
ಬಿಕ್ಷುಕರೊಂದಿಗೆ
ಮೂವತ್ತು ವರ್ಷದ ನನ್ನ ಸ್ವತಂತ್ರ ಭಾರತದಲ್ಲಿ ಹೆಮ್ಮೆಯಿಂದ ತಲೆ ಎತ್ತಿ ತಿರುಗಬೇಕಾದವನು ಕುಗ್ಗಿ ಕುಸಿದು ಹೋಗುವಂಥ ಅಮಾನವೀಯ ಅಂತರಗಳ ನಡುವೆ ಉಸಿರಾಡುತ್ತಿದ್ದೇನೆ. ವೈಭೋಗದಲ್ಲಿರುವ ಸ್ವಪ್ರತಿಷ್ಟಿತ ರಾಜಕಾರಣಿಗಳು ಒಂದು ಕಡೆ, ಅವರ ಹಿಡಿತದಲ್ಲಿ ನರಳುತ್ತಿರುವ ಕೋಟ್ಯಾಂತರ ಅಸಹಾಯಕ ಜನತೆ ಮತ್ತೊಂದು ಕಡೆ; ಭೂಮಾಲೀಕನ ಗರ್ವದ ಚಾವಟಿಯ ನೋಟ ಒಂದು ಕಡೆ; ಬೆದರಿ ಬೆನ್ನು ಬಾಗಿಸಿರುವ ಅಶಕ್ತ ಗುಲಾಮರು […]