ಗುಂಡ ಮಹಾ ಜಿಪುಣ, ಅವನಿಗೆ ಒಮ್ಮೆ ಕೀರು ಕುಡಿಯುವ ಆಸೆಯಾಯಿತು. ಹೋಟೆಲ್‌ಗೆ ಹೋದ. ಕೀರು ಆರ್‍ಡರ್ ಮಾಡಬೇಕೆನ್ನುವಾಗ ಅವನ ಎದುರು ಕುಳಿತವನು ಪೇಪರ್ ಓದುತ್ತಿದ್ದ. ಅವನ ಮುಂದೆ ಕೀರು ಇತ್ತು. ಗುಂಡ ಅವನಿಗೆ ತಿಳಿಯದಂತೆ ಕೀರು ಖಾಲಿ ಮಾಡಿದ. ಲೋಟದ ತಳದಲ್ಲಿ ಜಿರಲೆ ಇತ್ತು. ಗುಂಡನಿಗೆ ಜಿರಲೆ ತಿಂದರೆ ಅಲರ್ಜಿ ಕುಡಿದಿದ್ದು ಪೂರ್ತಿ ಹಾಗೆ ಲೋಟಕ್ಕೆ ವಾಂತಿ ಮಾಡಿದ, ಆಗ ಎದುರಿನಲ್ಲಿ ಕುಳಿತವನು ಹೇಳಿದ.

“ನಾನು ಹೀಗೆ ಮಾಡಿದ್ದೆ.”
*****