ಕನ್ನಡ್ವೆ ಸತ್ಯ ಕನ್ನಡ್ವೆ ನಿತ್ಯ ಆದ್ರೂವೆ ಇಂಗ್ಲೀಷ್ ಅತ್ಯಗತ್ಯ

ಅಪ್ಪ ಹಾಕಿದ ಆಲದ ಮರ ಅಂತ ನೇಣು ಹಾಕ್ಕಬೇಕು ಅಂತಿರೇನು ಅಂತ ಹಲವು ಸಾಯಿತಿಗೋಳು ಇದ್ವಂಸರು ವಾದಿಸ್ಲಿಕ್ಕುತ್ತಾರೆ. ಹಂಗೆ ಸೆಂಟ್ ಪರ್ಸೆಂಟ್ ಮಮ್ಮಿ-ಡ್ಯಾಡಿಗಳು ತಮ್ಮ ಹೈಕಳಿಗೆ ಇಂಗ್ಲೀಸ್ ಕಲಿಸುವ ಆತುರದಾಗವರೆ. ಕನ್ನಡದ ಮೇಷ್ಟ್ರುಗಳೇ ವ್ಯಾಕರಣ ಅಂದ್ರೆ ಕ್ಯಾಕರ್ನಾ ಅನ್ನೋ ಹೊತ್ನಾಗೆ ಇಂಗ್ಲೀಸ್ ಗ್ರಾಮರ್ ಗೊತ್ತಿಲ್ಲದೋವೆಲ್ಲಾ ಇಂಗ್ಲೀಸ್ನ ಗ್ಲಾಮರ್ಗೆ ಮಳ್ಳು ಆಗಿಬಿಟ್ಟಾವೆ. ಐದನೇ ಗಳಾಸಿಂದ್ಲೆ ನಾವೆಲ್ಲಾ ಇಂಗ್ಲೀಸ್ ಕಲ್ತು ಗುಮಾಸ್ತರಾಗಲಿಲ್ವೆ ಅಂಬೋ ತಕರಾರು ಎತ್ತವೆ ತಲೆಬೆಳ್ಳಗಾದ ಬೊಚ್ಚುಬಾಯಿನ ಸೀನಿಯರ್‌ ಸಿಟಿಜೆನ್ಸು. ಒಂದನೇ ಗಳಾಸಿಂದ್ಲೆ ಇಂಗ್ಲೀಸ್ ಕಲಿಬೋದು ಅಂತ ಒಂದೋಟು ಜನ. ಮೂರನೇ ಗಳಾಸಿಂದ್ಲೇ ಇರ್ಲಿ ಅಂತ ಕುಸ್ತಿಗೆ ಬಿದ್ದಿರುವ ತಜ್ಞರ ಗುಂಪಿನಾಗೇ ಒಮ್ಮತ ಇಲ್ಲದಂಗಾಗಿ ಕೈ ಕೈ ಮಿಲಾಯಿಸ್ತ ಕನ್ನಡಕ್ಕಾಗಿ ಕೈ ಕೈ ಎತ್ತುತಾ ಅವರೆ. ಇವರೆಲ್ಲಾ
ಮ್ಯಾಗೆ ಸಡನ್ ಆಗಿ ಪ್ರೇಮವೋ ದ್ವೇಸವೋ ಬಂದು ವಕ್ಕರಿಸಿದ್ದರ ಫಲವಾಗಿ ಬಡಪಾಯಿ ಸರ್ಕಾರ ಇವರ ಜೊತೆ ಸಂತೆ ಮಾಡಿದ್ರೂ ನಿಸ್ಪಲವಾಗಿ ಸಾಯಿತಿ ಓರಾಟಗಾರರ ಗದ್ದಲಕ್ಕಂಜಿ ಅನಾಸಿನ್ ಗುಳಿಗಿ ನುಂಗಿ ತೆಪ್ಪಗೆ ಕುಂತೇತೆ ನೋಡ್ರಿ.

ಕನ್ನಡ ಬಾಸೆ ಬರಿ ಬಾಯಿಮಾತ್ನಾಗೆ ಆಡಳಿತ ಬಾಸೆ ಮಾಡಿ ಸರ್ಕಾರ ಮೀಸೆ ತಿರುವಿದ್ದಾತು. ಈಗ ಇಂಗ್ಲೀಸ್ ಬಾಸೆ ಸವಾರಿ ಬ್ಯಾರೆ ಮಾಡಿಸಾಕೆ ಸ್ಕೆಚ್ ಹಾಕೈತೆ. ಕರ್ನಾಟಕದಾಗೆ ಮಾತ್ರವೆ ಯಾಕಿಂಗೆಲ್ಲಾ ಆಗ್ತಾ ಐತೆ ಅಂತ ಸೀರಿಯಸ್ ಆಗಿ ಇಚಾರ ಮಾಡಲಾಗಿ ನಮ್ಮೋರ ನಿರಭಿಮಾನವೇ ಕಾರ್ಣ ಅಂಬೋ ಮಾತು ಓಲ್ಡಾದ್ರೂ ಗೋಲ್ಡ್ ಅಂಬೊದು ಸುಳ್ಳಲ್ಲ ಬಿಡ್ರಿ. ನಮ್ಗೆ ಸಿಗಬೇಕಾದ ಉಕ್ಕಿನ ಕಾರ್ಖಾನೆಗಳು ಪಕ್ಕದ ಸ್ಟೇಟ್‌ನಾಗೆ ಪ್ಲೇಸ್ ಪಡ್ಕೊಂಡ್ವು. ನಮ್ಗೇನ್ ಸಿಟ್ಟು ಬರಂಗಿಲ್ಲ ಬಿಡ್ರಿ. ನಮ್ಮಲ್ಲೇ ಉಕ್ಕಿನಂತ ಮನುಸ್ಯಾರಿರೋವಾಗ ನಮಗ್ಯಾಕ್ರಿ ಉಕ್ಕಿನ ಕಾರ್ಖಾನಿ? ಅನೇಕ ರೈಲು ಮಾರ್ಗಗುಳು ದಕ್ಕಬೇಕಾಗಿತ್ತು ದಕ್ಕಲಿಲ್ಲ. ಹಂಗಂತೆ ನಮ್ಗೇನ್ ಬ್ಯಸರಿಲ್ಲ. ಮಾತಿನಾಗೆ ಸಕತ್ ರೈಲು ಬಿಡೋರು ನಮಲ್ಲಿರೋವಾಗ ನಮಗ್ಯಾಕ್ರಿ ಬೇಕು ರೈಲು? ಕಾವೇರಿ ಕೃಷ್ಣ ಅಪ್ಪರ್ ಭದ್ರಾ ತುಂಗಾ ಯಾವ್ಯಾವೋ ಚಾನಲ್‌ಗಳು ದೇಸದಾಗೆ ಹರಿಬೇಕಿತ್ತು. ಹರಿದಿದರೆ ಅಷ್ಟೇ ಹೋತು. ಎಂಟಿವಿ ಎಫ್‌ಟಿವಿ ಸಿಕ್ಕವಲ್ಲ ಬಿಡ್ರಿ.

ಭೋ ಸಹನಾಶೀಲರು ನಾವು. ಬೆಂಗಳೂರಿನಾಗೆ ೩೨% ಕನ್ನಡಿಗರು ಮಾತ್ರ ಅವರೆ ಅಂತ ಕೊರೊಗೋದ್ಯಾಕ್ರಿ! ಬೆಂಗ್ಳೂರು ಒಂದೇ ಕನ್ನಡ ನಾಡೇನ್ರಿ? ಉಳಿದ ಕಡೆ ನಮ್ಮೋರು ತುಂಬಿ ತುಳುಕ್ತಾ ಇಲ್ಲೇನ್ರಿ ಅಂತ ಕೊಶ್ಚನ್ ಮಾಡೋ ವಿವೇಕ ಕನ್ನಡಮ್ಮನಾಣೆಗೂ ನಮ್ಮೋರ್‌ಗೈತೆ. ಬೆಂಗಳೂರ್ದಾಗೆ ಬರಿ ಎನ್ನಡ ಎಕ್ಕಡ ಇನ್ನೆಲ್ಲಿ ಕನ್ನಡ ಅಂತ ದೂರೋರಿಗೆ ಒಂದ್ ಮಾತು. ಉಳಿದು ಕಡೆನಾರ ಎಲ್ಲೈತ್ರಿ ಕನ್ನಡ!? ಬೆಂಗಳೂರ್ದಾಗ ತಮಿಳರ ಕಾಟ. ಇನ್ನು ಮಂಗ್ಳೂರ್ದಾಗ ಯವುಡೆ ಮಲೆಯಾಳಿಗಳ ತಿಕ್ಕಾಟ. ಕೊಲಾರ್ದಾಗೆ ತೆಲುಗು ತಮಿಳರ ಜೂಗಲ್ಬಂದಿ. ಹುಬ್ಳಿದಾಗ ಹಿಂದಿನೋರ ಹಾವಳಿ. ಗುಲ್ಪರ್ಗ ರಾಯಚೂರ್ದಾಗ ಉರ್ದು ತೆಲುಗಿನೋರ ಮಿಶ್ರ ದಾಳಿ, ಬಳ್ಳಾರಿನಾಗ ತೆಲುಗರ ಪ್ರಭಾವಳಿ, ಬೆಳಗಾಂದಾಗ ಮರಾಠೇರ ಜಂಗಿ ಕುಸ್ತಿ. ಮಧ್ಯ ಕರ್ನಾಟಕ ಬಿಟ್ರೆ ಭಾಳೋಟು ಕಡೆ ಪರಭಾಸಿಗರದ್ದೇ ಮಸ್ತಿ. ಇಂತದ್ರಾಗ ಕನ್ನಡ ಭಾಸೆ ಆಡಳಿತ ಭಾಸೆನಾರ ಹೆಂಗಾಗಾದಾತ್ರಿ?

ಕನ್ನಡಿಗರ ಟೆಂಟ್ನಾಗೆ ಯಾವ ಒಂಟೆನಾರ ನುಸುಳಿಕೋಬೋದು ಬಿಡ್ರಿ. ತೆಲುಗ್ರಿಗೆ ತಮ್ಮ ಭಾಸೆ ಮ್ಯಾಗೆ ಬೋ ಅಭಿಮಾನ, ಕೊಂಗಾಟಗಳಿಗೆ ದುರಭಿಮಾನ ಕನ್ನಡೋವ್ಕೆ ನಿರಭಿಮಾನ. ಅದ್ಕೆ ಒಂದ್ನೇ ಗಳಾಸಿಂದ್ಲೆ ಇಂಗ್ಲೀಸ್ ಬ್ಯಾರೆ ಬಂದು ನಮ್ಮ ಮಕ್ಳು ತಲೆಗೇರಿ ಕುಂದ್ರಗೈತೆ. ಇದೆಲ್ಲಾ ಬ್ಯಾಡ್ರಿ ಮೊದಲಿದ್ದಂಗೆ ಇರ್ಲಿರಿ ಅಂತ ಹರಕುಬಾಯಿ ಚಂಪಾ ಆಂಡ್ ಪಾಲ್ಟಿನೋರು ಕುಸ್ತಿಗೆ ಬಿದ್ದವೆ. ಎಳಿ ವಯಸ್ನಾಗ ಮಕ್ಳು ಬಲು ಚುರುಕಾಗಿರ್ತಾವೆ ನಾಕಾರು ಬಾಸೆ ಚಿಟಿಕಿ ಹೊಡಿಯೋದ್ರಾಗೆ ಕಲಿತಾವ ಅಡ್ಡಬಾಯಿ ಹಾಕಬ್ಯಾಡ್ಲೆ ಚಂಪಾ ಅಂತ ಒಂದಷ್ಟು ಮಂದಿ ತೋಳು ಮುದಿರ್ಲಿಕ್ಕ ಹತ್ತಾವೆ. ಜ್ಞಾನಪೀಠಗಳ ಹೈಕಳೆಲ್ಲಾ ಇಂಗ್ಲೀಸ್ ಮೀಡಿಯಂದಾಗೆ ಓದಿ ಈವತ್ತು ಲಂಡನ್ನು ಎಮೆರಿಕಾಗೆ ಹೋಗಿ ಸೆಟ್ಲಾಗವೆ ಎಕ್ಸೆಪ್ಟ್ ಕುಯೆಂಪು ಮಕ್ಳು ಅಂತ ಮೂತಿ ತಿವಿಲಿಕ್ ಹತ್ತಾರೆ. ರಸ್ಯಾ ಚೀನಾದೋರೇ ಇಂಗ್ಲೀಸ್ ಬಾಸೆನಾ ಲವ್ ಮಾಡ್ಲಿಕ್ ಹತ್ತದಾಗ ಕರ್ನಾಟಕದಾಗೆ ಯಾಕ್ರಿ ಪಿರಿಪಿರಿ ಅಂತ ಕಿರಿಕಿರಿ ಮಾಡ್ಲಿಕ್ ಹತ್ತಾರೆ ರಗ್ಗಡ್ ಮಂದಿ.

ಯಾವ ಕಚೇರಿನಾಗೆ ನೋಡಿದ್ರೂವೆ ಕಂಪ್ಯೂಟರಗಳೇ ಬಂದು ಕುಂಡ್ರ್ಯಾವೆ. ಹುಡ್ರೆಲ್ಲಾ ಸಾಫ್ಟ್‌ವೇರ್ ಎಂಜಿನೀರು ಆಗ್ಲಿಕ್ಕೆ ಹತ್ತಾವೆ. ಮೆಡಿಕಲ್ಲು ಓದ್ಲಿಕ್ ಹತ್ತಾವೆ. ಅವೆಲ್ಲಾ ಇಂಗ್ಲಿಸ್ ಕಲಿದೆ ಹ್ಯಾಂಗ್ ಬರ್ತಾವ್ರಿ? ನಮ್ಮ ಹೈಕ್ಳು ನೆಟ್ಗೆ ಇಂಗ್ಲೀಸ್ ಬರ್ದೆ ಪ್ರತಿ ವರ್ಸ ಪಿಯುಸಿನಾಗೆ ಡುಂಕಿ ಹೊಡಿತಾನೆ ಇರ್ತಾವ. ನಮ್ಮ ಹೈಕ್ಳು ಡಾಕಟ್ರು ಇಂಜ್ನೀರು ಆಗೋದೇ ಬ್ಯಾಡ್ವಾ. ಪಾರಿನ್‌ಗೊಗಾದೇ ಬ್ಯಾಡ್ವಾ ಅಂತ ವಿಲೇಜರ್ಸ್ ಕೊಳ್ಳುಪಟ್ಟಿ ಹಿಡ್ದು ಕೊಚ್ಚನ್ ಮಾಡ್ಲಿಕ್ ಹತ್ತಾರೆ. ಹಿಂದಿನ ಕಾಲ್ದಾಗೂ ಹಿಂಗೆ ಅನ್ನಾಯ ಮಾಡಿದ್ರು. ಸಂಸ್ಕೃತ ಕೆಲವರೇ ಕಲಿತ್ಕೊಂಡು ಉಳಿದೋರ ಮ್ಯಾಗೆ ಸವಾರಿ ಮಾಡಿದ್ರು. ಈಗದು ಹೆಡ್‌ಲಾಂಗ್ವೆಜಾಗೇತೆ. ಆದ್ರೆ ಇಂಗ್ಲೀಸ್ಗೆ ಭಾರಿ ಡಿಮ್ಯಾಂಡ್ ಐತ್ರಲಪಾ. ಪ್ಯಾಟಿ ಮಕ್ಳು ಮೂರು ಮೂರು ಬಾಸೆ ಕಲಿತಾರೆ ಹಳ್ಳಿ ಹೈಕ್ಳು ಕಲಿಯಾಕಿಲ್ಲ ಅಂಬೋದ್ರಾಗೇನ್ ಅರ್ಥೈತೆ? ಮಕ್ಳು ಅಂದ್ರೆ ಎಲ್ಲಾ ಒಂದೆಯಾ. ಪ್ಯಾಟಿ
ಮಕ್ಳಿಗೇನು ಬಾಲ ಅದಾವೇನ್ ಅಂತ ಕೆಲವಾರು ಇದ್ವಾಂಸರು ಕಾಲುಕೆರ್ದು ಕಾಳಗಕ್ಕೆ ನಿಂತವರೆ. ಎಸ್-ನೋ-ಆಲ್ ರೈಟ್ ಅಂದ್ರೆ ಲಿಪ್ಟ್ ಆಪರೇಟರ್ ಕೆಲಸನಾರ ಗ್ಯಾರಂಟಿ ಸಿಗ್ತೇತೆ. ಬರಿ ಕನ್ನಡ ಕಲ್ತರೆ ಹಳ್ಳಿನಾಗ ಮೇಟ್ರು ಕೆಲ್ಸಾನು ಸಿಗಾಂಗಿಲ್ಲ. ಇಂಗ್ಲೀಸ್ನಾಗೆ ಠುಸ್ ಪುಸ್ ಹೊಡದ್ರೆ ಫೈವ್ ಸ್ಟಾರ್ ಹೋಟಲ್ದಾಗ ಕನಿಷ್ಠ ಸರ್ವರ್ ಕೆಲ್ಸಾಂತೂ ಖಾಯಂರೀ. ತತ್ರಾಪಿ ಪ್ಯಾದೆ ಜಾಬಿಗೂ ಈಗ ಇಂಗ್ಲೀಸ್ ಬೇಕಂತಲ್ರಿ. ಹಿಂಗಿರೋವಾಗ ಇಂಗ್ಲೀಸ್ ಬ್ಯಾಡ ಅನ್ನೋದಾರ ಹ್ಯಾಂಗ್ರಿ ಅಂಬೋದು ಕೆಲವರ ಆರ್ಗ್ಯೂಮೆಂಟು. ಸೇನಾದಾಗೆ ಸೇರಬೇಕಂದ್ರೆ ಬರೀ ಬಾಡಿ ಪಿಟಿಂಗು ಇದ್ರಾಗಲಿಲ್ಲ. ಇಂಗ್ಲೀಸ್ನಾಗೆ ರೈಟಿಂಗು ಇರ್ಬೇಕು. ನಮ್ಮ ಹುಡುಗ್ರು ಸೇನಾದಾಗೆ ಜಾಯಿನ್ ಆಗಿ ದೇಸಕ್ಕಾಗಿ ಫೈಟಿಂಗ್ ಮಾಡಿ ಸಾಯೋದು ಬ್ಯಾಡ್ವಾ? ಅದ್ಕೆ ಒಂದ್ನೆ ಗಳಾಸಿಂದ್ಲೆ ಆ ಆ ಇ ಈ ಜೊತೆನಾಗೆ ಎಬಿಸಿಡಿನೂ ಕಲಿಸಲಿಕ್ಕೆ ಬೇಕು. ಪ್ಯಾಟಿ ಮಕ್ಳ ಸರಿಸಮಾನವಾಗಿ ಹಳ್ಳಿ ಹೈಕ್ಳು ನಿಂತ್ಕಾಬೇಕಂದ್ರೆ ತಾಯಾಣೆಗೂ ಇಂಗ್ಲೀಸ್ ಊರುಗೋಲು ಬೇಕೇಬೇಕ್ರಿ ಅಂತ ಸಾಯಿತಿಗಳಿಂದ ಸ್ವಾಮೀಜಿಗಳವರ್ಗೂ ಇಂಗ್ಗೀಸ್ನ ಲವ್ ಮಾಡೋರ ಪರ್ಸೆಂಟೇಜ್ ಜಾಸ್ತಿ ಆಗ್ಲಿಕ್ ಹತ್ತೇತ್ ನೋಡ್ರಿ. ಬರೀ ಈಟೆ ಆಗಿದ್ರೆ ಅದುಮಿಕ್ಯಂಡು ಸುಮ್ಗಿರಬೋದಾಗಿತ್ತು. ಆದ್ರೀಗ ಓರಾಟದ ಸೇಪೇ ಬದ್ಲಾಗೇತಿ. ಇಂಗ್ಲೀಸ್ ಪ್ರೈಮರಿ ಸ್ಯಾಲೆಯಿಂದ್ಲೆ ಶುರು ಹಚ್ಕಣಾದು ಬ್ಯಾಡ ಅಂಬೋ ಖದೀಮರೆಲ್ಲಾ ದಲಿತ ಇರೋದಿಗುಳು, ಇಂಗ್ಲೀಸ್ ಇರ್ಲಿ ಅಂಬೋರೆಲ್ಲಾ ದಲಿತರ ಇಸ್ವಾಸಿ ಅನ್ನೊ `ಜಾತಿ ವೆಪನ್’ ಓರಾಟಗಾರ್ರ ಕೆಯಾಗೆ ಸಿಕ್ಕೇತಿ. ಇಂಗ್ಲೀಸೇ ದಲಿತರ ಆಸ್ತಿ ಅಂತ ಸಿಜಿಕೆ ನಾಟ್ಕ ಆಡ್ಲಿಕ್ ಹೊಂಟ್ರೆ, ಪ್ರೈಮರಿ ಸಾಲೆನಾಗೆ ಇಂಗ್ಲೀಸೇನಾರ ತಂದ್ರೋ ಹೊಳಿಗಾರ್ತೀನಿ ಅಂತ ಚಿದಾನಂದ ಮೂತ್ರಿ ಹೆದರಿಸ್ಲಿಕ್ ಹತ್ತಾರೆ. ಹರ್ಕುಬಾಯಿ ಚಂಪಾ ಆಂಡ್ ಪರಿಷತ್ ಪಾಲ್ಪಿ ಕೋರ್ಟಿಗೆ ಹೋಕ್ಕಾದಿ ಬಿಡಂಗಿಲ್ರಿ ಅಂತ ಛಾಲೆಂಜಿಗೆ ನಿತ್ಕಂಡ್ರೆ, ಕೀರಂ ಅಂಡ್ ಪಾಲ್ಪಿ, ದಲಿತ ಹಿಂದುಳಿದೋರ ಸಲುವಾಗಿ ಕೋರ್ಟ್ ಮೆಟ್ಟಲೂ ಹತ್ತದೆಯಾ ಇಂಗ್ಲೀಸ್ ಪ್ರೈಮರಿಯಿಂದ್ಲೇ ತರೋದೆಯಾ ಅಂತ ಸೆಡ್ಡು ಹೊಡಿಲಿಕ್ ಹತ್ತಾರೆ. ಕನ್ನಡ್ವೆ ಸತ್ಯ ಕನ್ನಡ್ವೆ ನಿತ್ಯ ಆದ್ರೂವೆ ಇಂಗ್ಲೀಸ್ ಆತ್ಯಗತ್ಯ ಅಂಬೋರ್ದೆ ಎಲ್ಲೆಲ್ಲೂ ಮೆಜಾರ್ಟಿ. ಈವರ್ಗೆ ಭಾಸಾ ಬೆಳವಣಿಗೆಗೆ ಫೈಟಿಂಗ್ ಮಾಡಿದ್ದಾತು. ಈ ವಾರಾ ಭಾಸೆ ಉಳಿಸ್ಕೊಂಬೋ ಸಲುವಾಗಿ ಫೈಟಿಂಗ್ ಮಾಡಹೊತ್ತು ಬಂದ್ಯೆತೆ ಕನ್ನಡ ಕಂದರಿಗೆ. ಸಾಯಿತಿಗಳು, ಇದ್ವಂಸರು, ಸಂಸಯಸೋಧಕರ ನಡುವೆ ಜಗಳ ತಂದಿಕ್ಕಿ ತಮಾಷೆ ಸೋಡ್ತಾ ಕುಂತ್ಯೆತ್ರಿ ಘನದೋಸ್ತಿ ಸರ್ಕಾರ. ಕನ್ನಡ ಮಾತೆ ಇದೇನವ್ವ ಇವರ ಕ್ಯಾತೆ?
*****
(ದಿ. ೦೩-೦೮-೨೦೦೫)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೈದಮದೀನಪುರಿ ಸೈದರಮನೆಯೊಳು
Next post ಪ್ರಗತಿ ಪಥ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…