Home / ಲೇಖನ / ವಿಜ್ಞಾನ / ಮಣ್ಣುತಿನ್ನುವುದು ಆರೋಗ್ಯಕ್ಕೆ ಹಿತಕರ

ಮಣ್ಣುತಿನ್ನುವುದು ಆರೋಗ್ಯಕ್ಕೆ ಹಿತಕರ

“ಸಾಮಾನ್ಯವಾಗಿ ತಪ್ಪು ಮಾಡಿದ್ದರೆ ಮಣ್ಣುತಿನ್ನು ಹೋಗು” ಎಂದು ಉಡಾಫೆಯಾಗಿ ಹೇಳುವ ಜನರಿದ್ಧಾರೆ. ಒಂದರ್ಥದಲ್ಲಿ ಇದು ತಿನ್ನಲು ಯೋಗ್ಯವಲ್ಲದ್ದು ಎಂದೇ ಭಾವನೆ. ಅಥವಾ ಮಣ್ಣನ್ನು ಯಾರು ತಿನ್ನಲಾರರೆಂದೇ ಜನರ ನಂಬಿಕೆ. ಆದರೆ ಇತತ್ತೀಚಿನ ವೈಜ್ಞಾನಿಕ ಪ್ರಯೋಗಗಳ ಪ್ರಕಾರ ಮಣ್ಣು ಒಂದು ಆರೋಗ್ಯವರ್ಧಕ ಪದಾರ್ಥವೆಂದು ದೃಢಪಟ್ಟದೆ. ಇದರಲ್ಲಿ ಅನೇಕ ಪೌಷ್ಟಿಕಾಂಶಗಳು ಇವೆ; ಎಂದು ಸಾಬೀತಾದ ಮಾತು. ಕೆನಡಾದ ಇಬ್ಬರು ವಿಜ್ಞಾನಿಗಳು ಉತ್ತರಕೆರೋಲಿನಾ, ಚೀನಾ ಮತ್ತು ಜಿಂಬಾಬ್ವೆಯಲ್ಲಿ ಕೈಕೊಂಡ ಅಧ್ಯಯನದಿಂದ ಕಂಡು ಕೊಂಡಿದ್ದಾರೆ. ಶುದ್ದವಾದ ಹಳೆಯ ಮಣ್ಣು ಉತ್ತಮ ವಸ್ತುವೆಂದು ಸಂಶೋಧಕರ ಲ್ಲೊಬ್ಬರಾದ ಸುಸಾನ್ ಔಪ್ರೀಟರ್ ತಿಳಿಸುತ್ತಾರೆ. ಅದರಲ್ಲೂ ಭೂಮಿಯೊಳಗಿನ ಮಣ್ಣು ಕಬ್ಬಿಣ ಮತ್ತು ಅಯೋಡಿನ್‌ಗಳಿಂದ ಸಮೃದ್ಧವಾಗಿದ್ದರಿಂದ ಮಕ್ಕಳು ಮತ್ತು ಗರ್ಭಿಣಿಯರು ಉಪಯೋಗಿಸುತ್ತಾರೆ. ಅದರಲ್ಲೂ ಗರ್ಭಿಣಿಯರಿಗೆ ಈ ಮಣ್ಣು ಉತ್ತವು ಪೋಷಕಾಂಶ
ವೆಂದೂ ಅವರು ಹೇಳುತ್ತಾರೆ. (ವರದಿ : ಡ್ಯಾನ್‌ಬರಿ ಅಮೇರಿಕಾ ಅ. 26-1997)

ರೋಮನ್ನರು ಮಣ್ಣು ಮತ್ತು ಆಡಿನ ರಕ್ತವನ್ನು ಸೇರಿಸಿ ಮಾತ್ರೆಗಳನ್ನು ಮಾಡಿ ಉಪಯೋಗಿಸುತ್ತಿದ್ದರು. ಕಳೆದ ಶತಮಾನದಲ್ಲಿ ಜರ್ಮನ್ನರು ಬ್ರೆಡ್ಡಿನೊಂದಿಗೆ ಬೆಣ್ಣೆಯ ಬದಲು ಮಣ್ಣನ್ನು ಉಪಯೋಗಿಸುತ್ತಿದ್ದರಂತೆ. ಆಫ್ರಿಕಾದಲ್ಲಿ ಅಜೀರ್ಣವಾದವರಿಗೆ ಈ ಮಣ್ಣನ್ನೇ ಔಷಧಿಯನ್ನಾಗಿ ತಿನ್ನಲು ಕೊಡುತ್ತಾರೆ. ಈ ಮಣ್ಣಿನ ಸೇವನೆಯಲ್ಲಿ  ಉಪಕಾರಿಯಾಗಬಲ್ಲ ಅಂಶಗಳ ಬಗ್ಗೆ ಕೂಲಂಕುಷವಾಗಿ ಮನಗಾಣಲು ಟೋರಾಂಟೋ ವಿ. ವಿ. ಯ ಪ್ರಯೋಗಾಲಯದ ವಿಶ್ಲೇಷಕಿ ಡಾ|| ಸೂಸನ್ ಮತ್ತು ಯಾಕ್೯ ವಿ. ವಿ.ಯ ಪ್ರೊ.ವಿಲಿಯಂ ಮ್ಯಾಹನಿ ಅವರು ಅನೇಕ ಪ್ರಯೋಗ ನಡೆಯಿಸಿ ಒಪ್ಪಿಕೊಂಡರು. ಚೀನಾದ ಹುನಾನ್ ಪ್ರಾಂತ್ಯದ ಹಳದಿ ಮಿಶ್ರಿತ ಮೆದು ಮಣ್ಣಿನಲ್ಲಿ ಕಬ್ಬಿಣ, ಕ್ಯಾಲ್ಪಿಯಂ, ಮೆಗ್ಲೀಶಿಯಂ, ಪೊಟ್ಯಾಶಿಯಂ ಮತ್ತು ಇತರ ಖನಿಜಗಳಿವೆ. ಜಿಂಬಾಬ್ವೆಯ ಕೆಲವು ಮಣ್ಣಿನಲ್ಲಿ ಲಿನೈಟ್ ಪೌಷ್ಠಿಕಾಂಶ ಇರುವುದಾಗಿ ವಿಜ್ಞಾನಿಗಳು ತಿಳಿಸುತ್ತಾರೆ. ಮಣ್ಣಿನಿಂದಲೇ ನಮ್ಮನ್ನು ರಕ್ಷಿಸುವ ಬೆಳೆಗಳು ಬೆಳೆಯುತ್ತವೆ. ನೀರು, ಖನಿಜಗಳು ದೊರೆಯುತ್ತವೆ. ಜೀವರಕ್ಷಕ ವಿಟ್ಯಾಮಿನ್‌ಗಳು ಈ ಮಣ್ಣಿನಲ್ಲಿ ಇರುವುದರಿಂದಲೇ ಜೀವೋದ್ಭವ- ವಾಗುತ್ತದೆ. ಆದರೆ ಮಣ್ಣು ಕೊಳಕು ಪದಾರ್ಥವೆಂದು ಮಣ್ಣಿನ ಬದಲಾಗಿ ಜೀವರಕ್ಷಕ ಬೆಳೆಗಳ ಆಹಾರವಿರುವಾಗ ಬಹುತೇಕ ಜನ ತಿನ್ನುವುದಿಲ್ಲ ಮತ್ತು ಉದರದೊಳಗಿನ ನರಮಲಡಗಳ ತಂತುಗಳಲ್ಲಿ ಮುಣ್ಣು ಲೇಪನಗೊಂಡು
ನರಮಂಡಲದ ಕ್ರಿಯಾಶೀಲತೆಗೆ ತೊಡಕಾಗಲೂ ಬಹುದೆಂದು ಕೆಲವರ ಅಭಿಪ್ರಾಯ, ಆದ್ದರಿಂದ ಬಹುತೇಕ ಜನ ಮಣ್ಣು ತಿನ್ನಲಾರರು. ಒಂದು ವೇಳೆ ತಿಂದರೆ ಕೆಟ್ಟದ್ದೇನಲ್ಲ ಅಪಾಯಕಾರಿಯಾಗಲಾರದು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್.ಎನ್.ಎಸ್.ರಾವ್