ರಾತ್ರಿ ಮಲಗುವವರೆಗೂ
ಅಜ್ಜನ ಊರಲ್ಲಿ
ಊರಿಗೆ ಊರೇ
ತೆರೆದ ಬಾಗಿಲುಗಳ
ಸದಾ ಸ್ವಾಗತ,
೨೪ ಗಂಟೆಗಳ ಕಾಲ
ಸುಭದ್ರ ಬಾಗಿಲು ಕಾವಲುಗಾರ
ಇಲ್ಲಿ ನನ್ನೂರಲ್ಲಿ.


ನಮ್ಮನ್ನು ನಾವು
ಕಾಯ್ದುಕೊಳ್ಳುವುದಕ್ಕಿಂತಲೂ
ಹೆಚ್ಚಾಗಿ
ಬಾಗಿಲು ಚಿಲಕ ಕೀಲಿಗಳೇ
ನಮ್ಮನ್ನು ಕಾಯ್ದು
ಧೈರ್‍ಯ ಕೊಡುತ್ತವೆ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)