ಬಡತನದ ಮಡುವಿಂದ
ಕೊಸರಿಕೊಂಡು ಹೋದ ವೀರ –
ದೇಶ ರಕ್ಷಿಸಿ
ಹೆಂಡತಿ ಮಕ್ಕಳನು ಅನಾಥಿಸಿ
ಎಲ್ಲರ ಕಣ್ಣಾಲಿಯಲಿ ತುಂಬಿ
ಶ್ರೀಮಂತನಾದ.
*****