ಶರಣನ ಕುರುಹು

ಜೀವಜ೦ಗುಳಿಯಿ೦ದ ಎದ್ದುನಿಂತ ಒಬ್ಬ ಇಳಿವಯಸ್ಸಿನ ಗಂಭೀರನು ಮುಂದೆ ಬಂದು-“ಜಗಜ್ಜನನಿಯ ಬಾಯಿಂದ ಶರಣರ ಮೇಲ್ಮೆ-ಹಿರಿಮೆಗಳನ್ನು ಕೇಳಿ ಧನ್ಯರಾದೆವು. ಸಂಗಮಶರಣರೇ, “ಅಂಥ ಶರಣನ ಕುರುಹನ್ನು ಅರಿತುಕೊಳ್ಳಬೇಕೆಂಬ ಆಶೆಯುಂಟಾಗಿದೆ. ದಯೆಯಿಟ್ಟು ವಿವರಿಸುವಿರಾ ?” ಎಂದು ಕೇಳಿಕೊಂಡನು.

ಸಂಗಮಶರಣನು ಪರಮೇಶ್ವರಿಯನ್ನು ವಂದಿಸಿ-“ವಿಶ್ವಜನನೀ, ಇದು ತಾವೊಪ್ಪಿಸಿದ ಮಣಿಹ. ತಮ್ಮ ಚರಣದುಂಡಿಗೆಯೊತ್ತಿಸಿಕೊಂಡ ಕಪಿಲೆ ನಾನು. ತಮ್ಮ ಸಮಕ್ಷಮದಲ್ಲಿ ಶಾಶ್ವತ ಸತ್ಯವನ್ನು ವಿವರಿಸುವ ಶಕ್ತಿಯನ್ನು ದಯೆಪಾಲಿಸಿರಿ. ಇದರಲ್ಲಿಯ ಹಾನಿ ವೃದ್ಧಿ ನಿಮ್ಮವು” ಎಂದು ಮೊದಲಿಗೆ ಪ್ರಾರ್ಥಿಸಿಕೊಂಡನು.

“ಅಂಜದಿರ೦ಜದಿರು ಮಗನೇ, ಜಗವೆಲ್ಲ ಮೆಚ್ಚುವಂತೆ ನಿನ್ನನ್ನು ನಡೆಸಿ ಕೊಂಡು ಹೋಗುವೆನು” ಎನ್ನುವ ಅಭಯವಾಣಿ ಅಂತರಂಗದಲ್ಲಿ ಉಲಿಯಲು ಸಂಗಮಶರಣನು ಜೀವಜಂಗುಳಿಯ ಸಂದೇಹಕ್ಕೆ ಪಡಿನುಡಿಯುವುದಕ್ಕೆ ಆರ೦ಭಿಸುವನು.

“ಜೀವಜಂಗುಳಿಯ ಸ್ವರೂಪದಲಿರುವ ಎನ್ನ ನಚ್ಚಿನ ಕೂಡಲಸಂಗ, ಕೂಡಲಚೆನ್ನಸಂಗ, ಗುಹೇಶ್ವರಾ, ಕಪಿಲಸಿದ್ಧ ಮಲ್ಲಿಕಾರ್ಜುನ, ಚೆನ್ನಮಲ್ಲಿಕಾರ್ಜುನ, ನಿನ್ನ ಈ ಭಕ್ತನು ಬಾಳೆಯಂತೆ ಬಾಗಿನಿಂತು, ನಿನ್ನ ಸ್ವರೂಪವನ್ನೇ ನಿನ್ನ ಮುಂದೆ ಚಿತ್ರಿಸಿ ಪಾಠವನ್ನು ಒಪ್ಪಿಸುತ್ತಿರುವನು; ಸ್ವೀಕರಿಸು.

ವೇದಂಗಳಿಗೆ ಅಭೇಧ್ಯನಾದ ಶಿವನ ಭೇದಿಸಿ ಕಂಡರು ನೋಡಾ ಶರಣರು.
ಶಾಸ್ತ್ರಂಗಳಿಗೆ ಅಸಾಧ್ಯನಾದ ಶಿವನ ಸಾಧಿಸಿ ಕಂಡರು ನೋಡಾ ಶರಣರು.
ಆಗಮಂಗಳು ಇತಿಹಾಸಕ್ಕಸಾಧ್ಯನಾದ ಶಿವನ ಅರಸಿ ಕಂಡರು ನೋಡಾ ಶರಣರು.
ಅಗಮ್ಯ ಅಪ್ರಮಾಣನಾದ ಪರಶಿವನ ಪ್ರಮಾಣಿಸಿ ಕಂಡು,
ಒಳಹೊಕ್ಕು ಬೆರೆಸಿದರು ನೋಡಾ ನಮ್ಮ ಶರಣರು ಆಖಂಡೇಶ್ವರಾ.

ಶರಣರ ಬಾಳು ಅರುಹಿನ ದಾರಿ. ಅರಿತರೆ ಶರಣ, ಮರೆತರೆ ಮಾನವ. ಅಹುದು. ಅವರು ಏನು ಅರಿತವರು ?

ಮಣಿಗಳ ಸೂತ್ರದಂತೆ ತ್ರಿನಯನ ಇರುವುದನ್ನು ಅರಿತವರು.
ಎಣಿಸುವಡೆ ತನು ಭಿನ್ನ, ಆತ್ಮನೊಬ್ಬನೇ- ಎ೦ಬುದನ್ನು ಅರಿತರವರು.
ಅಣು ರೇಣು ಮಧ್ಯದಲಿ ಗುಣಭರಿತ ನೀನೆಂದು ಮಣಿವುತ್ತಿರ್ಪುವನ್ನು ಅರಿತವರು.

ಗಿಡ-ಮರಗಳು ಹೂ-ಹಣ್ಣುಗಳನ್ನು ಕಾಲವರಿತು ತೋರ್ಪಡಿಸುವಂತೆ, ಪರಮೇಶ್ವರನ ಪ್ರಕೃತಿ-ಸ್ವಭಾವಗಳು ದಿವ್ಯಸಂಕಲ್ಪದ ಕಾಲಕ್ಕೆ ಪ್ರಕಟಗೊಳ್ಳು
ತ್ತವೆ.. ಲೀಲೆಯಾದೊಡೆ ಉಮಾಪತಿ; ಲೀಲೆ ತಪ್ಪಿದರೆ ಸ್ವಯ೦ಭೂ.

ದೇವದೇವನು ಫನಗಂಭೀರನಾದ ಮಹಾಸಮುದ್ರ ಇದ್ದ ಹಾಗೆ. ಸಮುದ್ರದಲ್ಲಿ ತೆರೆ, ಉಬ್ಬರ, ಗುರುಳೆಗಳಲ್ಲದೆ ಇನ್ನೇನು ಹುಟ್ಟಿಕೊಳ್ಳುವುಪು?
ಆತ್ಮಾಂಬುಧಿಯಲ್ಲಿ ಕೋಟಿಬ್ರಹ್ಮಾಂಡಗಳು ಕಾಣಿಸಿಕೊಂಡವು. ಆತ್ಮ ಬೇರೆ ಬ್ರಹ್ಮಾಂಡ ಬೇರೆ ಆಯಿತೇ?

ಕಡಲು ಬೇರೆ, ತೆರೆ ಬೇರೆ ಎಂಮ ಶರಣನು ತಿಳಿಯಲಾರನು. ಕಡಲಲ್ಲಿ ಹುಟ್ಟಿ, ಕಡಲಲ್ಲಿ ಆಡಿ, ಕಡಲಲ್ಲಿಯೇ ಬೆರೆತುಹೋಗುವೆನೆ೦ದು ಶರಣನು ತಿಳಿದಿರುತ್ತಾನೆ. ಬರಿಯ ತಿಳಕೊಂಡು ಮರೆತಿರುವುದಿಲ್ಲ. ಆ ತಿಳುವಳಿಕೆಯ ಎಚ್ಚರದಲ್ಲಿ ಬಾಳುತ್ತಾನೆ; ಬದುಕುತ್ತಾನೆ. ಆದ್ದರಿಂದ ಅವನು ಅರಿತ ಶರಣ, ಮರೆತ ಮಾನವನಲ್ಲ.

ನಿಜದ ನೆನಹಿನಲ್ಲಿಯೇ ಕ್ಷಣ-ಅರೆಕ್ಷಣಗಳನ್ನು ಕಳೆಯುವ ಎಚ್ಚರಿಕೆಯು ಶರಣನಿಗೆ ಉ೦ಟು. ಆ ಎಚ್ಚರಿಕೆ ಅರುಹಿನ ಬೆಳಕು. ಅದು ಶಿವಲಿಂಗ ಪ್ರಕಾಶ.
ಆ ವ್ರಕಾಶದಲ್ಲಿಯೇ ಸದಾ-ಸನ್ನಿಹಿತನು-ಶರಣನು.

ಶರಣನು ಶರೀರವ ಮರೆಗೊಂಡು ಪರಮಪಾವನಮೂರ್ತಿ ಪರಾತ್ಪರ ತಾನು ತಾನಾಗಿರುವನು. ಅಲ್ಲಿ ಅಹಂಕಾರವೆಂಬುದು ಹುಡುಕಿದರೂ ಸಿಗುವಂತಿಲ್ಲ.

ಅಹಂಕಾರವನೆ ಮರೆದು ದೇಹಗುಣಂಗಳನೆ ಜರೆದು
ಇಹಪರನೇ ತಾನೆಂದರಿದ ಕಾರಣ, ಸೋಹಂಭಾವ ಸ್ಥಿರವಾಯಿತು.
ಸಹಜ ಉದಯದ ನಿಲವಿಂಗೆ ಮಹಾಘನಲಿಂಗದ ಬೆಳಗು
ಸ್ಥಾಯಿಕವಾದ ಕಾರಣ, ಗುಹೇಶ್ವರಾ ನಿಮ್ಮ ಶರಣನುಪಮಾತೀತನು.

ಶರಣನ ಕುರುಹು ಇನ್ನೂ ಹೇಗೆ೦ದರೆ-

ಸತ್ತು ಹುಟ್ಟುವನಲ್ಲ, ಸಂದೇಹ ಸೂತಕಿಯಲ್ಲ.
ಸಾಕಾರ ನಿರಾಕಾರನಲ್ಲ ನೋಡಯ್ಯ.
ಕಾಮವಂಚಕನಲ್ಲ, ಜೀವವಂಚಕನಲ್ಲ
ನಿರಂತರ ಸಹಜ ನೋಡಯ್ಯ,.
ಶಂಕೆಯಿಲ್ಲದ ಮಹಿಮನು ಕೂಡಲಸಂಗಮದೇವನ
ಶರಣನುಪಮಾತೀತನು ನೋಡಯ್ಯ.

ಹಾಗೆ ನೋಡಿದರೆ ಇವೆಲ್ಲವೂ ಶರಣನಿಂದಲೇ ಮೈತಾಳಿದೆ. ಶರಣನಿಂದಲೇ ಮೈದಾಳಿ, ಶರಣನಿಂದಲೇ ಮೈದೊಟ್ಟು, ಶರಣಧಿ೦ವಲೇ ಮೈಚಳಿ ಬಿಟ್ಟು, ಶರಣನಿಂದಲೇ ಬಂದುದಕೆಲ್ಲ ಜಗತ್ತು ಮೈಗೊಟ್ಟು ನಿಂತಿದೆ. ಲೀಲೆಗೆ ಮೈತಪ್ಪಿಸದೆ ನಿಂತಿದೆ. ಶರಣನೇ ಬ್ರಹ್ಮನಾಗಿ ಲೋಕವನ್ನು ಹುಟ್ಟಿಸುವ ಕೆಲಸ ಮಾಡಿದನು. ಶರಣನೇ ವಿಷ್ಣುವಾಗಿ ಲೋಕವನ್ನು ಶಾಂತಿ-ಸೈರಣೆ ಗಳಿಂದ ಸಂತಯಿಸಿವನು. ಶರಣನೇ ರುದ್ರನಾಗಿ ಲೋಕದ ಮೇಲೆ ಸಿಡಿಲುಗುಳಿದನು.

ಬಯಲು ಮೂರ್ತಿಯಾಗಿ ನಿಂದನೊಬ್ಬ ಶರಣ.
ಆತನ ವಿದ್ಯಾಬುದ್ಧಿಯಿಂದ ಹುಟ್ಟಿದಾತ ಬ್ರಹ್ಮ,
ಆತನ ಶಾಂತಿಸೈರಣೆಯಿಂದ ಹುಟ್ಟಿದಾತ ವಿಷ್ಣು,
ಆತನ ಕೋಪ-ಕ್ರೋಧದಿಂದ ಹುಟ್ಟಿದಾತ ರುದ್ರ.
ಈ ಮೂರು ಪೀಠವಂತಿರಲಿ.
ಆ ಶರಣನರಿದು ಶರಣೆನುತಿರ್ದೆನಯ್ಯ ಕೂಡಲಸಂಗಮದೇವಾ.

ಈ ಜಗತ್ತಿನಲ್ಲಿ ಏನಿಲ್ಲ? ಇದ್ದುದನ್ನು ಸರಿಯಾಗಿ ಅರಿತುಕೊಳ್ಳದೆ ಲೋಕ ಕೆಡುತ್ತಿದೆ ಇದ್ದುದನ್ನು ತಿಳಕೊಳ್ಳದೆ ಇಲ್ಲದ್ದೊಂದು ತಿಳಕೊಂಡು ಜನ ಕೆಡುತ್ತಿದೆ. ತಿಳಿದುಕೊಂಡರೆ ಕತ್ತಲಲ್ಲಿಯೂ ಬೆಳಕು ತೋರುವದು. ತಿಳಿದರೆ ಕತ್ತಲೆಯೇ ಬೆಳಕಾಗುವದು. ಕಾಯದ ಕತ್ತಲೆ ಕಳೆಯುವದಕ್ಕೆ ತಿಳುವಿನ ಬೆಳಕು ಬೇಕು. ಮನದ ಕಾಳಿಕೆ ಕಳೆಯುವುದಕ್ಕೆ ತಿಳುನಿನ ಥಳಕು ಮುಂಚೆ ಬೇಕು ಅದು ಶರಣರ ಸೊತ್ತು. ಶರಣರು ಮೆಟ್ಟಿದ ಧರೆ ಪಾವನ. ಶರಣರು ಇದ್ದ ಪುರವೇ ಕೈಲಾಸ. ಶರಣರು ನಿಂದುದೇ ನಿಜವಾಸ. ಶರಣನಾದ ಬಸವಣ್ಣನಿದ್ದ ಕ್ಷೇತ್ರವು ಅವಿಮುಕ್ತ ಕ್ಷೇತ್ರವಾಯಿತಲ್ಲವೇ?

ತಿಳಿಯದಿದ್ದಾಗ ಕೇಳಿದರೆ ತಿಳುವಳಿಕೆ ಹೇಳುವರು ಶರಣರು. ಆಚಾರಕ್ಕೆ ತಾಳ ಕಲಿಸಲು ಬಲ್ಲವರು ಶರಣರು. ವಿಚಾರದಲ್ಲಿ ತೂಕ ನಿಲ್ಲಿಸಲು ಬಲ್ಲವರು ಶರಣರು. ತಪ್ಪಿದಲ್ಲಿ ಕೇಳುವುದಕ್ಕೆ ಶರಣರಿದ್ವಾರೆ. ಅವರಿವರನ್ನು ಕೇಳುವುದೇಕೆ?

ಕೆರೆ ಹಳ್ಳ ಬಾವಿಗಳು ಮೈದೆಗೆದರೆ ಗುಳೃ, ಗೊರಚೆ,
ಚಿಪ್ಪು ಕಾಣಬಹುದು,
ವಾರಿಧಿ ಮೈದೆಗೆದರೆ ರತ್ನಂಗಳು ಕಾಣಬಹುದು.
ಕೂಡಲಸಂಗನ ಶರಣರು ಮನದೆರೆದು ಮಾತಾಡಿದರೆ
ಲಿಂಗವ ಕಾಣಬಹುದು.
ಶರಣರ ವಾದ ಮೋಕ್ಷದ ಬೀಡು,
ಶರಣರ ವಾದ ಲಿಂಗದ ನಾಡು.
ಶರಣರ ವಾದ ಕಾಳಲಿಂಗಿ ದೇವನು ಮಾಡಿವ
ಮಾಯೆಯ ಕೇಡು.
.
ಶರಣನು ಮಾನನರಂತೆ ಕಂಡರೂ ಅವನು ಮಾನವನಲ್ಲ. ಅವನ ನಿಲುಮೆ ಬೇರೆ. ಶರಣನು ಎಲ್ಲರಂತೆ ಊಟ-ನಿದ್ರೆ ಮಾಡುತ್ತಿದ್ದರೂ ಅವನು ಕೂಳಬಕ್ಕನಲ್ಲ. ನಿದ್ರೆಯ ವಿಷಯದಲ್ಲಿ ಕುಂಭಕರ್ಣನ ತಳಿಯವನಲ್ಲ. ಅವನ ಒಲುಮೆ ಬೇರೆ. ಶರಣ ನಿದ್ರೆಗೈದರೆ ಜಪವಾಗುತ್ತದೆ; ಎಚ್ಚರವಿದ್ದರೆ ಶಿವರಾತ್ರಿಯಾಗುತ್ತದೆ. ಅವನು ನಡೆದರೆ ಹಾದಿ, ನುಡಿದರೆ ವೇದ ಆಗುತ್ತದೆ. ಆತನುಂಡರೆ ಮೂರುಲೋಕಗಳೆಲ್ಲ ತೃಪ್ತವಾಗುತ್ತವೆ.. ರೂಪಿಗಾಗಿ ಅವನನ್ನು ಮಾನವನೆನ್ನಲಿಕ್ಕೆ ಆಗದು; ಅವನು ಕಾಣುವಷ್ಟೇ ಇರುವದಿಲ್ಲ. ಕಾಣುವದರ ಹಿಂದೆ ಕಾಣದ್ದೊಂದು ಉಂಟು.

ಕಲ್ಪವೃಕ್ಷ ಮರವೆನ್ನಬಹುದೇ?
ಕಾಮಧೇಸು ಪಶುವೆನ್ನಬಹುದೇ?
ಪರುಷ ಪಾಷಾಣನೆನೃಬಹುದೇ ?
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ನುಂಗಿದವರೆಲ್ಲ
ಮಾನವರೆನ್ನಬಹುದೇ ?

ಆಚಾರ–ವಿಚಾರ ತಪ್ಪಿದಲ್ಲಿ ಶರಣರ ವಾದ ಅವಶ್ಯ. ಮತ್ತೊಂದರೊಡನೆ ವಾದಿಸಿ ಪ್ರಯೋಜನವೇ ಇಲ್ಲ. ಆದರೆ ವಾದವು ಸರಸಕ್ಕೆ ಇಳಿಯಬಾರದು.
ಶರಣರೊಡನೆ ಸರಸ ಸಲ್ಲದು. ಅದು ವಿರಸದ ದಾರಿ. ಅರಗಿನ ಗೊಂಬೆಯನ್ನು ಉರಿಯ ನಾಲಗೆಯಿಂದ ತಿವಿದು ಮಾತಾಡಿಸಿದರೆ ಫಲವೇನಾದೀತು? ಬೆಣ್ಣೆಯಿಂದ ಮಾಡಿದ ಬೆನಕನಿಗೆ ಕೆಂಡದ ಉಂಡಾಳಿಯಿ೦ದ ಚೆಲ್ಲಾಡಿದರೆ ಗತಿಯೇನಾದೀತು?

ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸಿಕೊಂಡಂತೆ,
ಉರಿವ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕಬಿಡಿಸುವಂತೆ,
ಹುಲಿಯ ಮೀಸೆಯ ಹಿಡಿಡುಕೊಂಡು ಒಲಿದುಯ್ಯಲನಾಡುವಂತೆ,
ಕೂಡಲಸಂಗನ ಶರಣರೊಡನೆ ಮೆರೆದು ಸರಸವಾಡಿದರೆ
ಸುಣ್ಣದಕಲ್ಲು ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ.

ಶರಣನಿಗೆ ಮಾನವನೆನ್ನಲಾಗದು. ಸರಿ, ಮಾನನರೂಪದಲ್ಲಿದ್ಧರೂ
ಅವನಲ್ಲಿ ಮಾನವ ಸ್ವಭಾವವಿರುವುದಿಲ್ಲ. ಆದರೆ ಮಾನವರೂಪವಿರುವಲ್ಲೆಲ್ಲ
ಶರಣತ್ವವಿರಬಲ್ಲದೇ-ಎ೦ಬ ವ್ರಶ್ನೆಯೇಳುವುದು ವಾಸ್ತವಿಕವಾಗಿದೆ. ಅಹುದು,
ಮಾನವರೂಪದೊಡನೆ ಶರಣತ್ವವೂ ಅನುಷಂಗಿಕವಾಗಿ ಬಂದಿರಬಲ್ಲದು.

ಮಗು ಮಾನವನ ತ೦ದೆಯಾಗಿರುವಂತೆ, ಮಾನವನು ಶರಣಶಿಶುವೂ ಆಗಿದ್ದಾನೆ.  ವರುಷದ ಫುತ್ಥಳಿಗೆ ಕಬ್ಬುನದ ಆಛರಣವುಂಟೇ ಅಯ್ಯ? .   ಮಗುವಿನ ಅಹಂಕಾರದ ಹೊದಿಕೆಯಲ್ಲಿ ಏನೇನು ಹುದುಗಿದೆ ಗೊತ್ತೆ:?

ತಿಳಕೊಳ್ಳುವ ಒಲವು ತಲೆಯಲ್ಲಿರುವಂತೆ ಪ್ರೀತಿಸುವ ನಲಿವು ಹೃದಯದಲ್ಲಿರುತ್ತದೆ. ಚಲನವಲನಮಾಡುವ ಬ೮ವು ತೋಳುಗಳಲ್ಲಿರುತ್ತದೆ. ಬುದ್ಧಿ-ಪ್ರೇಮ-ಕೃತಿಗಳಿಗೆ ಅವು ಮೂರು ಕೇಂದ್ರ್ರಸ್ಥಾನಗಳಾಗಿವೆ. ಅಹಂಕಾರದ ಮುಔಕಿನಲ್ಲಿಯೂ ಅವು ಮಿಸುಕಾಡುತ್ತಲೇ ಇರುತ್ತವೆ. ಅವೇ ಜ್ಞಾನ-ಭಕ್ತಿ.ಕರ್ಮಗಳಿಗೆ ನೆಲೆಯಾಗಿವೆ.

ಮಾನವನ ಶರೀರರಚನೆಯಲ್ಲಿ ಜ್ಞಾನೇಂದ್ರಿಯದ ಯ೦ತ್ರವು ತಲೆಯಲ್ಲಡಗಿ ಎಲ್ಲಕ್ಕೂ ಮೇಲಿದೆ; ಉತ್ತಮಾಂಗದಲ್ಲಿದೆ. ಕಾರ್ಯಮಾಡುವ ಕೈ-ಕಾಲುಗಲು ಭಕ್ತಿಯ ನೆಲೆಯನ್ನು ಮಧ್ಯದಲ್ಲಿರಿಸಿ ಜ್ಞಾನೇಂದ್ರಿಯಗಳ ಕೆಳಗೆ ನೆಲೆಸಿವೆ.

ಶರಣಶಿಶುವು ಮೈದಾಳಿದ ನಿಮಿಷದಿಂದಲೇ “ಸೋಹಂ” ಎಂದರೆ “ಅವನೇ ನಾನು” ಎಂದು ಉಸರು ಉಸರಿಗೂ ಉಗ್ಗಡಿಸುತ್ತದೆ. ಇ೦ಥ ಶಿಶುವಿಗೆ ಸೂಳೆಯಮಗನೆಂದು ಕರೆಯುವುದು ಹೇಗೆ?

ಜ್ಞಾನೇಂದ್ರಿಯಗಳು ತಮ್ಮ ಹೊರನೋಟವನ್ನು ಒ೦ದು ಕ್ಷಣವೇ ತಪ್ಪಿಸಿದರೂ ಅವು ಅಲೌಕಿಕನನ್ನು ಕಾಣಬಲ್ಲಪು. ಕಣ್ಣು ಮುಚ್ಚಿ ಕುಳಿತರೆ ಬಣ್ಣಬಣ್ಣದ ರಾಜ್ಯಪು ಕಣ್ಣಮುಂದೆ ಕಂಗೊಳಿಸುವದು.. ಕಿವಿಮುಚ್ಚಿದರೆ ದಿವ್ಯಸಂಗೀತವು ತರಂಗಿತವಾಗತೊಡಗುವುದು. ಘ್ರಾಣ-ಜಿವ್ಹೆಗಳು ಒಳಮುಖವಾದರೆ ಯಾವರಾಜ್ಯದಿಂದಲೋ ಬರುವ ನಂದನವನದ ಮಂದಾರವು.ಮಘ ಮಘಿಸತೊಡಗುವದು. ಇಂದ್ರಲೋಕದ ಅಮೃತದ ಸವಿತೋರುವುದೂ ಸಹಜ. ತಾಯಿತಬ್ಬುಗೆಗೂ ಮಿಗಿಲಾದ ಅಮರಹಸ್ತವು ಮೈದಡವುದನ್ನೂ ಸ್ಪರ್ಶೇಂದ್ರಿಯವು ಅನುಭನಿಸಬಹುದಲ್ಲವೇ?

ಶಿಶುವು ನೆಲಕ್ಕಿಳಿದುದೇ ತಡ, ಆಕಾಶನನ್ನೊದ್ದು, ನೆಲದ ಮೇಲೆ ಈಸಿ, ಅಂಬೆಗಾಲಿಕ್ಕಿ ವಿಶ್ವವನ್ನು ಬೆನ್ನಮೇಲೆ ಹೊತ್ತು, ರೊಜ್ಜು-ರಾಡಿಗಳಲ್ಲಿ ಆಡಿ, ಹಡೆದವ್ವನನ್ನು ಹೊಡೆಯಹೋಗಿ, ನರಸಿಂಹನಂತೆ ಅಣಕಿಸಿ, ಬತ್ತಲೆಯಾಗಿ ಎದ್ದುನಿಂತು, ಕೋಲುಕುದುರೆಯನ್ನೇರಿ ಓಡಾಡುವುದು ಹಿಂದೆ ಆಚರಿಸಿದ ದಶಾವತಾರಗಳನ್ನು ಅಭಿನಯಿಸಿ ಎದ್ದುನಿಲ್ಲು-ಮುಂದುವರಿ ತತ್ವಗಳೇ ತನ್ನ  ಹುಟ್ಟುಗುಣವೆಂದು ಬಿಚ್ಚಿಬಯಲಿಗಿಡುತ್ತದೆ.

ಮಾನವನು ಅಹಂಕಾರದ ದಾಸನಾಗಿದ್ದರೇನಾಯಿತು? ಅಹಂಕಾರದ ದೆವ್ವ ತಾಳದಲ್ಲಿಯೇ ಹೆಜ್ಜೆ ಹಾಕಿ ಕುಣಿದರೇನಾಯಿತು? ಅಹಂಕಾರದ ಅಳವಿನಲ್ಲಿಯೇ ನಿಂತು, ಮುಗಿಲಮೇಲಿನ ಚಿಕ್ಕೆಗಳನ್ನು ಕೈಗೆ ತೆಗೆದುಕೊಳ್ಳುವ ಸಾಹಸಕ್ಕೆ ಕೈಮಾಡಿದರೇನಾಯಿತು? ಅದು ಮಠದ ಸಹವಾಸದಲ್ಲಿ ಕಲಿತುಕೊಂಡ ಗಿಳಿಯ ಗುಣಗಳ ಲಕ್ಷಣವೇ ಸೈ. ತಾನು ಚೆಲುವರ ಚೆಲುನನೆಂದು ಬಗೆಯುವನು. ಮೀರಿದ ತಿಳುವಳಿಕೆ ತನಗುಂಟೆಂದು ಭಾನಿಸುವನು. ಸೋಲದ ಬಲ ತನ್ನ ತೋಳಿನಲ್ಲಿದೆಯೆಂದು ನ೦ಬಿರುವನು. ತಾನು ನೂರು ತಪ್ಪುಗಳ ತಂದೆಯಾಗಿದ್ಧರೂ ಪರಿಶುದ್ಧನಾದ ನಿರಪರಾಧಿಯೆಂದು ಪರಿಭಾವಿಸುವನು.

ಭೂಮಿಯ ಮೇಲೆ ಜನ್ಮ ತೊಟ್ಟ ಸಣ್ಣ – ದೊಡ್ಡ ಭಕ್ತರೆಲ್ಲರೂ ತಮ್ಮನ್ನು ಕೊಟ್ಟುಕೊಂಡು ಪರಮೇಶ್ವರನನ್ನು ಪಡೆದ ಕಫೆಗಳು ಕೇಳಲಿಕ್ಕೆ ಸಾವಿರಾರು ಸಿಗುವವು. ಭಕ್ತನು ಭಗವಂತನಿಗೆ -ಕೊಟ್ಟಷ್ಟು, ಅವನು ಭಕ್ತರಿಗೆ ತನ್ನನ್ನು ತಾನು ಕೊಟ್ಟುಬಿಡುವನು. ಸಂಪೂರ್ಣನಾಗಿ ಭಕ್ತನು ತನ್ನನ್ನು ಕೊಡಲಿಕ್ಕೆ ಶಕ್ಯನಾವರೆ ಪರಮಾತ್ಮನು ಸ೦ಪೂರ್ಣನಾಗಿಯೇ ಭಕ್ತನ ಉಡಿಯಲ್ಲಿ ಬೀಳುವನು. ಹಾಗಾದರೆ ಭಕ್ತನಾದ ವ್ಯಕ್ತಿಯ ಬೆಲೆ ಎಷ್ಟು? ಪೂರ್ಣ ವ್ಯಕ್ತಿಯು ಬೆಲೆಯಾವರೆ, ಪೂರ್ಣಪರಮಾತ್ಮನು ಪ್ರತಿಯಾಗಿ ದೊರೆಯುವ ಪಡಿಬದುಕು.

ತನ್ನನರಸಿ ಬಪ್ಪವರ ತಾನರಸಿ ಬಪ್ಪ ನೋಡಾ.

ಅಜ್ಞಾನದ ಆವರಣದಲ್ಲಿ ಅಹ೦ಕಾರದ ಬಿರುವನ್ನೇ ಕಟ್ಟಿ ಬದುಕು ಮಾಡುವ ಮಾನವ ಜೀವಿಯ ಒಡಲು, ಇಡಿಯದರ ಬಿಡಿಯೆನ್ನುವುದರಲ್ಲಿ ಸಂಶಯವಿಲ್ಲನೆನ್ನುನಷ್ಟು ಅಗಾಧವಾಗಿದೆ. ಆ ಅಗಾಧವನ್ನು ವಚನ ಪಿತಾ ಮಹನಾದ ದೇವರ ದಾಸಿಮಯ್ಯರ ಮಾತುಗಳೆಲ್ಲೇ ಬಣ್ಣಿಸುವುಧು ಯೋಗ್ಯವು. ಹೇಗೆ೦ದರೆ-
ಒಡಲೊಳಗಣ ಕಿಚ್ಚು ಒಡಲ ಸುಡದ ಭೇದವ
ಕುಡಿದ ಉದಕದಲ್ಲಿ ಆ ಕಿಚ್ಚು ನ೦ದದ ಭೇದವ
ಮೃಡನೀ ಪ್ರಾಣಪ್ರಕೃತಿಯೊಳಗಡಗಿದ ಭೇದವ
ಲೋಕದ ಜಡರೆತ್ತ ಬಲ್ಲರೈ ಠಾನುನಾಥಾ.

ಶಿವನು ತನ್ನ ವಿನೋದಕ್ಕಾಗಿ ಅನಂತ ವಿಶ್ವವನ್ನು ರಚಿಸಿದರೂ ಆತನು ವಿಶ್ವಕ್ಕೆ ಹೊರಗಾಗಿರುವನೇ? ಇಲ್ಲ. ವಿಶ್ವವನ್ನೆಲ್ಲ ತು೦ಬಿ ಸೂಸಿದನು. ವಿಶ್ವವೆಲ್ಲವೂ ತಾನಾಗಿದ್ದರೂ ವಿಶ್ವದ ಉತ್ಪತ್ತಿ, ಸ್ಥಿತಿ, ಲಯಗಳಿಗೆ ಒಳಗಾಗಿರುವನೇ? ಇಲ್ಲ. ತಾನು ವಿಶ್ವಕ್ಕೆ ಆಧಾರನಲ್ಲವಾದರೂ ದೂರಸ್ಥನಾಗಿರುವನೇ? ಇಲ್ಲ. ಆಟದಲ್ಲಿ. ಅರಸು ಊಳಿಗದಾಳಾಗಬಲ್ಲನು; ಮರಳಿ ಅರಸನಾಗಬಲ್ಲನು. ಆತನು ಅವನು ಅವನಿಯನ್ನು ಗುಳಿಗೆ ಮಾಡಿ ನು೦ಗಿದನು; ಸಪ್ತಸಮುದ್ರಗಳನ್ನು ನೀರು ಮಾಡಿ ಮುಕ್ಕಳಿಸಿದನು. ಆಗ್ನಿಯನ್ನು ಮೆಟ್ಟಿನಿಂತವನು. ವಾಯು ವನ್ನು ಒತ್ತಿಹಿಡಿವನು. ಆಕಾಶವನ್ನು ಆಡರಬಲ್ಲವನು. ಮಹದಾಕಾಶ ಬಯಲಿನೊಳಗೆ ನಿಂದು ನೋಡಬಲ್ಲವನು. ಅಂಥ ಬಲ್ಲಿದನಾಗಿರುವದರಿಂದಲೇ-…
.
ಶರಧಿಯ ಮೇಲೆ ಧರೆ ಕರಗದಂತಿರಿಸಿದೆ.
ಅ೦ಬರಕ್ಕೆ ಗದ್ದುಗೆ-ಬೋದುಗೆ ಇಲ್ಲದ೦ತಿರಿಸಿದೆ.
ಎಲೈ ಮೃಡನೇ, ನೀನಲ್ಲದೆ ಉಳಿದ ದೈವಂಗಳಿಗಹುದೇ?
ಎಂದು ದೇವರ ದಾಸಿಮಯ್ಯನು ಬೆರಗುಬಟ್ಟಿದ್ದಾನೆ.

ತಾಯಿತ೦ದೆಗಳಿಲ್ಲದ ಕಂದನಾಗಿ ಮಹಾಶರಣನು ತನಗೆ ತಾನೇ ಹುಟ್ಟಿ ಬೆಳೆದವನು. ತನ್ನ ಪರಿಣಾನವೇ ತನಗೆ ಪ್ರಾಣತೃಪ್ತಿಯಾಗಿರುವವನು. ಆತನು ಭೇದಕರಿಗೆ ಅಭೇದ್ಯನಾಗಿ ತನ್ನ ತಾನೇ ಬೆಳಗುತ್ತಿದ್ದಾನೆ. ತ್ರಿಮೂರ್ತಿಗಳಿಗೂ ಮೊದಲು, ಬಯಲಿಗೆ ಮಹಾ ಬಯಲು ಆಗಿದ್ಧವನು;ಸ್ವಯಂಭೂ ಲೀಲೆಗೆಂದು ಉಮಾಪತಿಯಾಗಿ ಶರಣತತಿಯನ್ನೇ ಮೈಯೆಲ್ಲ ಹೊತ್ತು, ಶರಣತತ್ತಿಗಳನ್ನೇ ನೆ೮ದಲ್ಲೆಲ್ಲ ಬಿತ್ತಿ, ಪಾತಾಳಕ್ಕೂ ಕೆಳಗೆ ಪಾದ ಚಾಚಿ, ಸುವರ್ಲೋಕದಿ೦ದ ಮೇಲೆ ತಲೆಯೆತ್ತರಿಸಿ, ಬ್ರಹ್ಮಾಂಡವೇ ಮುಕುಟವಾಗಿ, ಗಗನವೇ ಮುಖವಾಗಿ, ಸೂರ್ಯಚಂದ್ರಾಗ್ನಿಗಳೇ ನೇತ್ರವಾಗಿ, ದಶದಿಕ್ಕು ಗಳೇ ಬಾಹುಗಳಾಗಿ ನಿಂತಿರುವ ಮಹಾಶರಣನ ಕುರುಹನ್ನುಇನ್ನೇನು ಹೇಳಲಿ? ಅಣುವಿಗೂ ಅಣುವಾಗಿರುವ ಪರಮಾಣುವಿನಲ್ಲಿ ಶರಣನ ಕುರುಹು ಸುಳಿದಿದ್ದರೆ ಮಹತ್ತಿಗೂ ಮಹತ್ತಾದ ಮಹಾಕಾಶದಲ್ಲಿಯೂ ಶರಣನ ಕುರುಹು ಹೊಳೆಯುತ್ತದೆ.

ಎತ್ತೆತ್ತ ನೋಡಿದಡತ್ತತ್ತ ನೀನೇ ದೇವಾ
ಸಕಲವಿಸ್ತಾರದ ರೂಹು ನೀನೇ ದೇವಾ
ವಿಶ್ವತೋ ಬಾಹು ನೀನೇ ದೇವಾ
ವಿಶ್ವತೋ ಚಕ್ಷು ನೀನೇ ದೇವಾ
ವಿಶ್ವತೋ ಮುಖ ನೀನೇ ದೇವಾ
ವಿಶ್ವತೋ ಪಾದ ನೀನೇ ದೇವಾ
ಕೂಡಲಸ೦ಗನದೇವಾ.

ಎಂದು ಒಪ್ಪಿಕೊಳ್ಳದೆ ಗತ್ಯ೦ತರವೇ ಇಲ್ಲ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರಮದ ಹಿರಿಮೆ
Next post ನಗೆಡಂಗುರ-೧೪೨

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys