ಬುದ್ಧ -ಮನುಕುಲದ ಬೆಳಕು

ಬುದ್ಧಂ ಶರಣಂ ಗಚ್ಛಾಮಿ
ಧರ್ಮಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ

ವೇದಕಾಲದ ಚಲನಶೀಲವಾದ ವರ್ಣವ್ಯವಸ್ಥೆ ಕಾಲಾನಂತರದಲ್ಲಿ ಜಡಗಟ್ಟಿತು. ಅದು ಕ್ರಮೇಣ ಬ್ರಾಹ್ಮಣ-ಕ್ಷತ್ರಿಯ ಸಂಘರ್ಷಕ್ಕೆ ನಾಂದಿಯುಯ್ತು. ಸಂಘರ್ಷದ ಫಲವಾಗಿ ಕ್ಷತ್ರಿಯರಿಂದ ಉಪನಿಷತ್ತುಗಳ ರಚನೆಯಾಯ್ತು. ಯಾಗ, ಯಜ್ಞ ಬಲಿ ಮುಂತಾದ ಆಚಾರಗಳಿಂದ ಉಗಮವಾದ ಅಜ್ಞಾನ, ಮೂಢನಂಬಿಕೆಗಳು; ಮೇಲುಕೀಳು, ಸ್ಪೃಶ್ಯ-ಅಸ್ಪೃಶ್ಯ ಎಂಬ ಭಾವನೆಗಳು ಬಲವಾಗಿ ಬೇರೂರಲು ಪ್ರೇರಣೆಯಾದುವು. ಪುರೋಹಿತರು ಮೃಗೀಯ ಸ್ಥಿತಿಗಿಳಿದು ಧರ್ಮದ ಹೆಸರಿನಲ್ಲಿ ಅಧರ್ಮದ ಆಚರಣೆಗೆ ತೊಡಗಿ ಸ್ವಾರ್ಥ ಸಾಧಿಸಿಕೊಳ್ಳುತ್ತಿದ್ದರು. ಇವರಿಂದ ವಂಚಿತರಾದ ಬಹು ಸಂಖ್ಯಾತ ಶೂದ್ರರು ಸ್ತ್ರೀಯರು ಶೋಷಣೆಗೆ ಒಳಗಾಗಿದ್ದರು. ಇದು ಸರಿಸುಮಾರು ಈಗ್ಗೆ ಎರಡು ಸಾವಿರದ ಐದುನೂರು ವರ್ಷಗಳ ಹಿಂದೆ. ಆ ಸಮಯದಲ್ಲಿ ಮನುಕುಲದ ಉದ್ಧಾರಕ್ಕಾಗಿ ಮಾನವ ಮೂರ್ತಿ ಮೈದಾಳಿತು. ಆತನೇ ಗೌತಮ ಬುದ್ಧ.

ಶಾಕ್ಯವಂಶದ ದೊರೆ ಶುದ್ಧೋದನ ಹಾಗೂ ಆತನ ಧರ್ಮಪತ್ನಿ ಮುಯಾದೇವಿಯ ಉದರದಲ್ಲಿ ‘ಸಿದ್ಧಾರ್ಥ’ ವ್ಶೆಶಾಖ ಶುದ್ಧ ಪೂರ್ಣಿಮಯ ದಿನ ಕಪಿಲ ವಸ್ತುವಿನ ಲುಂಬಿನಿವನದಲ್ಲಿ ಜನಿಸಿದ. ಆತನ ಹುಟ್ಟು ಯಾರ ಕೃಪೆಯಿಂದಲೂ ಆದದ್ದಲ್ಲ. ಆತ ದೇವರ ಅವತಾರವೂ ಅಲ್ಲ, ದೇವ ದೂತನೂ ಅಲ್ಲ. ಕೇವಲ ಮಾನವ-ಯತ್ನದಲ್ಲಿ ದೃಢ ವಿಶ್ವಾಸವಿಟ್ಟು ಸತತ ಸಾಧನೆಯಿಂದ ಪರಿಪೂರ್ಣತೆಯನ್ನು ಸಾಧಿಸಿದ ಸಾಧಕ ಮಾನವ. ಹಾಗೆ ಎಲ್ಲರೂ ಸಾಧಿಸಬಹುದೆಂಬ ಸಾಧ್ಯತೆಗೆ ಪ್ರತೀಕವಾಗಿ ನಿಂತ ಮಹಾಮಾನವ ಆತ.

ಬಾಲಕ ಸಿದ್ಧಾರ್ಥನ ವಿದ್ಯಾಭ್ಯಾಸಕ್ಕೆ ರಾಜ ಉತ್ತಮ ವ್ಯವಸ್ಥೆಮಾಡಿದ. ಸಿದ್ದಾರ್ಥ ವಿದ್ಯೆಯಲ್ಲಿ ಅತ್ಯುತ್ಕೃಷ್ಟ ಕೌಶಲ್ಯವನ್ನು ಗಳಿಸಿದ. ಶಾಸ್ತ್ರಗಳಲ್ಲಿ ಉನ್ನತ ಪಾಂಡಿತ್ಯವನ್ನು ಸಂಪಾದಿಸಿದ. ಅರಮನೆಯಲ್ಲಿ ಸಿದ್ಧಾರ್ಥನಿಗೆ ಯಾವ ಕೊರತೆಯೂ ಇರಲಿಲ್ಲ. ಆದರೂ ಅವನ ಮನಸ್ಸಿನಲ್ಲಿ ಯಾವುದೋ ಗಾಢವಾದ ವಿಚಾರ ತುಂಬಿಕೊಳ್ಳುತ್ತಿತ್ತು. ಆಗ ಆತ ಏಳು ವರ್ಷದ ಭಾಲಕನಾಗಿದ್ದ.

ಅಂದು ಹೊನ್ನೇರಿನ ಹಬ್ಬ. ಮುಂಗಾರಿನ ಮಳೆಬಿದ್ದಿದೆ. ಹೊಲ ಉಳಲು ಮುಂದೆ ನಿಂತ ರಾಜನ ಹಿಂದೆ ಎಲ್ಲರೂ ನಡೆದರು. ಉಳುವ ನೇಗಿಲು ಮತ್ತು ಎತ್ತುಗಳಿಗೆ ಬಂಗಾರದ ಒಡವೆಗಳಿಂದ ವಿವಿಧ ಬಣ್ಣವಸ್ತ್ರಗಳಿಂದ ಶೃಂಗರಿಸಿದ್ದರು. ಆ ಶೃಂಗಾರ, ಉಳುವವರ ಆನಂದ ಸಂಭ್ರಮಗಳು, ಕಣ್ಮನಗಳನ್ನು ಸೆಳೆವ ರಮ್ಯ ದೃಶ್ಶಗಳನ್ನು ಕಂಡು ಬಾಲಕ ಸಿದ್ಧಾರ್ಥ ಮೈಮರೆತ. ಸಮಾಧಿಯನ್ನು ಅನುಭವಿಸಿದ, ಅರಿವಿಗೆ ಬಂದ ಯಾವುದೋ ಒಂದು ದಿವ್ಯಾನಂದದಲ್ಲಿ ತೇಲಿದ.

ಕಾಲ ಕಳೆದಂತೆ ಸಿದ್ಧಾರ್ಥ ಪ್ರಾಪ್ತ ವಯಸ್ಸಿಗೆ ಬಂದ. ಸೌಂದರ್ಯದ ಪ್ರತಿರೂಪದಂತಿದ್ದ ಯಶೋಧರೆಯೊಂದಿಗೆ ಮದುವೆಯಾಯ್ತು. ಗಂಡು ಮಗು ಜನಿಸಿತು. ರಾಹುಲನೆಂದು ನಾಮಕರಣ ಮಾಡಿದರು.

ಹೀಗೆ ಸಂಸಾರ ಸುಖದಲ್ಲಿ ಸಾಗುತ್ತಿರುವಾಗ ಒಮ್ಮೆ ಹಣ್ಣುಹಣ್ಣು ಮುದುಕನನ್ನು ನೋಡಿದ, ಮುಪ್ಪಿನ ಬಗ್ಗೆ ಚಿಂತೆ ಹತ್ತಿತ್ತು. ರೋಗಿಯನ್ನು ನೋಡಿದ, ರೋಗದ ಬಗ್ಗೆ ಚಿಂತೆ ಹತ್ತಿತು. ಶವ ನೋಡಿದ, ಸಾವಿನ ಬಗ್ಗೆ ಚಿಂತೆ ಹತ್ತಿತು. ಈ ಜರೆ, ವ್ಯಾಧಿ, ಮರಣಗಳ ಕುರಿತು ಚಿಂತಿಸಿದ, ಇದು ಯಾರನ್ನೂ ಬಿಟ್ಟಿದ್ದಲ್ಲ ಎಂಬ ಸತ್ಯವನ್ನರಿತ. ಎಲ್ಲ ಜೀವದ ಸಂಕಟವನ್ನೂ ನೋಡಿದ. ಆ ಸಂಕಟವೆಲ್ಲವೂ ತನ್ನದೇ ಅನ್ನಿಸಿ ಎದೆಯಲ್ಲಿ ಚಳುಕಾಯ್ತು. ಬಾಳಿನ ಗುಟ್ಟೇನು? ಜರೆ, ವ್ಯಾಧಿ ಮತ್ತು ಮರಣಗಳಂದ ಬಿಡುಗೆ ಸಾಧ್ಯವಿಲ್ಲವೇ? ದುಃಖ, ಸಂಕಟಗಳಿಂದ ಪಾರಾಗಲು ಸಾಧ್ಯವಿಲ್ಲವೇ? ಪ್ರಶ್ನೆಗಳು ಆವರಿಸಿಕೊಂಡಪು. ಬಿಡುಗಡೆಯ ಮಾರ್ಗವನ್ನು ಕಂಡುಹಿಡಿಯಲೇಬೇಕು ಎಂದು ನಿರ್ಧರಿಸಿದ. ಆತ್ಮವಿಶ್ವಾಸ ಅವನಲ್ಲಿ ಅಪಾರವಾಗಿತ್ತು. ಅರಮನೆಯ ವೈಭೋಗದಲ್ಲಿದ್ದರೆ ಅದು ಸಾಧ್ಯವಾಗುವುದಿಲ್ಲ ಎಂಬ ಅರಿವು ಅವನ ಅಂತರಂಗವನ್ನ ಎಚ್ಚರಿಸಿತು. ಗ್ರಹಸ್ಥನಾಗಿ ಇದ್ದುಕೊಂಡು ಗುರಿ ಮುಟ್ಟಲು ಆಗದು ಎಂಬ ಸತ್ಯವನ್ನರಿತು ಗೃಹತ್ಕಾಗ ಮಾಡಲು ನಿಶ್ವಯಿಸಿದ. ತಂದೆ, ಸಾಕುತಾಯಿ, ಹೆಂಡತಿ, ಬಂಧು ಬಳಗ ಬೇಡವೆಂದು ಬೇಡಿಕೊಂಡರೂ ಸಿದ್ಧಾರ್ಥ ಮುಂಡನ ಮಾಡಿಸಿಕೊಂಡ. ನನ್ನ ಗುರಿಸಾಧನೆಯಲ್ಲಿ ಸಹಕರಿಸಿ ಎಂದು ಎಲ್ಲರನ್ನೂ ಬೇಡಿಕೊಂಡ. ಪೀತವಸ್ತ್ರಗಳನ್ನು ಧರಿಸಿ ಪರಿವ್ರಾಜಕನಾದ. ಕೊಡುಗೈನ ರಾಜಕುಮಾರ ಕಪಾಲವನ್ನು ಹಿಡಿದು ಭಿಕ್ಷೆ ಬೇಡಿ ಹೊರಟ. ಆಗ ಅವನಿಗೆ ಇಪ್ಪತ್ತೆಂಟು ವರ್ಷದ ತುಂಬು ಯೌವನ.

ಜೀವನದಲ್ಲಿ ಬರುವ ಸಂಕಟ ಜಿಗುಪ್ಸೆಗಳಿಂದ ರೋಸಿ ಸಂಸಾರವನ್ನು ಕೆಲವರು ತೊರೆದರೆ ಇನ್ನು ಕೆಲವರು ಐಶ್ವರ್ಯ, ಅಧಿಕಾರ, ಸುಖಕಾಣದೆ ವಿರಕ್ತರಾಗುತ್ತಾರೆ. ಆದರೆ ಸಿದ್ಧಾರ್ಥನಾದರೋ ಎಲ್ಲವನ್ನೂ ಪಡೆದುಕೊಂಡಿದ್ವರೂ ಅವುಗಳನ್ನು ಲೆಕ್ಕಿಸದೆ ದುಃಖ ನಿವಾರಣೆಯನ್ನೇ ಗುರಿಯಾಗಿ ಇಟ್ಟುಕೊಂಡು ಎಲ್ಲವನ್ನೂ ತೊರೆದು ಹೊರಟು ನಿಜದ ಬೆಳಕಿಗಾಗಿ ಹಂಬಲಿಸಿ ಅಡಿ ಇಟ್ಟವನು. ಆ ಕಾರಣ ಬೆಳಕನ್ನು ಕಂಡುಕೊಂಡು ಬೆಳಕಾಗಿ ಇಂದಿಗೂ ಮನುಕುಲವನ್ನು ಬೆಳಗುತ್ತಿದ್ದಾನೆ ನಮ್ಮ ಬುದ್ಧ.

ಅರಮನೆಯನ್ನು ತೊರೆದ ಸಿದ್ಧಾರ್ಥ ಸಮಣನಾಗಿ ಭಿಕ್ಷೆ ಬೇಡಿ ಜೀವಿಸಲು ಪ್ರಾರಂಭಿಸಿದ. ಹೀಗೆ ಊರಿಂದೂರಿಗೆ ಅಲೆಯುತ್ತಿರಬೇಕಾದರೆ ಬಿಂಬಸಾರ ಆಳುತ್ತಿದ್ದ ರಾಜಗೃಹಕ್ಕೆ ಬಂದ. ಭವ್ಯರೂಪದ, ಗಂಭೀರ ನಡಗೆಯ, ವಾತ್ಸಲ್ಯ ತುಂಬಿದ ನಡವಳಿಕೆಯ ಮಂಗಳ ಮೂರ್ತಿಯನ್ನು ಕಂಡ ಜನ ಅಚ್ಚರಿಗೊಂಡರು. ಆ ಸಮಣನ ಸುದ್ದಿ ಬಿಂಬಸಾರನಿಗೆ ಮುಟ್ಟಿತು. ಸಮಣ ತಂಗಿದ್ದ ಪಾಂಡವ ಪರ್ವದ ಹತ್ತಿರ ಹೋದ. ಸಿದ್ಧಾರ್ಥನನ್ನು ಕಂಡು ಹೇಳಿದ. “ಪೂಜ್ಯರೆ, ತಮ್ಮನ್ನು ನೋಡಿದರೆ ಅಸಾಧಾರಣ ಪುರುಷರಂತೆ ಕಾಣುತ್ತೀರಿ. ತಾವು ಎಲ್ಲಿಯವರು”.’ ತಮ್ಮ ವಂಶ ಯಾವುದು?”

“ನಾನು ಕೋಸಲ ರಾಷ್ಟ್ರಕ್ಕೆ ಸೇರಿದ ಕಪಿಲ ವಸ್ತುವಿನವನು, ನನ್ನದು ಶಾಕ್ಯವಂಶ.”

ಬಿಂಬಸಾರನಿಗೆ ಬೋದಿಸತ್ವ ರಾಜವಂಶಕ್ಕೆ ಸೇರಿದವನು ಎಂದು ಮನವರಿಕೆಯಾಯ್ತು. “ನಿಮ್ಮದು ಪಿಂಡ ಪಾತ್ರೆಯನ್ನು ಹಿಡಿಯುವ ಕೈಯಲ್ಲ, ಕತ್ತಿ ಹಿಡಿಯುವ ಕೈ. ನನ್ನ ಸೈನ್ಯವನ್ನು ವಹಿಸುತ್ತೇನೆ. ರಾಜ್ಯದ ಸಂಪತ್ತನ್ನು ಹಂಚಿಕೊಂಡು ನಮ್ಮೊಂದಿಗೆ ಸುಖವಾಗಿರಿ” ಎಂದ. ಸಿದ್ಧಾರ್ಥನಿಗೆ ನಗು ಬಂತು. “ಎಲ್ಲ ಕಾಮನೆಗಳನ್ನು ವರ್ಜಿಸಿ ನಾನು ಸತ್ಯಾನ್ವೇಷಣೆಗೆ ಹೊರಟಿದ್ದೇನೆ. ಒಮ್ಮೆ ಉಗುಳಿದ ಎಂಜಲನ್ನು ಮತ್ತೆ ತೆಗೆದುಕೊಂಡು ನುಂಗುವುದು ಉಂಟೆ”? ಎಂದ.

ಹೀಗೆ ಸಿದ್ಧಾರ್ಥ ತನ್ನ ಧ್ಯೇಯದಲ್ಲಿ ಅತುಳವಾದ ಶ್ರದ್ಧೆ, ಶಕ್ತಿಯಲ್ಲಿ ಅಪಾರವಾದ ವಿಶ್ವಾಸ, ಆಮಿಷಕ್ಕೊಳಗಾಗದ ದೃಢಚಿತ್ತಗಳನ್ನು ಸಂಪಾದಿಸಿದ. ಹೀಗೆ ತನ್ನ ಆತ್ಮಶಕ್ತಿಯಿಂದ ಸತ್ಯವನ್ನು ಅರಸುತ್ತಾ ಬೋಧಿಸತ್ವ ‘ಆಳಾರ ಕಾಲಾಮ’ ಎಂಬ ತಪಸ್ವಿಯ ಆಶ್ರಮಕ್ಕೆ ಬಂದ. ಅಲ್ಲಿ ಕಲಿಯ ಬಹುದಾದನ್ನು ಕಲಿತರೂ ದುಃಖದ ಗುಟ್ಟನ್ನು ತಿಳಿಯ ಹೇಳಲು ಆಳಾರ ಕಾಲಾಮನಿಂದ ಸಾಧ್ಯವಾಗಲಿಲ್ಲ. ಅದನ್ನು ತಿಳಿಯಲು ಸಿದ್ಧಾರ್ಥ ಉದ್ಧಕ ರಾಮಪುತ್ರ ಎಂಬ ತಪಸ್ವಿಯಲ್ಲಿಗೆ ಹೋದ. ಅಲ್ಲಿಯೂ ಸಾಧ್ಯವಾಗಲಿಲ್ಲ. ಅಲ್ಲಿಂದ ಸಿದ್ಧಾರ್ಥ ನೈರಂಜಿರಾ ನದಿಯ ದಡದಲ್ಲಿದ್ದ ಉರುವೇಲ ಎಂಬ ಸುಂದರ ಪಟ್ಟಣಕ್ಕೆ ಬಂದ. ಅದು ರಮ್ಯ ಪ್ರದೇಶ. ದಟ್ಟಕಾಡು. ಬೃಹತ್ ವೃಕ್ಷಗಳಿಂದ ಕೂಡಿತ್ತು. ಅಲ್ಲಿ ತನಗಾದ ಅನುಭವವನ್ನು ಸಿದ್ಧಾರ್ಥ ಹೀಗೆ ಹೇಳಿಕೊಂಡಿದ್ದಾನೆ.

“ತಿರುಗಾಡುತ್ತಿದ್ಧಾಗ ಭಯ ಬರುತ್ತಿದ್ದುದುಂಟು. ಆಗ ನಾನು ಕುಳಿತುಕೊಳ್ಳುತ್ತಿರಲಿಲ್ಲ; ನಿಲ್ಲುತ್ತಿರಲಿಲ್ಲ. ತಿರುಗಾಡುತ್ತಾ ತಿರುಗಾಡುತ್ತಾ ಅದನ್ನು ನಾಶಮಾಡುತ್ತಿದ್ದೆ. ಎದ್ದು ನಿಂತಾಗ ಒಮ್ಮೊಮ್ಮೆ ಭಯ ಬರುತ್ತಿದ್ದುದುಂಟು. ಆಗ ನಾನು ಕುಳಿತುಕೊಳ್ಳುತ್ತಿರಲಿಲ್ಲ, ನಡೆಯುತ್ತಿರಲಿಲ್ಲ, ಮಲಗುತ್ತಿರಲಿಲ್ಲ, ಎದ್ದು ನಿಂತೇ ಅದನ್ನು ನಾಶ ಮಾಡುತ್ತಿದ್ದೆ.  ಕುಳಿತುಕೊಂಡಿರುವಾಗ ಭಯ ಕಾಣಿಸಿಕೊಂಡರೆ ಕುಳಿತೇ ಅದನ್ನು ನಾಶ ಮಾಡುತ್ತಿದ್ಧೆ. ಮಲಗಿದಾಗ ಉಂಟಾದರೆ  ಮಲಗಿಯೇ ಅದನ್ನು ನಾಶಮಾಡುತ್ತಿದ್ದೆ. ಆ ಭಯ ತೊಲಗುವವರೆಗೆ ಕುಳಿತುಕೊಳ್ಳುತ್ತಿರಲಿಲ್ಲ, ನಿಲ್ಲುತ್ತಿರಲಿಲ್ಲ, ತಿರುಗಾಡುತ್ತಿರಲಿಲ್ಲ, ಭಯವನ್ನೇ ಬಯಸಿಯೇ ಬಂದಿರುವ ನಾನು ಹೀಗೆ ಭೀತಿ ಪಡುವುದೇಕೆ? ಎಂದು ಅಂದುಕೊಂಡು ಭೀತಿಯನ್ನು ಗೆಲ್ಲುತ್ತಿದ್ದೆ.”

ಭಯಕ್ಕೆ ಕಾರಣಗಳು ಅಕುಶಲ ಕರ್ಮಗಳು, ದುಷ್ಟವಾಕ್ಯ, ಅಶುದ್ಧವಾದ ಮನಸ್ಸು ಎಂದು ಬೋಧಿಸತ್ವನಿಗೆ ಮನವರಿಕೆಯಾಯಿತು. ಕಾಮವಾಸನೆ, ಲೋಭ, ದ್ವೇಷ, ಸಂಶಯ, ದುಗುಡಗಳಿಂದ ಮನಸ್ಸು ಕೂಡಿದ್ದರೆ  ಅದರೊಳಕ್ಕೆ ಸುಲಭವಾಗಿ ಭಯ ಪ್ರವೇಶಿಸುತ್ತದೆ. ಪರನಿಂದೆ, ಆತ್ಮಸ್ತುತಿ, ಕಾಡುಹರಟೆ ಮತ್ತು ಚಾಡಿಮಾತು ಮುಂತಾದ ಅಕುಶಲ ವಾಚ್ಯದಲ್ಲಿ ತೊಡಗುವವರಿಗೆ ಮನಸ್ಸಿನೊಳಕ್ಕೆ ಹಂದೆತನ ಸುಲಭವಾಗಿ ಹೋಗುತ್ತದೆ. ಈ ವೇಳೆಗೆ ಸಿದ್ಧಾರ್ಥ ಕಾಮ ವಾಸನೆಗಳಿಂದ ದೂರವಾಗಿದ್ದನು. ಲೋಭ, ದ್ವೇಷಗಳಿಂದ ಅವನ ಮನಸ್ಸು ಮುಕ್ತವಾಗಿತ್ತು. ಅವಾಚ್ಯ ಅವನ ಬಾಯಿಂದ ಬರುತ್ತಿರಲಿಲ್ಲ. ಆದುದರಿಂದ ಅವನ ಮನಸ್ಸು ಭೀತಿಯಿಂದ ಮುಕ್ತವಾಯಿತು.

ಸತ್ಯವನ್ನ ಅರಿಯಬೇಕಾದರೆ ದೇಹದಂಡನೆಯಿಂವ ಸಾಧ್ಯ ಎಂಬ ಮಾರ್ಗವನ್ನು ಅನುಸರಿಸಿ ಸಿದ್ಧಾರ್ಥ ತನ್ನ ದೇಹಕ್ಕೆ ತಾನೇ ಕೊಟ್ಟಕೊಂಡ ಶಿಕ್ಷೆ ಅಪಾರ.

“ಅತಿ ಸ್ವಲ್ಪ ಆಹಾರವನ್ನು ತೆಗೆದುಕೊಳ್ಳಬೇಕೆಂಬ ಉದ್ಧೇಶದಿಂದ ಕೇವಲ ಹುರುಳಿ ಅಥವಾ ಬಟಾಣಿ ಸಾರನ್ನು ತೆಗೆದುಕೊಳ್ಳುತ್ತಿದ್ದ. ಇದರಿಂದ ನನ್ನ ದೇಹ ತೀರ ಬಡವಾಗಿ ಕೈ ಕಾಲು ಗಳುವಿನಂತಾದುವು. ಎದೆಗೂಡು ಹಾಳು ಮನೆ ಜಂತೆಗಳಂತೆ ಹೊರಕ್ಕೆ ಚಾಚಿಕೊಂಡವು. ಆಳವಾದ ಬಾವಿಯಂತೆ ಕಣ್ಣುಗಳು ಗುಳಿಬಿದ್ದುವು. ಒಣಗಿದ ಮರದಿಂದ ಎಲೆಗಳು ತಪತಪ ಉದುರುವಂತೆ ಕೂದಲು ಉದುರಿತು. ಬೆನ್ನು ಮುಟ್ಟಿದರೆ ಹೊಟ್ಟೆಯ ಚರ್ಮ ಮುಟ್ಟಿದಂತಾಗುತ್ತಿತ್ತು. ಜಲಮಲ ಮಾಡಿಕೊಂಡಾಗ ಅದರ ಮೇಲೆ ಬಿದ್ದುಬಿಡುತ್ತಿದ್ದೆ. ಅಷ್ಟು ನಿಶ್ಶಕ್ತಿ.”

ಇದರಿಂದ ದೇಹದಂಡನೆ ಆಯಿತೇ ಹೊರತು ಉದ್ದೇಶ ಸಾಧಿತವಾಗಲಿಲ್ಲ. ಈ ಮಾರ್ಗವನ್ನು ತೊರೆದ ಸಿದ್ಧಾರ್ಥ ಏಳು ವರ್ಷದವನಿದ್ದಾಗ ಹೊನ್ನೇರಿನ ಹಬ್ಬದ ದಿನದಂದು ಅನುಭವಿಸಿದ ಸಮಾಧಿಯನ್ನು ನೆನೆಸಿಕೊಂಡ. ದೇಹವನ್ನು ದಂಡಿಸದೆ ಸಮಾಧಿ ಮಾರ್ಗದಲ್ಲಿ ಸತ್ಯವನ್ನು ತಿಳಿಯಬಹುದೆಂದುಕೊಂಡ. ಆಹಾರ ಸೇವಿಸಿದ ದೇಹಕ್ಕೆ ಶಕ್ತಿಬಂದು ಮನಸ್ಸು ಉತ್ಸಾಹಗೊಂಡಿತು. ಸಿದ್ಧಾರ್ಥ ಕಠೋರ ಮಾರ್ಗ ತೊರೆದು ಆಹಾರ ಸೇವಿಸಿ ತಪೋಭಂಗ ಮಾಡಿದನೆಂದು ಸಹ ಸಾಧಕರು ಅವನನ್ನು ತೊರೆದರು. ಸಿದ್ಧಾರ್ಥ ತನ್ನ ಮಾರ್ಗದಲ್ಲಿ ಸಾಧನೆಯನ್ನು ಮುಂದುವರೆಸಿದ.

ಅಂದು ವೈಶಾಖ ಶುದ್ಧ ಪೂರ್ಣಿಮೆ. ಬೋಧಿಸತ್ವ ನೈರಂಜರಾ ನದಿಯ ಪಕ್ಕದ ಅರಳೀಮರದ ಅಡಿಯಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದ. ಆ ಮರದಲ್ಲಿ ದೇವತೆ ಇದೆಯೆಂದು ಜನ ನಂಬಿದ್ವರು. ಸುಜಾತೆ ಎಂಬ ಧನಿಕನ ಮಗಳು ತನಗೆ ಮಕ್ಕಳಾದರೆ ಆ ವೃಕ್ಷದೇವತೆಗೆ ಆಹಾರ ಅರ್ಪಿಸುವ ಹರಕೆ ಹೊತ್ತಿದ್ದಳು. ಹರಕೆ ಕೈಗೂಡಿತ್ತು. ಹರಕೆ ಸಲ್ಲಿಸಲು ಒಳ್ಳೆಯ ಪಾಯಸಮಾಡಿಕೊಂಡು ಬಂದಳು. ಅಲ್ಲಿ ಬೋಧಿಸತ್ವನ ತೇಜಃಪುಂಜ ಶರೀರವನ್ನು ನೋಡಿದಳು. ಆತನೇ ವನದೇವತೆ ಎಂದು ಬಗೆದು ಭಕ್ತಿಯಿಂದ ಪಾಯಸವನ್ನು ಅರ್ಪಿಸಿದಳು. ಬೋಧಿಸತ್ವ ಅದನ್ನು ತಿಂದನು. ಅಪೂರ್ವವಾದ ಆನಂದವಾಯಿತು. ಆ ದಿನ ತನಗೆ ಬೋಧಿ ಪ್ರಾಪ್ತಿಯಾಗುವುದೆಂದು ಅನ್ನಿಸಿತು. ಮತ್ತೆ ಸ್ನಾನಕ್ಕೆ ಕುಳಿತ. ಸತ್ಯದ ಒಂದೊಂದು ಮಜಲನ್ನು ಏರುತ್ತಾ ಬಂದ. ಮೊದಲು ಕಾಮ ವಾಸನೆಗಳು ಮನಸ್ಸಿನಿಂದ ಸಂಪೂರ್ಣವಾಗಿ ತೊಲಗಿದನಂತರ ಉಂಟಾಗುವ ಭಾವನೆಯಿಂದ ಬರುವ ಆನಂವವನ್ನು ಅನುಭವಿಸಿದಮೇಲೆ ಏಕಾಗ್ರತೆಯಿಂದ ಬರುವ ಆನಂದವನ್ನು ಅನುಭವಿಸಿದ. ಮೂರನೆ ಮಜಲಿನಲ್ಲಿ ಆನಂದದಮೇಲಿನ ಉಪೇಕ್ಷಾಭಾವನೆ ಬೆಳಸಿಕೊಂಡ. ಅದರಿಂದ ಉಂಟಾದ ಆನಂದವನ್ನು ಅನುಭವಿಸಿದ. ನಂತರ ನಾಲ್ಕನೆಯ ಮಜಲನ್ನು ಮುಟ್ಟಿದ. ಆ ಸ್ಥಿತಿಯಲ್ಲಿ ಮನಸ್ಸು ಸುಖ-ದುಃಖಗಳನ್ನು ಮೀರಿತ್ತು. ಉಪೇಕ್ಷೆಯನ್ನು ಸಾಧಿಸಿದ್ದರಿಂದ ಮನಸ್ಸು ಪರಿಶುದ್ಧವಾಗಿತ್ತು.
ಅದರಿಂದ ಬರುವ ಒಂದು ಬಗೆಯ ಆನಂದವನ್ನು ಮೀರಿದ್ದ.

ಆ ರಾತ್ರಿ ಮೂರನೆಯ ಜಾವದಲ್ಲಿ ಬೋಧಿ ಪ್ರಾಪ್ತಿಯಾಯಿತು. ಪರಿಶುದ್ಧವಾದ ಮನಸ್ಸು, ಧ್ಯಾನಮಾರ್ಗ, ದೇಹದ ಬಯಕೆಗಳನ್ನಷ್ಟೆ ಅಲ್ಲದೆ ಮನಸ್ಸಿನಲ್ಲಿ ಏಳಬಹುದಾದ ಎಲ್ಲ ಬಗೆಯ ವಾಸನೆಗಳನ್ನು, ವಿವಿಧ ಬಗೆಯ ಆನಂದಗಳನ್ನು ಗೆದ್ದಿದ್ದ ಆ ಮನಸ್ಸು ಸತ್ಯವನ್ನು ಸ್ಪಷ್ಟವಾಗಿ ಕಂಡು ಅನುಭವಿಸಿತು. ಇದೇ ದುಃಖ, ಇದೇ ದುಃಖದ ಮೂಲ, ಇದೇ ದುಃಖ ನಿರೋಧ, ಇದೇ ದುಃಖ ನಿರೋಧ ಮಾರ್ಗ ಎಂಬುದು ಆ ಮಹಾ ಚೇತನದ ಅರಿವಿಗೆ ಬಂತು, ಅದೊಂದು ಅಪೂರ್ವ ಅನುಭವ. ಆ ಅನುಭವ, ಆನಂದ, ಅವನದೇ. ಅಸಾಧಾರಣ ಮಹಾಜ್ಯೋತಿಯೊಂದು ಎದೆಯಲ್ಲಿ ಬೆಳಗಿ ಬಾಳಿನ ಸತ್ಯವನ್ನ ಸ್ಪಷ್ಟವಾಗಿ ತೋರಿಸಿತು. ಅದೇ ‘ಬೋಧಿ’. ಬೋಧಿಯನ್ನು ಪಡೆದ ಸಿದ್ಧಾರ್ಥ ಗೌತಮ ಬುದ್ಧನಾದ. ತಾನು ಪಡೆದ ಜ್ಞಾನ, ಅನುಭವಗಳನ್ನು ಸಹ ಜೀವಿಗಳೊಂದಿಗೆ ಹಂಚಿಕೊಳ್ಳುವುದೆಂದು ತಿಳಿದು ಬುದ್ಧ ಜನರ ಬಳಿಗೆ ನಡೆದ.

ಬುದ್ಧ ಬೋಧಿಸಿದ ತತ್ವಗಳಲ್ಲಿ ಮುಖ್ಯವಾದುವು ನಾಲ್ಕು ಆರ್ಯ ಸತ್ಯಗಳು. ೧. ದುಃಖ ಸತ್ಯ, ೨. ದುಃಖ ಮೂಲ. ೩. ದುಃಖ ನಿರೋಧ  ೪. ದುಃಖ ನಿರೋಧ ಮಾರ್ಗ. ಈ ದುಃಖ ನಿರೋಧ ಮಾರ್ಗವನ್ನ ಆರ್ಯ ಅಷ್ಟಾಂಗ ಮಾರ್ಗ ಎಂದು ಕರೆಯುತ್ತಾರೆ. ಇವು ಪ್ರಜ್ಞೆ ಶೀಲ ಹಾಗೂ ಸಮಾಧಿಗೆ ಸೇರಿವೆ. ಸಮ್ಯಕ್ ದೃಷ್ಟಿ ಮತ್ತು ಸಮ್ಯಕ್ ಸಂಕಲ್ಪ ಪ್ರಜ್ಞೆಗೆ ಸೇರಿದ್ದು. ಸಮ್ಯಕ್ ಎಂದರೆ ಒಳ್ಳೆಯದು ಎಂದರ್ಥ. ಸಮ್ಯಕ್ ವಾಚಾ, ಸಮ್ಯಕ್ ಕರ್ಮ, ಮತ್ತು ಸಮ್ಯಕ್ ಜೀವನ ಶೀಲಕ್ಕೆ ಸಂಬಂಧಿಸಿದ್ಲು, ಸಮ್ಯಕ್ ವ್ಯಾಯಾಮ, ಸಮ್ಯಕ್ ಸ್ಮೃತಿ ಮತ್ತು ಸಮ್ಯಕ್ ಸಮಾಧಿ ಇವು ಸಮಾಧಿಗೆ ಸೇರಿದ್ದು. ಇವುಗಳು ಒಟ್ಟಿಗೆ ಪಾಲಿಸಬೇಕಾದಂತವು. ಶೀಲವಿಲ್ಲದೆ ಸಮಾಧಿ ಮತ್ತು ಪ್ರಜ್ಞೆಗಳ ಬೆಳವಣಿಗೆ ಸಾಧ್ಯವಿಲ್ಲ. ಹಾಗೇನಾದರೂ ಯಾರಾದರೂ ಶೀಲವಿಲ್ಲದೆ ಮಾನಸಿಕ ಬೆಳವಣಿಗೆ ಸಾಧ್ಯ ಎಂದು ಭಾವಿಸಿದ್ದರೆ ಅದು ಕೇವಲ ಆತ್ಮವಂಚನೆ. ಆದ್ದರಿಂದ ಮಾನವನ ಸುಖ, ಶಾಂತಿ, ನೆಮ್ಮದಿಗೆ ಶೀಲ ತಳಹದಿ.

ಮೂರು ಅಂಗಗಳಿಂದ ಕೂಡಿದ ಶೀಲ ಐದು ರೀತಿಯದು. ಆದ್ದರಿಂದ ಅದು ಪಂಚಶೀಲ ಎನ್ನಿಸಿಕೊಂಡಿದೆ. ಪಂಚಶೀಲ ಎಂದರೆ
೧. ಪ್ರಾಣಿ ಹಿಂಸೆ ಮಾಡದಿರುವುದು.
೨. ಕಳ್ಳತನ ಮಾಡದಿರುವುದು. ತನಗೆ ಸಲ್ಲಬಾರದುದನ್ನು ಸ್ವೀಕರಿಸದಿರುವುಮ.
೩. ಅನೀತಿಯುತವಾದ ಕಾಮದಲ್ಲಿ ತೊಡಗುವುದು.
೪. ಸುಳ್ಳನ್ನು ಹೇಳದಿರುವುಮ.
೫. ಬುದ್ಧಿ ಭ್ರಮಣೆಯನ್ನುಂಟುಮಾಡುವ ಸುರೆ ಮುಂತಾದ ಮದ್ಯಗಳಮ್ನ ವರ್ಜಿಸುವುದು.

ಒಟ್ಟಿನಲ್ಲಿ ಪಂಚಶೀಲ ನಮ್ಮ ಜೀವನದ ಸಾಮಾನ್ಯ ನಿಯಮಗಳಾದರೆ ನಾವು ಕನಸು ಕಾಣುತ್ತಿರುವ ಸುಖೀರಾಜ್ಯ ನನಸಾಗುತ್ತದೆ. ಅದಕ್ಕೆ ಪ್ರತಿಯೊಬ್ಬ ವ್ಯಕ್ತಿಯ ಪ್ರಯತ್ನವೂ ಮುಖ್ಯ
.
ಬುದ್ಧನಿಗೆ ಎದುರಾದ ಬಹುಮುಖ್ಯ ಸವಾಲೆಂದರೆ ದೇವರ ಆಸ್ತಿತ್ವ ಹಾಗೂ ಈ ಜಗತ್ತು ನಶ್ವರವೇ ಇಲ್ಲಾ ಶಾಶ್ವತವೆ ಎಂಬ ಪ್ರಶ್ನೆ. ಜನ ಇದನ್ನು ಕುರಿತು ತಮ್ಮ ತಮ್ಮಲ್ಲಿಯೇ ಆಡಿಕೊಳ್ಳುತ್ತಿದ್ದುದನ್ನು ಕೇಳಿದ ಚಿಕ್ಕಮಾಲುಂಕ ಪುತ್ತ ಶ್ರಾಮತ್ತಿಯ ಚೇತವನದಲ್ಲಿ ತಂಗಿದ್ದ ಗೌತಮನಲ್ಲಿ ನಿವೇಧಿಸಿಕೊಂಡ. ಜನರ ಪ್ರಶ್ನೆಗಳು ಸಹಜವಾದುವೆ. ಇದನ್ನು ಗಮವಿಟ್ಟು ಕೇಳು.

“ಮೂಲುಂಕ ಪುತ್ತ, ಒಬ್ಬ ಮನುಷ್ಯನ ದೇಹದೊಳಕ್ಕೆ ಬಾಣವೊಂದು ನಾಟಿಕೊಂಡಿದೆ ಎನ್ನು. ಬಂಧುಗಳು ಶಸ್ತ್ರ ಚಿಕಿತ್ಸೆಮಾಡಿಸಲು ವೈದ್ಯನನ್ನು ಕರೆ ತಂದಿದ್ದಾರೆ ಎನ್ನು. ರೋಗಿಯು ವ್ಶೆದ್ಯನನ್ನು ಕುರಿತು “ವೈದ್ಯನೇ ನೀನು ಮೊದಲು ಈ ಬಾಣ ಬಿಟ್ಟವನು ಯಾರು ಎಂದು ತಿಳಿಸು. ಅವನು ಕ್ಷತ್ರಿಯನೋ, ಶೂದ್ರನೋ ತಿಳಿಸು. ಅವನ ಬಣ್ಣ ಕಪ್ಪೇ, ಬಿಳುಪೇ ತಿಳಿಸು. ಬಾಣಬಿಟ್ಟ ಧನುಸ್ಸಿನ ಹೆಣೆ ಯಾವುದರಿಂದ ಆಗಿದೆ. ಧನುಸ್ಸಿನ ಉದ್ದವೇನು ಎಲ್ಲವನ್ನು ವಿವರಿಸು.  ಅಲ್ಲಿಯವರೆಗೆ ನನಗೆ ಚಿಕಿತ್ಸೆ ಬೇಡ’ ಎಂದರೆ ಆ ರೋಗಿಯ ಗುಣ ಆದೀತೆ? ಅಂಥ ಪ್ರಶ್ನೆಗಳನ್ನು ಕೇಳುವುದು ಅವಿವೇಕ ಅಲ್ಲವೇ? ಮೊದಲು ಅವನಿಗೆ ಶಸ್ತ್ರ ಚಿಕಿತ್ಸೆಯಾಗಬೇಕು. ಅವನು ಗುಣಹೊಂದಬೇಕು.

ಇದರಂತೆಯೇ ಮುಲುಂಕ ಪುತ್ತ, ಈ ಸ್ಪಷ್ಟಿಸಿದವನು ಯಾರು, ಅವನ ಸ್ವರೂಪ ಹೇಗೆ, ಈ ಪ್ರಪಂಚವು ಶಾಶ್ವತವೇ, ಅಶಾಶ್ವತವೇ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ದುಃಖ ನಿವಾರಣೆ ಆಗುವುದಿಲ್ಲ. ದುಃಖಕ್ಕೆ ಕಾರಣವಾದ ತೃಷ್ಣೆಯನ್ನು ನಿರ್ಮೂಲ ಮಾಡಿಕೊಳ್ಳಲು ಯತ್ನಿಸು” ಎಂದರು.

ಹೀಗೆ ಜೀವನಕ್ಕೆ ಹೊರತಾದ ಪ್ರಶ್ನೆಗಳನ್ನು ಕುರಿತು ಜಿಜ್ಞಾಸೆ ಮಾಡುವುದು ವ್ಯರ್ಥ. ಆದರೆ ಜೀವನವನ್ನು ಸುಂದರ ಹಾಗೂ ಆನಂದಮಯವಾಗಿಸುವಲ್ಲಿ ಇರುವ ಕ್ಲೇಶಗಳು ಯಾವುವು ಎಂಬುದನ್ನು ಹಾಗೂ ಕಂಡು ಹಿಡಿಯಬೇಕಾದ ಪರಿಹಾರ ಮಾರ್ಗಗಳನ್ನು ಗೌತಮ ಬುದ್ಧ ಬೋಧಿಸಿದ್ದಾನೆ.

ಧರ್ಮವನ್ನು ಕುರಿತು ಬುದ್ಧ ವೈಜ್ಞಾನಿಕ ತಳಹದಿಯನ್ನು ಹಾಕಿಕೊಟ್ಟಿದ್ದಾನೆ. ಜಗತ್ತಿನಲ್ಲಿ ಜನರು ವಿವಿಧ ಧರ್ಮಗಳಿಗೆ ಜೋತು ಬಿದ್ದು ಬಂದಿಯಾಗಿರುವ ದುರಂತದಿಂದ ಬಿಡುಗಡೆಗೊಳ್ಳಲು ಧರ್ಮವನ್ನು ಕುರಿತು ಬುದ್ಧ ತೋರಿದ ಸನ್ಮಾರ್ಗ ಅನುಕರಣೀಯವಾದುದು.

ಅನಾಥ ಪಿಂಡಕನ ಆಶ್ರಮದಲ್ಲಿದ್ದಾಗ ಬುದ್ಧ ಹೇಳಿದ. “ಭಿಕ್ಷುಗಳೇ ಪ್ರಯಾಣಿಕನೊಬ್ಬ ಸರೋವರವನ್ನು ದಾಟಲು ತೆಪ್ಪವಿರಲಿಲ್ಲ. ಹತ್ತಿರವಿದ್ದ ಮರದ ಕೊಂಬೆಗಳನ್ನು ಹುಲ್ಲು ಎಲೆಗಳನ್ನು ಸಂಗ್ರಹಿಸಿ ತೆಪ್ಪಮಾಡಿ ಕೌಶಲ್ಯದಿಂದ ಸರೋವರವನ್ನು ದಾಟುತ್ತಾನೆ. ಸರೋವರವನ್ನು ದಾಟಿಸಿತೆಂದು ತೆಪ್ಪವನ್ನು ಹೆಗಲಲ್ಲಿ ಹೊತ್ತು ಊರೂರು ಸುತ್ತುತ್ತಾನೆಯೇ? ಇಲ್ಲ. ಅದನ್ನು ದಡದಲ್ಲಿಯೇ ಸುರಕ್ಷಿತವಾಗಿ ಬಿಟ್ಟು ಹೋಗುತ್ತಾನೆ. ತೆಪ್ಪವನ್ನು ಯಾವ ಉದ್ದೇಶಕ್ಕೆ ಎಷ್ಟು ಉಪಯೋಗಿಸಬೇಕೋ ಅಷ್ಪನ್ನು ಮಾಡುವವನನ್ನು ವಿವೇಕಿ ಎನ್ನುತ್ತಾರೆ.

ನಾನು ನಿಮಗೆ ಬೋಧಿಸುತ್ತಿರುವ ಧರ್ಮವೂ ಒಂದು ದೋಣಿಯಂತೆ. ಅದು ಅಪಾಯಕರವಾದ ದುಃಖದಿಂದ ಸುರಕ್ಷಿತವಾದ ಸುಖಕ್ಕೆ ಕೊಂಡೊಯ್ಯುವಂಥದ್ದು. ವಿಸ್ತಾರವಾದ ಈ ದುಃಖ ಸಾಗರವನ್ನು ದಾಟಲು ಸಹಾಯ ಮಾಡಬಲ್ಲುದು.

ಹೀಗೆ ಧರ್ಮವೇ ಜೀವನವಲ್ಲ. ಅದು ಜೀವನಕ್ಕೆ ಸಹಕಾರಿ ಎಂಬ ಸತ್ಯವನ್ನು ಮನವರಿಕೆ ಮಾಡಿದ್ದಾನೆ.

ಒಮ್ಮೆ ಭಗವಾನರು ಮಗಧ ದೇಶದ ಏಕನಾಲ ಎಂಬ ಗ್ರಾಮದ ಬಳಿ ತಂಗಿದ್ದರು. ಅದು ಹೊಲಉಳುವ ಕಾಲ. ಭಾರದ್ವಾಜ ಎಂಬ ಬ್ರಾಹ್ಮಣ ಏಕನಾಲದ ದೊಡ್ಡ ರೈತ. ಹೊಲ ಉತ್ತು ಅಳುಗಳೊಂದಿಗೆ ಊಟಕ್ಕೆ ಕೂರುವ ಸಮಯಕ್ಕೆ ಹೋದ ಬುದ್ಧ ಭಿಕ್ಷೆ ಬೇಡಿದ. ಅದಕ್ಕೆ ಭಾರದ್ವಾಜ “ಓ ಭಿಕ್ಷು ನಾನು ಹೊಲ ಉಳುತ್ತೇನೆ, ಬಿತ್ತುತ್ತೇನೆ, ಬೆಳೆ ಬೆಳೆದು ಊಟ ಮಾಡುತ್ತೇನೆ. ನೀನೂ ಹಾಗೆ ಮಾಡಿ ಊಟಗಳಿಸಿಕೋ” ಎಂದ.

“ಬ್ರಾಹ್ಮಣ, ನಾನೂ ಉಳುತ್ತೇನೆ, ಬಿತ್ತುತ್ತೇನೆ: ಅನ್ನಗಳಿಸಿಕೊಳ್ಳುತ್ತೇನೆ” ಎಂದ ಬುದ್ಧ. “ಆದರೆ ಎತ್ತು, ನೇಗಿಲು, ನೊಗ, ಹಗ್ಗ, ಬೀಜಗಳಾವುದೂ ಇಲ್ಲದೆ ಹೇಗೆ ಉಳುತ್ತೀಯ, ಬಿತ್ತುತ್ತೀಯೆ, ಬೆಳೆಯುತ್ತೀಯೆ?” ಎಂದ. ಅದಕ್ಕೆ ಗೌತಮ “ನಾನು ಬಿತ್ತುವ ಬೀಜವು ಶ್ರದ್ಧೆ. ಆ ಬೀಜ ಮೊಳೆಯಲು ಬೇಕಾದ ಮಳೆ ತಪಶ್ಚರ್ಯೆ. ಪ್ರಜ್ಞೆಯೇ ನನ್ನ ನೇಗಿಲು, ಪಾಪಲಜ್ಜೆಯು ಮೇಟಿ. ಚಿತ್ತವು ಹಗ್ಗ, ಸ್ಮೃತಿಯು ಗುಳ ಮತ್ತು ಮುಳ್ಳು ಕೋಲು. ನಾನು ಮಾಡುವ ಬೇಸಾಯ ಇದು. ಕಾಯಾ, ವಾಚಾ, ಮನಸಾ ನಾನು ಸಂಯಮವನ್ನು ಪಾಲಿಸುತ್ತೇನೆ. ಮಿತವಾಗಿ ಆಹಾರವನ್ನು ತೆಗದುಕೊಳ್ಳುತ್ತೇನೆ. ತಾಳ್ಮೆಯೇ ನಾನು ಅನುಭವಿಸುವ ಬಿಡುವು. ವೀರ್ಯವೇ ನಾನು ಬಳಸುವ ಎತ್ತು. ನನ್ನ ಪಯಣ ಶೋಕವಿಲ್ಲದೆಡೆಗೆ. ಅಲ್ಲಿಂದ ಎಂದೂ ನಾನು ಹಿಂದಿರುಗುವುದಿಲ್ಲ. ನನ್ನ ಬೇಸಾಯದಿಂದ ಬರುವ ಬೆಳೆ ಅಮರತ್ವ. ಯಾರು ಈ ಬೇಸಾಯವನ್ನು ಮಾಡುತ್ತಾರೋ ಅವರು ಎಲ್ಲ ಬಗೆಯ ಶೋಕದಿಂದಲೂ ಬಿಡುಗಡೆಗೊಳ್ಳುತ್ತಾರೆ.” ಈ ಭೋಧನೆಯಿಂದ ಪ್ರಭಾವಿತನಾದ ಭಾರಧ್ವಾಜ ಸಂಘವನ್ನು ಸೇರಿದ. ಸಂಘವನ್ನು ಸೇರಿಯೂ ತನ್ನ ವೃತ್ತಿಯನ್ನು ಶ್ರದ್ಧಾ ಭಕ್ತಿಗಳಿಂದ ಮಾಡುತ್ತಿದ್ದ.

ಕೋಸಲ ರಾಜ್ಯದ ಒಳನಾಡಿನಲ್ಲಿ ಸಂಚರಿಸುತ್ತಿದ್ದಾಗ ‘ಅಂಗುಲಿಮಾಲ’ನೆಂಬ ಕುಖ್ಯಾತ ಕೊಲೆಗಾರನಿದ್ದಾನೆ, ಕೊಲೆಗೈದು ಬೆರಳುಗಳನ್ನು ಕತ್ತರಿಸಿ ಮಾಲೆ ಮಾಡಿಕೊಂಡು ಧರಿಸಿಕೊಳ್ಳುತ್ತಾನೆ, ಅತ್ತ ಹೋಗಬೇಡಿ ಎಂದು ಬುದ್ಧನಿಗೆ ಹೇಳಿದರು. ಮಂದಸ್ಮಿತ ನಗುವನ್ನು ಬೀರಿ ಬುದ್ಧ ಮುನ್ನಡೆದ. ಗುಹೆಯ ಹತ್ತಿರ ಬರುತ್ತಿದ್ದುದನ್ನು ನೋಡಿದ ಅಂಗುಲಿಮಾಲ “ಸಮಣ, ನಿಲ್ಲು ನಿಲ್ಲು’ ಎಂದ “ನಾನು ಎಂದೋ ನಿಂತಿದ್ದೇನೆ. ನೀನು ಇನ್ನೂ ನಿಂತಿಲ್ಲ’ ಎಂದು ಬುದ್ಧ ಮುನ್ನಡೆದ. ಬುದ್ಧನ ವಾತ್ಸಲ್ಯತುಂಬಿದ ನುಡಿಗಳನ್ನು ಕೇಳಿ ಅಂಗುಲಿಮಾಲನಿಗೆ ಆಶ್ಚರ್ಯವಾಯ್ತು. ಮಾನವ
ಸ್ವಭಾವದಲ್ಲಿ ಅದುವರೆಗೆ ಅವನು ಕಂಡದ್ದು ಭಯ, ರೋಷ, ದ್ವೇಷಗಳನ್ನು. ಪ್ರೀತಿ ವಾತ್ಸಲ್ಯ ಅವನಿಗೆ ಅಪರಿಚಿತ- ವಾಗಿದ್ದುವು. ಈ ಸಮಣ ತಾನು ಚಲಿಸುತ್ತಿದ್ದರೂ ನಿಂತಿದ್ದೇನೆ ಎಂದು ಹೇಳುತ್ತಿದ್ದಾನೆ. ನಾನು ನಿಂತಿದ್ದರೂ ಚಲಿಸುತ್ತಿದ್ದೀಯೆ ಎಂದು ಹೇಳುತ್ತಿದ್ದಾನೆ. ಇದು ವಿಚಿತ್ರವಾಗಿದೆ. ಇದರ ಅರ್ಥಪನ್ನು ತಿಳಿಯಬೇಕೆಂದು ಬುದ್ಧನಲ್ಲಿಗೆ ಹೋಗಿ ವಿನಯದಿಂದ ಕೇಳಿಕೊಂಡ. ಗೌತಮ ಬುದ್ಧ ಹೇಳಿದ. “ಅಂಗುಲಿಮಾಲ, ನಾನು ಎಷ್ಟೋ ವರ್ಷಗಳಿಂದ ನಿಂತು ಬಿಟ್ಟಿದ್ದೇನೆ. ಇನ್ನು ಮುಂದೆಯೂ ನಿಂತೇ ಇರುತ್ತೇನೆ. ಜೀವಿಗಳಿಗೆ ಹಿಂಸೆ ಮಾಡುವುದನ್ನು, ನನಗೆ ನಾನು ಹಿಂಸೆ ಮಾಡುವುವುದನ್ನು ನಿಲ್ಲಿಸಿ ಬಿಟ್ಟಿದ್ದೇನೆ. ನನ್ನ ಮನಸ್ಸು ಸಂಯಮದಲ್ಲಿ ನಿಂತಿದೆ. ನೀನು? ನಿನಗೆ ಯಾವುದರ ಬಗೆಗೂ ಸಂಯಮವಿಲ್ಲ. ನಿನ್ನ ಮನಸ್ಸು ಚಂಚಲ. ಯಾವಾಗಲೂ ತಳಮಳಗೊಂಡಿರುತ್ತದೆ. ಆದುದರಿಂದ ನೀನು ನಿಂತಿಲ್ಲ. ”

ಭಗವಾನರ ಮಾತು ಅಂಗುಲೀಮಾಲನ ಕಲ್ಲು ಹೃದಯವನ್ನು ಕರಗಿಸಿಬಿಟ್ಟಿತು. ತಾನು ಮಾಡುತ್ತಿದ್ದ ಪಾಪಗಳ ಅರಿವಾಯ್ತು. “ಇನ್ನು ಮುಂದೆ ನಾನು ಯಾವ ಪಾಪವನ್ನೂ ಮಾಡುವುದಿಲ್ಲ. ನಿಮ್ಮ ಮಾತುಗಳನ್ನು ಕೇಳಿದ ಮೇಲೆ ಧರ್ಮದ ಅರಿವಾಗಿದೆ. ” ಎಂದು ಬಿಲ್ಲು, ಬಾಣ, ಕತ್ತಿಗಳನ್ನು ಎತ್ತಿ ಎಸೆದು ಬುದ್ಧನ ಕಾಲಿಗೆ ಬಿದ್ದ. “ನೀನು ಕಲ್ಮಶಗಳನ್ನು ಕಳೆದುಕೊಂಡು ಶುದ್ಧನಾಗಿದ್ದೀಯೆ. ಇಂದಿನಿಂದ ನೀನು ಭಿಕ್ಷು” ಎಂದು ಬುದ್ಧ ಆತನನ್ನು ಸಂಘಕ್ಕೆ ಸೇರಿಸಿಕೊಂಡ. ನಂತರ ಜೀವನವ ಅನಾತಪಿಂಡಕನ ಆಶ್ರಮದಲ್ಲಿ ತಂಗಿದ್ದರು.

ಒಮ್ಮೆ ಪ್ರಜಾಪೀಡಕನಾದ ಅಂಗುಲಿಮಾಲನನ್ನು ಸೆರೆ ಹಿಡಿಯಲು ಐದು ನೂರು ಆಶ್ವಾರೋಹಿಗಳೊಂದಿಗೆ ಬಂದ ಪಸೇನದಿ ರಾಜನಿಗೆ ಆಶ್ವರ್ಯ ಕಾದಿತ್ತು. “ಪಸೇನದಿರಾಜ, ಅಂಗುಲೀಮಾಲನು ಮುಂಡನ ಮಂಡಿಸಿಕೊಂಡು ಪೀತ ವಸ್ತ್ರ ಧರಿಸಿ ಪಾರಿವ್ರಜ್ಯವನ್ನು ಪಡೆದು ಬ್ರಹ್ಮಚರ್ಯ ಅನುಸರಿಸುತ್ತಾ ಕಲ್ಯಾಣ ಕಾರ್ಯದಲ್ಲಿ ನಿರತನಾಗಿದ್ದಾನೆ” ಎಂದು ಪರಿಚಯಿಸಿದ. ಸೌಮ್ಯ ಮೂರ್ತಿಯಾಗಿದ್ದ ಅಂಗುಲೀಮಾಲನನ್ನು ನೋಡಿ ಅಶ್ಚರ್ಯ ಚಕಿತನಾದ ಪಸೇನದಿಯು “ಭಗವಾನ್, ಇದು ಅದ್ಭುತ, ಆಶ್ಚರ್ಯ. ದಮನ ಮಾಡಲು ಸಾಧ್ಯವಾಗದುದನ್ನು ನೀವು ಸುಲಭವಾಗಿ ದಮನ ಮಾಡಬಲ್ಲಿರಿ. ಶಾಂತರಾಗಿಲ್ಲದವರನ್ನು ಶಾಂತಗೊಳಿಸಬಲ್ಲಿರಿ ಉರಿಯನ್ನು ನಂದಿಸಬಲ್ಲಿರಿ. ಆಯುಧದಿಂದ ಧಮನ ಮಾಡಲಾಗದುದನ್ನು ನೀವು ಕೇವಲ ನಿರಾಯುಧರಾಗಿ ದಮನ ಮಾಡಬಲ್ಲಿರಿ. ನಮ್ಮ ಹುಂಬ ಆಯುಧ ಶಕ್ತಿಗಿಂತ ನಿಮ್ಮ ಹೃದಯ ಶಕ್ತಿ ದೊಡ್ಡದು, ಪವಿತ್ರವಾದ್ದದು.” ಎಂದು ನಮಸ್ಕರಿಸಿದ.

ಬದುಕಿನ ಮತ್ತೊಂದು ಜ್ವಲಂತ ಸಮಸ್ಯೆ ಎಂದರೆ ಸಾವು. ಅದರದು ನಿರಂಕುಶ ಅಧಿಕಾರ. ಅದಕ್ಕೆ ಸೋಲದವನಿಲ್ಲ. ನಚಿಕೇತ, ಸತ್ಯವಾನ್ ಸಾವಿತ್ರಿ ಸಾವನ್ನು ಎದುರಿಸಿದ ಧೀರರು. ಅವರ ವಿಚಾರಗಳು ಗಾಢವಾದುವು, ತರ್ಕಬದ್ಧವಾದುವು. ಆದರೆ ಗೌತಮ ಬುದ್ಧ ಸಾವಿನ ಸಮಸ್ಯೆಯನ್ನು ಅತ್ಯಂತ ಸರಳವಾಗಿ ಕಿಸುಗೌತಮಿಯ ಪ್ರಸಂಗದಲ್ಲಿ ಮನವರಿಕೆ ಮಾಡಿದ್ದಾನೆ.

ಬುದ್ಧನದು ತಿಳಿಯಾದ ವಿಚಾರಗಳು. ಅವು ನೇರವಾಗಿ ಹೃದಯದಿಂದ ಬಂದುದರಿಂದ ನೇರವಾಗಿ ಹೃದಯಯವನ್ನು ತಲುಪುತ್ತವೆ. ಆತ ತಾನು ಕಂಡುಕೊಂಡ ಸತ್ಯಗಳನ್ನು ತಿಳಿಯ ಹೇಳಲು ಪವಾಡಗಳನ್ನು ಮಾಡಲಿಲ್ಲ. ಆತ ಪವಾಡ- ಗಳನ್ನು ವಿರೋಧಿಸುತ್ತಿದ್ಧ. ಮೂಢ ನಂಬಿಕೆಗಳನ್ನು ತಿರಸ್ಕರಿಸಿದ್ದ. ಅವು ಮೋಸದ ಸಾಧನಗಳು ಎಂದು ಖಂಡಿಸುತ್ತಿದ್ದ.

ಈ ಉನ್ನತ ವಿಚಾರಗಳನ್ನು ಆತ ಬೋಧಿಸಿದ್ದು ಪಾಲಿ ಭಾಷೆಯಲ್ಲಿ. ಸಂಸ್ಕೃತ ಬಲ್ಲವರಾಗಿದ್ದೂ ಅದನ್ನು ಬಳಸಲಿಲ್ಲ. ಜನ ಸಾಮಾನ್ಯರಿಗೆ ಯಾವ ಸುಲಭವಾಗಿ ಅರ್ಥವಾಗುತ್ತದೆಯೋ ಆ ಭಾಷೆಯನ್ನೆ ಬುದ್ಧ ಬಳಸಿದ.

ಕಾಲಾನಂತರದಲ್ಲಿ ಅನೇಕ ಪಂಡಿತರೂ, ರಾಜಕುಮಾರರೂ, ಶ್ರೀಮಂತರೂ ಭಗವಾನರ ಶಿಷ್ಯರಾದರು, ಸಂಸ್ಕೃತದ ಪರ ಇದ್ದ ಯಮೇಲು ಮತ್ತು ತೇಕುಲ ದೊಡ್ಡ ಪಂಡಿತರು. ಅವರು ಒಮ್ಮೆ ‘ಭಗವಾನ್ ಈಗಿರುವ ಭಿಕ್ಷುಗಳು ಅನೇಕ ಬುಡಕಟ್ಟಿಗೆ ಸೇರಿದವರು, ಅನೇಕ ಗೋತ್ರದವರು, ಬೇರೆ ಬೇರೆ ಪ್ರದೇಶದವರು. ಇವರುಗಳು ತಮ್ಮ ತಮ್ಮ ಭಾಷೆಯನ್ನೇ ಉಪಯೋಗಿಸಿದರೆ ಭಗವಾನರ ಬೋಧನೆ ಕಲುಷಿತವಾಗುತ್ತದೆ. ಆದ್ದರಿಂದ ನಿಮ್ಮ ಬೋಧನೆ ಸಂಸ್ಕೃತದಲ್ಲಿ ನಡೆಯಲಿ’ ಎಂದರು. ಅದಕ್ಕೆ ಬುದ್ಧ “ಭಿಕ್ಷುಗಳೇ, ನನ್ನ ಮಾತುಗಳು ಸಂಸ್ಕೃತದಲ್ಲಿರಬೇಕೆಂದು ನಿಮ್ಮ ಇಚ್ಛೆ ಇರಬಹುದು. ನೀವು ತಪ್ಪುದಾರಿಯಲ್ಲಿ ಹೋಗುತ್ತಿದ್ದೀರಿ. ಸಂಸ್ಕೃತಭಾಷೆಯ ಉಪಯೋಗದಿಂದ ಶ್ರದ್ಧಾವಂತರ ಶ್ರದ್ಧೆ ಬೆಳೆಯುವುದಿಲ್ಲ. ಶ್ರದ್ಧೆ ಇಲ್ಲದದರಲ್ಲಿ ಶ್ರದ್ಧೆ ಹುಟ್ಟುವುಧಿಲ್ಲ. ಈ ಭಾಷೆಯ ಉಪಯೋಗವು ಧರ್ಮದಲ್ಲಿ ಆಸಕ್ತಿಯಿರುವ ಜನರನ್ನು ಧರ್ಮದಿಂದ ದೂರ ಮಾಡುತ್ತದೆ. ಅವರ ಉತ್ಸಾಹವನ್ನು ಕುಗ್ಗಿಸೀತು” ಎಂದರು. ತಾವು ಬೋಧಿಸಿದುದು ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗಬೇಕು. ಅದು ಪಂಡಿತರ, ಉಚ್ಚ ವರ್ಗದವರ ಸೊತ್ತಾಗಬಾರದು ಎಂಬುದು ಅವರ ಉದ್ದೇಶವಾಗಿತ್ತು.

ಬುದ್ಧನ ಬೋಧನೆಯಿಂದ ಆತನ ಸಂಘ ಆಲದ ಮರವಂತೆ ವಿಸ್ತಾರಗೊಳ್ಳುತ್ತಾ ಹೋಯ್ತು. ಬಿಂಬಸಾರ, ಅನಾಥ ಪಿಂಡಕ, ಜೀವಕ, ವಿಶಾಖಾ, ಆಂಭಾಪಾಲಿ ಮುಂತಾದವರು ಸಂಘ ಸೇರಿದರು. ಕೀಳು ಜಾತಿಯವರೆಂದು ಕಡೆಗಣಿಸಲ್ಪಟ್ಟಿದ್ದ ಉಪಾಲಿಯಂಥ ರಿಕ್ತ ಶೂದ್ರರಿಗೂ ದೀಕ್ಷೆ ದೊರಕಿತ್ತು. ಮಾನವೀಯ ಮೌಲ್ಯದಿಂದ ಕೂಡಿದ್ದ ಬುದ್ಧನ ಸಂಘಕ್ಕೆ ಅವರಿವರೆನ್ನದೆ ಎಲ್ಲ ಜಾತಿಯ ಜನರೂ, ಎಲ್ಲ ವರ್ಗದ ಜನರೂ ಸೇರಿಕೊಂಡರು. ಆನಂದ, ದೇವದತ್ತ, ಭದ್ದಿಯೆ ಮುಂತಾದ ಪ್ರಮುಖ ಮನೆತನದ ಕ್ಷತ್ರಿಯರೂ, ಸಾರಿಪುತ್ತ ಮೊಗ್ಗಲಾನ ಮುಂತಾದ ಶ್ರೀಮಂತ ವರ್ತಕರೂ ಸದಸ್ಯರಾದರು.

ಸ್ತ್ರೀಯರು ಸಂಘಕ್ಕೆ ಸೇರಲು ಬುದ್ಧನಿಗೆ ಸಕಾರಣವಾದ ಆತಂಕಗಳು ಇದ್ದರೂ ಕೆಲವು ನಿಬಂಧನೆಗಳಮೇಲೆ ಸ್ತ್ರೀಯರನ್ನು ಸಂಘಕ್ಕೆ ಸೇರಿಸಿ ಸ್ತ್ರೀ ಸಮಾನತೆಯನ್ನು ಎತ್ತಿ ಹಿಡಿದ. ಸಂಘಕ್ಕೆ ಸೇರಿದಮೇಲೆ ಬಿಕ್ಕು-ಬಿಕ್ಕುವಿನ ನಡುವೆ ಹಾಗೂ ಬಿಕ್ಷು-ಭಿಕ್ಷಣಿಯರ ನಡುವೆ ಯಾವ ವ್ಯತ್ಯಾಸವಾಗಲೀ, ಅರಮನೆಯಿಂದ ಬಂದವನು-ಗುಡಿಸಲಿಂದ ಬಂದವನು ಎಂಬ ತರತಮ ಭಾವವಿಲ್ಲದೆ ಸಮಾನತಾಭಾವ ಸಂಘದಲ್ಲಿ ನೆಲೆಯೂರಿತ್ತು. ಮನೆಯನ್ನು ತೊರೆದು ಸನ್ಯಾಸ ಸ್ವೀಕರಿಸಿದಮೇಲೆ ಯಾರೇ ಆಗಲಿ ಮನಸ್ಸನ್ನು ಶುದ್ಧೀಕರಿಸಿಕೊಳ್ಳದಿದ್ದರೆ ಸಾಧಾರಣ ಗೃಹಸ್ಥನಿಗಿಂತ
ಹೀನ ಕೃತ್ಯಗಳನ್ನು ಮಾಡಿಬಿಡುತ್ತಾರೆ ಎಂಬ ಎಚ್ಚರಿಕೆಯನ್ನು ಭಗವಾನ್ ಬುದ್ಧ ನೀಡಿದ್ದ.

ಯಾವುದು ಪ್ರಜಾಪ್ರಭುತ್ವದ ತವರು ಎಂದು ಹೇಳುತ್ತೇವೆಯೋ ಆ ಬ್ರಿಟನ್ ದೇಶದಲ್ಲಿಯೂ ಇಪ್ಪತ್ತನೆಯ ಶತಮಾನ- ದವರೆಗೆ-ಆಂದರೆ ೧೯೧೮ ರವರೆಗೆ – ಸ್ತ್ರೀಯರಿಗೆ ಓಟಿನ ಹಕ್ಕು ಇರಲಿಲ್ಲ. ಸ್ತ್ರೀಯರು ವೇದ ಪಠಿಸಿದರೆ ಗರ್ಭಪಾತ- ವಾಗುತ್ತದೆ ಎಂದು ಬದರಿಕಾಶ್ರಮದ ಶಂಕರಾಚಾರ್ಯರು ಇತ್ತೀಚೆಗೆ ಹೇಳಿಕೆ ನೀಡಿ ಸ್ತ್ರೀಯರು ವೇದ, ಉಪನಿಷತ್ತು, ಗೀತೆಗಳ ಪಠಣಕ್ಕೆ ಆನರ್ಹರೆಂದು ಪರಿಗಣಿಸಿದರು. ಆದರೆ ಗೌತಮ ೨೫೦೦ ವರ್ಷಗಳಷ್ಟು ಹಿಂದೆಯೇ ಸ್ತ್ರೀ ಸಮಾನತೆಯನ್ನು  ಎತ್ತಿ ಹಿಡಿದಿದ್ದ ಎಂದರೆ ಆತನ ಬೋಧನೆಯ ಮಹತ್ವ ಮನವರಿಕೆಯಾಗುತ್ತದೆ.

ಬೌದ್ಧ ಧರ್ಮಕ್ಕೂ ಇತರ ಧರ್ಮಗಳಿಗೂ ಮೂಲಭೂತ ವ್ಯತ್ಯಾಸವಿದೆ. ಬೌದ್ಧ ಧರ್ಮದ್ದು ಮುಕ್ತವಾದ; ಮಿಕ್ಕ ಧರ್ಮಗಳದ್ದು ಮೂಲಭೂತವಾದ. ವೈಧಿಕ ಧರ್ಮದ ಪ್ರಕಾರ ಪ್ರತಿಯೊಬ್ಬನೂ ತನ್ನ ಜಾತಿಗೆ ಅನುಗುಣವಾಗಿ ವೃತ್ತಿಯನ್ನು ಹಿಡಿಯುವುದು; ಆತ ಸಂಪ್ರದಾಯದ ಪ್ರಕಾರ ಆಚಮನ, ಆರಾಧನ, ಯಜ್ಞ ಯಾಗ ಮುಂತಾದುವನ್ನು ಮಾಡಬೇಕು. ಬೌದ್ಧ ಧರ್ಮದ ಪ್ರಕಾರ ವ್ರತ ಆಚಾರ, ಯಜ್ಞ ಯಾಗಗಳು ಸತ್ಕರ್ಮವಲ್ಲ. ಅವು ಅರ್ಥ ಶೂನ್ಯವಾದ ಕಾರ್ಯಗಳು. ಯಾಗ, ಯಜ್ಞ ಮಾಡುವಷ್ಪರಲ್ಲಿ ಪ್ರತಿಫಲದ ನಿರೀಕ್ಷೆಯಿದೆ. ಆದರೆ ಬೌದ್ಧ ಧರ್ಮದಲ್ಲಿ ಲೋಭ, ಮೋಹ ಮತ್ತು ದ್ವೇಷಗಳನ್ನು ನಿಗ್ರಹಿಸುವುದೇ ಧರ್ಮದ ತಿರುಳಾಗಿದೆ. ಬೌದ್ಧ ಧರ್ಮ ವಿಚಾರಕ್ಕೆ ಪ್ರಾಶಸ್ತ್ಯಕೊಟ್ಟರೆ ವೈದಿಕ ಧರ್ಮಕ್ಕೆ ನಂಬಿಕೆಯೇ ಆಧಾರ. ವೈದಿಕ ಧರ್ಮ ಸೃಷ್ಟಿ ಕರ್ತನನ್ನು ನಂಬುತ್ತದೆ-ಬೌದ್ಧ ಧರ್ಮ ಶೀಲವನ್ನು ಒಪ್ಪುತ್ತದೆ. ವೈದಿಕ ಧರ್ಮ ವ್ರತ, ನಿಯಮ, ಯಾಗ  ಯಜ್ಞಗಳನ್ನು ಒಪ್ಪಿದರೆ ಧರ್ಮ ಅದನ್ನು ಖಂಡಿಸಿ ಲೋಭ, ಮೋಹ, ದ್ವೇಷಗಳನ್ನು ನಿಗ್ರಹಿಸುವುದಕ್ಕೆ ಒತ್ತುಕೊಡುತ್ತದೆ.

ಧರ್ಮಗಳಿಗೆ ಮನಸ್ಸುಮೂಲ ಎಂಬ ಮೂಲಭೂತ ಅಂಶವನ್ನು ಬುದ್ಧ ಬೆಳಕಿಗೆ ತಂದ. ಒಬ್ಬನು ಅಶುದ್ಧವಾದ ಮನಸ್ಸಿನಿಂದ ಮಾಡಿದರೆ, ಪ್ರತಿಫಲಾಪೇಕ್ಷೆಯಿಂದ ಯಾಗ ಯಜ್ಞಗಳನ್ನು ಮಾಡಿದರೆ ಚಕ್ರವು ವಾಹನವನ್ನು ಹಿಂಬಾಲಿಸುವಂತೆ ದುಃಖವು ಅವನನ್ನು ಹಿಂಬಾಲಿಸುತ್ತದೆ. ಒಬ್ಬನು ಪ್ರಸನ್ನ ಮನಸ್ಸಿನಿಂದ ಮಾತನಾಡಿದರೆ, ಸತ್ಕಾರ್ಯ ಮಾಡಿದರೆ ಆನಂದವು ನೆರಳಿನಂತೆ ಹಿಂಬಾಲಿಸುತ್ತದೆ. ಆದ್ದರಿಂದ ನಮ್ಮ ವರ್ತನೆಗೆ ನಮ್ಮ ಮನಸ್ಸೇ ಮೂಲ. ಅದನ್ನು ನಿಗ್ರಹಿಸಬೇಕು ಎಂಬುದು ಬುದ್ಧನ ಬೋಧನೆಯ ಸಾರ.

ವೈದಿಕ ಮತ್ತು ಇತರ ಧರ್ಮಗಳ ಪ್ರಕಾರ ಆತ್ಮ ಅವಿನಾಶಿಯಾದುದಾದರೆ ಬೌದ್ಧ ಧರ್ಮ ಅದನ್ನು ನಿರಾಕರಿಸಿ ಸೃಷ್ಟಿಯಲ್ಲಿ ಯಾವುದೂ ಶಾಶ್ವತವಲ್ಲ ಎಂಬ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಮತ್ತೊಂದು ಮೂಲಭೂತ ವ್ಯತ್ಯಾಸ ಜಾತಿ ಪದ್ಧತಿಗೆ ಸೇರಿದ್ದು,. ವೈಧಿಕ ಧರ್ಮದ ಪ್ರಕಾರ ಜಾತಿ ದೈವ ನಿಯಾಮಕ. ಬೌದ್ಧ ಧರ್ಮ ಜಾತಿಯನ್ನು ನಿರಾಕರಿಸುತ್ತದೆ. ಸಮಾನತೆಯನ್ನು ಎತ್ತಿ ಹಿಡಿಯುತ್ತದೆ.

ಗೌತಮ ಒಮ್ಮೆ ಕೋಸಲಪುತ್ತ ಪಟ್ಟಣಕ್ಕೆ ಬಂದರು. ಅಲ್ಲಿ ಕಲಾಮಪಂಗಡವವರು “ಭಗವಾನ್ ಒಂದು ಧರ್ಮದವರು ಮತ್ತೊಂದು ಧರ್ಮದವರನ್ನು ಖಂಡಿಸುತ್ತಾ ತಮ್ಮ ಧರ್ಮವೇ ಶ್ರೇಷ್ಠವಾದುದು ಎಂದು ವಾದಿಸುತ್ತಾರೆ. ಯಾವ ಧರ್ಮ ಶ್ರೇಷ್ಠವಾದುದು” ಎಂದು ಕೇಳಿದರು.

ಅದಕ್ಕೆ ಗೌತಮ ಬುದ್ಧ “ಕಾಲಾಮರೇ, ಜನಜನಿತವಾಗಿ ಬಂದುದೆಂದಾಗಲೀ, ಪರಂಪರೆಯಿಂದ ಬಂದುದೆಂದಾಗಲೀ, ಊಹೆಯಿಂದ ತೋಚಿದುದೆಂದಾಗಲೀ ಅಥವಾ ತರ್ಕಬದ್ಧವಾಗಿ ತೋರುತ್ತದೆಂಬುದರಿಂದಾಗಲೀ, ಸಾಧಾರ ಪೂರಿತವಾಗಿದೆ ಎಂಬ ಕಾರಣದಿಂದಾಗಲೀ, ದೀರ್ಘ ಪರಿಶೀಲಾನಂತರ ತೇಲಿ ಬಂದಿದೆ ಎಂಬ ಕಾರಣದಿಂದಾಗಲೀ ಅಥವಾ ಬಹುಸಮರ್ಥನು ಹೇಳಿರುವುದೆಂಬ ಕಾರಣದಿಂದಾಗಲೀ, ಗುರು ಮುಖದಿಂದ ಬಂದದ್ದು ಎಂಬ ನಂಬಿಕೆಯಿಂದಾಗಲೀ ನೀವು ಸಮಾಧಾನ ಪಟ್ಟುಕೊಳ್ಳಬೇಡಿ. ಈ ಭಾವನೆಗಳು ಬಾರದವು. ಖಂಡನಾರ್ಹವಾದುವು,
ಅವುಗಳನ್ನು ನಂಬಿ ಆ ನಂಬಿಕೆಯಂತೆ ನಡೆದರೆ ನಮಗೆ ಶ್ರೇಯಸ್ಸುಂಟಾಗುವುದಿಲ್ಲ, ಸುಖ ದೊರೆಯುವುದಿಲ್ಲ ಎಂಬುದು ನಿಮಗೆ ಅರಿವಾದಾಗ ಅವುಗಳನ್ನು ತೊರೆಯಬೇಕು. ”

“ನಾನು ಹೇಳಿದೆ ಎಂಬ ಒಂದೇ ಕಾರಣಕ್ಕೆ ನನ್ನ ಮಾತುಗಳನ್ನು ನಂಬಬೇಡಿ. ಒರೆಗೆ ಹಚ್ಚಿ ಚಿನ್ನವೋ, ಅಲ್ಲವೋ ಎಂದು ಪರೀಕ್ಷಿಸಿ ಒಪ್ಪುವಂತೆ ನಿಮ್ಮ ಮತಿಯ ಒರೆಗಲ್ಲಿಗೆ ಉಜ್ಜಿ ನೋಡಿ. ನಿಮಗೆ ಸತ್ಯ ಎಂದು ಕಂಡು ಬಂದರೆ ಅನುಸರಿಸಿ, ಇಲ್ಲ ಎಂದಾದಲ್ಲಿ ನೀವು ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ” ಎಂದು ಮುಕ್ತತೆಗೆ ತೆರವು ಮಾಡಿದವನು ಒಬ್ಬನೇ. ಆತ ತನ್ನ ಬಿಕ್ಕುಗಳಿಗೆ ಹೇಳಿರುವ ಮಾತುಗಳೂ ಮನನೀಯವಾದುವು. “ಆನಂದ, ಪ್ರತಿಯೊಬ್ಬರೂ ನಿಮಗೆ ನೀವೇ ದೀಪಗಳಾಗಿ. ನಿಮಗೆ ನೀವೇ ಆಶ್ರಯದಾತರಾದ ಶರಣರಾಗಿ, ಧರ್ಮಕ್ಕೆ ಶರಣಾಗಿ
ಮತ್ತಾವುದಕ್ಕೂ ಶರಣಾಗುವುದು ಬೇಡ. ಈಗಾಗಲೀ, ನಾನು ಹೋದ ಮೇಲಾಗಲೀ, ಬೇರಾವುದಕ್ಕೂ ಶರಣಾಗದೆ ತಮಗೆ ತಾವೇ ದೀಪವಾಗುವ, ಧರ್ಮವನ್ನೂ ದೀಪವನ್ನಾಗಿ ಮಾಡಿಕೊಳ್ಳುವ ಬಿಕ್ಕು ಶ್ರೇಷ್ಕ ಬಿಕ್ಕುವಾಗುತ್ತಾನೆ” ಎಂದು ಧಾರ್ಮಿಕ ಸ್ವಾತಂತ್ರ್ಯದ ಸರ್ವೋತ್ಕೃಷ್ಟತೆಯನ್ನ ಗೌತಮ ಬುದ್ಧ ಸಾರಿದ.

ಸ್ವಾಮಿ ವಿವೇಕಾನಂದರೂ ಕೂಡ ಧರ್ಮವೆಂದರೆ ಸಾಕ್ಷಾತ್ಕಾರ, ತನ್ನನ್ನು ತಾನು ದರ್ಶಿಸುವಂತೆ, ಕಂಡುಕೊಳ್ಳು- ವಂತೆ ಮಾಡುವುದು ಧರ್ಮದ ಗುರಿ ಎಂದಿದ್ದಾರೆ. ವಿಶ್ವ ಎನ್ನುವುದು ಸ್ವಾತಂತ್ರ್ಯದಲ್ಲಿ ಉದಯವಾಗಿದೆ. ಸೃಷ್ಟಿಯ ಮತ್ತು ಮನುಷ್ಕನ ಹೋರಾಟ ಈ ಸ್ವಾತಂತ್ರ್ಯ ಸಿದ್ಧಿಗಾಗಿ. ಋಷಿ, ಮುನಿ, ದೇವರು ಯಾರಾದರಾಗಲೀ ಕಟ್ಟುಗಳನ್ನು ವಿಧಿಸಲು ಸಾಧ್ಯವಿಲ್ಲ ಸ್ವಾತಂತ್ರ್ಯವೇ ಈ ವಿಶ್ವದ ಗುರಿ, ಎನ್ನುವುದು ಅವರ ಪಲ್ಲವಿಯಾಗಿತ್ತು. ”

ಬುದ್ಧನ ಉಪದೇಶದ ಸಾರಸರ್ವಸ್ವವೂ ಅದೇ ಆಗಿದ್ದಕಾರಣ ವಿವೇಕಾನಂದರು ಬುದ್ಧನನ್ನು ಕುರಿತು “ಬುದ್ಧ ವೇದಕ್ಕಾಗಲೀ, ಜಾತಿಗಾಗಲೀ, ಪುರೋಹಿತರಿಗಾಗಲೀ, ಆಚಾರಕ್ಕಾಗಲೀ, ಬಾಗಲಿಲ್ಲ. ವಿಚಾರ ನಿಮ್ಮನ್ನು ಒಯ್ಯುವವರೆಗೆ ನಿರ್ಭಯವಾಗಿ ಅದನ್ನು ಅನುಸರಿಸಿ ಎಂದನು. ಸತ್ಯಾನ್ವೇಷಣೆಯಲ್ಲಿ ಇಂತಹ ದಿಟ್ಟತನ ಮತ್ತು ಪ್ರಪಂಚದ ಸರ್ವರ ಮೇಲೆಯೂ ಪ್ರೇಮ ಇದ್ದಂತಹ ಮತ್ತೊಬ್ಬ ವ್ಯಕ್ತಿಯನ್ನು ಪ್ರಪಂಚ ಮತ್ತೆಂದೂ ಕಂಡಿಲ್ಲ. ಧಾರ್ಮಿಕ ಪ್ರಪಂಚದಲ್ಲಿ ವಾಷಿಂಗ್ ಟನ್ ಇದ್ದಂತೆ.” ಎಂದಿದ್ದಾರೆ.

ಬುದ್ಧ ತನ್ನ ಜೀವಿತ ಕಾಲದಲ್ಲಿ ಆಮ್ರವನದಲ್ಲಿ ತಂಗಿದ್ದ. ಆ ವನ ಚುವನ ಎಂಬ ಕಮ್ಮಾರನ ಮಗನಿಗೆ ಸೇರಿತ್ತು. ಚುಂದನ ಅಪೇಕ್ಷೆಯಂತೆ ಆತನಿಗೆ ಧರ್ಮ ಬೋಧನೆ ಮಾಡಿದ. ಆತ ಭಿಕ್ಷೆಗೆ ಬರುವಂತೆ ಆಮಂತ್ರಣ ನೀಡಿದ. ಬುದ್ಧ ಒಪ್ಪಿದ. ಬೆಳಗಾಯಿತು. ಚುಂದನ ಬೀಡಿಗೆ ಹೋಗಿ ಆತನೀಡಿದ “ಸೂಕರ ಮದ್ದವ’ (ಹಂದಿಮಾಂಸ) ತಿಂಡಿಯನ್ನು ತಿಂದರು. ಹಿರಣ್ಯಾವತಿ ನದಿಯ ಆಚೆಯ ದಡಕ್ಕೆ ಹೋದರು, ‘ಆನಂದ, ಆ ಯಮಳ ಸಾಲು ವೃಕ್ಷಗಳ ನಡುವೆ ನಾನು ಮಲಗಲು ವ್ಯವಸ್ಥೆ ಮಾಡು, ಉತ್ತರ ದಿಕ್ಕಿಗೆ ತಲೆಹಾಕಿ ಮಲಗುವಂತೆ ಅಣಿಮಾಡು, ನನಗೆ ಆಯಾಸವಾಗಿದೆ. ಇಲ್ಲಿಯೇ ಮಲಗುತ್ತೇನೆ. ” ಎಂದು ಮಲಗಿದ. ವ್ಶೆಶಾಖ ರಾತ್ರಿಯ ಮಧ್ಯಭಾಗದ ನಂತರ ಈ ದಿವ್ಯಾನಂದ ಪುರುಷ ತನ್ನ ಕೊನೆಯ ಉಸಿರನ್ನೆಳೆದ. ಯಾವ ಪವಾಡಗಳನ್ನೂ ಮಾಡದೆ ಸಾಮಾನ್ಯರಂತೆ ಸತ್ತ. ಅದು ಬುದ್ಧನ ವ್ಯಕ್ತಿತ್ವದಿಂದ ಹೊರಹೊಮ್ಮಿದ ಮತ್ತೊಂದು ಶ್ರೇಷ್ಠಗುಣ.

ವೈಶಾಖ ಶುದ್ಧ ಪೂರ್ಣಿಮೆಯ ದಿನ ಲುಂಬಿನಿ ವನದಲ್ಲಿ ಜನಿಸಿದ ಸಿದ್ಧಾರ್ಥ ಪೂರ್ಣಿಮೆಯ ದಿನವೇ ಆದ್ರುವನದಲ್ಲಿ ಗೌತಮ ಬುದ್ಧನಾಗಿ ಸತ್ತ. ಮನೆಯಲ್ಲಿ ಹುಟ್ಟಲಿಲ್ಲ. ಮನೆಯನ್ನೂ ಕಟ್ಟಲಿಲ್ಲ. ಮಾನವೀಯತೆಯೆ ಆತನ ಮಹಾಮನೆ.

ಬಿಂಬಸಾರನ ಮಗ ಆಶೋಕಚಕ್ರವರ್ತಿಯ ಕಾಲದಲ್ಲಿ ಬೌದ್ಧ ಧರ್ಮ ಮಹತ್ವ ಪಡೆಯಿತು. ಅಶೋಕನ ಕಾಲದ ಸ್ಮಾರಕಸ್ಥಂಭದ ಸಿಂಹಶೀರ್ಷಿಕೆ ಇಂದು ಭಾರತದ ರಾಷ್ಟ್ರ ಲಾಂಚನವಾಗಿದ್ದು ಅದರಲ್ಲಿದ್ದ ಧರ್ಮಚಕ್ರ ಇಂದು ರಾಷ್ಟ್ರ ಧ್ವಜದ ಮಧ್ಯ ರಾರಾಜಿಸುತ್ತಿದೆ. ಬುದ್ಧನ ಬೋಧನೆಗಳಿಗೆ ಬೌದ್ಧ ಧರ್ಮಕ್ಕೆ ಅಳಿವಿಲ್ಲ. ಪುರಾತನ ಕಾಲದಲ್ಲಿಯೇ ಆಫ್ಘಾನಿಸ್ಥಾನ, ಈಜಿಪ್ಟ್, ಮುಂತಾದ ಪಶ್ಚಿಮ ದೇಶಗಳಿಗೂ ಹರಡಿ ಇಂದು ಚೈನಾ, ಜಪಾನ್, ಥಾಯ್‌ಲ್ಯಾಂಡ್, ಸಿಂಹಳ ರಾಷ್ಟ್ರಗಳಲ್ಲಿ ರಾಷ್ಟ್ರೀಯ ಧರ್ಮವಾಗಿ ಮೆರೆದಿದೆ.

“ಬೌದ್ಧ ಧರ್ಮ ಆಹುತಿಯನ್ನು ಸ್ವೀಕರಿಸುವ ದೇವತೆಗಳ ಸಿಂಹಾಸನವನ್ನು ಕದಲಿಸಿ ಸ್ವರ್ಗಧಾಮದಿಂದ ಉರುಳಿಸಿತ್ತು. ದೇವತೆಗಳ, ಬ್ರಹ್ಮನ ಅಥವಾ ಇಂವ್ರನ ಪದವಿಗಿಂತ ಬುದ್ಧನಾಗುವುದು ಉತ್ತಮ ಪದವಿ. ಬ್ರಹ್ಮ-ಮತ್ತು-ಇಂದ್ರ ಇವರು ಮಾನವದೇವನಾದ ಬುದ್ಧನ ಪದತಲದಲ್ಲಿ ಪ್ರಾರ್ಥಿಸಲು ತಮ್ಮಲ್ಲಿ ಸ್ಪರ್ಧಿಸುವರು. ಬುದ್ಧ ತಾನು ಪ್ರತ್ಯೇಕ ಎಂದು ಒಪ್ಪಿಕೊಳ್ಳಲಿಲ್ಲ. ನಾನು ಅದಕ್ಕಾಗಿ ಅವನನ್ನು ಆರಾಧಿಸುಪುದು. ನಾವು ನಮ್ಮ ಸ್ವಂತಕಾಲಿನ ಮೇಲೆ ನಿಲ್ಲಬೇಕೆಂದು ಆತ ಪ್ರಪಂಚದ ಇತರ ಗುರುಗಳೆಲ್ಲರಿಗಿಂತ ಹೆಚ್ಚಾಗಿ ಬೋಧಿಸಿದನು. ಅವನು ನಮ್ಮನ್ನು ತೋರಿಕೆಯ ವ್ಯಕ್ತಿತ್ವ ಬಂಧನದಿಂದ ಪಾರುಮಾಡಿದುದು ಮಾತ್ರವಲ್ಲ, ದೇವರುಗಳೆಂಬ ಅಗೋಚರ ವ್ಯಕ್ತಿಗಳ ಹಿಡಿತದಿಂದ ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದ. ನಿರ್ವಾಣವೆಂಬ ಆ ಅವಸ್ಥೆಯನ್ನು ಪಡೆಯಲು ಎಲ್ಲರಿಗೂ ಆಹ್ವಾನವಿತ್ತ. ಎಲ್ಲರೂ ಒಂದು
ದಿನ ಅದನ್ನು ಪಡೆಯಲೇ ಬೇಕು. ಅದೇ ಮಾನವನ ಪರಮ ಗುರಿ. ” ಇವು ಬುದ್ಧನನ್ನು ಕುರಿತ ವಿವೇಕಾನಂದರ ಅಮೃತ ನುಡಿಗಳು.

ಬುದ್ಧ ಶರಣಂ ಗಚ್ಛಾಮಿ

 

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಕ್ಷಗಾನ ಶಿಕ್ಷಣ
Next post ಸಲಹಿದ ಸಸಿ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

cheap jordans|wholesale air max|wholesale jordans|wholesale jewelry|wholesale jerseys