ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಬೆಟ್ಟದ ಬಣ್ಣವೆ ಬಂಗಾರ
ಬೆಟ್ಟದ ಬಣ್ಣ ಬಂಗಾರ ಎಂದಾನ
ತಾನ ತಂದನಾ ತಂದನಾನ

ಕೋಲೂ ಕೋಲೆನ್ನ ಕೋಲೇ
ರನ್ನದಾ ಚಿನ್ನದಾ ಕೋಲೂ ಕೋಲೆನ್ನ ಕೋಲೇ
ಆ ಬಣ್ಣದಾ ಕೋಲೂಕೋಲೆನ್ನ ಕೋಲೇ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಮೋಡದ ಬಣ್ಣವೆ ಬಂಗಾರ
ಮೋಡದ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಕೆರೆ ನೀರ ಬಣ್ಣವೆ ಬಂಗಾರ
ಕೆರೆ ನೀರ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಹಸುಗಳ ಬಣ್ಣವೆ ಬಂಗಾರ
ಹಸುಗಳ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಹಟ್ಟಿಯ ಬಣ್ಣವೆ ಬಂಗಾರ
ಹಟ್ಟಿಯ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಬಾವಿಯ ಬಣ್ಣವೆ ಬಂಗಾರ
ಬಾವಿಯ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಬಿಂದಿಗೆ ಬಣ್ಣವೆ ಬಂಗಾರ
ಬಿಂದಿಗೆ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಹರಿವಾಣದ ಬಣ್ಣವೆ ಬಂಗಾರ
ಹರಿವಾಣದ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಕುಂಕುಮದ ಬಣ್ಣವೆ ಬಂಗಾರ
ಕುಂಕುಮದ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ರಂಗೋಲಿ ಬಣ್ಣವೆ ಬಂಗಾರ
ರಂಗೋಲಿ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ
*****