ಗಾಳಿಯಲ್ಲಿಯ ವಿಷದಿಂದ ಜೀವರಾಶಿಗೆ ಆಪತ್ತು

ಗಾಳಿಯಲ್ಲಿಯ ವಿಷದಿಂದ ಜೀವರಾಶಿಗೆ ಆಪತ್ತು

ಶುದ್ಧವಾದ ಗಾಳಿ ಇದ್ದರೆ ಎಷ್ಟು ವರ್ಷಗಳಾದರೂ ಜೀವರಾಶಿಗಳು ಬದುಕಬಹುದು. ಅದೇ ವಿಷಯುಕ್ತವಾದ ಇಂಗಾಲದ ಡೈ‌ಆಕ್ಸೈಡ್ ಗಾಳಿಯು ಪಸರಿಸಿದರೆ ಇಂಥಹ ಗಾಳಿಯನ್ನು ಸೇವಿಸುವ ಜೀವಿಗಳು ಆತಂಕಕ್ಕೀಡಾಗುತ್ತವೆ. ಇನ್ನೊಂದು ವಿಶೇಷವೆಂದರೆ ಒಂದು ನೆಲೆಯಲ್ಲಿ ವಿಶಯುಕ್ತಗಾಳಿ ಇದ್ದರೆ ಅದು ಬೀಸುತ್ತ ಖಂಡಾಂತರಗೊಂಡು ಬೇರೆ ರಾಷ್ಟ್ರ, ರಾಜ್ಯದ ಜೀವರಾಶಿಗಳಿಗೂ ಆಪತ್ತು ತರಬಲ್ಲದು.

ಸಾಮಾನ್ಯವಾಗಿ ಉಷ್ಣವಲಯದ ನಾಡುಗಳಲ್ಲಿ ಭಾರತವು ಸೇರಿ ಬಳಸುವ ಭಾರಿ ಮಟ್ಟದ ಕೀಟನಾಶಕಗಳು ಗಾಳಿಯೊಡನೆ ಲೀನವಾಗಿ, ಗಾಳಿಯನ್ನು ವಿಷಗೊಳಿಸಿ ಉತ್ತರ ಧೃವ ಪ್ರದೇಶವನ್ನು ಸೇರಿ ನೀರಿನಲ್ಲಿ ಬೆರೆಯುತ್ತವೆ. ಇಂಥಹ ಪರಿಸರದಲ್ಲಿರುವ ಜೀವಿಗಳು ನೀರು, ಮತ್ತು ಗಾಳಿಯ ಸೇವನೆಯಿಂದ ವೇದನೆಯನ್ನು ಪಡಬೇಕಿದೆ. ಕೆನಡಾದ ಉತ್ತರ ಬದಿಯ ಯುಕೋನೀಯ ಲೇಬರ್ಸ್ ಸರೋವರದಲ್ಲಿ ಕೀಟನಾಶಕ ಮತ್ತು ವಿಷದ ಅಂಶ ಸೇರಿ ಕಳವಳಕಾರಿ ಮಟ್ಟವನ್ನು ತಲುಪಿದೆ, ಎಂದು ಇತ್ತೀಚೆಗೆ ಪತ್ತೆಮಾಡಲಾಗಿದೆ. ಈ ಪ್ರದೇಶದಲ್ಲಿ ಕೀಟನಾಶಕ ಅಂಶವನ್ನು ಹಾಕದಿದ್ದರೂ ಆಫ್ರಿಕಾ, ಭಾರತದಂತಹ ದೇಶಗಳ ಕಡೆಯಿಂದ ಉತ್ತರ ಧೃವದತ್ತ ಬೀಸಿದ ಗಾಳಿಯೊಂದಿಗೆ ಸೇರಿಕೊಂಡು ಇಲ್ಲಿ ತನ್ನ ಪರಿಣಾಮವನ್ನು ಬೀರುತ್ತಲಿದೆ.

ಕೆನಡಾದ ಸಂಶೋಧಕರು ಉತ್ತರ ಧೃವ ಪ್ರದೇಶದ ಕಡಲ ನೀರಿನ ಮೇಲ್ಮಟ್ಟದಲಿ ವಿಷಕೀಟನಾಶಕದಂತಹ ಅಂಶಗಳಿರುವುದನ್ನು ಕಂಡು ದಂಗಾಗಿದ್ದಾರೆ. ಈ ಸರೋವರ ಮತ್ತು ಧೃವ ದ ಸುತ್ತ ಮನುಷ್ಯನನ್ನೊಳಗೊಂಡು ೨೦೦ ರಷ್ಟು ಬೇರೆಬೇರೆ ಜೀವರಾಶಿಗಳಿವೆ. ಇಲ್ಲಿಯ ಜೀವರಾಶಿಗಳ ಆಹಾರ ಮೀನು ನೀರು ಮತ್ತು ಮೀನು ಆಹಾರದ ಮೂಲಕ ಈ ಕೀಟನಾಶಕದ ನಂಜು ಸುತ್ತಲ ಪ್ರದೇಶ ಮತ್ತು ಗಾಳಿಬೀಸಿದ ಪ್ರದೇಶಗಳೆಲ್ಲೆಡೆಯಲ್ಲಿ ವಿಷ ನೀಡಿ ಆರೋಗ್ಯವನ್ನು ಹದಗೆಡಿಸುತ್ತಿರುವುದಂತೂ ನಿಜ. ಕೀಟನಾಶಕಗಳಿಂದ ಸಸ್ಯಗಳಿಗೆ ಉಪಕಾರವಾಗಬಹುದೆಂದರೂ ಕೊನೆಗೊಂದು ದಿನ ಆ ಸಸ್ಯವು ಸೇರಿ ಜನ ಸಮುದಾಯಕ್ಕೆ ವಿಷ ಹರಡುತ್ತದೆಂಬುದಂತೂ ಸತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀರ ಭದ್ರತೆಗೆ ಇರಬೇಕಲ್ಲ ಕೊಡಪಾನ ?
Next post ಗುರಿ ಇರಬೇಕು ಬಾಳಿಗೆ

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

cheap jordans|wholesale air max|wholesale jordans|wholesale jewelry|wholesale jerseys