ಗುರಿ ಇರಬೇಕು ಬಾಳಿಗೆ

ಗುರಿ ಇರಬೇಕು ಬಾಳಿಗೆ
ಛಲವಿರಬೇಕು ಜೀವಕೆ|
ಗುರಿ‌ಇರದ ಬಾಳಿಗೆಲ್ಲಿದೆ ಕೊನೆಯು
ಛಲವಿರದ ಜೀವಕೆಲ್ಲಿದೆ ಬೆಲೆಯು|
ಗುರಿ ಬೇಕು ಗಂಡಿಗೆ, ಛಲಬೇಕು ಹೆಣ್ಣಿಗೆ||

ಅತ್ತ ಇತ್ತ ಹರಿದಾಡುವ ಮನಸ
ಅಂಕೆಯಲಿಡಬೇಕು|
ಆಸೆ ಆಮೀಷಕೆ ಅಧೀನವಾಗದ ಹಾಗೆ
ನಿಗಾವಹಿಸಲುಬೇಕು|
ಪ್ರತೀ ಕ್ಷಣವು ಅರಿಷ್ಡವರ್ಗಾದಿಗಳ
ಹಿಡಿತದಲ್ಲಿಡಬೇಕು||

ಗುರು ಹಿರಿಯರನು ಅನುಸರಿಸಿ
ಉತ್ತಮ ಮಾರ್ಗದಲಿ ಬದುಕಬೇಕು|
ಎಷ್ಟೇ ಕಷ್ಟಗಳು ಬಂದರೂ ಸತ್ಯ
ಧರ್ಮದಲಿ ನಡೆಯಲುಬೇಕು|
ಇದ್ದುದರಲ್ಲಿಯೇ ಸುಖವನು ಕಂಡು
ಸಂತೃಪ್ತಿಯ ಹೊಂದಬೇಕು||

ಅಲ್ಪತನಕೆ ಆಸ್ಪದವ ನೀಡಬಾರದು
ಹಾಸ್ಯಕೂ ಎಂದು ಅಸತ್ಯವನಾಡಬಾರದು|
ಸಜ್ಜನರೊಳೊಂದಾಗಿ ಬಾಳಿ ಬದುಕಬೇಕು
ಅಚ್ಯುತ ಅನಂತನ ನೆನೆ ನೆನೆದು
ಬಾಳಗುರಿಯ ಸೇರಲು ಬೇಕು||
*****

ಕೀಲಿಕರಣ :

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಳಿಯಲ್ಲಿಯ ವಿಷದಿಂದ ಜೀವರಾಶಿಗೆ ಆಪತ್ತು
Next post ಕತ್ತಲ ರಾಣಿ

ಸಣ್ಣ ಕತೆ