ನನ್ನ ಜನರು
ನನ್ನ ಜೊತೆ
ಎಲ್ಲಿ ಹೋದರಿರುವರು ||

ನನ್ನ ಜನರು
ನನ್ನ ಜೀವನ
ಬದುಕು ನೀಡಿದವರು ||

ಹೆತ್ತ ಒಡಲು
ತಂಪು ನೀಡಲು
ಅಮೃತ ಉಣಿಸಿದವರು ||

ಹಿರಿಯರೆನ್ನ
ತಂದೆ ತಾಯಿ
ಕಿರಿಯರೆನ್ನ ಬಂಧುಬಳಗ ||

ಜಾತಿ ನೀತಿ
ಭೇದ ಭಾವವಿಲ್ಲ
ನನ್ನ ಜನರೆ ನನಗೆಲ್ಲಾ ||

ಪ್ರೀತಿ ತುಂಬಿ
ಸ್ನೇಹ ತುಂಬಿ
ವಿಶ್ವಾಸದ ಹಣತೆ ಹಚ್ಚಿದವರು ||

ಮಾನ ಅಭಿಮಾನ
ಕೆಚ್ಚಿನ ನುಡಿಗಳು
ಸ್ವಾಭಿಮಾನಿ ನನ್ನ ಜನರು ||

ನೋವು ನಲಿವಿಗೆ
ಊರು ಗೋಲು
ಹೃದಯವಂತರು ನನ್ನ ಜನರು ||

ಸತ್ಯ ಧರ್ಮ
ನೀತಿ ನೇಮ ಅರಿತ
ತ್ಯಾಗವಂತರು ನನ್ನ ಜನರು ||

ವಿಶ್ವಕ್ಕೆಲ್ಲಾ ತಾಯಿ
ಒಬ್ಬಳೇ ನನ್ನ ಜನರು
ನನ್ನವರೆಲ್ಲಾ ಅವರೇಽಽಽ||

ಸೋಲು ಗೆಲುವು
ತಪ್ಪು ಒಪ್ಪು
ಒಡಲ ದನಿಯಾದವರು ||

ಜೀವದ ಜೀವನ
ಅಳಿವಿನ ಉಳುವಿಗೆ
ಬೆನ್ನೆಲುಬಾದವರು ನನ್ನ ಜನರು ||

ಕನ್ನಡ ನಾಡ ದೇವಿ
ಕೊರಳ ಹೂಮಾಲೆ
ಆದವರು ನನ್ನ ಜನರು ||
*****