ಏತಕೆ ಆಟ ಆಡುವಿ
ಭಕ್ತನ ವೇಷ ಹೂಡುವಿ?

ಮೈಯ ಮೋಹದ ಕಾಮೀ ಬೆಕ್ಕು
ಗುರುಗುಡುತಿದೆ ಒಳಗೆ
ಬಿಚ್ಚಿದೆ ಉಗುರ, ಎತ್ತಿದೆ ಪಂಜ
ವಿರಾಗಿ ವೇಷ ಹೊರಗೆ

ಲೋಭ ಮೋಹಗಳ ಚಿರತೆ, ತೋಳ
ತಲೆಯ ಬೋನಿನೊಳಗೆ
ಆದರ ಫಳಫಳ ಗೋಪೀ ಚಂದನ
ತೋಳಿಗೆ ಎದೆ ಹಣೆಗೆ

ಜಪಮಣಿ ಮಾಲೆಯ ನಾಟಕ ಯಾಕೋ
ಬೆರಳಿಗೆ ಆಯಾಸ,
ವಂಚಿಸಬಲ್ಲೆಯ ಗಿರಿಧರನನ್ನು
ದೇವನೆದುರೆ ಮೋಸ?

*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)