ಗೋಕಾಕ್ ಚಳುವಳಿ ಅಂತ ರಂಪ ಮಾಡ್ಲಿಕತ್ತಾನಲ್ರಿ ಚಂಪಾ

ರಾಜಕಾರಣಿಗಳು ರಾಜಕೀಯ ಮಾಡೋದು ಕುರ್ಚಿಗಾಗಿ. ಆದರೆ ಸಾಹಿತಿಗಳು ಮಾಡೋದು ಒಣ ಪ್ರತಿಷ್ಟೆಗಾಗಿ ಕಣ್ರಿ. ಟಿಪ್ಪು ಬಗ್ಗೆ ಸಚಿವ ಶಂಕರಮೂತ್ರಿ ಕನ್ನಡದ್ರೋಹಿ ದೇಶದ್ರೋಹಿ ಅಂದಿದ್ದೇ ತಡ ಬಿಲದಾಗಿದ್ದ ಸಾಹಿತಿಗುಳೆಲ್ಲಾ ದಡಕ್ಕಂತ ಈಚೆ ಬಂದುಬಿಟ್ರು! ಟಿಪ್ಪು ಆಡಳಿತಕ್ಕೆ ಪರ್ಶಿಯನ್ ಭಾಷೆ ತಂದ ಕನ್ನಡ ಮೂಲೆಗೆ ತಳ್ಳಿದ. ಅಂವಾ ಫೈಟ್ ಮಾಡಿದ್ರಾಗೆ ಅಗ್ದಿ ಸೆಲ್ಫಿಶ್ನೆಸ್ ಐತೆ. ಮಕ್ಕಳಗುಳ್ನ ಅಡ ಇಟ್ಟದ್ದು ಮಾಡಿದ ಲೋನ್ ತೀರಿಸೋಕಾಗ್ದೆ, ಯಾವ ಮಹಾ ಪ್ರೀಡಂ ಫೈಟ್ರೂ? ಸೆಟ್ಟಿ ಹೇಳಿದ್ರಾಗೆ ತಪ್ಪೇನದೆ ಅಂತ ತಾತ ಚಿದಾನಂದ ಮೂತ್ರಿ ದಿಢೀರ್ ಸಂಸೋಧಕನಾದ ಮಿಸ್ಟರ್ ಭೈರ್ ಪುಟಗಟ್ಟಲೆ ಗೀಚಿದ್ದೂ ಗೀಚಿದ್ದೆ. ಅದು ಹಂಗಲ್ರಿ, ಟಿಪ್ಪು ಕನ್ನಡದಾಗೆ ಲೆಟರ್ ಕರ್ಸ್ಪಾಂಡೆನ್ಸ್ ಮಾಡವ್ನೆ ಅನ್ನೋಕೆ ಶೃಂಗೇರಿ ಮಠಕ್ಕೆ ಬರೆದ ಕಾಗದ ಪತ್ರಗಳ ಎವಿಡೆನ್ಸೇ ಮಸ್ತ್ ಐತೆ.

ಮತ್ತೊಂದು ಮೂಲದ ಕಾರ್ನಾಡ್ ಅನಂತಿ ಅಂತ ಸಾಯ್ತಿವರೇಣ್ಯರು ಅವಾಂತರ ಎಬ್ಬಿಸಿದರು ನೋಡ್ರಿ. ಆಫ್‌ಕೋರ್ಸ್ ಸಿಗ್ನೇಚರ್ ಪರ್ಷಿಯನ್ನಾಗೆ ಮಾಡವ್ನೆ ಕೆಲ ಸೆಟ್ಟಿ ಫ್ರೆಂಡ್ಸ್ ಸಾಯ್ತಿಗಳ ತಕರಾರ್. ಟಿಪ್ಪು ಮರಾಠರು ಕೇರಳರ್ತಾವ ಅವರ ಭಾಷನಾಗೆ ಲೆಟರ್ ಬರದವ್ನೆ. ನಂಜನಗೂಡಿನ ನಂಜುಂಡೇಶನಿಗೆ ಹಕೀಮ ನಂಜುಂಡ ಅಂತ ಟೈಟಲ್ ಕೊಟ್ಟವ್ನೆ. ಹಿಂದೂ ದೇವಾಲಯಗಳಿಗೆ ಮಸ್ತು ದತ್ತಿದಾನ ನೀಡವ್ನೆ. ಪ್ರಗತಿಪರ ಸಾಯ್ತಿಗಳ ಪಟ್ಟು. ಟಿಪ್ಪು ಪರಧರ್ಮ ಸಹಿಷ್ಣು ಅನ್ನೋಕೆ ಮತ್ತೇನ್ರಿ ಬೇಕು ಪ್ರೂಫ್? ಸಾಕು ಸುಮ್ಗೀರಿ ಅಪ್ಪಾ, ಖಡ್ಗದ ಕಾಫೀರ್ರನ್ನು ಕೊಲ್ಲಬೇಕೆಂದು ಕೆತ್ತಿಸವ್ನೆ ಕಣ್ರಿ ಎಂಬ ಮುನಿಸು ಹಲವರದ್ದು. ಕಾಫೀರರು ಅಂದ್ರೆ ಕನ್ನಡಿಗರಲ್ಲಯ್ಯೋ ಮೈಸೂರ ಸಾಯ್ತಿ ಗುಡುಗು. ನಮ್ಮೋನೆಲ್ಲಾ ಮತಾಂತರ ಮಾಡಿದಾನಯ್ಯೋ ಅಂದ ಬೆಂಗ್ಳೂರು ಸಾಯ್ತಿ. ಹಂಗಾಗಿದ್ರೆ ಶ್ರೀರಂಗಪಟ್ಟಣ ಮೈಸೂರ್ನಾಗೆ ಬರಿ ಸಾಬರೆ ಇರಬೇಕಿತ್ತೇನ್ರಿ? ಕೊಶ್ಚನ್ ಹಾಕಿದ ಹುಟ್ಟ ಸಾಯ್ತಿ. ಈ ಕಾಲಘಟ್ಟದಾಗೆ ಟಿಪ್ಪು ಪೋಸ್ಟ್ ಮಾರ್ಟಂ ಆಗಬೇಕಿತ್ತೇನ್ರಿ! ಟಿಪ್ಪು ಹೋರಾಡಿದ್ದು ಸೆಲ್ಫಿಶ್‌ನೆಸ್ ಅನ್ನೋದಾದ್ರೆ ನಮ್ಮೆಲ್ಲಾ ರಾಜಕಾರಣೀರು ಫೈಟ್ ಮಾಡಿದ್ದು ಷೀಟ್ ಗಾಗಿ ಪವಗಾಗಿ ಅಲ್ರಾ. ಹಿಂದು ಮುಸ್ಲಿಮ್ ಮಧ್ಯ ತಂದಿಕ್ಕಿ ತಮಾಷೆ ನೋಡೋದು ಬಿಟ್ಟು ಸಾಹಿತಿಗಳಾದ ಒಡೆದ ಮನಸ್ಸುಗುಳ ನಡುವೆ ಬೆಸುಗೆ ಹಾಕಬೇಕಲ್ರಾ.

ಒಂದನೆಗಳಾಸಿಂದ ಇಂಗ್ಲಿಸ್ನ ಭಾಷೆಯಾಗಿ ಕಲಿಸಬೇಕಂತ ಸರ್ಕಾರ ಸ್ಟಡಿ ಆತು ನೋಡ್ರಿ ಟಿಪ್ಪು ಪೋಸ್ಟ್ ಮಾರ್ಟಂ ಮುಗಿಸಿ ಕೋಮಾದಾಗಿದ್ದ ಸಾಹ್ತಿತಿಗಳೆಲ್ಲಾ ಎಗೇನ್ ಗ್ಯಾನ ತಂದ್ಕಂಡು ಇಂಗ್ಲೀಸ್ ಪರ ಇರೋಧಕ್ಕೆ ನಿತ್ಕಂಡ್ರು. ಸದಾ ರಂಪ ಮಾಡ್ತಾಲೆ ಕುಕ್ಯಾತನಾದ ಚಂಪಾ ಕಸಾಪ ಅಧ್ಯಕ್ಷನೆಂಬೋ ಗುರಾಣಿ ಹಿಡ್ದು ಗೋರ್ಮೆಂಟು ಇರುದ್ದ ಕತ್ತಿಯ ಮಸಿಯಕತ್ತಿದ. ಸಿ‌ಎಮ್ಮೇ ನಂತಾವ ಡಿಸ್ಕಶನ್ಗೆ ಬಲಿ ಅಂತ ಇನ್ವೇಟ್ ಮಾಡ್ದ. ಈವಯ್ಯನ ಜೊತೆಗಿದ್ದೋರೋ ಬೆರಳೆಣಿಕೆಯೋಟು ಮಂದಿ! ಜಿಲ್ಲಾ ಕಸಾಪ ಅಧ್ಯಕ್ಷರುಗಳೇ ಈತನ ಮಾತ್ನ ಒಪ್ಪವಲ್ಲರು. ಕಸಾಪ ಬೈಲಾನೇ ತಿದ್ದಲಿಕ್ಕೆ ಹೊಂಟು ಸಾಯ್ತಿಗಳಿಂದ ಮಕ್ಕೆ ಇಕ್ಕಿಸಿಕೊಂಡಾಗ್ಲೂ ಈತನ ಬ್ಯಾಕ್ ಸೈಡ್ನಾಗಿದ್ದೋರು ಅದೇ ನಟಸಾಮ್ರಾಟ್ ಲೋಹಿತಾಸ್ವ ಶಿವಶಂಕರನೆಂಬ ಚೇಲಾಬಾಲಗಳೆ.

ಈಗ್ಲೂ ಯಾರವರೆ ಅಂತಿರಾ? ಅದೇ ಗುಡ್‌ಓಲ್ಡ್ ಫೆಲೋಸ್ ದೇಜಗೌ, ಜಿ.ಎಸ್. ಸಿದ್ಲಲಿಂಗಯ್ಯ, ಶಿವರುದ್ರಪ್ಪ, ದೊರೆಸ್ವಾಮಿ, ಸೇಸಗಿರಿರಾವ್, ಟೈಪಿನ ಇದ್ವಾಂಸರು. ಕನ್ನಡ ಅಭಿವೃದ್ಧಿ ಪ್ರಾಧಿಕಾದಾಗಿದ್ದಾಗ ಸಣ್ಣಗೆ ತನ್ನ ಅಭಿವೃದ್ಧಿ ಮಾಡಿಕ್ಕಂಡ. ಸರ್ಕಾರದ ಅಧಿಕಾರಗಳಿಗಾಗಿ ಜೊಲ್ಲು ಸುರಿಸಿ ಗಿಟ್ಟಸಿ ಗಿಲೀಟ್ ಮಾತಾಡೋ ಇಂತೋರು ಇತರೆ ಸಾಹ್ತಿಗಳ ಒಲವನ್ನಾಗ್ಲಿ ರಾಜಕಾರ್ಣಿಗಳ ಬಲವನ್ನಾಗ್ಲಿ ಗಳಿಸಿರಲ್ಲ ಅಂಬೋ ಅಸಲಿ ಸಂಗ್ತೀನಾ ಮರೆತಿತಾರ್ ನೋಡ್ರಪಾ. ಇಂಥ ಅಥಿರಥರು ಗೋಕಾಕ್ ಚಳುವಳಿ ಮಾಡ್ತೀನ್ರೀ ಯಪಾ ಬಿಡೋದಿಲ್ರಿ ಅಂಥ ರಂಪಾ ಮಾಡಿದ್ರೆ ಜನ ಗಾಂಪಾ ಅನ್ನಾಕಿಲ್ರಾ?

ಗೋಕಾಕ್ ಚಳುವಳಿ ಹಳ್ಳ ಹಿಡಿದದ್ದೇ ಇಂಥೋರಿಂದ. ಸರಿದಾರಿಗೆ ತಂದೋರು ಡಾ. ರಾಜ್ ಅಂಬೋದು ಇಡೀ ಜಗತ್ತಿಗೇ ಗೊತ್ತೈತೆ. ಈ ಸಿಲ್ಲಿ ಲಲ್ಲಿ ಸಾಹ್ತಿ ಮಾತು ಕೇಳೋರಾರ ಯಾರ್ರಿ? ಅನಂತಿನಾ ಕಾರ್ನಾಡ್ನ ವರ್ತಮಾನದ ಇರೋಧಿ ಅಂತ ಹಾಸ್ಯ ಮಾಡಿದ ಈತನ್ನೇ “ವರ್ತಮಾನದ ದಲಿತ ಇರೋಧಿ” ಅಂತ ದಲಿತ ಸಂಘರ್ಷ ಸಮಿತಿಯೋರು ಉಗಿದು ಉಪ್ಪು ಹಾಕವ್ರೆ. ಜೊತೆಗೆ ನಟರಾಜು ಹುಳಿಯಾರು ಎಲ್. ಹಣಮಂತು ಕೋಡಿಹಳ್ಳಿ ಚಂದ್ರಸೇಕ್ರ ಶೂದ್ರ ಇವರೆಲ್ಲಾ ಇಂಗೀಷ್ ಭಾಸೆ ಆದಾಕ್ಷಣ ಕನ್ನಡ ಯಾಕೆ ಢಿಮ್ ಹೊಡೆತಲೆ ಚಂಪಾ. ನಮ್ಮ ದಲಿತ ಹೈಕ್ಳು ಹಿಂದುಳಿದೋರು ಇಂಗ್ಲಿಸ್ ಕಲಿದೆ ದನ ಕಾಯ್ಬೇನ್ಲಾ? ಐಟಿಬಿಟಿನೋರು ಚಪ್ರಾಸಿ ಪೋಸ್ಟಿಗೂ ಇಂಗ್ಲೀಸ್ ಕೇಳ್ತಾರೆ. ಪ್ಯೂಚನಾಗೆ ಇಂಗ್ಲೀಸ್ ಭಾಸೆಗೆ ಭಾಳೋಟು ವಾಲ್ಯೂ ಅದೆ. ಕುಯೆಂಪು ಬಿ‌ಎಂಶ್ರೀ ಇಂಗ್ಲೀಸ್ ಓದಿ ಕನ್ನಡ್ದಾಗೆ ಬರಿನಿಲ್ವೆ. ನೀನು ನಿನ್ನಂಥೋರು ಮಾಡಿದ್ದೂ ಅದ್ನೆಯಾ? ನಿಮ್ಮ ಗ್ರಾಂಡ್ ಚಿಲ್ಡ್ರನ್ಸ್ ಎಲ್ಲಾ ಕಾನ್ವೆಂಟ್ನಾಗೆ ಸ್ಟಡಿ ಮಾಡ್ತಿಲ್ವೆನ್ಲಾ ಅಂತ ದಬಾಯಿಸ್ಲಿಕತ್ತಾರೆ. ಸರಿಯಾಗಿ ದಬಾಯಿಸ್ರಲಾ ಅಂತ ತೇಜಸ್ವಿ, ಬರಗೂರು ಜಿಕೆ ಗೋ‌ಇಂದ್ರಾವು, ಕೀರಂ ಬೆನ್ನು ತಟ್ಲಿಕತ್ತಾರೆ.

ಧಾರವಾಡ್ದ ಪಾಪು ಅಡ್ಡಗೋಡೆ ಮ್ಯಾಗೆ ದೀಪ ಮಡಗೇತೆ. ಮಕ್ಳ ನಡುವೆ ವಿಲೇಜು ಮಕ್ಳು ಸಿಟಿಮಕ್ಳು ಅಂತ ಭೇದಯಾಕೆ ಈಗಂತೂ ಎಲ್‌ಕೆಜಿ ಯುಕೆಜಿನಾಗೆ ಮೂರು ವರ್ಸದ ಮಕ್ಳೆ ಇಂಗ್ಲೀಸ್ ವರ್ಡ್‌ನ‌ ಬರಿತಾ ಓದ್ಲಿಕತ್ತಾರೆ. ಇನ್ನು ಒಂದನೆಗಳಾಸೀನ ಮಕ್ಳಿಗೆ ಹೆಂಗೆ ಡಿಫಿಕಲ್ಟಾಯ್ತದೆ. ಎಲ್ಲರೂ ಡೊನೇಶನ್ ಕೊಟ್ಟು ಹೈಕ್ಳನ ಕಾನ್ವೆಂಟ್ನಾಗೆ ಓದಿಸೋಕೆ ಆಗೋದಿಲ್ಲೇಳ್ರಿ. ಅದ್ಕೆ ಎನೇನೋ ಆಸ್ವಾಸ್ನೆ ಕೊಡ್ತಾ ಮೂಗಿಗೆ ತುಪ್ಪ ಹಚ್ತಿರೋ ಗೋರ್‌ಮೆಂಟು ಸರ್ಕಾರಿ ಪ್ರೈಮರಿ ಶಾಲೆಗಳಿಗೆ ಮೂಲಭೂತ ಸೌಕರ್ಯನಾ ಮಾಡಿಕೊಡಬೇಕು. ಒಳ್ಳೆ ಶಿಕ್ಷಕರನ್ನ ನೇಮಿಸಬೇಕಲ್ರಾ. ಹಿಂಗಂದ್ರೆ ಪ್ರೈಮರಿನಾಗೆ ಇಂಗ್ಲೀಸ್ ಟೀಚ್ ಮಾಡಾಕೆ ಪ್ರೋಫೆಸರ್ಸ್ ಬೇಕಾಗಿಲ್ಲೇಳ್ರಿ. ಈಗಿರೋ ಮೇಟ್ರು ಕಲಿತಿರೋವಷ್ಟು ಇಂಗ್ಲೀಸೆ ಸಾಕು. ನಮ್ಮ ಹೈಕ್ಳು ಇಂಗ್ಲೀಸ್ ಕಲ್ತು ಐಟಿಬಿಟಿನಾಗೆ ಸೀಟಿ ಹೊಡೆಯೋದು ಬ್ಯಾಡ್ವಾ? ಫಾರಿನ್ ಟೂರ್ ಹೋಗಾದು ಬ್ಯಾಡ್ವಾ? ಇದೆ ಅಲ್ಲವರಾ ಸಾಮಾಜಿಕ ನ್ಯಾಯ? ಹಳ್ಳಿಗರಿಗೆ ಮಾತ್ರ ತಮ್ಮ ಹೈಕ್ಳು ಇಂಗ್ಲೀಸ್ ಕಲೀಲಿ ಅಂತ ಆಸೆ ಇರಾಕಿಲ್ವ. ನಮ್ಮ ಸಿ‌ಎಂ ಕೊಮಾಸಾಮಿನೇ ನನ್ಗೆ ಇಂಗ್ಲೀಸು ಅಂದ್ರ ಗಂಟ್ಲೇ ಹಿಡೀತೇತೆ. ಕೈಕಾಲು ನಡುಗ್ತೇತಿ ಅನ್ನೋವಾಗ ಸಾಮಾನ್ಯರ ಪಾಡೇನು. ಈಟು ದಿನದ ಮ್ಯಾಗೆ ಕೊಮಾರ ಒಂದು ಒಳ್ಳೆ ಡಿಸಿಶನ್ ತಕ್ಕೊಂಡಾನೆ. ಈ ಸಾಯ್ತಿಗಳು ಯಾಕಿಂಗೆ ರಾಣ ರಂಪ ಮಾಡ್ಲಿಕತ್ತಾವೆ!? ಗೇಯ್ಯಾಕೆ ಕೇಮಿಲ್ಲೇನ್ ಇವ್ಕೆ. ಎಲ್ಲಾ ವಿಷಯದಾಗೆ ಮೊಗು ತೂರ್ಸಿ ತಾವೇ ಗ್ಯಾನಿಗಳು ತಮ್ಮ ಮಾತೇ ಆಖೈರು ಅನ್ನಂಗೆ ಅಡ್ಲಿಕತ್ತಿವೆ.

ನಾಡಗೀತೆನಾಗೆ ಮಧ್ವನ ಹೆಸರಿಲ್ಲ ಅಂತ ಗೊಂದಲ. ನಾಡ ಭಾಸೆ ಬಗ್ಗೆ ಗದ್ದಲ. ನಾಡಗೀತೆಗೆ ಯಾವ ಟ್ಯೂನ್ ಹಾಕಬೇಕು ಅಂಬೋದ್ರಾಗೂ ಜಗಳ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಲಿ ಅಂತ ಕೆಲವರು ಗೋಣು ಎತ್ತಿದ್ರೆ ಈಗಂತ ಜೂರತ್ತು ಏನೈತ್ರಿ ಅನ್ನೋ ಮೇಧಾ ವಂತ ಬೆಳಗಾಂವ್‌ನ ಎಲ್ಡನೇ ರಾಜಧಾನಿ ಮಾಡೋಣ್ರಿ ಅನ್ನುತ್ಲು ಧಾರ್‌ವಾರ್ ಗುಲ್ಬರ್ಗ ಕಡೇರಿಂದ ಆಗ್ಲೆ ವಾರ್ ಡಿಕ್ಲೇರ್, ಪೊಲಿಟಿಶಿಯನ್ನು ಸೋಭಾಯಾತ್ರೆ ಮಾಡ್ತೀವಿ ಅಂದ್ರೆ ಸಾಕು, ಕೋಮುಸೌಹಾರ್ದ ವೇದಿಕೆನೋರು ಸ್ಯವಯಾತ್ರೆ ಮಾಡ್ತೀವಿ ಅಂತಾರ್ರೀ.

ಇವರಿಗೆ ಹುಡುಗಾಟವಾಗೇತ್ರಿ ನಮ್ಮ ಹುಡ್ರು ಪಿಯೂಸಿನಾಗೆ ಡುಂಕಿ ಹೊಡಿತಾ ಅವರೆ. ಓದೂ ಬಿಡ್ಲಿಕತ್ತಾರೆ. ಯಾಕಂದ್ರೆ ಇಂಗ್ಲೀಸ್ ನೆಟ್ಟಗೆ ಬರುಂಗಿಲ್ವೆ. ಜಾಗತೀಕರಣ ಉದಾರೀಕರಣದ ಕಾಲ್ದಾಗೆ ಮೀಸಲಾತಿಗೆ ನೇಣು ಹಾಕೋ ಮಸಲತ್ತು ನೆಡಿತಿರೋವಾಗ ಕಾಸಿದ್ದೋರು ಮಾತ್ರ ಇಂಗೀಸ್ ಕಲಿಯೋದು.

ಕಾಸಿಲ್ಲದೋರು ಹಳ್ಳಿಮುಕ್ಕರ ಮಕ್ಕಳು ಇಂಗೀಸ್ ಕಲಿದೆ ಮೇಲ್ವರ್ಗದ ಮಂದಿತಾವ ಸಾಯೋವರ್ಗೂ ಗುಲಾಮಗಿರಿ ಮಾಡ್ಲಿ ಅನ್ನೋ ಹುನ್ನಾರ ಚಂಪಾ ಗ್ಯಾಂಗಿನ ಮಸಲತ್ತಿರೋ….. ಹಂಗದೆ. ಅಷ್ಟಕ್ಕೂ ಕಂಡೋರ ಮಕ್ಳು ಇಂಗ್ಲೀಸ್ನ ಕಲಿಯಾದೆ ಬಿಡೋದೆ ಅಂಬೋಕು ಸಾಯ್ತಿಗಳ ಪರವಾನ್ಗಿ ಬೇಕೇನ್ರಿ! ಅದ್ನ ಡಿಸೈಡ್ ಮಾಡೋರು ಮಕ್ಕಳ ಮಮ್ಮಿ ಡ್ಯಾಡಿಗಳೋ? ಈ ಅಡ್ನಾಡಿಗಳೋ? ಎಲ್ಲಿಂದ ನಗಬೇಕೇಳ್ರಿ ಮತ್ತ.
*****
( ದಿ. ೦೨-೧೨-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಮ್ಮನೆ ಹೀಗೇ..
Next post ಇರುವಿಕೆ

ಸಣ್ಣ ಕತೆ

 • ದೊಡ್ಡವರು

  ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

 • ಆ ರಾಮ!

  ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…