ಪಾತರಗಿತ್ತಿಗೆ

ಮರಿತನದ ಮರವೆಯಿಂ ಮರಸಿ ತಂದಪೆಯಾ?
ಚಿತ್ರಾಂಜಲಿಯ ಗ್ರೀಷ್ಮ ಸಂತಾಪಕೆನ್ನ?
ನಸೆದ ನಲವಿನ ನೆನಹಿನಂಜನದಿ ನನ್ನ
ಸೋರೆದೆಯ ಸೇದೆಯಂ ಸವರೆ ಬಂದಪೆಯಾ? ೪
ಸಾಕು, ನಿನ್ನುಪಚಾರಗಳನೊಲ್ಲೆನದನು
ಇನಿತು ಬೇಗನೆ ಮರೆತೆಯಾ? ನಾನುಮಾಕೆ
ಈರ್‍ವರಾವಿದ್ದೆ ವಿಲ್ಲಿಯೆ; ನಿನ್ನನಾ  ೧ಕೇ
ಸರಲ ತುರುಬಿಂದ ಕಸುವನ್ನಮೆತ್ತಿದೆನು!
ನಿನ್ನೆದೆಗೆ ೨ಮಕರಿಕೆಯ ಚುಚ್ಚಿಸುವೆ ನಲ್ಲೆ
ಈ ಗರಿಯಿನೆನೆ, ನಿನ್ನ ಚುಂಬನದಿನೊಲ್ಲೆ
ನನ್ಯ ಸಿಂಗರವನೆದೆಗಿನೆಯ; ಬಿರಯಿತಿಯಾ
ಕೆಗೆ ಬೀಳ್ಕೊಡಿದನ್ನು- ತೂಗಲಿ ಗರಿಗೆ ಗರಿಯಂ!
* ****
ನೀವೀರ್‍ವರೀಗ! ನಾನೋರ್‍ವನೀ ಪರಿಯೇಂ?
ಪೇಳ! ಪೋಗರಸಕಟ ಪುಷ್ಪಗಳ ಚಿತಿಯಾ!
*****
೧ ಕೆಂಪಾದ ಹೂವು
೨ ಹೆಂಗಸರು ಎದೆಯಲ್ಲಿ ಬರೆದುಕೊಳ್ಳವ ಚಿತ್ರಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರಿದಿದೆ ನೋಡಿ ಕನ್ನಡ ರಥವು
Next post ಜೈವಿಕ ಡಿಸೆಲ್ – ಹೊಂಗೆ ಎಣ್ಣೆ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…