ಕಳಪೆ ವಿದೇಶೀ ಬಲ್ಫಗಳು

ನಮ್ಮಲ್ಲಿ ಹಲವರಿಗೆ ವಿದೇಶಿ ವಸ್ತುಗಳ ಮೋಹ. ಆವುಗಳ ಗುಣಮಟ್ಟ ಉತ್ತಮ ಎಂದವರ ಕಲ್ಪನೆ. ವಾಸ್ತವವಾಗಿ ಹಲವು ವಿದೇಶಿ ವಸ್ತುಗಳ ಗುಣಮಟ್ಟ ಕಳಪೆ ಎಂಬುದಕ್ಕ ಇನ್ನೊಂದು ನಿದರ್ಶನ ಸಿಕ್ಕಿದೆ.

ಭಾರತದಲ್ಲಿ ಮಾರಾಟವಾಗುವ ವಿದೇಶೀ ಕಾಂಪಾಕ್ಟ್ ಫ್ಲೋರೋಸೆಂಟ್ ಬಲ್ಪ್ (ಸಿಎಘ್ ಬಲ್ಪ್)ಗಳನ್ನು  ಪರೀಕ್ಷಿಸಿದಾಗ ಆವುಗಳ ಗುಣಮಟ್ಟ ತೀರಾ ಕಳಪೆ ಎಂಬ ಸತ್ಯಾಂಶ ಬೆಳಕಿಗೆ ಬಂತು! ಬಲ್ಪಿನ ಪೊಟ್ಟಣದಲ್ಲಿ ಮುದ್ರಿಸಿದ ಘೋಷಣೆಗಳಿಗೂ ಆವುಗಳ ದಕ್ಷತೆಗೂ ಆಜಗಚಾಂತರ ಎಂಬುದು ಬಹಿರಂಗವಾಯಿತು.  ಆಹ್ಮದಾಬಾದಿನ ಕನ್ಸೂಮರ್ ಎಜುಕೇಶನ್ ಆಂಡ್ ರೀಸರ್ಚ್ ಸೊಸೈಟಿ ನಡೆಸಿದ ಆ ಪರೀಕ್ಷೆಯಲ್ಲಿ 23 ವಿದೇಶೀ ಸೀಎಫ್ ಬಲ್ಪ್ ಗಳ ಬ್ರಾಂಡ್ ಗಳ ತಲಾ ಎರಡು ಸ್ವಾಂಪಲ್ ಗಳನ್ನು ಪರೀಕ್ಷಿಸಲಾಯಿತು.

ಆ ಸಿಎಫ್ ಬಲ್ಪ್ ಗಳು ಈ ಆಂಶಗಳ ಆಧಾರದಿಂದ ‘ವಿದೇಶದಲ್ಲಿ ತಯಾರಾದವು’ ಎಂದು ನಿರ್ಧರಿಸಿ ಪರೀಕ್ಷೆಗಾಗಿ ಆಯ್ಕೆ ಮಾಡಲಾಯಿತು: ಬಲ್ಪಿನ ಪೊಟ್ಟಣದಲ್ಲಿ ‘ಮೇಡ್ ಇನ್ ಇಂಡಿಯಾ’ ಲೇಬಲ್ ಇರಲಿಲ್ಲ. ಅದರಲ್ಲಿ ವಿವರಗಳನ್ನು ಆನ್ಯ ದೇಶದ (ಭಾರತೀಯವಲ್ಲದ) ಭಾಷೆಯಲ್ಲಿ ಮುದ್ರಿಸಲಾಗಿತ್ತು ಆಥವಾ ಯಾವುದೇ ಹೊರ ದೇಶದ ಹೆಸರು ನಮೂದಿಸಲಾಗಿತ್ತು.

ಯುರೋಪಿನ ಇಂಟನ್ಯಾಷನಲ್ ಇಲೆಕ್ಟ್ರೋ-ಟೆಕ್ನಿಕಲ್ ಕಮಿಷನ್ (ಐಇಸಿ) ಮತ್ತು ಅಮೆರಿಕನ್ ನ್ಯಾಷನಲ್ ಸ್ಟಾಂಡರ್ಡ್ ಇನ್ಟಿಟ್ಯೂಟ್ ಮತ್ತು ಇಲುಮಿನೇಷನ್ ಇಂಜಿನಿಯರಿಂಗ್ ಸೊಸೈಟಿ ಆಫ್ ನಾರ್ತ್ ಆಮೆರಿಕ ಈ  ಸಂಸ್ಥೆಗಳು ನಿಗದಿಪಡಿಸಿದ ಮಾನದಂಡಗಳ ಅನುಸಾರ ಸಿಎಫ್ ಬಲ್ಪ್ ಗಳ ದಕ್ಷತೆಯನ್ನು ಪರೀಕ್ಷಿಸಲಾಯಿತು.

ವಿದ್ಯುತ್ ಬಳಕೆ
ನಮ್ಮ ವಿದ್ಯುತ್ ಬಿಲ್‌ಗಳ ಮೊತ್ತ ಏರುತ್ತಲೇ ಇದೆ. ಆದ್ದರಿಂದ ವಿದ್ಯುತ್ ಬಲ್ಪಿನ ಪೊಟ್ಟಣದಲ್ಲಿ ಆದರ ವಿದ್ಯುತ್ ಬಳಕೆ ಬಗ್ಗೆ ಮುದ್ರಸಿದ ಮಾಹಿತಿಯ ಸತ್ಯಾಸತ್ಯತೆಯನ್ನು ನಾವು ಪರೀಕ್ಷಿಸಬೇಕಾಗುತ್ತದೆ. ಸಾಧಾರಣ ಬಲ್ಪುಗಳಿಗಿಂತ  ಕಡಿಮೆ ವಿದ್ಯುತ್ ಬಳಸುತ್ತವೆ ಎಂಬುದೇ ಸಿಎಫ್ ಬಲ್ಪುಗಳ ವಿಶೇಷತೆ. ಕಡಿಮೆ ವಾಟೇಜಿನ ಸಿಎಫ್ ಬಲ್ಬ್ ಅಧಿಕ ವಾಟೇಜಿನ ಸಾಧಾರಣ ಬಲ್ಪಿನಷ್ಟೇ ಬೆಳಕು ನೀಡುವಂತೆ ವಿನ್ಯಾಸಗೊಳಿಸಲ್ಪಟ್ಟದೆ.

ಸಿಎಫ್ ಬಲ್ಪುಗಳ ಲೇಬಲಿನಲ್ಲಿ ಮುದ್ರಿಸಿದ ವಾಟೇಜ್, ಆ ಬಲ್ಪು ಒಂದು ಗಂಟೆಗೆ ಎಷ್ಟು ವಾಟ್ ವಿದ್ಯುತ್ ಬಳಸುತ್ತದೆ ಎಂದು ಸೂಚಿಸುತ್ತದೆ. ಬಲ್ಪಿನ ವಾಟೇಜ್ ಜಾಸ್ತಿ ಇದ್ದಷ್ಟು ವಿದ್ಯುತ್ತಿನ ಬಳಕೆ ಜಾಸ್ತಿ. ಹಾಗೆ ಮುದ್ರಿಸಿರುವ ವಾಟೇಜಿಗಿಂತಲೂ ಜಾಸ್ತಿ ವಿದ್ಯುತ್ತನ್ನು ಬಲ್ಪ್ ಬಳಸಿದರೆ, ಖರೀದಿದಾರನಿಗೆ ಮೋಸವಾಗಿರುತ್ತದೆ! ಆದ್ದರಿಂದ ಐಇಸಿ ಹೀಗೆಂದು ನಿಗದಿಪಡಿಸಿದೆ. ಸಿಎಫ್ ಬಲ್ಪನ್ನು ಉರಿಸಿ ವಾಟೇಜ್ ಅಳತೆ ಮಾಡಿದಾಗ ಆದು ಬಲ್ಪಿನಲ್ಲಿ ಮುದ್ರಿಸಿದ ವಾಟೇಜಿನ ಶೇ. 115ಕ್ಕಿಂತ ಜಾಸ್ತಿ ಇರಬಾರದು. ಉದಾಹರಣೆಗೆ ಸಿಎಫ್ ಬಲ್ಪಿನಲ್ಲಿ 15 ವಾಟ್ಸ್ ಎಂದು ಮುದ್ರಿಸಿದ್ದರೆ ಆದು ಬಳಸುವ ವಾಟೇಜ್ ಆಳತೆ ಮಾಡುವಾಗ 17.25 ವಾಟ್ಸ್ ಗಳಿಗಿಂತ ಜಾಸ್ತಿ ಇರಬಾರದು.

ಪರೀಕ್ಷಿಸಲಾದ ವಿದೇಶೀ ಸಿಎಫ್ ಬಲ್ಪ್‌ಗಳೆಲ್ಲವೂ ವಾಟೇಜಿನ ಪರೀಕ್ಷೆಯಲ್ಲಿ ತಿರಸ್ಕೃತವಾದವು. (ಹೆಚ್ಚು ವಿದ್ಯುತ್ ಬಳಸುತ್ತದೆ ಎಂಬ ಕಾರಣಕ್ಕಾಗಿ ಅಲ್ಲ, ಕಡಿಮೆ ವಿದ್ಯುತ್ ಬಳಸಿ ಕಡಿಮೆ ಬೆಳಕು ನೀಡುತ್ತದೆ ಎಂಬ ಕಾರಣಕ್ಕಾಗಿ). ಆ  ಬಲ್ಪುಗಳು ಬಳಸಿದ ವಿದ್ಯುತ್, ಅವುಗಳಲ್ಲಿ ಮುದ್ರಸಿದ ವಾಟೇಜಿಗಿಂತ ಗಣನೀಯವಾಗಿ ಕಡಿಮೆಯಾಗಿತ್ತು. ಆದು ಶೇ. 20 ರಿಂದ ಶೇ. 91ರಷ್ಟು ಕಡಿಮೆ! ನಿದರ್ಶನಕ್ಕೆ ‘ಆಸಾರಾಂ’ ಬಲ್ಪಿನಲ್ಲಿ ಮುದ್ರಸಿದ್ದು 18 ವಾಟ್ಸ್ ಎಂದು.
ಆದರೆ ಆದು ಬಳಸಿದ ವಿದ್ಯುತ್ ಕೇವಲ 3.75 ವಾಟ್ಸ್!

ಇದರಿಂದಾಗಿ ಬಳಕೆದಾರರಿಗೆ ಉಳಿತಾಯವಾಗುತ್ತದೆ ಆಂದುಕೊಂಡಿರಾ? ಹಾಗಲ್ಲ. ಒಂದು ಬಲ್ಪ್ ಕಡಿಮೆ ವಾಟೇಜ್ (ವಿದ್ಯುತ್ ಬಳಸುತ್ತದೆ ಆಂದರೆ ಆದು ಖರೀದಿಸುವಾಗ ವಾಗ್ದಾನ ಮಾಡಿದ್ದಕ್ಕಿಂತ ಕಡಿಮೆ ಬೆಳಕು ನೀಡುತ್ತದೆ ಎಂದರ್ಥ.

ಬಲ್ಪಿನ ದಕ್ಷತೆ
ದಕ್ಷತೆಯಿಂದ ಬೆಳಗುವ ಬಲ್ಪ್ ಕಡಿಮೆ ವಿದ್ಯುತ್ ಬಳಸಿ ಹೆಚ್ಚು ಬೆಳಕು ನೀಡುತ್ತದೆ. ‘ದಕ್ಷತಾ ಅನುಪಾತ’ದಿಂದ ಬಲ್ಪಿನ ದಕ್ಷತೆ ಆಳೆಯುತ್ತಾರೆ. ಇದು ಬಲ್ಪಿನ ಲುಮೆನ್ ಮತ್ತು ವಾಟೇಜಿನ ಆನುಪಾತ. (ಲುಮೆನ್ ) ಬೆಳಕನ್ನು ಆಳೆಯುವ
ಘಟಕ) ಬಲ್ಪ್ ನೀಡುವ ಬೆಳಕು ಹೆಚ್ಚಾದಂತೆ ಆನುಪಾತ ಹೆಚ್ಚಾಗುತ್ತದೆ. ಆದೇ ರೀತಿ, ಬಲ್ಪ್ ಬಳಸುವ ವಿದ್ಯುತ್ ಕಡಿಮೆಯಾದಂತೆ ಆನುಪಾತ ಜಾಸ್ತಿಯಾಗುತ್ತದೆ. ಅಮೆರಿಕನ್ ನ್ಯಾಷನಲ್ ಸ್ಟಾಂಡರ್ಡ್ ಇನ್ ಸ್ಟಿಟ್ಯೂಟ್ ಪ್ರಕಾರ ಅತ್ಯುತ್ತಮ ದಕ್ಷತಾ ಆನುಪಾತ 40.

ಪರೀಕ್ಷಿಸಲಾದ 23 ವಿದೇಶೀ ಬಲ್ಪ್ ಗಳ ಬ್ರಾಂಡ್ ಗಳಲ್ಲಿ ಕೇವಲ ನಾಲ್ಕು ಮಾತ್ರ ಈ ದಕ್ಷತಾ ಆನುಪಾತ ಹೊಂದಿದ್ದವು. ಇತರ ಎಲ್ಲ ಬ್ರಾಂಡ್ ಗಳ ಬಲ್ಪ್‌ಗಳ ದಕ್ಷತಾ ಆನುಪಾತ ಬಹಳ ಕಡಿಮೆ (25.53 ರಿಂದ 39.11).

ಕೇವಲ ದಕ್ಷತಾ ಆನುಪಾತವು ಉತ್ತಮ ಬಲ್ಪ್‌ಯಾವುದೆಂದು ತೋರಿಸಿ ಕೊಡುವುದಿಲ್ಲ ಎಂಬುದನ್ನು ಗಮನಿಸಿರಿ. ಏಕೆಂದರೆ ಒಂದು ಬಲ್ಪ್‌ಬಳಸುವ ವಿದ್ಯುತ್ ಕಡಿಮೆಯಾದಾಗ ಅದರ ದಕ್ಷತಾ ಆನುಪಾತ ಹೆಚ್ಚುತ್ತದೆ ಎಂಬುದೇನೋ ನಿಜ. ಅದರೆ ಆಂತಹ ಬಲ್ಪಿನಿಂದ ಪಸರಿಸುವ ಬೆಳಕೂ ಕಡಿಮೆ. ಹಾಗಾಗಿ ಆಂತಹ ಬಲ್ಪ್‌ಗಳನ್ನು ಉರಿಸಿದಾಗ ಮಂದ ಬೆಳಕಿನಲ್ಲಿ ನಮಗೆ ಸರಿಯಾಗಿ ಕಾಣಿಸುವುದಿಲ್ಲ.

ಲೇಬಲಿನಲ್ಲಿ ಮಾಹಿತಿ
ಐಇಸಿ ಪ್ರಕಾರ ಸಿಎಫ್ ಬಲ್ಪ್‌ಗಳ ಲೇಬಲಿನಲ್ಲಿ ಈ ಮಾಹಿತಿಗಳನ್ನು ಸ್ಪಷ್ಟವಾಗಿ ಮುದ್ರಿಸಿರಬೇಕು: ವೋಲ್ಟೇಜ್, ಲುಮಿನಸ್ ಫ್ಲ್ಸಕ್ಸ್, ವಾಟೇಜ್, ಆವರ್ತನ, ಲ್ಯಾಂಪಿನ ಕರೆಂಟ್, ಉತ್ಪಾದಕರ ಹೆಸರು, ಬಲ್ಪನ್ನು ಬಳಸುವಾಗ ಅನುಸರಿಸಬೇಕಾದ ವಿಶೇಷ ಜಾಗರೂಕತೆ ಮತ್ತು ನಿರ್ಬಂಧಗಳು, ಪರೀಕ್ಷಿಸಲಾದ ಯಾವುದೇ ಬಲ್ಪಿನ ಲೇಬಲಿನಲ್ಲಿ ಈ ಎಲ್ಲ ಮಾಹಿತಿ ಮುದ್ರಿಸಿರಲಿಲ್ಲ. ಎರಡು ಬ್ರಾಂಡ್ ಗಳ ಲೇಬಲಿನಲ್ಲಿ ಮಾತ್ರ ಬಲ್ಪ್‌ಎಷ್ಟು ಬೆಳಕು ನೀಡುತ್ತದೆಂದು ಮುದ್ರಸಲಾಗಿತ್ತು.

ಈ ಲೇಬಲ್ ಮಾಹಿತಿಗಳನ್ನು ಯಾವ ಭಾಷೆಯಲ್ಲಿ ಮುದ್ರಿಸಿದ್ದಾರೆ ಎಂಬುದೂ ಮುಖ್ಶ. ಭಾರತದಲ್ಲಿ ಮಾರಾಟವಾಗುವ ಬಲ್ಪ್ಗಗಳಲ್ಲಿ ಈ ಮಾಹಿತಿಗಳು ಚೀನೀ ಅಥವಾ ಜಪಾನೀ ಭಾ‍ಷೆಯಲ್ಲಿದ್ದರೆ ಏನು ಪ್ರಯೋಜನ? ಆವು ಜನಸಾಮಾನ್ಕರಿಗೆ ಆರ್ಥವಾಗುವ ಭಾಷೆಗಳಲ್ಲೇ ಇರಬೇಕಾದ್ದು ಅಗತ್ಕ. ಇಲ್ಲಿ ಚೀನೀ ಭಾಷೆ ಉಪಯೋಗಿಸಿದ್ದು ‘ಆದೊಂದು ಫಾರಿನ್ ತಯಾರಿಕೆ’ ಎಂಬ ಭಾವನೆ ಬರಲೆಂದು ಇರಬಹುದೇ?

ಬಲ್ಪಿನ ಬಾಳಿಕೆ
ಪರೀಕ್ಷಿಸಲಾದ ಬಲ್ಪಿನ ಲೇಬಲಿನಲ್ಲಿ / ಪೊಟ್ಟಣದಲ್ಲಿ ಆವುಗಳ ಬಾಳಿಕೆ ಮುದ್ರಿಸಲಾಗಿತ್ತು. ಆದು 3,000ದಿಂದ 12,000 ಗಂಟೆಗಳ ವರೆಗೆ ಬೇರೆ ಬೇರೆಯಾಗಿತ್ತು. ಇದನ್ನು ಪರೀಕ್ಷಿಸಬೇಕಾದರ ಬಲ್ಪ್‌ಗಳನ್ನು ಗರಿಷ್ಠ 12,000  ಗಂಟೆಗಳು ಆಥವಾ 5000 ದಿನಗಳು ಉರಿಸಬೇಕು. ಸಮಯದ ಪರಿಮಿತಿಯಿಂದಾಗಿ, ಬಾಳಿಕೆಯ ಪರೀಕ್ಷೆ ಮುಗಿಯುವ ಮುನ್ನವೇ ಬಲ್ಪ್‌ಗಳ ಪರೀಕ್ಷಾ ವರದಿಯನ್ನು ಸಿಇಆರ್ ಸೊಸೈಟಿ ಪ್ರಕಟಿಸಬೇಕಾಯಿತು. ಏಕೆಂದರೆ
ಪರೀಕ್ಷಿಸಲಾದ ಬಲ್ಪ್‌ಗಳ ಇತರ ದೋಷಗಳು ಗಂಭೀರವಾಗಿದ್ದವು. ಎರಡು ಬ್ರಾಂಡ್‌ಗಳ ಬಲ್ಪ್‌ಗಳಂತೂ ಕೇವಲ 100ಗಂಟೆ ಉರಿಸುವ ಮುನ್ನವೇ ಸುಟ್ಟು ಹೋದವು! ಆಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಬಲ್ಕುಗಳು 100 ಗಂಟೆ ಉರಿದ ಬಳಿಕವೇ ಸ್ಥಿರವಾದ ಬೆಳಕು ನೀಡುತ್ತವೆ. ಕೋನಿಕಾ ಮತ್ತು ಸಿಫ್ ಹೆಸರಿನ ಬಲ್ಪ್‌ಗಳು ಅಷ್ಟೂ ಬಾಳಿಕೆ ಬರಲಿಲ್ಲ.

ಸಿಎಫ್ ಬಲ್ಪ್‌ಗಳ ಬೆಲೆಯಲ್ಲೂ ಬಹಳ ವ್ಯತ್ಯಾಸವಿತ್ತು. ಉಳಿದೆಲ್ಲ ಬಲ್ಪ್‌ಗಳಿಗಿಂತ ಉತ್ತಮ ಗುಣಮಟ್ಟ ಪ್ರದರ್ಶಿಸಿದ ಸಾಂಪಸ್ ಬ್ರಾಂಡಿನ ಸಿಎಫ್ ಬಲ್ಕುಗಳ ಬೆಲೆಯೂ ಆತ್ಯಧಿಕ ರೂ.250. ಆತ್ಕಂತ ಕಡಿಮೆ ಬೆಲೆಯ ರೂ. 40ರ ಸಿಎಫ್ ಮತ್ತು ಆಸ್ಥಾರಾಂ ಸಿಎಫ್ ಬಲ್ಯುಗಳ ಗುಣಮಟ್ಟವೂ ಅತ್ಯಂತ ಕಳಪೆ.

ನಿಮಗೆ ತಿಳಿದಿರಲಿ
ಪರೀಕ್ಷಿಸಲಾದ 23 ವಿದೇಶೀ ಸಿಎಫ್ ಬಲ್ಪ್‌ಗಳ ಬ್ರಾಂಡ್ ಗಳಲ್ಲಿ ಯಾವುದೂ ಸಮಾಧಾನಕರ ಫಲಿತಾಂಶ ನೀಡಲಿಲ್ಲ. ಗುಣಮಟ್ಟದಲ್ಲಿ ಅವು ಯಾವೊಂದು ಅಂತಾರಾಷ್ಟ್ರೀಯ ಮಾನದಂಡದಲ್ಲಿಯೂ ಪಾಸಾಗಲಿಲ್ಲ. ಅವುಗಳ ಲೇಬಲ್ ಹಾಗೂ ಪೊಟ್ಟಣದಲ್ಲಿ ಮುದ್ರಿವಾದ ಗುಣಮಟ್ಟದ ಹೇಳಿಕೆಗಳನ್ನೂ ಅವು ಸಾಧಿಸಲಿಲ್ಲ! ಹಾಗಿರುವಾಗ ವಿದೇಶೀ ಸಿಎಫ್ ಬಲ್ಪ್‌ಗಳು ನಮ್ಮ ದೇಶಕ್ಕೆ ಲಗ್ಗೆಯಿಡಲು ಆವುಗಳ ಗುಣಮಟ್ಟದ ಬಗ್ಗೆ ಗಮನಹರಿಸದ ನಾವೂ ಕಾರಣರಲ್ಲವೇ?

ಉದಾರೀಕರಣದ ಹೆಸರಿನಲ್ಲಿ ವಿದೇಶೀ ವಸ್ತುಗಳನ್ನು ಅಗ್ಗದ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ನುಗ್ಗಸುವುದರಿಂದ ಏನಾಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಕಳಪೆ ವಿದೇಶೀ ವಸ್ತುಗಳಿಂದಾಗಿ ಭಾರತೀಯ ಬಳಕೆದಾರರಿಗೆ ಮೋಸವಾಗುತ್ತದೆ ಮತ್ತು ವಾಣಿಜ್ಯಕ್ಕೆ ಧಕ್ಕೆತಾಗುತ್ತದೆ. ಆದ್ದರಿಂದ ಭಾರತದೊಳಗೆ ವಿದೇಶೀ ವಸ್ತುಗಳ ಪ್ರವೇಶವನ್ನು ನಿಯಂತ್ರಿಸಬೇಕಂದು ನಿಯಂತ್ರಣಾಧಿಕಾರಿಗಳನ್ನು ಆಹ್ಮದಾಬಾದಿನ ಸಿಇಆರ್ ಸೊಸೈಟಿ ಆಗ್ರಹಿಸಿದೆ. ಅವುಗಳ ಪ್ರವೇಶಕ್ಕೆ ಅನುಮತಿ ನೀಡಿದರೆ ಅವನ್ನು ಕಡ್ಡಾಯವಾಗಿ ಕಠಿಣ ಗುಣಮಟ್ಟ ನಿಯಂತ್ರಣಕ್ಕೆ ಒಳಪಡಿಸಬೇಕು. ಆಷ್ಟೇ ಅಲ್ಲ ನಿಯಮಿತ ಅವಧಿಗೊಮ್ಮೆ ವಿವಿಧ ಬ್ರಾಂಡ್ ಗಳ ಗುಣಮಟ್ಟ ಪರೀಕ್ಷೆ ನಡೆಸುವ
ವ್ಕವಸ್ಥೆಯೂ ಜಾರಿಗೆ ಬರಬೇಕು.

ನೆನಪಿರಲಿ :
ವಿದೇಶೀ ಸಿಎಫ್ ಬಲ್ಪ್‌ಖರೀದಿಸುವಾಗ ಅಂಗಡಿಯಾತ ನಿಮಗೆ ನಗದು ಬಿಲ್ ಕೊಡುತ್ತಾನೆಂದು ನಿರೀಕ್ಷಿಸಬೇಡಿ. ನೀವು ಬಹಳ ಒತ್ತಾಯಿಸಿದರೆ ಆತ ಕಾಗದದ ಚೂರಿನಲ್ಲಿ ಬಲ್ಪಿನ ಬೆಲೆಯನ್ನು ಗೀಚಿ ಕೊಡಬಹುದು. ಆದರಲ್ಲಿ ಮಾರಾಟಗಾರನ ಹೆಸರು, ವಿಳಾಸ, ಬಿಲ್ ಸಂಖ್ಯೆ ಇದ್ಯಾವುದನ್ನೂ ಬರೆದಿರುವುದಿಲ್ಲ. ಆದ್ದರಿಂದ ನೀವು ಖರೀದಿಸಿದ ವಿದೇಶೀ ಬಲ್ಪಿಗೆ ಗ್ಯಾರಂಟಿಯೂ ಇಲ್ಲ, ವಾರಂಟಿಯೂ ಇಲ್ಲ.

***************************************************************************
ಬಲ್ಪ್‌ನೀಡುವ ಬೆಳಕು
ಸಿಎಫ್ ಬಲ್ಪ್‌ಗಳ ಪೊಟ್ಟಣದಲ್ಲಿ ನಿಮ್ಮ ಕಣ್ಸೆಳೆಯುವ ಘೋಷಣೆ : “ಈ ಬಲ್ಪ್ ಕಡಿಮೆ ವಿದ್ಯುತ್ ಬಳಸಿ ಹೆಚ್ಚು ಬೆಳಕು ನೀಡುತ್ತದೆ”. ಇದು ನಿಜವೇ? ಐಇಸಿ ಪ್ರಕಾರ ಸಿಎಫ್ ಬಲ್ಪ್‌ಗಳು ನೀಡುವ ಬೆಳಕು ಆದರ ಲೇಬಲಿನಲ್ಲಿ ಮುದ್ರಿಸಿದ ಪ್ರಖರತೆಯ ಶೇ. 90ಕ್ಕಿಂತ ಕಡಿಮೆ ಇರಬಾರದು. ಉದಾಹರಣೆಗೆ 11 ವಾಟ್ಸ್ ಎಂದು ಲೇಬಲಿನಲ್ಲಿ ಮುದ್ರಿಸಿದ್ದರೆ ಆ
ಬಲ್ಪ್‌540 . 580 ಲುಮೆನ್ ಬೆಳಕು ನೀಡಬೇಕು.

‘ಬಲ್ಪ್‌ಗಳು ನಿಜವಾಗಿ ನೀಡುವ ಬೆಳಕು ಎಷ್ಟು?’ ಎಂಬ ಪರೀಕ್ಷೆಯಲ್ಲಿ ಎಲ್ಲ ವಿದೇಶೀ ಸಿಎಫ್ ಬಲ್ಪ್‌ಗಳೂ ತಿರಸ್ಕರಿಸಲ್ಪಟ್ಟವು. ವಿವಿಧ ಬ್ರಾಂಡ್ಗಳ ಸಿಎಫ್ ಬಲ್ಪ್‌ಗಳು ನೀಡಿದ ಬೆಳಕು ಆವುಗಳ ಲೇಬಲಿನಲ್ಲಿ ಮುದ್ರಸಿದ ಬೆಳಕಿನ ಪ್ರಖರತೆಯ ಶೇ. 13.6 ರಿಂದ 88.9 ಮಾತ್ರ ಇದ್ದವು. (ಶೇ. 90 ಇರಬೇಕಾಗಿತ್ತು)

18 ವಾಟ್ಸ್ ಸಿಎಫ್ ಬಲ್ಪ್‌ಗಳ ಲೇಬಲಿನಲ್ಲಿ ‘ಇದು 100 ವಾಟ್ಸ್ ಗಳ ಸಾಧಾರಣ ಬಲ್ಪಿನ ಬೆಳಕಿನಷ್ಟೇ ಪ್ರಖರ ಬೆಳಕು ನೀಡುತ್ತದೆ’ ಎಂಬ ಘೋಷಣೆ ಇರುತ್ತದೆ. ಇದ್ಣನ್ನು ನೋಡಿ 100 ವಾಟ್ಸ್ ಗಳ ಸಾಧಾರಣ ಬಲ್ಪಿನ ಬದಲು 18 ವಾಟ್ಸ್ ಗಳ ಸಿಎಫ್ ಬಲ್ಪ್ ಹಾಕಿದರೆ ಪ್ರತಿಯೊಂದು ಗಂಟೆಗೆ 82 ವಾಟ್ಸ್ ವಿದ್ಯುತ್ ಉಳಿತಾಯ ಆಗುತ್ತದೆ ಎಂದು ಬಳಕೆದಾರರು ಭಾವಿಸುತ್ತಾರೆ. ವಾಸ್ತವವಾಗಿ 16 ವಾಟ್ಸ್ ಗಳ ಸಿಎಫ್ ಬಲ್ಪ್‌ಪ್ರಕಾಶ 25ವಾಟ್ಸ್ ಗಳ ಸಾಧಾರಣ ಬಲ್ಪಿನ ಪ್ರಕಾಶಕ್ಕೆ ಸಮಾನವಾಗಿರುತ್ತದೆ! ಆದ್ದರಿಂದ ರೂ. 10 ಬೆಲೆಯ ಸಾಧಾರಣ ಬಲ್ಪಿನ ಬದಲಾಗಿ ರೂ. 35ರಿಂದ ರೂ. 260 ಬೆಲೆ ತೆತ್ತು ಸಿಎಫ್ ಬಲ್ಪ್ ಖರೀದಿಸಿದರೂ ಬಳಕೆದಾರರಿಗೆ ಆಗತ್ಯವಾದ ಪ್ರಕಾಶ ಸಿಎಫ್ ಬಲ್ಪಿನಿಂದ ಸಿಗುವುದಿಲ್ಲ!
***************************************************************************
ಉದಯವಾಣಿ 4-9-2003

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಾಡಬೇಕು
Next post ನಗೆಡಂಗುರ-೧೩೧

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…