ತೇರು ಕೋಲು (ಎತ್ತು ಕಾಯೋ ತಮ್ಮ)

ಎತ್ತು ಕಾಯೋ ತಮ್ಮ ಮುತ್ತಿನ ಬಿಲ್ಲವನೇ
ಎತ್ತಿಗೇ ನೀರೆಲ್ಲೀ ಕೊಡಿಸಿದಿಯೋಲಾದರೇ
ದೇವರ ಕೇರಿಯಲ್ಲಿ ಕುಡಿಸೀಯೋ ಕೋಲೇ
ಕುಡಿಸಿದಿಯೋಲಾದಾರೆ ಎತ್ತನು
ಹೊಡೀರಣ್ಣಾ ಮಾರೀ ಬೈಲಿಗೆ ಕೋಲೇ || ೧ ||

ಕೋಣಾ ಕಾಯೋ ತಮ್ಮ ಮುತಿನ್ತ ಬಿಲ್ಲವನೇ
ಕೋಣಗೇ ನೀರೆಲ್ಲಿ ಕುಡಿಸಿದಿಯೋಲಾದರೇ
ದೇವರ ಕೆರೆಯಲ್ಲಿ ಕುಡಿಸೀಯೋ ಕೋಲೇ
ಕೋಣಾ ಹೊಡೀರಣ್ಣಾ ಮಾರೀ ಬೈಲಿಗೆ ಕೋಲೇ || ೨ ||

ಕುರಿಯ ಕಾಯೋ ತಮ್ಮಾ ಮುತ್ತಿನ ಬಿಲ್ಲವನೇ
ಕುರಿಗೆ ನೀರೆಲ್ಲಿ ಕುಡಿಸಿದಿಯೋಲಾದರೇ
ದೇವರ ಕೇರಿಯಲ್ಲಿ ಕುಡಿಸೀಯೋ ಕೋಲೇ
ಕುರಿಯ ಹೊಡೀರಣ್ಣಾ ಮಾರೀ ಬೈಲಿಗೇ ಕೋಲೇ || ೩ ||

ಕೋಳೀ ಕಾಯೋ ತಮ್ಮ ಮುತ್ತಿನ ಬಿಲ್ಲವನೇ
ಕೋಳೀಗೆ ನೀರೆಲ್ಲಿ ಕುಡಿಸಿದಿಯೋಲಾದರೇ
ದೇವರ ಕೆರಿಯಲ್ಲಿ ಕುಡಿಸೀಯೋ ಕೋಲೇ
ಕೋಳೀ ಹೊಡೀರಣ್ಣಾ ಮಾರೀ ದೇವರಿಗೇ ಕೋಲೇ || ೪ ||

ಹಂದಿ ಕಾಯೋ ತಮ್ಮ ಮುತ್ತಿನ ಬಿಲ್ಲವನೇ
ಹಂದಿಗೇ ನೀರೇಲ್ಲಿ ಕುಡಿಸಿದಿಯೋಲಾದರೇ
ದೇವರ ಕೇರಿಯಲ್ಲಿ ಕುಡಿಸೀಯೋ ಕೋಲೇ
ಹಂದಿ ಹೊಡಿರಣ್ಣಾ ಮಾರೀ ಬಯಲಿಗೇ ಕೋಲೇ || ೫ ||
*****
ಹೇಳಿದವರು: ಮೋಹನ ನಾಗು ಗೌಡ, ಮಂಜುಗುಣಿ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಪಿಯ ಪಾಡು – ೧೨
Next post ಮತ್ತೆ ವಿಷ ಹೊರುವುದನೆ ಕೌಶಲವೆನಬಹುದೇ?

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…