ಅವಳು ಮಲಗಿದೊಡನೆ ಅವಳಿಗೊಂದು ಕನಸು ಬೀಳುತಿತ್ತು. ಬೀದಿಯಲ್ಲಿ ಹೋಗುತಿದ್ದ ಇವಳನ್ನು ಎಲ್ಲರೂ “ಹುಚ್ಚಿ, ಹುಚ್ಚಿ” ಎಂದು ಅಪಹಾಸ್ಯ ಮಾಡುತ್ತಿದ್ದರು. ಅವಳಿಗೆ ಅಸಾಧ್ಯ ಕೋಪ ಬರುತ್ತಿತ್ತು. ಮನಸ್ಸು ಕದಡಿ ಹೋಗುತ್ತಿತ್ತು. ಬುದ್ಧಿ ಚುರುಕಾಗುತ್ತಿತ್ತು. ತರ್ಕ ಸವಾರಿಯಾಗುತ್ತಿತ್ತು. “ನಾನು ಖಂಡಿತ ಹುಚ್ಚಿಯಲ್ಲ” ಎಂದು ಕೂಗಿಕೂಗಿ ಹೇಳುವಷ್ಟರಲ್ಲಿ ಎಚ್ಚರವಾಗಿ ಬಿಡುತ್ತಿತ್ತು. ಅವಳು ಕನಸು ಬೀಳದೆ ಏನು ಮಾಡಲಿ ಎಂದು ಮಲಗುವುದನ್ನೇ ಬಿಟ್ಟು ಬಿಟ್ಟು ಹುಚ್ಚಿಯಾದಳು.
*****