ಸಂತೈಸು ಮನ

ರಾಮಾ ಎನ್ನ ಮನವ ಸಂತೈಸು
ಕಾಮಕ್ರೋಧದೀ ಮನ
ನಿತ್ಯವೂ ಮಲಿನವಾಗದಂತೆ
ಮಾಡಲಿ ನಿನ್ನ ನಮನ

ಎಂದಿಗಾಗೂವುದೊ ನಿನ್ನ
ಆ ದಿವ್ಯ ದರುಶನ ಪ್ರಭು
ನಿನ್ನ ನಿತ್ಯ ನಿತ್ಯವು ಧ್ಯಾನಿಸಿ
ಹೃದಯವು ಬೆಳಗಲಿ ಪ್ರಭು

ಜನುಮ ಜನುಮಗಳೆಲ್ಲ
ವಿಷಯ ಸುಖಗಳಲಿ ಬೆಂದು
ಕರಗಿ ಹೋದವು ಮತ್ತೆ ಈ ಜನುಮ
ಬೆಂಡಾಗಿ ಬಳಲಿ ಆಗಿದೆ ಕಂದು

ನಿನ್ನ ನಾಮ ಅನವರತ ನುಡಿಸು
ಯಾವ ಕ್ಷಣವೂ ಬೇಡ ನೀನಿಲ್ಲದೆ
ಇಂದ್ರಿಯಗಳತ್ತವಾಲದಿರಲಿ ನಾ
ಬೇಡ ಯಾವ ದಿನಿಸು ನೀನಲ್ಲದೆ

ನಿನ್ನ ಸ್ಮರಣೆಯ ಧ್ಯಾನ ನಿತ್ಯ
ಸದಾ ಎನ್ನ ಪದರು ತುಂಬು
ನನ್ನ ಬಾಳಿನ ಪರ್‍ಯಂತ ನೀನಿರು
ಮಾಣಿಕ್ಯ ವಿಠಲನೇ ಆಧಾರಕೊಂಬು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೯
Next post ಪಾಪಿಯ ಪಾಡು – ೧೨

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…