ಶ್ರಮದ ಹಿರಿಮೆ

ಶ್ರಮ ಜೀವನಕೆ ಜಯವೆನ್ನಿ ಶ್ರಮಿಕರಿಗೆಲ್ಲಾ ಜಯವೆನ್ನಿ

ಶ್ರಮವೇ ಜೀವನಕಾಧಾರ ಶ್ರಮದಿಂದಲೇ ಜೀವನಸಾರ
ಶ್ರಮವೇ ಬದುಕಿನ ಬೇರು ಶ್ರಮವಿಲ್ಲದೆ ಬದುಕೇ ನಿಸ್ಸಾರ

ಮಣ್ಣಿನ ಕಣಕಣದೆಲ್ಲಿಡೆ ಮಿಡಿಯುತ ಹೂವೂ ಹಣ್ಣು ನಿತ್ಯಾ
ನಿಸರ್ಗವೆಲ್ಲಾ ಚೆಲುವಿನ ತವರು ಶ್ರಮವೇ ವಿಶ್ವದ ಸತ್ಯಾ

ರಾಜಾಧಿರಾಜರ ಕೋಟೆಕೊತ್ತಲ ಅರಮನೆ ಗುರುಮನೆಗೆಲ್ಲ
ಶ್ರಮಜೀವಿಗಳೇ ಕಾರಣಕರ್ತರು ಚರಿತ್ರೆ ಬುನಾದಿಗೆಲ್ಲ

ಹೊನ್ನರಾಶಿಗಳು ಮುತ್ತು ರತ್ನಗಳು ಬೀದಿಗಳಲ್ಲಿ ಮೆರೆದಿರಲು
ಬೆನ್ನನುಬಗ್ಗಿಸಿ ದುಡಿಯುವ ಅವನ್ನು ತಂದವರೇ ಶ್ರಮ ಜೀವಿಗಳು

ಚರಿತ್ರೆಯನ್ನೇ ಕಟ್ಟಿ ಬೆಳೆಸಿದ ಶ್ರಮಜೀವಿಗಳ ಹೆಸರೆಲ್ಲಿ
ಸಾವಿರ ವರ್ಷದ ಸಂಸ್ಕೃತಿಗಳನ್ನು ಸೃಷ್ಟಿಸಿದವರ ಗುರುತೆಲ್ಲಿ

ದೇಶಕ್ಕೆಲ್ಲ ಅನ್ನವ ಕೊಡುವುದು ದುಡಿಯುವ ರೈತನ ಶ್ರಮವು
ಉಣ್ಣುವ ಉಡುವ ಎಲ್ಲ ವಸ್ತುಗಳ ಮೂಲದಲ್ಲಿದೆ ಶ್ರಮವು

ರಸ್ತೆ ಬೀದಿಗಳ ಮಹಲು ಮನೆಗಳ ಕಟ್ಟುವುದೆಲ್ಲ ಶ್ರಮವೆ
ನಾಗರಿಕತೆಗಳ ವೈಭವಗಳನ್ನು ಬೆಳೆಸಿದೆಲ್ಲ ಶ್ರಮವೆ

ಅಣೆಕಟ್ಟುಗಳ ಕಾರಖಾನೆಗಳ ನಿರ್ಮಿಸಿರುವರು ದುಡಿವವರು
ಬೆವರು ರಕ್ತಗಳ ಹರಿಸಿ ದುಡಿವವರು ಹೆಸರಿಲ್ಲದೆಯೆ ಮಡಿವವರು

ಗುಡ್ಡ ಗಣಿಗಳಲಿ ಕಬ್ಬಿಣ ಅಗೆವರು ಕಬ್ಬಿಣದಂಥಾ ದುಡಿವವರು
ದುಡಿವರ ಬೆನ್ನಿನ ಮೇಲ್ಗಡೆ ಕುಳಿತು ಮೆರೆವವರು ಹಣವುಳ್ಳವರು
ಮಂತ್ರಿ ಶಾಸಕರ ಆರಿಸಿ ಗದ್ದುಗೆಗೇರಿಸಿ ಹೊರುವರು ದುಡಿವವರು
ಸ್ವಾಮಿ ಜಗದ್ಗುರುಗಳ ಪಲ್ಲಕಿಯಲಿ ಮೆರೆಸಿ ಸಾಯುವರು ದುಡಿವವರು

ಶ್ರಮ ಜೀವಿಗಳಿಗೆ ಮೋಸವ ಮಾಡುವ ದೇಶವು ಎಂದೂ ಬೆಳೆಯೊಲ್ಲ
ಶ್ರಮ ಗೌರವವನು ಮರೆತ ಜನಾಂಗಕೆ ಪ್ರಗತಿಯ ಭವಿಷ್ಯ ಉಳಿಯೊಲ್ಲ

ಶ್ರಮ ಜೀವಿಗಿಂತ ಶ್ರೇಷ್ಠನು ಯಾರು ಅವನಿಗೆ ಎಲ್ಲರು ಸಣ್ಣವರು
ಪವಿತ್ರ ತೀರ್ಥವು ಯಾವುದು ಇಲ್ಲ ಅದುವೇ ಶ್ರಮದಾ ಬೆವರು

ಶ್ರಮವೇ ದೇಹಾರೋಗ್ಯಕ್ಕೆ ಮೂಲ ಮನದಾರೋಗ್ಯವು ಕೂಡ
ಜಪತಪ ಪೂಜಾ ಯಜ್ಞಯೋಗಗಳು ಶ್ರಮಕ್ಕೆ ಸಣ್ಣವು ನೋಡ

ಚೆಲುವಿನ ರಹಸ್ಯ ಗೆಲುವಿನ ಗುಟ್ಟು ಶ್ರಮ ಸಾಧನೆಯಲೆ ಅಡಗಿಹುದು
ದೀರ್ಘಾಧಾಯುಷ್ಯ ಶಕ್ತಿ ಸಾಮರ್ಥ್ಯ ಶ್ರಮದಿಂದ ಸಿದ್ದಿಯಾಗುವುದು

ತಲತಲಾಂತರದ ಕರ್ಮಕೌಶಲತೆ ಕಲೆ ಜಾಣ್ಮೆ ಪ್ರತಿಭೆಯೆಲ್ಲ
ಹನಿ ಹನಿ ಕೂಡಿದ ಹೊಳೆಯು ಸಂಸ್ಕೃತಿಯು
ಎಲ್ಲ ಶ್ರಮದ ಕೊಡುಗೆಯಲಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಸ್ಟ್ರೇಲಿಯಾ
Next post ಶರಣನ ಕುರುಹು

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…