ಲಿಂಬೆ ಹಣ್ಣಿನ ಸಿಪ್ಪಿಯಲ್ಲಿ ಪೌಷ್ಠಿಕವಾದ ತಂಬುಳಿ ತಯಾರಿಕೆ

ಲಿಂಬೆ ಹಣ್ಣಿನ ಸಿಪ್ಪಿಯಲ್ಲಿ ಪೌಷ್ಠಿಕವಾದ ತಂಬುಳಿ ತಯಾರಿಕೆ

ಸಾಮಾನ್ಯವಾಗಿ ಬಾಳೆಹಣ್ಣಿನ ಸಿಪ್ಪೆ, ಸೀತಾಫಲದ ಸಿಪ್ಪೆಗಳನ್ನು ತೆಗೆದು ಒಳಗಿನ ತಿರುಳನ್ನು ಮಾತ್ರ ನಾವು ಉಪಯೋಗಿಸುತ್ತೇವೆ. ಆದರೆ ಈ ಸಿಪ್ಪೆಗಳು ನಿರುಯುಕ್ತವೆಂದು ಬೀಸಾಡುತ್ತೇವೆ. ನಿಜಕ್ಕೂ ಈ ಸಿಪ್ಪೆಗಳಲ್ಲಿಯೇ ಜೀವಸತ್ವ ಅಧಿಕವಾಗಿರುತ್ತದೆಂದು ಆಹಾರ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿದ್ಯುತ್ ತಯಾರಿಸಿದಂತೆ ಲಿಂಬೆಹಣ್ಣಿನ ಸಿಪ್ಪೆಯಲ್ಲಿ ಸ್ವಾದಿಷ್ಟವಾದ ಪುಷ್ಟಿಕರವಾದ ತಂಬುಳಿಯನ್ನು ಮಾಡಬಹುದೆಂದು ಪೌರಶಾಸ್ತ್ರಜ್ಞರು ಪ್ರಯೋಗಮಾಡಿದ್ದಾರೆ. ಒಬ್ಬರಾದರೆ ಒಂದು ಲಿಂಬೆಹಣ್ಣಿನ ಸಿಪ್ಪೆ ೧/೨ ಚಮಚೆ ಜೀರಿಗೆ, ಅಡಿಕೆ ಗಾತ್ರದ ಬೆಲ್ಲ ಅಥವಾ ತುಪ್ಪ, ಒಂದು ಲೋಟ ಸಿಹಿಮಜ್ಜಿಗೆ ೧/೪ ತೆಂಗಿನ ಕಾಯಿ ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣಿ ಸಾಮಗ್ರಿಗಳು.

ತಯಾರಿಸುವ ವಿಧಾನ : ರಸ ತೆಗೆದ ಲಿಂಬೆಹಣ್ಣಿನ ಸಿಪ್ಪೆಯನ್ನು ಸಣ್ಣದಾಗಿ ಹೆಚ್ಚಿಕೊಂಡು ಬಾಣಲೆಯನ್ನು ಒಲೆಯ ಮೇಲಿಟ್ಟು ಲಿಂಬೆಸಿಪ್ಪೆಯನ್ನು ಹಾಕಿ ತುಪ್ಪುವನ್ನು ಹಾಕಬೇಕು. ಅದನ್ನು ಮಗಚುತ್ತ ಇದ್ದು ಕಂದು ಬಣ್ಣ ಬಂದಾಗ ಜೀರಿಗೆಯಲ್ಲಿ ಒಣಮೆಣಸನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ತೆಂಗಿನ ತುರಿಯೊಂದಿಗೆ ನಯವಾಗಿ ರುಬ್ಬಿ ತೆಗೆದು ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಜ್ಜಿಗೆಯನ್ನು ಹಾಕಿ ಒಗ್ಗರಣಿ ಹಾಕಬೇಕು. ಮಜ್ಜಿಗೆಯ ಬದಲು ಹುಣಸೆಹುಳಿ ಹಾಕಿ ಗಟ್ಟಿಯಾಗಿ ತೆಗೆದರೆ ಚಟ್ನಿಯೂ ಆಗುತ್ತದೆ. ತಂಬುಳಿಯೂ ಆಗುತ್ತದೆ.

ಅಜೀರ್ಣವಾದರೆ ಕೊತ್ತಂಬರಿ ರಸ ಸಿದ್ಧಿ : ಜಾಸ್ತಿ ಊಟವಾದಾಗ ಅಥವಾ ಹೊಟ್ಟೆಯೊಳಗೆ ಗ್ಯಾಸ್ ತುಂಬಿಕೊಂಡು ಹೊಟ್ಟೆ ಉಬ್ಬರಿಸಿದಂತಾದಾಗ ಇಂಗ್ಲಿಷ್‌ ಔಷಧಿ ಪಡೆಯುವುದಕ್ಕಿಂತ ಪಾಕಶಾಸ್ತ್ರಜ್ಞರು ಇತೀಚಿಗೆ ಒಂದು ವಿಧಾನವನು ಕಂಡು ಹಿಡಿದಿದಾರೆ. ಸಿದ್ಧ ಮಾಡಿಟ್ಟುಕೊಂಡ ಕೊತ್ತಂಬರಿ ಎಲೆಗಳ ರಸವನ್ನು ಮಜ್ಜಿಗೆಯಲ್ಲಿ ಬೆರಸಿ ಕುಡಿದರೆ ಹೊಟ್ಟೆ ತಣ್ಣಗಾಗಿ ಸಾರಾಗಲಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಳೀ ಹಾಡು
Next post ಮೂಡಲ ಗಿರಿಯಪ್ಪ ಮೂಡಿ ಬಂದಾಗ

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…