Home / ಲೇಖನ / ವಿಜ್ಞಾನ / ವಿದ್ಯುತ್ ಬಿಲ್ಲೂಸಹ ಇನ್ನು ಕಂಪ್ಯುಟರಿಕೃತ ಯಂತ್ರದಿಂದ

ವಿದ್ಯುತ್ ಬಿಲ್ಲೂಸಹ ಇನ್ನು ಕಂಪ್ಯುಟರಿಕೃತ ಯಂತ್ರದಿಂದ

ತಪ್ಪು ಲೆಕ್ಕಾಚಾರ, ಕೂಡಿಸುವುದು, ಬಾಕಿ ತೋರಿಸುವುದು, ಮೀಟರ್‌ಗಳ ತಪ್ಪಿನಿಂದಾಗಿ ಹೆಚ್ಚು ಬಿಲ್ಲು ಬರೆದುಕೊಡುವುದು. ಇದೆಲ್ಲ ಗ್ರಾಹಕರಿಗೆ ಮಾಮೂಲಾಗಿದೆ. ಕೆ.ಪಿ.ಟಿ.ಸಿ. ಎಲ್. ನಿಂದಾದ ಕಿರಿಕಿರಿಗಳೆಂದು ಇದುವರೆಗೆ ಜನಭಾವಿಸಿದ್ದರು. ಇನ್ನು ಮುಂದೆ ಹಾಗಗಲಾರದು. ರಸೀದಿಯನ್ನಷ್ಟೇ ಕಂಪುಟರಿನಲ್ಲಿ ಕೊಡುವುದರ ಬದಲು ಮೀಟರ್ ರೀಡಿಂಗ್ ಸಹ ಪುಟ್ಟ ಯಂತ್ರದಲ್ಲಿ ತೋರಿಸಿ ಅಲ್ಲಿಯೇ ಒಂದಿಷ್ಟು ತಪ್ಪಾಗದಂತೆ ಬಿಲ್ಲುತೋರಿಸಿ, ರಸೀದಿ ನೀಡುವ ವ್ಯವಸ್ಥೆ ಗೊಳಿಸಲಾಗಿದೆ.

ನಗರ ಪಟ್ಟಣ ಪ್ರದೇಶಗಳಲ್ಲದೇ ಹಳ್ಳಿಹಳ್ಳಿಗೂ ತಲುಪಿ ಹೊಸ ಹೊಸ ರೀತಿಯ ವಿದ್ಯುತ್‌ಬಿಲ್ ನೀಡುವ ಮೂಲಕ ಗ್ರಾಹಕರಿಗೆ ಕುತೂಹಲ ಕೆರಳಿಸಿದೆ. ಹಿಂದಿನಂತೆ ಪದೇ ಪದೇ ತಲೆ ಎತ್ತಿ ನೋಡುವ ಕ್ರಿಯೆಗೆ ಸೆನ್ಸಾರ್ ಹಾಕಿರುವ ಈ ಯಂತ್ರ ಒಂದು ರೀತಿಯ ಕ್ಯಾಲ್ಯುಕುಲೇಟರ್ನಂತೆಯೇ ಕೆಲಸಮಾಡುತ್ತದೆ. ಮತ್ತು ವಿದ್ಯುತ್ ಮೂಲಕ ಬಿಲ್ಲು ನೀಡುವಾಗ ಒಮ್ಮೆ ಮೀಟರ್‌ನ ನಂಬರ್ ಹಾಗೂ ಮೀಟರ ಓಡಿರುವ ಯುನಿಟ್‌ಗಳನ್ನು ಫೀಡ್ ಮಾಡಿದರೆ ಸಾಕು. ಮಿಕ್ಕೆಲ್ಲ ಕೆಲಸಗಳನ್ನು ತನ್ನಿಂದ ತಾನೇ ಮಾಡಿ ಬಾಕಿ ಹಣ ಉಳಿದಿದ್ದರೆ ಅದನ್ನು ಸುಲಭವಾಗಿ ಈ ಯಂತ್ರ ತೋರಿಸುತ್ತದೆ. ಆರಂಭದಲ್ಲಿ ಕೆಲ ಬಿಲ್ಲುಗಳ ರೀಡರ್‌ಗಳ ತಪ್ಪಿನಿಂದಾಗಿ ಗೊಂದಲ ಸೃಷ್ಟಿಯಾಗುತ್ತಿತ್ತು. ಈ ಕಂಪ್ಯೂಟರಿಕೃತ ಬಿಲ್‌ರೀಡಿಂಗ್ ಯಂತ್ರವು ಸುವ್ಯವಸ್ಥಿತವಾಗಿ ಗೊಂದಲಗಳನ್ನು ನಿವಾರಿಸಿ ನೂತನ ಯಂತ್ರದ ಸಹಾಯದಿಂದ ಗ್ರಾಹಕರಿಗೆ ತಲುಪಿಸುತ್ತದೆ (ರಸೀದಿ) . ಜತೆಗೆ ಬಿಲ್ ಫೀಡ್ ಮಾಡಿದವರ ಹೆಸರೂ ಸಹ ಇದರಲ್ಲಿ ಅಚ್ಚಾಗಿರುತ್ತದೆ. ಒಟ್ಟಿನಲ್ಲಿ ವಿದ್ಯುತ್ ರೀಡಿಂಗ್ ಬಿಲ್ ಸಹ ಕಂಪ್ಯೂಟರೀಕರಣಗೊಂಡುದದು ಆಧುನಿಕತೆಗೆ ಸಾಕ್ಷಿಯಾಗಿದೆ. ಈ ಬಿಲ್ ರೀಡಿಂಗ್ ನಿಂದ ರಸೀದಿ ಪುಸ್ತಕಗಳನ್ನು ಮಾಡಿಸುವುದು, ಅವುಗಳನ್ನು ಫೈಲ್ ಮಾಡುವುದು ಕೂಡ ತಪ್ಪುತ್ತದೆ. ಇದು ಪ್ರತಿ ತಿಂಗಳೂ ಬರುತ್ತದೆ. ಈ ಯಂತ್ರದಿಂದ ಕಾರ್ಯಕ್ಷಮತೆ ಹೆಚ್ಚುತ್ತದೆ. ಗ್ರಾಹಕರಿಗೆ ಯಾಂತ್ರೀಕೃತ ಬಿಲ್ ನೀಡುವ ಮೂಲಕ ರಸೀದಿಯಲ್ಲಿ ತಿದ್ದುವ ತಪ್ಪು ಲೆಕ್ಕ ಬರೆಯಲು ಆಸ್ಪದ ಆಗದೇ ಇರುವುದರಿಂದ ಇದೊಂದು ವಿಜ್ಞಾನ ಕ್ಷೇತ್ರದ ಕೊಡುಗೆಯಾಗಿದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...