ಅವನೊಬ್ಬ ಬಾಲ ಪ್ರತಿಭೆ. ಮೂರುವರ್ಷಕ್ಕೆ ರಾಗಗಳನ್ನು ಗುರುತಿಸಿ ಕೀರ್ತನೆಗಳನ್ನು ಹಾಡಿ ಕಛೇರಿಮಾಡಿ “ಭೇಷ್” ಎನಿಸಿಕೊಳ್ಳುತಿದ್ದ. ಅವನ ಕಛೇರಿ ದಿನವೂ ಗಂಟೆಗಟ್ಟಲೆ ಸಾಗುತ್ತಿತ್ತು. ಕೇರಿಯ ಹುಡುಗರೆಲ್ಲ ಕೇರಿಕೇರಿಯಲ್ಲಿ ಆಡಿ ಆಡಿ ದೊಡ್ಡವರಾದರು. ಕೇರಿ ಕೇರಿಯಲ್ಲಿ ಹಾಡಿ ಹಾಡಿ ಹುಡುಗ ಮುದುಕನಾದ. ಕೊನೆಗೆ ಮೊಮ್ಮಕ್ಕಳ ಆಟ ಪಾಟದಲ್ಲಿ ಕಳೆದು ಹೋದ ತನ್ನ ಬಾಲ್ಯವನ್ನು ಕಂಡು ಕೊಂಡ ಮುದುಕ.
*****