ಖೇಲ್ ಐಸುರ ಮೊಹರಮ್ ತೀರಿತು || ಪ ||

ಐಸುರ ತೀರಿತು
ಮೊಹರಮ್ ಸಾಗಿತು
ಮೀರಿದ ಕರ್ಬಲ ದಾರಿಯೊಳಗ ಖೇಲ್ || ೧ ||

ಬಣ್ಣದ ಲಾಡಿ
ಕಣ್ಣಿಲೆ ನೋಡಿ
ಪುಣ್ಯಪಾಪಗಳೆರಡಿಲ್ಲದಲಾವಿ ಖೇಲ್ || ೨ ||

ಸತ್ಯಕ್ಕೆ ಶರಣರು
ಮರ್ತ್ಯಕ್ಕೆ ಮಹಿಮರು
ಗುರ್ತತೋರಿಸಿ ಹತ್ತು ದಿವಸದಲಾವಿ ಖೇಲ್ || ೩ ||

ಭೂವರ ಶಿಶುನಾಳ
ಶಾಹಿರ ಕವಿಗಳು
ದೇವಲೋಕದಿ ಯಾ ಅಲ್ಲ ಬೋಲ್ || ೪ ||
*****