ಜೈವಿಕ ಡಿಸೆಲ್ – ಹೊಂಗೆ ಎಣ್ಣೆ

ಜೈವಿಕ ಡಿಸೆಲ್ – ಹೊಂಗೆ ಎಣ್ಣೆ

ನಮ್ಮ ದೇಶದಲ್ಲಿ ಪೆಟ್ರೋಲ್, ಡಿಸೆಲ್ ಆಮದಿನ ಮೇಲೆ ಅಪಾರ ಪ್ರಮಾಣದ ವಿದೇಶಿ ವಿನಿಮಯ ವ್ಯಚ್ಚವಾಗುತ್ತದೆ. ಇದರಿಂದ ದೇಶದ ಸಮಗ್ರ ಅಭಿವೃದ್ಧಿಯ ಮೇಲೆ ಗಂಭೀರ ಪರಿಣಾಮಗಳು ಬೀರುತ್ತವೆ. ಇದಕ್ಕಿಂತಲೂ ಮಿಗಿಲಾಗಿ ವಾಯು ಮಾಲಿನ್ಯ, ಪರಿಸರ ಮಾಲಿನ್ಯವನ್ನು ನಾವೇ ತಂದು ಕೊಂಡಂತಾಗುತ್ತದೆ. ಇದೆಲ್ಲ ಸಮಸ್ಯೆಗಳಿಗೆ ಮಾರ್‍ಗೋಪಾಯ ಕಂಡು ಹಿಡಿಯಲಾಗಿದೆ. ಪೆಟ್ರೋಲಿಯಂ ಇಂಧನಗಳ ಬದಲಿಗೆ ಸಸ್ಯಗಳಿಂದ ಉತ್ಪತ್ತಿಯಾಗುವ ಜೈವಿಕ ಇಂಧನವನ್ನು ಬಳಸುವುದು. ಹೀಗೆ ಹಲವಾರು ಸಸ್ಯಗಳ ಎಣ್ಣೆಗಳನ್ನು ಬದಲಿ ಇಂಧನವಾಗಿ ಬಳಸಬಹುದುದಾಗಿದೆ. ಇವುಗಳಲ್ಲಿ ಹೊಂಗೆ ಎಣ್ಣೆ ಪ್ರಮುಖವಾಗುತ್ತದೆ. ಬಹು ಉಪಯೋಗಿ ಹೊಂಗೆಮರ ರೈತರಿಗೆ ಉಪಕಾರಿಯಾಗಿದೆ. ಈ ಮರವು ದೇಶದೆಲ್ಲೆಡೆ ಬೆಳೆಯುತ್ತದೆ. ಹೆಚ್ಚಾಗಿ ಮಳೆ ಕಡಿಮೆ ಬೀಳುವ ಎಲ್ಲ ತರಹದ ಭೂಮಿಗಳಲ್ಲಿ ಹೇರಳವಾಗಿ ಹುಲುಸಾಗಿ, ಬೆಳೆಯುತ್ತದೆ. ಈ ಹೊಂಗೆಮರದ ಶಾಸ್ತ್ರೀಯ ಹೆಸರು “ಪೊಂಗೆಮಿಯಾ ಪಿನ್ನೇಟಿ” ಎಂದು ಕರೆಯುತ್ತಿದ್ದು, ಇದರ ಬೀಜದಿಂದ ಬರುವ ಎಣ್ಣೆಯನ್ನು ಸಾಂಪ್ರದಾಯಿಕ ದೀಪ ಬೆಳೆಗಿಸಲು ಔಷಧಿ ರೂಪದಲ್ಲಿ ಉಪಯೋಗಿಸುತ್ತಾರೆ. ಇದರ ಎಣ್ಣೆಯನ್ನು ಡಿಸೆಲ್‌ಗೆ ಬದಲಾಗಿ ಬಳಸುವ ಸಂಶೋಧನೆ ಯಶಸ್ವಿಯಾಗಿದೆ. ಜತೆಗೆ ದೇಶಿ ತಯಾರಿಕೆಯುಳ್ಳ ಬಹು ಉಪಯೋಗಿ ವಸ್ತು ಕೂಡ ಆಗಿದೆ ಎಂದು ವಿಜ್ಞಾನಿಗಳ ಅಭಿಪ್ರಾಯ. ಕಾರು, ಟ್ರಾಕ್ಟರ್, ಗಿರಣಿಗಳಿಗೆ ಈ ಎಣ್ಣೆಯನ್ನು ಹಾಕಿ ಓಡಿಸಬಹುದು. ಇದಕ್ಕೆ “ಜೈವಿಕ ಡಿಸೆಲ್” ಎಂದೇ ಕರೆಯುತ್ತಾರೆ.

ಈ ಹೊಂಗೆಮರಗಳನ್ನು ನಮ್ಮ ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಬೆಳೆಸಬಹುದು. ದಾರಿಯುದ್ದಕ್ಕೂ ಹಾಕಬಹುದು. ಒಳ್ಳೆಯ ನೆರಳಿನ ಮರಕೂಡ. ಇದರ ಎಣ್ಣೆಯಿಂದ ಕೃಷಿ ಆಧಾರಿತ ಸಣ್ಣಸಣ್ಣ ಕೈಗಾರಿಕೆಗಳಿಗೆ ಉಪಯೋಗಿಸಲು ಇತ್ತೀಚೆಗೆ ಹೆಚ್ಚಿನ ಮಹತ್ವ ಬರುತ್ತಿದೆ.

ಡಿಸೆಲ್‌ಗೆ ಬದಲಾಗಿ ಈ ಎಣ್ಣೆಯನ್ನು ಬಳೆಸಿದರೆ ದುಬಾರಿ ಹಣ ನೀಡಿ, ಪೆಟ್ರೋಲ್ ಡಿಸೆಲ್‌ ತರಬೇಕಿಲ್ಲ. ಗ್ರಾಮೀಣ ಕೈಗಾರಿಕೆಗಳಲ್ಲಿಯೇ ಈ ಎಣ್ಣೆಯನ್ನು ತಯಾರಿಸಬಹುದು. ಕೃಷಿ ಕಾರ್‍ಯಗಳು ಸುಲಭವಾಗಿ, ಸಮಯ ಉಳಿಯುತ್ತದೆ. ಹೊಂಗೆ ಎಣ್ಣೆ ತೆಗೆದ ನಂತರ ಉಳಿಯುವ ಹೂಂಗೆಹಿಂಡಿ ಜಮೀನುಗಳಿಗೆ ಉತ್ತಮ ಸಾವಯವ ಗೊಬ್ಬರವಾಗುತ್ತದೆ. ಇಳುವರಿ ಕೂಡ ಹೆಚ್ಚಾಗುತ್ತದೆ. ಹೊಂಗೆ ಹಿಂಡಿ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ತೇವಾಂಶ ಕೀಟನಾಶಕವಾಗಿಯೂ ಕೆಲಸ ಮಾಡುತ್ತದೆ ಮತ್ತು ಮಣ್ಣಿನ ಸಂಪೂರ್‍ಣ ಆರೋಗ್ಯ ಕಾಪಾಡುತ್ತದೆ. ರಸಗೂಬ್ಬರಕ್ಕಾಗಿ ಮಾಡುತ್ತಿದ್ದ ವೆಚ್ಚ ಕಡಿಮೆಯಾಗುತ್ತದೆ.

ಹೊಂಗೆ ಎಣ್ಣೆಯಿಂದ ಉಗಳುವ ಹೊಗೆಯಲ್ಲಿ ವಿಷಾಧಾರಿತ ಆಮ್ಲಗಳು ಕಡಿಮೆ ಇರುತ್ತವೆ ಎಂದು ಕಂಡು ಹಿಡಿಯಲಾಗಿದೆ. ವಾಯುಮಾಲಿನ್ಯ ಕಡಿಮೆಯಾಗಿ ಆರೋಗ್ಯಕರ ಪರಿಸರ ನಿರ್‍ಮಾಣವಾಗುತ್ತದೆ. ಈ ಸತ್ಯವನ್ನು ನಮ್ಮ ವಿದ್ಯಾವಂತ ರೈತರು, ಪ್ರಗತಿಪರ ಕೃಷಿಕರು ಚಿಂತನೆ ಮಾಡಿ ಹೊಂಗೆ ಎಣ್ಣೆಯಿಂದಾಗುವ ಮಹತ್ವವನ್ನು ಅರಿಯಬೇಕಿದೆ. *****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾತರಗಿತ್ತಿಗೆ
Next post ಹಿಂಬಳಿ ಮುಂಬಳಿ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…