ಓ ಪಿತೃದೇವರುಗಳೇ
ಅರ್ಪಿಸುವೆವು ನಿಮಗೆ
ನಮ್ಮಯಾ ನಮನ|
ಸ್ವೀಕರಿಸಿ ಹರಸಿರೆಮ್ಮನಿಂದು
ಈ ಪುಣ್ಯದಿನ||

ವರುಷಕ್ಕೊಮ್ಮೆ ಬರುವ ಈ ಸುದಿನ
ಮೀಸಲಿಡುವೆವು ನಿಮಗಾಗಿ
ನಮ್ಮಯಾ ತನುಮನ|
ನೀಡುವೆವು ಸದಾನಿಮ್ಮ ನೆನಪಲಿ
ಬದುಕುವವೆಂದು ವಚನ||

ನಿಮ್ಮ ಸಂತೃಪ್ತಿಯೇ ನಮ್ಮಯಾ ಪುಣ್ಯವು
ನಿಮ್ಮ ಸಂತೋಷವೇ ನಮ್ಮಯಾ ಭಾಗ್ಯವು|
ನಿಮ್ಮ ಮುಕ್ತಿಪರ ಕಾರ್ಯವೇ
ನಮ್ಮಯಾ ಕಾಯಕವು||

ಬಿಳಿ ವಸ್ತ್ರ, ಬಿಳಿ ಹೂ
ಬಿಳಿ ಅನ್ನವನು ಅರ್ಪಿಸುವೆವು|
ಆಸ್ವಾದಿಸಿ ಹರಸಿದರೊಮ್ಮೆ ನೀವು
ನಮ್ಮ ಮುಂದಿನ ಜೀವನ ಸುಗಮವು||
*****