಾಂಧವನೇ ಕುಳಿತಿದ್ದಾನಲ್ಲ ಎಂದು ಅಕ್ಕರತೆಯ ಸ್ವಾಗತ ಕೋರಲು ಹಲ್ಲುಕಿರಿದೆ. ಮಂಗವೂ ನನಗಿಂತ ಜೋರಾಗಿ ಹಲ್ಲು ಕಿರಿಯಿತು. ಆಚ್ಚ ಕರಿನಾಡಿನವನಾದ ನಾನು ನನ್ನ ಮುಖವನ್ನೇ ಕನ್ನಡಿಯಲ್ಲಿ ನೋಡಿದಂತಾಯಿತು. ನಾನು ಹೊಡೆಯಲು ಕೈ ಎತ್ತಿದಾಗ ಅದು ಜೋರಾಗಿ ಚೀರಿ ಓಡಿಹೋಯಿತು. ವೇಳಯಾಗಿದ್ದುದರಿಂದ ನಾನು ಕಾಲೇಜಿಗೆ ಡಬಲ್ಮಾರ್‍ಚ್ ಮಾಡದೆ ನಿರ್‍ವಾಹವಿರಲಿಲ್ಲ.

ಅಂತೂ ನನ್ನ ಆಲಸ್ಯಕ್ಕೆ ನಾನೇ ಶಪಿಸಿಕೊಳ್ಳುತ್ತ ಕಾಲೇಜು ಹಾದಿ ಹಿಡಿದೆ. ಕಾಲೇಜಿಗೆ ನಡೆದುಕೊಂಡು ಹೋಗುವಾಗ ಇಂದು ಕ್ಲಾಸಿನಲ್ಲಿ ಏನು ಹೇಳಬೇಕು ಎನ್ನುವದನ್ನು ತಾಳೆ ಹಾಕುತ್ತ ಹೋಗುವುದು ನನ್ನ ಪದ್ಧತಿ. ಇಂದು ‘ಸಿಮಾದಲ್ಲಿಯ ಮಂಗಗಳು’ ಪಾಠ ತಕ್ಕೊಳ್ಳಬೇಕು. ಮಂಗನಿಗೂ ಮನುಷ್ಯನಿಗೂ ಇರುವ ಹೋಲಿಕೆಯನ್ನು ವಿವರಿಸಬೇಕು ಎಂದು ನಿರ್ಧರಿಸಿದೆ. ಮಂಗನಿಗೆ ಬಾಲವಿದ್ದರೆ ಪ್ರತಿಯೊಬ್ಬ ವ್ಯಕ್ತಿಗೆ ಅವನದೇ ಆದ ಕಥೆಯಿದೆ. ಮಂಗನೆಂದರೆ ಮನುಷ್ಯನ ಪೂರ್‍ವಜ; ಪೂರ್‍ವಜರ ಎಲ್ಲ ಗುಣಗಳು ಮನುಷ್ಯನಲ್ಲಿ ಬಂದಿರದಿದ್ದರೂ-ಕೆಲವೊಂದು ಗುಣಗಳಾದರೂ ಕಂಡುಬರುತ್ತವೆ. ಮಂಗ ಅದೆಷ್ಟು ಚಪಲ-ಚಂಚಲ ಪ್ರಾಣಿಯೋ ಮನುಷ್ಯನೂ ಮನಸ್ಸಿನಿಂದ ಅಷ್ಟೇ ಚಂಚಲ. ನಾಯಿಯು ಸ್ವಾಮಿನಿಷ್ಠ ಪ್ರಾಣಿ, ಕುದುರೆ ಉದಾತ್ತಪ್ರಾಣಿ, ಆಕಳು ಸಾಧುಪ್ರಾಣಿ. ಆದರೆ ಮನುಷ್ಯನು ಎಂತಹ ಪ್ರಾಣಿ ಎಂದು ಪ್ರಶ್ನೆಯನ್ನು ಮಾಡಬೇಕು. ಹೀಗೆ ನನ್ನ ಮನಸ್ಸಂಚಾರ ನಡೆದೇ ಇತ್ತು. ‘ಸರ್’ ‘ಸರ್’ ಎಂಬ ಧ್ವನಿಯೊಂದು ಕಿವಿಗೆ ಬಿದ್ದು ನನ್ನ ಏಕಾಗ್ರತೆಯನ್ನು ನಷ್ಟಗೊಳಿಸಿತು. ಹೊರಳಿ ನೋಡಿದೆ. ವಿದ್ಯಾರ್‍ಥಿಯೊಬ್ಬ ನನ್ನಡೆಗೇ ಜೋರಾಗಿ ಬರುತ್ತಿದ್ದ. ‘ನಮಸ್ಕಾರ ಸರ್’. ನಾನು ‘ನಮಸ್ಕಾರ’ ಎಂದು ಆಢ್ಯತೆಯಿಂದ ಮನದಲ್ಲಿಯೇ ಉಬ್ಬಿದೆ. (ಯಾರಾದರೂ ನಮಸ್ಕಾರ ಮಾಡಿದಾಗ ನಾನು ಬಹಳೇ ಉಟ್ಟುತ್ತೇನೆ.) ‘ನಿಮ್ಮನ್ನೇ ಕಾಯುತ್ತಿದ್ದೆ ಸರ್. ಈ ಗುಲಾಬಿ ಹೂವನ್ನು ನಿಮಗ ಕೂಡಬೇಕೆಂದಿದ್ದೇನೆ. ತಗೊಳ್ಳಿ ಸರ್.’ ನನ್ನ ಮನ ಹಿರಿಹಿರಿ ಹಿಗ್ಗಿತು. ರಾಷ್ಟ್ರ್‍ಆಧ್ಯಕ್ಷರಿಂದ ಪದ್ಮಶ್ರೀ ಪಡೆದವರಿಗಿಂತ ಧನ್ಯನೆಂದು ಅಂದುಕೂಂಡೆ. ಪ್ರೀತಿ ಗೌರವಗಳಂಥ ಅಮೌಲ್ಯ ಸಂಪತ್ತಿನ ಮುಂದೆ ಕುಬೇರನ ಐಶ್ವರ್‍ಯದ ಬೆಲೆ ಏನೂ ಅಲ್ಲ. ಒಬ್ಬ ವಿದ್ಯಾರ್‍ತಿಯ ಪ್ರೀತಿಗೆ ಪಾತ್ರನಾದೆನಲ್ಲ, ಇದಕ್ಕಿಂತಲೂ ಜೀವನದಲ್ಲಿ ಸಾಧಿಸಬೇಕಿನ್ನೇನು ಎಂದು ಹೆಮ್ಮೆಯಿಂದ ಬೀಗಿಹೋದೆ. ವಿದ್ಯಾರ್‍ಥಿ ತನ್ನ ಮಿತ್ರರ ಗುಂಪಿನಲ್ಲಿ ಮಾಯವಾಗಿದ್ದ.

ಗುಲಾಬಿಯ ಸುಗಂಧವನ್ನು ಹೀರುತ್ತ ದೇವಸೃಷ್ಟಿಯ ಆಗಾಧತೆಯನ್ನು ಬಣ್ಣಿಸುತ್ತ ಹೆಜ್ಜೆ ಕಿತ್ತುತ್ತ ಮುಂದೆ ಮುಂದೆ ಸಾಗಿದ್ದೆ. ಹಾದಿ ಹಿಂದೆ ಹಿಂದೆ ಸರಿಯುತ್ತಿತ್ತು. ಇದೆಂಥ ವಿಚಿತ್ರ! ಭಾವನಾಪರವಶತೆಯಲ್ಲಿ ಕೈಯಲ್ಲಿದ್ದ ಗುಲಾಬಿ ಹೂವನ್ನು ಹರಿದು ಚೂರು ಚೊರು ಮಾಡಿದೆ. ಇದಾದ ನಂತರವೇ ಎಚ್ಚರವಾಯಿತು. ಇದು ನನ್ನ ಸೌಂದರ್‍ಯಾರಾಧನೆ. ಇದು ನನ್ನ ಕಲಾಪ್ರೇಮ. ಮಂಗನ ಕೈಯಲ್ಲಿ ಮಾಣಿಕ್ಯದ ಗತಿ ಏನಾಗಬೇಕೋ ನನ್ನಂಥವನ ಕ್ಷೆಯಲ್ಲಿ ಗುಲಾಬಿಯ ಗತಿಯಾಗಿತ್ತು. ಇದು ಒಂದು ಮಂಗ ಮನಸ್ಸಿನ ಪರಿ.

ನನ್ನ ಮನಸ್ಸಿಗೂ ಮಂಗನಿಗೂ ತಳಕು ಮಳಕು ಹಾಕುವಲ್ಲಿ ಯಾವ ಆತ್ಮ ಅವಹೇಳನವೂ ಇಲ್ಲ. ಆ ಮರ್ಕಟ ಬುದ್ದಿ ಇವನ ಮಾನವ ಜನಾಂಗಕ್ಕೇನೇ ಅಂಟಿಕೂಂಡ ಸಾಂಕ್ರಾಮಿಕ ಜಾಡ್ಯ. ಅದಕ್ಕಾಗಿ ಎಲ್ಲರೊಂದಿಗೆ ಇರುವ ನನ್ನ ಜಡ್ಡಿಗಾಗಿ ನಾನೇಕೆ ಕಳವಳ ಪಡಬೇಕು? ಹಿಂದೆ ಬಸವಣ್ಣನವರು ‘ನಾಯಿತನವ ಮಾಣಿಸು’ ಎಂದು ಹೇಳಿದರು. ಇಂದು ಅವರು ಇದ್ದಿದ್ದರೆ ಅಥವಾ ಅವತಾರವೆತ್ತಿ ಬಂದರೆ ‘ಕೋಡಂಗಿತನವ ಮಾಣಿಸು’ ಎನ್ನುತ್ತಿದ್ದರೇನೋ. ಸೀತಾ ಆನ್ವೇಷಣೆಯಲ್ಲಿ ಯಶಸ್ವಿಯಾಗಿ ಹಿಂತಿರುಗಿ ಬರುತ್ತಿದ್ದ ವಾನರರ ಗುಂಪು ಸುಗ್ರೀವನ ಉಪವನವನ್ನು ಹೊಕ್ಕು ಸಿಕ್ಕಾಪಟ್ಟೆ ಹಾಳು ಮಾಡಿದಂತೆ, ವಿಜ್ಞಾನವು ದೂರಕಿಸಿಕೊಟ್ಟ ಯಶಸ್ಸಿನ ಉನ್ಮಾದದಲ್ಲಿ ಆಧುನಿಕ ಜನಾಂಗ ಇಡಿಯ ಜಗತ್ತನ್ನೇ ನಾಶಗೊಳಿಸಲು ಸನ್ನದ್ಧವಾದಂತಿದೆ.

ಇಂದು ವಿಜ್ಞಾನ ಏನು ಮಾಡಿದೆ ಮತ್ತು ಏನು ಮಾಡಿಲ್ಲ? ಪ್ರಕೃತಿಯೇ ಮಾನವನ ಎದುರು ನಿಂತು ‘ಮುಂದೇನು ಮಹಾಪ್ರಭು’ ಎನ್ನುತ್ತಿದೆ. ಪೃಥ್ವಿಯು ಇಂದು ಎಂದಿಗಿಂತಲೂ ಸಣ್ಣದಾಗಿದೆ. ವಿಶ್ವದ ಒಂದು ಮೂಲೆಯಲ್ಲಿ ಕುಳಿತು ಇನ್ನೊಂದು ಮೂಲೆಗೆ ನಮ್ಮ ವಿಚಾರಗಳನ್ನು ಸಾಗಿಸಿಬಿಡಬಹುದು. ಬೇಕಾದರೆ ಕೆಲವೊಂದು ಘಂಟೆಗಳಲ್ಲಿ ವಿಶ್ವಪರ್‍ಯಟನವನ್ನು ಮುಗಿಸಿ ಹಾಕಬಹುದು. ಆಕಾಶದಲ್ಲಿ ಮಿನುಗುವ ನಕ್ಷತ್ರಗಳಿಗೂ ಮಿಗಿಲೆನಿಸುವ ಇಲೆಕ್ಟ್ರಿಕ್ ಬಲ್ಬುಗಳು ಮಾನವನ ಸಾಹಸದ ಸೀಮೆಯನ್ನು ವರ್‍ಣಿಸುತ್ತವೆ. ಮನರಂಜನೆಯ ನೂರುವಿಧಗಳು, ಸಾವಿನಂಥ ಮೂಲಭೂತ ಸಮಸ್ಯೆಗಳನ್ನೇ ಸೆಣೆಸಬಲ್ಲ ಸುಧಾರಣೆಗಳೂ ಆಗಿವೆ. ಇಂದು ಪೃತ್ವಿಗೆ ಸ್ವರ್ಗವೇನೋ ಇಳಿದಿದೆ. ಅದನ್ನು ನರಕದಲ್ಲಿ ಪರಿವತಿರ್ತಿಸಬೇಕೆನ್ನುವದು ಮಾನವನ ಇಚ್ಛೆ. ದೇವರು ಸುಂದರ ಸೃಷ್ಟಿ ನಿರ್‍ಮಿಸಿದ. ಮಾನವ ಅದನ್ನು ಇನ್ನಷ್ಟು ಸುಂದರವನ್ನಾಗಿ ಮಾಡಿದ. ಆಷ್ಟೇ ತೀವ್ರಗತಿಯಲ್ಲಿ ಅದನ್ನು ಅಷ್ಟೇ ಹಾಳಗೆಡವಬೇಕೆನ್ನುತ್ತಾನೆ. ಆತ್ಮಧ್ವಂಸದ ಪ್ರವೃತ್ತಿಯಿಂದು ಆಟಂಬಾಂಬಿನ ರೂಪವನ್ನು ಧಾರಣ ಮಾಡಿದೆ. ಮಾನವಜನ್ಮದೂಂದಿಗೆ ನೆಂಟನಾಗಿ ಬಂದ ಕಲಹ ಕುತೂಹಲವು, ಹೋರಾಟದ ಏರಾಟವು ಅಂದು ಬೇಟೆಗಾರಿಕೆಯ ರೀತಿಯಲ್ಲಿ ಪ್ರಕಟವಾಗುತ್ತಿದ್ದರೆ, ಇಂದು ಮಹಾಯುದ್ಧದ ತಯಾರಿಯಲ್ಲಿ ರೂಪಗೊಳ್ಳುತ್ತಿದೆ. ವಿಜ್ಞಾನದ ವರವಿಂದು ಭಸ್ಮಾಸುರನು ಪಡೆದ ವರವಾಗಿದೆ. ಪೃತ್ವಿಯು ಮಾನವನ ಕೈಯಲ್ಲಿ ಮಾಣಿಕ್ಯ ದೊರೆತಂತಾಗಿದೆ. ನನ್ನಂಥವನ ಕೈಯಲ್ಲಿ ಗುಲಾಬಿ ಹೂ ದೊರೆತಂತಾಗಿದೆ. ಇಂಥ ಮರ್‍ಕಟಬುದ್ದಿಯ ಮಾನವನು ವಿಧ್ವಂಸಕ ಕೃತ್ಯಗಳಲ್ಲಿ-ತನ್ನ ಶಕ್ತಿಯ ಪ್ರದರ್ಶನವನ್ನು ಮಾಡುತ್ತಿದ್ದಾನೆ.

ಈ ರೀತಿ ಸಾಮಾನ್ಯನೊಬ್ಬನ ಜೀವನದಲ್ಲಿಯ ತೀರ ಸಾಮಾನ್ಯ ಘಟನೆಯೊಂದಿಗೆ ಜಾಗತಿಕ ಮಹತ್ವದ ವಿಷಯವನ್ನು ಹೊಂದಿಸುವದು, ಸಾಮಾನ್ಯತೆಯಲ್ಲಿ ಅಸಾಮಾನ್ಯತೆಯನ್ನು ಕಾಣುವುದು ಒಂದು ಹವ್ಯಾಸವಾಗಿಯೇ ಪರಿಣಮಿಸಿದೆ. ನನ್ನ ಮಂಗ ಮನಸ್ಸಿನ ಇನ್ನೂಂದು ಮುಖ ಹೇಳುತ್ತೇನೆ. ದಿನವು ಚಹಾಪಾನಕ್ಕಾಗಿ ಒಂದು ಹೊಟೇಲಿಗ ಹೋಗುತ್ತಿರುತ್ತೇನೆ. (ಅದೂ ಒಂದು ತೀರ್‍ಥಯಾತ್ರಯೇ) ಅಲ್ಲಿಯ ಮಾಲಿಕ ಗರ್ವಿಷ್ಠ. ಅವನ ನಡೆನುಡಿ, ಆಚಾರ ವಿಚಾರಗಳಲ್ಲಿ ಒಂದಿಷ್ಟು ರೂಡ ನಯ-ನಾಜೂಕಿರಲಿಲ್ಲ. ನಾನು ಪೇಪರು ಓದುವ ನಟನೆ ಮಾಡುತ್ತ ಆತನನ್ನು ನಿರೀಕ್ಷೆ ಮಾಡುತ್ತೇನೆ. ಆತನು ಹಣ ಎಣಿಸುವ ರೀತಿ, ಗಿರಾಕಿಯೊಡನೆ ಆತನು ವ್ಯವಹರಿಸುವ ರೀತಿ, ಆತನ ಕೈ ಬೆರ್ಳುಗಳಲ್ಲಿ ಹೊಳೆಯುವ ಉಂಗುರಗಳ ಸಂಖ್ಯೆ- ಇಂಥ ಗದ್ದಲದಲ್ಲಿಯೇ ಕಾದಂಬರಿಯೊಂದನ್ನು ಓದುವ (ಅ) ಸಾಹಿತ್ಯಿಕ ಪ್ರೇಮ ಇವನ್ನೆಲ್ಲ ಗಮನಿಸಿ ನನ್ನ ಮನ ಹೇಳುತ್ತದೆ. “ಏನು ಮಗನ ಡೌಲು!” ಶುದ್ದಪಶು ಮಾನವನ ವೇಷಧಾರಣೆ ಮಾಡಿದೆ ಎಂದು ಅಂದುಕೂಳ್ಳುತ್ತೇನೆ. ನಾನು ಅವನಿಗಿಂತ ಎಷ್ಟು ಮೇಲು ಎಂದು ಅಂದುಕೂಳ್ಳುತ್ತ ‘ಶಬ್ಬಾಸ್’ ಎನ್ನುತ್ತೇನೆ. (ಎರಡನೆಯವರು ಅನ್ನದಿದ್ದರೆ ಇದೇ ಅಲ್ಲವೆ ಕೊನೆಯ ಉಪಾಯ?) ಈ ರೀತಿ ಅನ್ಯರನ್ನು ಮನಸ್ವೀ ಟೀಕಿಸಲು ಹಕ್ಕು ಇದೆಯೆಂದು ತಿಳಿದಿರುವ ನಾನು ಅನ್ಯರೂ ನನ್ನನ್ನು ಟೀಕಿಸಬಲ್ಲರು ಎಂಬುದನ್ನೇ ಮರೆತುಬಿಡುತ್ತೇನೆ. ಯಾರು ಬಲ್ಲರು? ಇದೇ ಹೋಟಲ ಮಾಲಿಕ ನನ್ನ ಬಗ್ಗೆ ಯಾವ ದೃಷ್ಟಿಕೋಣ ಇರಿಸಿಕೊಂಡಿದ್ದಾನೋ; ನನ್ನನ್ನು ಯಾವ ವರ್ಗಕ್ಕೆ ಸೇರಿಸಿದ್ದಾನೋ? ಅನ್ಯರನ್ನು ಟೀಕಿಸುವ ಮೊದಲು ನಾನು ಸ್ವಚ್ಛವಾಗಿದ್ದೇನೆಯೇ, ನಾನು ದೋಷಗಳಿಂದ ಪರಿಪೂರ್ಣ ಮುಕ್ತನೇ ಎಂಬುದನ್ನು ಮರೆತುಬಿಡುತ್ತೇನೆ. ಆಗಾಗ ಟಾಲಸ್ಟಾಯರ ಕಥೆಯೊಳಗಿನ ಘಟನೆ ನೆನಪಾಗುತ್ತದೆ. ಕೋಣೆ ಸ್ವಚ್ಛಮಾಡುವಾಗ ಕಸಬರಿಗೆಯ ಡೊಂಕು ತಿದ್ದಬೇಕೆನ್ನುವವನು ತನ್ನನ್ನಷ್ಟು ತಿದ್ದಿಕೂಂಡರೆ ಸಾಕು. ಲೋಕ ತನ್ನಷ್ಟಕ್ಕೆ ತಾನು ಸರಿಯಾಗಿ ನಿಲ್ಲುತ್ತದೆ.

ಈ ತಿಳುವಳಿಕೆ ಹೆಚ್ಚು ಆದಷ್ಟು ಮಂಗತನ ಕಡಿಮೆಯಾಗುತ್ತ ಬರುತ್ತದೆ. ಅನ್ಯರ ವಿಷಯವಾಗಿ ಅನಾವಶ್ಯಕವಾಗಿ ವಿಚಾರ ಮಾಡುವುದನ್ನು ಬಿಟ್ಟು ಆತ್ಮಸುಧಾರಣೆ ಮಾಡಿಕೂಳ್ಳುವುದರಲ್ಲಿ ಸಾರ್ಥಕತೆಯಿದೆ. ಮನುಷ್ಯನು ಮನುಷ್ಯನಾಗಬೇಕಾದರೆ ಅನ್ಯರಿಗೆ ಅಸಹ್ಯ ಪಡುವ, ಅನ್ಯರ ಪ್ರಗತಿಗೆ ತೊಡಕಾಲು ಹಾಕುವ, ಸೌಂದರ್ಯಕ್ಕೆ ಬಾಗಿ ನಿಲ್ಲದ ಅರಸಿಕ ಸ್ವಭಾವ ಮಾತ್ರ ಮಾಯವಾಗಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಸಭಾಸ್ಥಳಕ್ಕೆ ಬಂದ ಕಾರ್ಯಾರ್ಥವೇನು ದೇವಾ ?
Next post ಇರುವೆಗಳ ಜಗತ್ತು

ಸಣ್ಣ ಕತೆ

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

 • ನಂಬಿಕೆ

  ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

 • ಎರಡು ರೆಕ್ಕೆಗಳು

  ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

cheap jordans|wholesale air max|wholesale jordans|wholesale jewelry|wholesale jerseys