ಪಾಪಿಯ ಪಾಡು – ೧೨

ಪಾಪಿಯ ಪಾಡು – ೧೨

ಮೇರಿಯಸ್ಸಸ ಕೊಠಡಿಯಲ್ಲಿರುವಾಗ ಜಾಂಡ್ರೆಟ್ಟನ ಮಗಳು ಬಂದು, ಲೇಖನಿಯನ್ನು ತೆಗೆದುಕೊಂಡು, ಒಂದು ಬರಿಯ ಕಾಗದದ ಮೇಲೆ ‘ಪೊಲೀಸಿನವರು ಬಂದಿದ್ದಾರೆ,’ ಎಂದು ಬರೆದು, ತನಗೆ ಬರೆಯುವುದಕ್ಕೆ ಬರುವುದೆಂಬುದನ್ನು ಮೇರಿಯಸ್ಸನಿಗೆ ತೋರಿಸುವುದಕ್ಕಾಗಿ ಅದನ್ನು ಎತ್ತಿ ಹಿಡಿದಳು. ಆಗ ಮೇರಿ ಯಸ್ಸನಿಗೆ ಆ ಜಾಂಡ್ರೆಟ್ ಸಂಸಾರದ ವಿಷಯದಲ್ಲಿ ಉಂಟಾದ ಕನಿಕರದಿಂದ ಅವನು ತನ್ನಲ್ಲಿದ್ದ ಕಡೆಯ ಕಾಸು, ಇದು ಫಾಂಕು ಗಳನ್ನು ಕೊಟ್ಟು ಬಿಟ್ಟನು. ಈ ಬಡ ಕುಟುಂಬದವರಲ್ಲಿ ಇವನಿಗೆ ಕುತೂಹಲವು ಹುಟ್ಟಿತು. ಆ ಹುಡುಗಿಯು ಹೊರಟುಹೋದ ಮೇಲೆ ಅವನ ಕೊಠಡಿಯ ಗೋಡೆಯಲ್ಲಿ ಮೇಲ್ಗಡೆ ಒಂದು ರಂಧ್ರವಿದ್ದುದು ಕಣ್ಣಿಗೆ ಬಿತ್ತು. ಬೀರುವಿನ ಮೇಲೆ ಹತ್ತಿ ಆ ಜಾಂಡ್ರೆಟ್‌ ಸಂಸಾರದ ಕೊಠಡಿಯೊಳಗೆ ನೋಡಿದನು. ಅದು ಒಂದು ಭಯಂಕರವಾದ ಗವಿಯಂತೆ ಕಂಡಿತು. ಅಲ್ಲಿ ದೀಪದ ಬೆಳಕು ಬಹಳ ಮಂಕಾಗಿದ್ದುದಲ್ಲದೆ, ಒಡೆದ ತಟ್ಟೆಗಳೂ ಮುರಿದ ಮರದ ಸಾಮಾನುಗಳೂ ಅವ್ಯವಸ್ಸೆಯಾಗಿ ಅಲ್ಲಲ್ಲಿ ಬಿದ್ದಿದ್ದುವು. ಕೊಳೆಯಂತೂ ತುಂಬಿ ಹರಿಯುವಂತಿತ್ತು. ಕೆಡುಕರಂತೆ ಕಂಡ ಅಲ್ಲಿ ಆ ಸಂಸಾರದ ತಾಯಿತಂದೆಗಳೂ, ನೋಡಲು ಇನ್ನೂ ಭಯಂಕರವಾಗಿದ್ದರು. ಅವರ ಸಂಭಾಷಣೆಯಿಂದೆ, ಯಾವನೋ ಒಬ್ಬ ಐಶ್ವರ್ಯವಂತನೂ, ಉದಾರಿಯ ಆದ ದೊಡ್ಡ ಮನುಷ್ಯನ ಆಗಮನವನ್ನು ಪ್ರತಿ ಕ್ಷಣದಲ್ಲಿಯ ನಿರೀಕ್ಷಿಸುತ್ತಿದ್ದಂತೆಯೂ, ಅವನ ಹೆಸರು ಮಾತ್ರ ಅವರಿಗೆ ಗೊತ್ತಿರಲಿಲ್ಲವೆಂತಲೂ ತೋರಿತು. ಬಾಗಿಲು ತೆರೆದು ಲೆಬ್ಲಾಂಕನೂ, ತಾನು ‘ಅರಸೂಲ’ ಎಂದು ಕರೆಯುತ್ತಿದ್ದ ಕೋಸೆಟ್ಟಳೂ ಒಳಗೆ ಬಂದಾಗ ಮೇರಿಯಸ್ಸನು ಆಶ್ಚರ್ಯಪರವಶನಾದನು. ಕೋಸೆಟ್ಟಳು ಆ ಮನೆಯ ಯಜ ಮಾನಿಯೊಡನೆಯ ಹೆಣ್ಣು ಮಕ್ಕಳೊಡನೆಯೂ ಬಹಳ ದಯೆಯಿಂದಲೂ ಕನಿಕರದಿಂದಲೂ ಮಾತನಾಡುತ್ತಿರುವಾಗ ಅವಳ ಪ್ರತಿಯೊಂದು ಭಾವವನ್ನೂ ಪ್ರತಿ ಕ್ಷಣದಲ್ಲಿಯ ಅವನು ಗಮ ನಿಸಿ ನೋಡುತ್ತಲಿದ್ದನು. ಜಾಂಡ್ರೆಟ್ಟನು ತನಗೆ ಆರು ತಿಂಗಳ ಬಾಡಿಗೆಯು ಮುಂಗಡವಾಗಿ ಬೇಕೆಂದು ಕೇಳಿದುದಕ್ಕೆ, ಅದರಂತೆ ಆ ದಿನ ಸಾಯಂಕಾಲದ ಆರು ಗಂಟೆಗೆ ತೆಗೆದುಕೊಂಡು ಬಂದು ಕೊಡುವುದಾಗಿ ಜೀನ್ ವಾಲ್ಜೀನನು ವಾಗ್ದಾನ ಮಾಡಿದುದನ್ನು ಮೇರಿಯಸ್ಸನು ಕೇಳಿದನು.

ಅವರು ಹೊರಟುಹೋದ ಸ್ವಲ್ಪ ಹೊತ್ತಿನ ಮೇಲೆ ಚಾಂ ಡ್ರೆಟ್ಟನ ಹುಡುಗಿಯರಲ್ಲಿ ಹಿರಿಯವಳು ಮೇರಿಯಸ್ಸನ ಕೊಠಡಿಯ ಬಾಗಿಲಿಗೆ ಬಂದು, ‘ ನೀನು ನನಗೆ ಮಾಡಿದ ಉಪಕಾರಕ್ಕಾಗಿ ನಾನು ನಿನಗೆ ಯಾವ ಪ್ರತ್ಯುಪಕಾರವನ್ನು ಮಾಡಲಿ ? ‘ ಎಂದು ಕೇಳಿದಳು. ಅದಕ್ಕೆ ಅವನು, ‘ ಈಗ ತಾನೆ ಇಲ್ಲಿಗೆ ಬಂದಿದ್ದ ಮನುಷ್ಯನ ಮತ್ತು ಆ ಹುಡುಗಿಯ ನಿವಾಸದ ವಿಳಾಸವೇನೆಂಬು ದನ್ನು ತಿಳಿದು ಹೇಳಬೇಕು,’ ಎಂದು ಕೇಳಿಕೊಂಡನು.

ಕೆಲವು ನಿಮಿಷಗಳೊಳಗಾಗಿ, ಪಕ್ಕದ ಕೊಠಡಿಯಲ್ಲಿ ಬಹಳ ಕೂಗಾಟದ ಗದ್ದಲವು ಅವನಿಗೆ ಕೇಳಿಬಂತು. ಕಂಡಿಗೆ ಕಿವಿ ಯಿಟ್ಟು ಕೇಳುವಲ್ಲಿ ಜಾಂಡೆಟ್ ಸಂಸಾರದವರು ಆ ಸಾಯಂ ಕಾಲಕ್ಕೆ ಅಲ್ಲಿ ಬರತಕ್ಕ ಲೆಬ್ಲಾಂಕಸಿಗೆ ವಿರೋಧವಾಗಿ ಏನೋ ಪಿತೂರಿಯನ್ನು ನಡೆಯಿಸುತ್ತಿರುವಂತೆ ತಿಳಿಯಿತು. ಜಾಂಡ್ರೆಟ್ಟನು ತನ್ನ ಸಹಾಯಕ್ಕೆ ಕೆಲವು ತುಂಟರನ್ನು ಹುಡುಕಿ ಕರೆತರಲು ಸ್ವಲ್ಪ ಹೊತ್ತಿನಲ್ಲಿಯೇ ಮನೆಯಿಂದ ಹೊರಟನು. ಮೇರಿಯಸ್ಸನ್ನು ಈ ವಿಷಯವನ್ನು ತಿಳಿಸುವುದಕ್ಕಾಗಿ ಪೊಲೀಸ್ ಸ್ಟೇಷನ್ನಿಗೆ ಹೋದನು. ವಿಷಯವನ್ನು ತಿಳಿಸಿ ಅವನು ಅಲ್ಲಿಂದ ಹೊರಟು ಬರುವಾಗ ಪೊಲೀಸ್ ಅಧಿಕಾರಿಯೊಬ್ಬನು (Inspector) ಮೇರಿಯಸ್ಸನಿಂದ ಬೀಗದ ಕೈಯ್ಯನ್ನು ಕೇಳಿ ತೆಗೆದುಕೊಂಡು, ಅವನಿಗೆ ಎರಡು ಚಿಕ್ಕ ಉಕ್ಕಿನ ಕೈ ತುಪಾಕಿಗಳನ್ನು (pistols) ಕೊಟ್ಟು, ‘ ಇದೊ, ಇವುಗಳನ್ನು ತೆಗೆದುಕೊಂಡು ಹೋಗಿ ನೀನು ನಿನ್ನ ಕೊಠಡಿಯಲ್ಲಿ ಅಡಗಿಕೊಂಡು, ಹೊರಗೆ ಹೊರಟು ಹೋ ಗಿರುವೆಯೆಂಬದಾಗಿ ಅವರು ತಿಳಿದುಕೊಂಡಿರುವಂತೆ ಮಾಡು. ಈ ತುಪಾಕಿಗಳಿಗೆ ಮದ್ದು, ಗುಂಡುಗಳನ್ನು ಹಾಕಿದೆ ; ಪ್ರತಿಯೊಂದು ರಲ್ಲಿಯೂ ಎರಡು ಗುಂಡುಗಳಿವೆ. ನೀನು ಅಲ್ಲಿ ನಡೆಯುವುದೆಲ್ಲ ವನ್ನೂ ಚೆನ್ನಾಗಿ ಗಮನಿಸಿ ನೋಡುತ್ತಿರು, ಗೋಡೆಯಲ್ಲಿ ಒಂದು ರಂಧವಿರುವುದೆಂದು ನೀನು ಹೇಳಿರುವೆಯಷ್ಟೆ ! ಆ ತುಂಟರ ಗುಂಪು ಒಳಗೆ ಬರಲಿ, ಅವರು ಏನೇನು ಮಾಡುವರೋ ಸ್ವಲ್ಪ ನೋಡು. ವಿಷಯವು ಅಪಾಯ ಸ್ಥಿತಿಗೆ ಬಂದಂತೆ ತೋರಿ, ಅದನ್ನು ನಿಲ್ಲಿಸುವುದಕ್ಕೆ ಸಮಯವೆಂದು ನಿನಗೆ ಕಂಡುಬಂದಾಗ, ಒಂದು ಗುಂಡನ್ನು ಹಾರಿಸು ; ಮೊದಲೇ ಹಾರಿಸಿ ಬಿಡಬೇಡ. ಉಳಿ ದುದನ್ನು ನಾನು ನೋಡಿಕೊಳ್ಳುವೆನು. ಆ ಗೋಲಿಯ ಏಟು ಆಕಾಶಕ್ಕೋ ಕೊಠಡಿಯ ಮಾಳಿಗೆಗೋ, ಎಲ್ಲಿಗೆ ಬೇಕಾದರೂ ಹೊಡಿ ; ಮುಖ್ಯವಾಗಿ ಕೇವಲ ಮೊದಲೇ ಹೊಡೆದುಬಿಡಬೇಡ,’ ಎಂದು ಉಪದೇಶಮಾಡಿದನು.

ಮೇರಿಯಸ್ಸನು ಕೈ ತುಪಾಕಿಗಳನ್ನು ತೆಗೆದುಕೊಂಡು ತನ್ನ ಅಂಗಿಯು ಪಕ್ಕದ ಜೇಬಿನಲ್ಲಿಟ್ಟುಕೊಂಡು, ‘ಸ್ವಾಮಿ, ತಾವು ಧೈರ್ಯವಾfe,’ ಎಂದು ಹೇಳಿ, ಹೊರಗೆ ಹೋಗಲು ಕೈಯನ್ನು ಚಿಲಕದ ಮೇಲೆ ಇಟ್ಟ ಕೂಡಲೇ, ಪೊಲೀಸ್ ಅಧಿ ಕಾರಿಯು ಅವನನ್ನು ಕರೆದು, ಒಂದು ವೇಳೆ ಅಷ್ಟರೊಳಗಾಗಿಯೇ ನನ್ನ ಹಾಜರಿಯೇನಾದರೂ ಆವಶ್ಯಕವಾದರೆ ನೀನೇ ಹೊರಟು ಬಾ, ಅಧವಾ ಯಾರ ಸಂಗಡಾದರೂ ಇನ್‌ಸ್ಪೆಕ್ಟರ್ ಜೇವರ್ಟನಿಗೆ ಹೇಳಿಕಳುಹಿಸು,’ ಎಂದು ಹೇಳಿದನು. ಮೇರಿಯಸ್ಸನು ಹಿಂ ದಿರುಗಿ ತನ್ನ ಕೊಠಡಿಗೆ ಬಂದು, ಆರು ಗಂಟೆ ಹೊಡೆಯುವುದಕ್ಕೆ ಮುಂಚೆಯೇ, ಕೈಯಲ್ಲಿ ಪಿಸ್ತುಲನ್ನು ಹಿಡಿದು, ಗೋಡೆಯಲ್ಲಿದ್ದ ರಂಧ್ರದ ಬಳಿಯಲ್ಲಿ ಅಡಗಿಕೊಂಡನು. ಅಗ್ಗಿಷ್ಟಿಕೆಯಲ್ಲಿ ಬೆಂಕಿಯು ಪ್ರಬಲವಾಗಿ ಉರಿಯುತ್ತಿರುವುದನ್ನೂ ಅದರಲ್ಲಿ ಒಂದು ಭಾರಿ ಯಾದ ಕಬ್ಬಿಣದ ಉಳಿಯನ್ನು ಕಾಯಲು ಹಾಕಿರುವುದನ್ನೂ ಅವನು ನೋಡಿದನು. ಬೀದಿಯ ಎರಡು ಕಡೆಗಳಲ್ಲಿಯ ಎಚ್ಚರ ದಿಂದ ಕಾದಿರುವುದಕ್ಕಾಗಿ ಜಾಂಡ್ರೆಟ್ಟನು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಬೇಗನೆ ಕಳುಹಿಸಿದನು. ಲೆಬ್ಲಾಂಕನು ಒಳಗೆ ಬಂದಾಗ ಜಾಂಡ್ರೆಟ್ಟನು ಅವನೊಡನೆ ಏನೋ ಪ್ರಸಂಗವನ್ನು ಹೂಡಿ ಮಾತಿಗೆ ನಿಲ್ಲಿಸಿಕೊಂಡನು. ಪ್ರಾಣ ಭಯವನ್ನು ತೊರೆದ ನಾಲ್ಕು ಮಂದಿ ಕಟ್ಟಾಳುಗಳು ಆಗ ಒಳಗೆ ಪ್ರವೇಶಿಸಿ ಬಾಗಿಲ ಬಳಿ ಯಲ್ಲಿ ನಿಂತುಕೊಂಡರು. ಲೆಬ್ಲಾಂಕನು ಅವರು ಯಾರೆಂದು ಕೇಳುವ ಭಾವದಿಂದ ಅವರ ಕಡೆಗೆ ನೋಡಲ, ಚಾಂಡೆಟನು, ‘ ಇವರು ನನ್ನ ಸ್ನೇಹಿತರು, ಇದ್ದರಿರಲಿ, ಅವರಿಂದ ನಿಮಗೇನಾ ದೀತು !’ ಎಂದನು. ಹಠಾತ್ತಾಗಿ ಮತ್ತೆ ಮನೆಯ ಬಾಗಿಲು ತೆರೆ ಯಿತು, ಕಪ್ಪು ನಿಲುವಂಗಿಗಳನ್ನು ಧರಿಸಿ, ಮುಖಕ್ಕೆ ಕಪ್ಪು ಮುಖ ವಾಡಗಳನ್ನಿಟ್ಟುಕೊಂಡಿದ್ದ ಮೂವರು ಲೆಬ್ಲಾಂಕನ ಕಣ್ಣಿಗೆ ಬಿದ್ದರು.

ಲೆಬ್ಲಾಂಕನ ಮುಖವೂ ಕಳೆಗೆಟ್ಟಿತು. ತಾನು ಎಂತಹ ಸಂದರ್ಭದಲ್ಲಿ ಸಿಕ್ಕಿಬಿದ್ದಿರುವೆನೆಂದು ಅವನು ತಿಳಿದುಕೊಂಡು ತನ್ನ ಸುತ್ತಲೂ ಆ ಕೊಠಡಿಯಲ್ಲಿದ್ದ ಪ್ರತಿಯೊಂದು ಪದಾರ್ಥವನ್ನೂ ನೋಡಿದುದಲ್ಲದೆ, ಅಲ್ಲಿ ತನ್ನ ನ್ನು ಬಳಸಿ ನಿಂತಿದ್ದ ಎಲ್ಲಾ ಕಡೆಗೂ ಕುತ್ತಿಗೆಯನ್ನು ತಿರುಗಿಸಿ ಚೆನ್ನಾಗಿ ಅವರ ಮುಖಗಳನ್ನು ನಿದಾನ ವಾಗಿ ನೋಡಿ ಆಶ್ಚರ್ಯಚಕಿತನಾದನು ಇಷ್ಟಾದರೂ ಅವನ ರೀತಿಯನ್ನು ನೋಡಿದರೆ, ಅವನಿಗೆ ಸ್ವಲ್ಪವೂ ಭಯವುಂಟಾದಂತೆ ಕಾಣಲಿಲ್ಲ. ಅವನ ಮನಸ್ಸಿಗೆ ಆಕಸ್ಮಿಕವಾಗಿ ಆಗ ಸ್ಫುರಿಸಿದ ಮೇರೆಗೆ, ಅವನು ಅಲ್ಲಿದ್ದ ಮೇಜನ್ನು ತನಗೆ ಅಡ್ಡವಾಗಿಟ್ಟು ಕೊಂಡನು. ಒಂದು ಕ್ಷಣದ ಹಿಂದೆ ನೋಡುವುದಕ್ಕೆ ಬಲು ಮುದುಕನಂತೆ ಕಂಡ ಇವನು, ಈಗ ತಟ್ಟನೆ ಪ್ರಬಲನಾದ ಮಲ್ಲ ನಾಗಿ, ಅಸಾಧಾರಣವೂ ಭಯಂಕರವೂ ಆದ ಬಹು ಕೂರ ಸಂಜ್ಞೆಯಿಂದ ತನ್ನ ಬಲವಾದ ಮುಷ್ಟಿಯನ್ನು ಕುರ್ಚಿಯ ಬೆನ್ನು ಕಡೆಯಲ್ಲಿಟ್ಟುಕೊಂಡು ನಿಂತನು.

ಇಂತಹ ಪ್ರಬಲ ವಿಪತ್ತಿನಲ್ಲಿಯ ಇಷ್ಟು ಸ್ಥಿರವಾಗಿಯೂ ಧೀರನಾಗಿಯೂ ನಿಂತಿದ್ದ ಈ ಮುದುಕನು, ಜಗತ್ತಿನಲ್ಲಿ ಸ್ವಾಭಾ ವಿಕವಾಗಿ ಉತ್ತಮವಾಗಿಯಲಲಿತವಾಗಿಯೂ ಧೈರ್ಯಾತಿಶಯ ದಿಂದಲೂ ಕಂಗೊಳಿಸುವ ಒಂದು ಪ್ರಕೃತಿ ಶಕ್ತಿಯಂತೆ ಕಂಡನು. ಈ ಹೊಸಬನ ರೀತಿಯನ್ನು ನೋಡಿ ಮೇರಿಯಸ್ಸನಿಗೆ ಮನಸ್ಸಿನಲ್ಲಿ ಒಂದು ವಿಧವಾದ ಸಂತೋ ಷದ ಹೆಮ್ಮೆ ಹುಟ್ಟಿತು.

ಇನ್ನು ಒಂದೆರಡು ಕ್ಷಣಗಳಲ್ಲಿಯೇ ತಾನು ಈ ಸಂದರ್ಭ ದಲ್ಲಿ ಪ್ರವೇಶಿಸಬೇಕಾದ ಸಮಯವು ಬರುವದೆಂದಾಲೋಚಿಸಿ, ಅವನು ತನ್ನ ಬಲಗೈಯನ್ನು ಆ ದೊಡ್ಡ ಕೊಠಡಿಯ ಮಾಳಿಗೆಯ ಕಡೆ ಎತ್ತಿ ತುಪಾಕಿಯನ್ನು ಹಾರಿಸಲು ಸಿದ್ದನಾದನು.

ಆಗ ಚಾಂಡೆಟ್ಟನು, ತನ್ನನ್ನು ನೋಡಲು ಬಂದಿದ್ದ ಆ ಮುದುಕನನ್ನು ನೋಡಿ, ‘ ನಿನಗೆ ನನ್ನ ಗುರುತು ಸಿಕ್ಕಲ್ಲವೇ ?’ ಎಂದನು.

ಲೆಬ್ಲಾಂಕನು ಅವನ ಮುಖವನ್ನು ಚೆನ್ನಾಗಿ ನೋಡಿ, ‘ಇಲ್ಲ,’ ಎಂದು ಉತ್ತರಕೊಟ್ಟನು.

ಜಾಂಡ್ರೆಟ್ಟನು ಮೇಜಿನ ಒಳಿಗೆ ಒಂದು, ‘ ನನ್ನ ಹೆಸರು ಚಾಂಡೆಟ್ಟನಲ್ಲ, ನನ್ನ ಹೆಸರು ಥೆನಾರ್ಡಿಯರ್‌ ! ನಿನಗೆ ಈಗ ಲಾದರೂ ನನ್ನ ಪರಿಚಯವಾಯಿತೆ ?’ ಎಂದು ಗಟ್ಟಿಯಾಗಿ ಕೂಗಿ ದನು. ಲೆಬ್ಲಾಂಕನ ಹಣೆಯ ಮೇಲೆ ಸೂಕ್ಷ್ಮವಾದ ಒಂದು ಕೆಂಪು ಛಾಯೆಯೇರಿತು. ಆಗ ಅವನು ಸ್ವಲ್ಪವೂ ಅದಿರಿ ಬೆದರದೆ, ಗಟ್ಟಿಯಾಗಿ ಕೂಗದೆ, ತನ್ನ ಸ್ವಭಾವಿಕವಾದ ಶಾಂತ ರೀತಿಯಿಂದ, ‘ಹೆಚ್ಚು ಪರಿಚಯವೇನೂ ಆಗಲಿಲ್ಲ’ ಎಂದನು.

ಮೆರಿಯಸ್ಸನಿಗೆ ಈ ಉತ್ತರವ ಕೇಳಿಸಲಿಲ್ಲ. ಅವನನ್ನು ಆ ಸಮಯದಲ್ಲಿ ಯಾರಾದರೂ ನೋಡಿದ್ದಲ್ಲಿ ಅವನು ಎಷ್ಟು ಬೆದರಿ, ಬೆಚ್ಚಿ, ದಿಕ್ಕು ತೋರದೆ ಇದ್ದನೆಂಬುದು ಕಾಣುತ್ತಿತ್ತು. ಅವನ ಬೆರಳಿನ ನರಗಳೇ ಅವನ ಸ್ವಾಧೀನ ತಪ್ಪಿ, ತುಪಾಕಿಯು ಕೈಯಿಂದ ಕಳಚಿ ಬೀಳುವಂತಾಯಿತು. ಲೆಬ್ಬಾಂಕ ನಿಗೆ ಅಪರಿಚಿತವಾಗಿ ಕಂಡ ‘ ಥೆನಾರ್ಡಿಯರ್‌’ ಎಂಬ ಹೆಸರು ಮೇರಿಯಸ್ಸನಿಗೆ ತನ್ನ ತಂದೆಯು ಬರೆದಿದ್ದ ಆಜ್ಞೆಯ ಮೂಲಕವಾಗಿ, ಎಂದರೆ : ಥೆನಾರ್ಡಿಯರ್‌ ಎಂಬ ಮನುಷ್ಯನು ನನ್ನ ಪ್ರಾಣವನ್ನುಳಿಸಿದನು. ನನ್ನ ಮಗನು ಆತನನ್ನು ಸಂಧಿಸಿದುದೇ ಆದರೆ ಆತನಿಗೆ ಅವನ ಕೈಯಿಂದಾದಷ್ಟು ಉಪಕಾರವನ್ನು ಮಾಡಲಿ,’ ಎಂದು ಬರೆದಿದ್ದ ಆಜ್ಞಾ ಪತ್ರದ ಮುಖದಿಂದ, ತಿಳಿದಿತ್ತು.

ಥೆನಾರ್ಡಿಯರನ ದುಷ್ಕಾರ್ಯಕ್ಕೆ ಸಹಾಯಕರಾಗಿ ಬಂದಿ ದ್ದವರಲ್ಲಿ ಒಬ್ಬನು ಬಾಗಿಲ ಕಡೆಯಿಂದ ಅವನ ಬಳಿಗೆ ಬರಲು, ಅವ ನಿಗೆ ಉತ್ತರ ಕೊಡುವುದಕ್ಕಾಗಿ ಥೆನಾರ್ಡಿಯರನು ಲೆಬ್ಬಾಂಕನ ಕಡೆಗೆ ತನ್ನ ಬೆನ್ನನ್ನು ತಿರುಗಿಸಿದನು. ಇದೇ ಸಮಯವೆಂದು ಲೆಬ್ಲಾಂಕನು ಕಾಲಿನಿಂದ ಕುರ್ಚಿಯನ್ನೂ ಕೈಯಿಂದ ಮೇಜನ್ನೂ ನೂಕಿಬಿಟ್ಟು, ಥೆನಾರ್ಡಿಯರಸು ಹಿಂದಿರುಗುವುದರೊಳಗಾಗಿ, ಪರಮಾಶ್ಚರ್ಯಕರವಾದ ಚಳಕದಿಂದ ಕಿಟಿಕಿಯ ಬಳಿಗೆ ನೆಗೆದನು. ಒಂದು ಕ್ಷಣದೊಳಗಾಗಿ ಕಿಟಿಕಿಯನ್ನು ತೆರೆದು, ಹತ್ತಿ, ಅಲ್ಲಿಂದ ಹೊರಗೆ ಇಳಿದನು. ಅವನು ಅರ್ಧ ಹೊರಗೆ ಹೋಗಿರುವಷ್ಟ ರಲ್ಲಿ ಮೂವರು ಬಲವಾದ ಆಳುಗಳು ತಮ್ಮ ಆರು ತೋಳು ಗಳಿಂದ ಅವನನ್ನು ಬಲವಾಗಿ ಹಿಡಿದು ಕೊಠಡಿಯೊಳಕ್ಕೆ ಎಳೆದು ಕೊಂಡರು. ಆ ಮೂರು ಮಂದಿ ಕರಿಯ ಮುಖವಾಡದ ಆಳುಗಳೂ ಅವನ ಮೇಲೆ ಬಿದ್ದರು. ಇದೇ ಕಾಲದಲ್ಲಿ ಥೆನಾರ್ಡಿ ಯುರನ ಹೆಂಡತಿಯು ಅವನ ಜುಟ್ಟನ್ನು ಬಲವಾಗಿ ಹಿಡಿದು ಕೊಂಡಳು. ಈ ಗದ್ದಲವನ್ನು ಕೇಳಿ ಮಿಕ್ಕ ದುಷ್ಟರು ಆ ಕೊಠಡಿ ಯೊಳಕ್ಕೆ ಓಡಿ ಬಂದರು.

ಅವರಲ್ಲಿ ಒಬ್ಬನು, ಕಬ್ಬಿಣದ ಕಂಬಿಗೆ ಎರಡು ಕೊನೆಗಳ ಲ್ಲಿಯೂ ಸೀಸದ ಗುಂಡನ್ನು ಸೇರಿಸಿ ಮಾಡಿದ ಒಂದು ಬಲವಾದ ಗದೆಯನ್ನು ಎತ್ತಿ ಮಾನ್ ಸಿಯುರ್ ಲೆಬ್ಲಾಂಕನ ತಲೆಯ ಮೇಲೆ ಹೊಡೆಯಲು ಎತ್ತಿದನು.

ಮೇರಿಯಸ್ಸನು ಈ ದೃಶ್ಯವನ್ನು ನೋಡಿ ಸಹಿಸಲಾಗದೆ, ತನ್ನಲ್ಲಿ ತಾನು ತಂದೇ, ನನ್ನನ್ನು ಮನ್ನಿಸು,’ ಎಂದು ಮನಸ್ಸಿನಲ್ಲಿ ಆಲೋಚಿಸಿಕೊಂಡು, ತುಪಾಕಿಯ ಕುದುರೆಯನ್ನು ಮೀಟಲು ಬೆರಳನ್ನಿಟ್ಟನು. ಗುಂಡನ್ನು ಹಾರಿಸುವಷ್ಟರಲ್ಲಿ, ‘ ಅವನಿಗೆ ತೊಂದರೆ ಮಾಡಬೇಡಿ,’ ಎಂದ ಥೆನಾರ್ಡಿಯರನ ಧ್ವನಿಯು ಕೇಳಿಬಂದಿತು.

ಈ ಕೂಗು ಕೇಳಿದೊಡನೆಯೆ ಮೇರಿಯಸ್ಸನು ಇನ್ನೂ ಸ್ವಲ್ಪ ಹೊತ್ತು ನಿರೀಕ್ಷಿಸೋಣವೆಂದು ನಿರ್ಧರಿಸಿಕೊಂಡನು.

ಒಂದು ಮಹಾ ರಾಕ್ಷಸ ಮಲ್ಲಯುದ್ಧವೇ ಪ್ರಾರಂಭ ವಾಯಿತು. ಲೆಬ್ಬಾ೦ಕನು ಅವರಲ್ಲೊಬ್ಬನ ಎದೆಗೆ ಕೊಟ್ಟ ಬಲವಾದ ಏಟಿನಿಂದ ಅವನು ಆ ಕೊಠಡಿಯ ಮಧ್ಯ ಭಾಗಕ್ಕೆ ಉರುಳುರುಳಿ ಹೋಗಿ, ಬೋರಲು ಬಿದ್ದನು. ಅನಂತರ ಹಿಂದಕ್ಕೆ ಎರಡು ಏಟುಗಳನ್ನು ಹೊಡೆಯಲು, ಇನ್ನಿಬ್ಬರು ತುಂಟರು ಬಿದ್ದರು. ಲೆಬ್ಲಾಂಕನು ಒಬ್ಬೊಬ್ಬನನ್ನು ತನ್ನ ಒಂದೊಂದು ಮೊಣಕಾಲಿನ ಸಂದಿಗೆ ಇರುಕಿಸಿ ಅವರಿಬ್ಬರನ್ನೂ ಹಿಡಿದುಕೊಂಡನು. ಆ ನೀಚ ರಿಬ್ಬರ, ಕಲ್ಲನ್ನು ಪುಡಿ ಮಾಡುವ ಯಂತ್ರಕ್ಕೆ ಸಿಕ್ಕಿದವರಂತೆ, ಅವನ ಬಲವಾದ ಹಿಡಿತವನ್ನು ತಡೆಯಲಾರದೆ ಅರಚಿ ಕಿರಚಿ ಕೊಂಡರು. ಆದರೆ ಇನ್ನೂ ನಾಲ್ಕು ಮಂದಿ ಬಂದು, ಆ ಭಯಂಕರ ನಾದ ಮುದುಕನ ತೋಳುಗಳನ್ನ ಬೆನ್ನನ್ನೂ ಹಿಡಿದು ಬೋರಲಾಗಿ ಬಿದ್ದಿದ್ದ ಇಬ್ಬರು : ಕರಿಯ ಭಟರ ‘ ಮೇಲ್ಗಡೆ ಯಲ್ಲಿ ಅದಿಮಿ ಹಿಡಿದಿದ್ದರು. ಲೆಹ್ವಾಂಕನು ತನ್ನ ಕೆಳಗಿರು ವವರನ್ನು ತುಳಿದು ಜಜುಲೂ, ತನ್ನ ಮೇಲೆ ಬಿದ್ದಿರುವವರ ಕೆಳಗೆ ಸಿಕ್ಕಿ ಉಸಿರಾಡಲು ಸಹ ಸಾಧ್ಯವಿಲ್ಲದೆಯೂ, ಮಳೆಯಂತೆ ಮೇಲೆ ಬೀಳುತ್ತಿದ್ದ ಜನರ ತುಳಿತವನ್ನು ನಿವಾರಿಸಿಕೊಳ್ಳಲು ಬಹಳ ಪ್ರಯತ್ನ ಮಾಡಿ ಸಾಧ್ಯವಿಲ್ಲದೆಯೂ, ಕಡೆಗೆ, ಬೊಗಳುವ ಬೇಟೆ ನಾಯಿಗಳ ಮಧ್ಯದಲ್ಲಿ ಸಿಕ್ಕಿಬಿದ್ದ ಕಾಡು ಕರಡಿಯಂತೆ ಆ ದುಷ್ಟರಾದ ಕಳ್ಳರ ಭಯಂಕರವಾದ ಗುಂಪಿನೊಳಗೆ ಸಿಕ್ಕಿ ಮಾಯವಾಗಿದ್ದನು.

ಅವರು ಕಟ್ಟಕಡೆಗೆ ಅವನನ್ನು ಹಿಡಿದು, ಕಿಟಕಿಯ ಬಳಿಯಲ್ಲಿದ್ದ ಒಂದು ಹಾಸುಗೆಯ ಮೇಲಕ್ಕೆ ಎಸೆದು ಅಲ್ಲಿ ಬಲವಾಗಿ ಹಿಡಿದು ನಿಲ್ಲಿಸಿಕೊಂಡರು.

ಥೆನಾರ್ಡಿಯರನು ಬಾಗಿಲಿನಿಂದ ಒಂದು ಮಲೆಗೆ ಹೋಗಿ ಹಗ್ಗದ ಕಟ್ಟೊಂದನ್ನು ತೆಗೆದು ಅವರ ಕಡೆಗೆ ಎಸೆದು, ‘ಆ ಮಂಚದ ಕಾಲಿಗೆ ಅವನನ್ನು ಬಿಗಿದು ಕಟ್ಟಿಸಿ,’ ಎಂದು ಕೂಗಿದನು. ಆ ದುಷ್ಟರು ಅವನನ್ನು ಹಿಡಿದು, ಕಿಟಿಕಿಗೆ ದೂರವಾಗಿಯೂ ಚಿಮನಿಗೆ ಸಮೀಪವಾಗಿಯೂ ಇರುವ ಮಂಚದ ಕಂಬಕ್ಕೆ ಅವನನ್ನು ಒರಗಿಸಿ ನೆಲದಮೇಲೆ ನಿಲ್ಲಿಸಿ, ಬಲವಾಗಿ ಬಿಗಿದು ಕಟ್ಟಿದರು.
*****
ಮುಂದುವರೆಯುವುದು

ವಿಕ್ಬರ್ ಹ್ಯೂಗೋ ನ “ಲೆ ಮಿಸರಾ ಬಲ್ಸ್‌”
ಜೆ ಲ ಫಾರ್‍ಜ್ ರವರ ಸಂಕ್ಷೇಪ ಪ್ರತಿಯ ಅನುವಾದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂತೈಸು ಮನ
Next post ತೇರು ಕೋಲು (ಎತ್ತು ಕಾಯೋ ತಮ್ಮ)

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys