ವೈದಮದೀನಪುರಿ ಸೈದರಮನೆಯೊಳು
ಮಾದರಾಕಿ ಹಡೆದಾಳೋ ಮಗನ          ||ಪ||

ಐದು ತಾಸು ಅಲ್ಲೆ ಇದ್ದು ಸತ್ತಿತೋ
ಜಯದಿ ಅರ್ಥ ಹೇಳುವ ಸುಗುಣ           ||೧||

ಚಿತ್ರಕೂಟದಿ ವಿಚಿತ್ರವಾಯಿತು
ಚಿತ್ತಮಳಿಗೆ ನಾಯ್ಗಳ ಹಗಣ                ||೨||

ಪುಚ್ಚಿಯೊಳಗ ಸಿಕ್ಕೊಂಡು ಸತ್ತಿತೋ
ಬ್ರಹ್ಮನಿಗಿದು ಬಂದಿತು ಬ್ರಮಣ             ||೩||

ಲೊಕದೊಳಗೆ ಒಂದು ಮೇಟಿಯು ಹುಟ್ಟಿತು
ಅದಕೆ ಆದವು ಎರಡಕ್ಷರ                   ||೪||

ಎರಡು ಕೂಡಿಸಿ ಒಂದಕೆ ಇಟ್ಟರೆ
ಸವ್ವಲು ಹೇಳುವ ಗಂಭೀರ                 ||೫||

ಹರಗೆ ಮೋರುಮ ಹರಿಗೆ ಆಲಾವ
ಕುರಿಯು ಕೊ೦ದು ತಿಂದವ ಸುಗುಣ         ||೬||

ವಸುಧಿಯೊಳು ಶಿಶುನಾಳಧೀಶನ ಸವ್ವಲು
ದಶದಿನದಲಿ ಹೇಳರಿ ಇದನು                  ||೭||
*****