ನಮ್ಮ ಮೇಲೆ ನೀಲವರ್ಣದಲ್ಲಿ ಕಾಣುವ ಆಕಾಶವು ಅಸಂಖ್ಯಾತ ಗ್ರಹಗಳನ್ನು, ನಕ್ಷತ್ರಗಳನ್ನು ಒಳಗೊಂಡಿದ್ದು ಬರಿಗಣ್ಣಿಗೆ ಕಾಣದಷ್ಟು ದೂರದಲ್ಲಿದೆ. ಆಕಾಶಗಂಗೆಯಲ್ಲಿ ಒಂದು ಸಾವಿರ ಕೋಟಿ ಸೂರ್ಯಗ್ರಹಗಳಿವೆ. ಅನೇಕ ಸೂರ್ಯಗ್ರಹಗಳು ಸೇರಿ ಬ್ರಹ್ಮಾಂಡವಾಗಿದೆ. ಇವುಗಳೊಡನೆ ನಮ್ಮ ಸೂರ್ಯನಂತೆಯೇ ಸೌರಪರಿವಾರವು ಇದೆ. ನಮ್ಮ ಸೂರ್ಯ ತನ್ನ ಪರಿವಾರದೊಡನೆ ಆಕಾಶಗಂಗಾ ಕೇಂದ್ರದ ಒಂದು ಸುತ್ತು ಸುತ್ತಲು ೨೨.೫ ಕೋಟಿ ವರ್ಷಗಳು ಬೇಕಾಗುತ್ತದೆಂದು ಖಗೋಳ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಸಾಧಾರಣ ಅಂದಾಜಿನ ಪ್ರಕಾರ ಆಕಾಶಗಂಗೆಯಂತಹ ಹೆಚ್ಚು ಕಡಿಮೆ ೧೦ ಅರಬ್ ಆಕಾಶಗಂಗೆಗಳಿವೆ. ಇವು ಪ್ರತಿ ಸೆಕೆಂಡಿಗೆ ೨೦ ಸಾವಿರ ಮೈಲುಗಳ ವೇಗದಲ್ಲಿ ಅನಂತದ ಕಡೆಗೆ ಧಾವಿಸುತ್ತವೆ. ಆಕಾಶಗಂಗೆಯ ಉದ್ದ ಒಂದು ಲಕ್ಷ ಜ್ಯೋತಿವರ್ಷವಾಗಿದೆ. (ಒಂದು ಜ್ಯೋತಿವರ್ಷ ೧೪ ಅರಬ್ ಕಿಲೋಮೀಟರ್) ನಮ್ಮ ಸೂರ್ಯ ಆಕಾಶಗಂಗೆಯ ಕೇಂದ್ರಬಿಂದುವಿನಿಂದ ೩.೨ ಸಾವಿರ ಜ್ಯೋತಿ ವರ್ಷಗಳ ದೂರದಲ್ಲಿದೆ. ಒಂದು ಸಾಧಾರಣ ಫ್ಯಾನು ಒಂದು ಸೆಕೆಂಡಿಗೆ ವಿಶಾಲವಾದ ಪ್ರಪಂಚದಲ್ಲಿ ಪ್ರತಿ ಸೆಕೆಂಡಿಗೆ ೨೦ ಸಾವಿರ ಮೈಲಿಗಳ ವೇಗದಲ್ಲಿ ಓಡುತ್ತಿರುವಾಗ ಎಷ್ಟು ಭಯಂಕರ ಸ್ವರ ಉತ್ಪಾದನೆಯಾಗಬಹುದು ಯೋಚಿಸಲಾಗದು.
*****