ಕಾಗೆಯ ಗೂಡಿನಲ್ಲಿ
ಕೋಗಿಲೆಯ ಮರಿ ಪರಪುಟ್ಟ
ಹೇಗೆ ಬೇರ್‍ಪಡಿಸುತ್ತದೆ ನೋಡು ಇಂಚರ!

ಭೂಮಿಯ ಗರ್‍ಭದ ಒಳಗೆ
ಬೆಂಕಿ ಲಾವಾದ ಹರಿವು
ಹೇಗೆ ಹುಟ್ಟುತ್ತವೆ ನೋಡು ಬೆಂಕಿ ಪರ್‍ವತ!

ಬೆಟ್ಟದ ಕಲ್ಲಿನ ಒಡಲಲ್ಲಿ
ಹಸಿರು ಪಾಚಿ ನೀರಿನ ಒಸರು
ಹೇಗೆ ಹುಟ್ಟುತ್ತದೆ ನೋಡು ಕಪ್ಪೆ ಮರಿ!

ಸಮುದ್ರದ ತಳದಲ್ಲಿರುವ
ಕಪ್ಪೆ ಚಿಪ್ಪಿನಲ್ಲಿ ಉಪ್ಪು ಹನಿ
ಹೇಗೆ ಬೆಳೆಯುತ್ತದೆ ನೋಡು ಶುದ್ಧ ಮುತ್ತು!

ನನ್ನೊಳಗೆ ಹುದುಗಿರುವ ನನ್ನದೇ ನೆರಳು
ಆತ್ಮದ ಬೇರು ಬಿಸಿಲು-ಬೆಳದಿಂಗಳು
ಹೇಗೆ ಬೇರ್‍ಪಡಿಸುತ್ತಾರೆ ನೋಡು
ಆ ಸೂರ್‍ಯ ಚಂದ್ರರು.
*****