ಆಸ್ಟ್ರೇಲಿಯಾ

ಪುರಾತತ್ವ ಪುರಾವೆಗಳ ಪ್ರಕಾರ ಅಸ್ಟ್ರೇಲಿಯದ ಮೂಲ ನಿವಾಸಿಗಳು 40,000 ವರ್ಷಗಳಷ್ಟು ಪ್ರಾಚೀನರು ಎಂದು ತಿಳಿಯುತ್ತದೆ. ಇವರು ಆಗ್ನೇಯ ಏಷ್ಯಾದಿಂದ ಬಂದವರೆಂದು ಹೇಳಲಾಗಿದೆ. ಆದರೆ 16ನೆಯ ಶತಮಾನದಲ್ಲಿ
ಯುರೋಪಿನ ಅನ್ವೇಷಣಾಕಾರರು ಇಲ್ಲಿ ಕಾಲಿಟ್ಟ ನಂತರ ಎಲ್ಲಿವೂ ಬದಲಾಗಿ ಹೋಗಿದೆ. ತಮ್ಮ ವಸಾಹತುವಿಗೆ ಮೂಲ ನಿವಾಸಿಗಳ ಮೇಲೆ ದೌರ್ಜನ್ಯ ಪ್ರಾರಂಭಿಸಿದರು. ಮೂಲ ನಿವಾಸಿಗಳ ಸಂಖ್ಯೇ ತೀವ್ರವಾಗಿ ಇಳಿಯ ತೊಡಗಿತು; ಬ್ರಿಟನ್ನಿನಲ್ಲಿ ಅಪರಾಧ ಮಾಡಿದವರನ್ನು ಗಡೀಪಾರು ಮಾಡಿ ಆಸ್ಟೇಲಿಯಾಕ್ಕೆ ಕಳುಹಿಸಲಾಗುತ್ತಿತ್ತು. ಅದು ಅಂದು ಖೈದಿಗಳ ನಾಡು ಎಂದೂ ಪರಿಚಿತವಾಗಿತ್ತು. ಬ್ರಿಟಿಷರ ದಾಸ್ಯದಿಂದ1901ರಲ್ಲಿ ಸ್ಥಾತಂತ್ರ್ಯ ಪಡೆದುಕೊಂಡು ತಾವೇ ಸಂವಿಧಾನ ರಚಿಸಿಕೊಂಡಿದ್ದಾರೆ. ಅಸ್ಟೇಲಿಯಾ ಸ್ವಾತಂತ್ರ್ಯ ರಾಷ್ಟ್ರವಾದರೂ ಈಗಲೂ ಬ್ರಿಟನ್ನಿನ ರಾಣಿಯೇ ಅಧಿಪತಿ. ಹೇರಳವಾದ ನೈಸರ್ಗಿಕ ಸಂಪತ್ತನ್ನು ಹೊಂದಿದ್ದು ಕೈಗಾರಿಕಾ ರಾಷ್ಟ್ರವಾಗಿರುವ ಅಸ್ಟ್ರೇಲಿಯಾ ಉನ್ನತ ಜೀವನಮಟ್ಟ ಹೊಂದಿರುವ ಪ್ರಜಾಪ್ರಭುತ್ವ  ರಾಷ್ಟ್ರ. ಅಲ್ಲಿರುವವರೆಲ್ಲ ಹೆಚ್ಚಾಗಿ ಯೂರೋಪಿ- ಯನ್ನರು  ಅಮೇರಿಕನ್ನರು ಐಶಾರಾಮಿಯಾಗಿದ್ದಾರೆ. ಇವರೆಲ್ಲ ಆಸ್ಟ್ರೇಲಿಯದ  ಪೌರರು. ನಮ್ಮ ಭಾರತೀಯರನೇಕರು ಉದ್ಯೋಗಾರ್ಥಿಗಳಾಗಿಯೋ,  ವಿದ್ಯಾರ್ಥಿಗಳಾಗಿಯೋ ಹೋಗುತ್ತಿರುವುದು ಕೆಲವರು ಅಲ್ಲಿಯೇ ನೆಲೆಯೂರಿದವರೂ ಇರುವುದು ಕಂಡು ಬರುತ್ತದೆ. ಆಸ್ಟ್ರೇಲಿಯಾ ಒಳ್ಳೆಯ ವಿಶ್ವವಿದ್ಯಾಲಯಗಳನ್ನು ಹೊಂದಿದೆ. ಅಸ್ಟ್ರೇಲಿಯಾಕ್ಕೆ ಇತ್ತೀಚೆಗೆ ಯುರೋಪ್ ಅಮೆರಿಕಾಕ್ಕಿಂತ ಬೇಡಿಕೆ ಹೆಚ್ಚುತ್ತಿದೆ. ನಮ್ಮ ಪ್ರವಾಸ ಸಾಹಿತಿಗಳು ಯುರೋಪ, ಅಮೆರಿಕಕ್ಕೆ ಹೋಗಿಬಂದಷ್ಟು ಈ ಕಡೆಗೆ ಹೋಗಿಲ್ಲ. ಬೆರಳೆಣಿಕೆಯ ಲೇಖಕರು ಮಾತ್ರ ಆಸ್ಟ್ರೇಲಿಯಾದ ಬಗೆಗೆ ಪ್ರವಾಸ ಕಥನ ರಚಿಸಿರುವುದು ಕಂಡುಬರುತ್ತದೆ. ಪದ್ಮಾ ಗುರುರಾಜ್  (ಕಾಂಗರೂಗಳ ನಾಡಿನಲ್ಲಿ) ಪ್ರೊ. ಬಿ.ವಿರೂಪಾಕ್ಷಪ್ಪ (ನನ್ನ ಸಿಂಗಪುರ ಮತ್ತು ಆಸ್ಟ್ರೇಲಿಯದ ಪ್ರವಾಸ ಅನುಭವಗಳು) ಟಿ.ಮಹಾಬಲೇಶ್ವರ ಭಟ್ಟ (ಆಸ್ತ್ರೇಲಿಯಾದಲ್ಲಿ ಎಪ್ಪತ್ತು ದಿನಗಳು) ನಾಗಭೂಷಣಯ್ಯ (ನಾ ಕಂಡ ನ್ಯೂಜಿಲೆಂಡ್) ಪ್ರಭಾಮೂರ್ತಿ (ಹಸಿರು – ಹವಳು ತ್ರಿವೇಣಿ ಶಿವಕುಮಾರ (ದಿವ್ಯ ಮೌನದ ದೇಶಗಳಲ್ಲಿ) ಮುಂತಾದವರು.

ಈ ಭೂಮಂಡಲದ ಅತಿ ಚಿಕ್ಕ ಖಂಡ ಅಸ್ಟ್ರೇಲಿಯಾ. ನ್ಯೂಗಿನಿ, ನ್ಯೂಜಿಲ್ಯಾಂಡ್ ಮತ್ತು ಪೆಸಿಫಿಕ್ ಸಾಗರದ ಸಾವಿರಾರು ಪುಟ್ಟ ದ್ವೀಪಗಳನ್ನು ಒಳಗೊಂರಿಡಿರುವ ಈ ಖಂಡವನ್ನು ‘ಓಷೇನಿಯಾ’ ಎಂದೂ ಕರೆಯುತ್ತಾರೆ. ಪೆಸಿಪಿಕ್ ಸಾಗರದ ಪ್ರದೇಶದಲ್ಲಿರುವ ದೇಶಗಳು ಹಾಗೂ ದ್ವೀಪಗಳಲ್ಲಿರುವ ಮೂಲ ಜನರಿಗೆ ಮೆಲಾನೇಷಿಯನ್, ಮೈಕ್ರೋನೇಷಿಯನ್, ಪಾಲಿನೇಷಿಯನ್ ಎಂದೂ ಕರೆಯುವರು. ಈ ಬಗೆಗಿನ ದೀರ್ಘವಾದ ಪರಿಚಯವನ್ನು ಪಾಂಡುರಂಗಶಾಸ್ತ್ರಿ, ಸಿ.ಆರ್. ಕೃಷ್ಣರಾವ್ ಅವರು ತಮ್ಮ ‘ದೇಶ ವಿದೇಶಗಳ ಪರಿಚಯ’ ಪುಸ್ತಕದಲ್ಲಿ ತಿಳಿಸಿಕೊಟ್ಟಿದ್ಧಾರೆ.

‘ನನ್ನ ಸಿಂಗಪುರ ಮತ್ತು ಅಸ್ಟ್ರೇಲಿಯಾದ ಪ್ರವಾಸ ಅನುಭವಗಳು’ ಇದು ಪ್ರೊ ಬಿ.ವಿರೂಪಾಕ್ಷಪ್ಪನವರ ಪ್ರವಾಸ ಕಥನ. ಆಸ್ಟ್ರೇಲಿಯದ ಬಗೆಗಿನ ಒಂದು ಸಮಗ್ರ ಪರಿಚಯವನ್ನು ಇವರು ಮಾಡಿಕೊಟ್ಟಿದ್ದಾರೆ. Aborigines ಎಂದು ಕರೆಯುತ್ತಿರುವ ಅಲ್ಲಿಯ ಆದಿವಾಸಿಗಳು ಅಥವಾ ಮೂಲ ನಿವಾಸಿಗಳಿಗೆ 40,000 ವರ್ಷಗಳ ಇತಿಹಾಸವಿದೆ ಎಂದು ಸಂಶೋಧಕರ ಅಭಿಪ್ರಾಯ ತಿಳಿಸಿಕೊಡುತ್ತಾರೆ. ಇವರ ಬಣ್ಣ ಕಡುಗಪ್ಪು, ಮುಖ ಮುದ್ರೆ ದಕ್ಷಿಣ ಅಫ್ರಿಕಾ ಹಾಗೂ ದಕ್ಷಿಣ ಭಾರತದ ಕಾಡುಗಳ ಅದಿವಾಸಿಗಳ ಮುಖ ಮುದ್ರೆಯನ್ನು ಹೋಲುತ್ತದೆ. ಇವರು ಬೇಟೆಯ ಮಾನವ ಯುಗದ ರೀತಿಯಲ್ಲಿಯೇ ಇರುತ್ತಾರೆ. ಬೆತ್ತಲೆಯಾಗಿದ್ದು ಗಿಡದ ಎಲೆಗಳಿಂದ ತಮ್ಮ ಮರ್ಮಾಂಗಗಳನ್ನು ಮುಚ್ಚಿಕೊಳ್ಳುತ್ತಾರೆ. ಬಿಲ್ಲು ಬಾಣಗಳು ಯಾವಾಗಲೂ ಇವರ ಸಂಗಾತಿ. ಬಾರಾಮೂಡಿ ಎಂಬ ಮೀನು ಮತ್ತು ಗೆಣಸುಗಳು ಇವರ ಆಹಾರ. ಭೂತ ಪ್ರೇತಗಳಲ್ಲಿ ನಂಬಿಕೆ ಉಳ್ಳವರು. ಇವರಲ್ಲಿ ಎರಡುನೂರು ಪ್ರಕಾರದ ಬುಡಕಟ್ಟುಗಳಿವೆ. ಇವರು ಸಂಘ ಜೀವಿಗಳಾಗಿ ಅನೇಕ ಉತ್ಸವಗಳನ್ನು ಸಮಾರಂಭಗಳನ್ನು ಅಚರಿಸುತ್ತಾರೆ. ಸಮಾರಂಭಗಳಿಗೆ ಬುಡಕಟ್ಟೆನ
ಕುಟುಂಬಗಳನ್ನು ಕೊಂಬುಗಳನ್ನೂದುವುದರ ಮೂಲಕ ಅಮಂತ್ರಣ ಕಳಿಸಿ ಆಚರಿಸಲಾಗುತ್ತದೆ. ಇವರು ಆಧ್ಯಾತ್ಮಿಕವಾಗಿ ಪರಂಪರೆಗಳನ್ನು ರೂಪಿಸಿದ್ದಲ್ಲದೆ ಕಲೆ, ಸಂಗೀತ ಮತ್ತು ತಮ್ಮದೇ ಆದ ಔಷಧ ಪದ್ಧತಿಯನ್ನು ಬೆಳೆಸಿಕೊಂಡಿದ್ದರು. ಕ್ಯಾಪ್ಟನ್ ಕುಕ್ 1770ರಲ್ಲಿ ಅಸ್ಟ್ರೇಲಿಯವದ ಈಗಿನ ಸಿಡ್ನಿ ಪಟ್ಟಣದ ಹತ್ತಿರ ನೈಸರ್ಗಿಕ
ಬಂದರಿಗ ಹಡಗಿನಲ್ಲಿ ಬಂದಿಳಿದಾಗ ಇವರು ಬಿಳಿಯರ ಬರವನ್ನು ಪ್ರಬಲವಾಗಿ ವಿರೋಧಿಸಿದರು. ಅವರನ್ನು ಕೊಲ್ಲಲ್ಲು ಯೋಜಿಸಿದರು. ಆದರೆ ಕ್ಯಾಪ್ಟನ್ ಕುಕ್ ಬುದ್ಧಿವಂತ. ಆಹಾರ ಬಟ್ಟೆಗಳ ಆಮಿಷ ತೋರಿಸಿ ಇವರನ್ನು ಪಳಗಿಸಿದ. ತನ್ನ
ಪರ ಮಾಡಿಕೊಂಡ. ನಂತರ ಬಂದ ಯೂರೋಪಿಯನ್ನರು ಇಲ್ಲಿಯ ಕಾಡುಗಳನ್ನು ನಾಶಮಾಡಿ ತಮ್ಮ ಮನೆಗಳನ್ನು ಕಟ್ಟೆಕೊಂಡರು. ಆದಿವಾಸಿಗಳನ್ನು ದುಡಿಸಿಕೊಳ್ಳತೊಡಗಿದರು. ಯೂರೋಪಿಯನ್ನರಿಂದ ಚರ್ಚುಗಳು ಸ್ಥಾಪಿತವಾಗತೊಡಗಿದವು. ಕ್ರಿಶ್ಚಿಯನ್ ಪಾದ್ರಿಗಳಿಂದ ಇವರ ಮತಾಂತರ ಪ್ರಾರಂಭವಾಗಿ ಅನೇಕರು ಈ ಧರ್ಮವನ್ನು ಸ್ವೀಕರಿಸಿದರು. ಇಂಗ್ಲಿಷ್ ಕಲಿತು ಅವರ ವೇಷ ಭೂಷಣಗಳನ್ನು ಆಹಾರ ಕ್ರಮಗಳನ್ನು ತಮ್ಮದಾಗಿಸಿಕೊಂಡರು. ಹೀಗಿದ್ದರೂ ಅವರು ತಮ್ಮ ಮೂಲ ಸಂಸ್ಕೃತಿಯನ್ನು ಬಿಟ್ಟಿಲ್ಲವೆಂದು ಹೇಳಬೇಕು
ಎನ್ನುತ್ತಾರೆ ವಿರೂಪಾಕ್ಷಪ್ಪನವರು.

ಆಸ್ಟೇಲಿಯದ ವಿಶ್ವವಿದ್ಯಾಲಯಗಳು ಅವುಗಳ ಗುಣಮಟ್ಟದ ಬಗೆಗೆ ಲೇಖಕರು ತುಂಬಾ ಮೆಚ್ಚೆಕೊಂಡಿದ್ಧಾರೆ. ಅಸ್ಟೇಲಿಯಾ ಬ್ರಿಟಿಷ್ ಸಾಮ್ರಾಜ್ಯದ ಅಂಗವಾಗಿರುವುದರಿಂದ ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯದ ಹಂತದವರೆಗೆ ಬ್ರಿಟಿಷ್ ಮಾದರಿಯ ಶಿಕ್ಷಣ ಪದ್ಧತಿ ಜಾರಿಯಲ್ಲಿದೆಯಂತೆ. ಅಸ್ಟ್ರೇಲಿಯಾದಲ್ಲಿ ಒಟ್ಟು ಐವತ್ತು ವಿಶ್ವವಿದ್ಯಾಲಯಗಳಿದ್ದು. ಪ್ರತಿಯೊಂದು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೇ 10,000 ಕ್ಕಿಂತ ಮಿಗಿಲಾಗಿರುವುದಿಲ್ಲ ವೆನ್ನುವರು. ಯುರೋಪ ಅಮೆರಿಕದಂತೆ ಇಲ್ಲಿಯ ವಿದ್ಯಾರ್ಥಿಗಳದ್ದೂ ಅದೇ ಕಥೆ. 12ನೆಯ ಕ್ಲಾಸಿನಲ್ಲಿ ಇರುವಾಗಲೇ ಪ್ರೌಢರಾಗಿರುತ್ತಾರೆ. ಓದುವವರು ಗಂಬೀರವಾಗಿ ಓದಿಕೊಂಡು ಹೋಗುತ್ತಿದ್ದರೆ ಉಳಿದವರು (ಹೆಚ್ಚಾಗಿ) ಪ್ರೇಮ ಕಾಮ ಕುಡಿತದ ಚಟಕ್ಕೆ ಬಲಿಬೀಳುವರು.

ಅಲ್ಲಿಯ ರಾಷ್ಟ್ರೀಯ ಕಲಾಕೇಂದ್ರಕ್ಕೆ ಭೇಟಿ ಕೊಟ್ಟ ಲೇಖಕರು ಬಾರತೀಯ ವಿಭಾಗದಲ್ಲಿ, ಹಿಂದೂ ಧರ್ಮದ ವ್ಯಾಖ್ಯೆ ಇರುವುದನ್ನು  ನೋಡಿ ಓದಿ ತಮ್ಮ ಪ್ರವಾಸ ಕಥನದಲ್ಲಿ ಹಿಡಿದಿಟ್ಟಿದ್ಧಾರೆ. ಅದು ಇಂಗ್ಲಿಷ್‌ನಲ್ಲಿದೆ. ಅದರ ಅನುವಾದವನ್ನು ಇವರು ಮಾಡಿದ್ದಾರೆ. ಪೂರ್ವ ದೇಶಗಳಲ್ಲಿ ಬುದ್ದನ ಪ್ರಭಾವ ಇನ್ನೂ ಅಚ್ಚಳಿಯದ ರೀತಿಯಲ್ಲಿ ಉಳಿದುಕೊಂಡು ಬಂದಿದೆ ಎನ್ನುವಂತೆ ಈ ವಸ್ತು ಸಂಗ್ರಹಾಲಯದಲ್ಲಿರುವ ಬುದ್ಧನ ವಿಗ್ರಹಗಳು ಜೈನ ತೀರ್ಥಂಕರರ ಕಂಚಿನ ವಿಗ್ರಹಗಳು ಅಲ್ಲಿರುವದಾಗಿ ತಿಳಿಸುತ್ತಾರೆ.

18ನೆಯ ಶತಮಾನದಲ್ಲಿ ಇಲ್ಲಿಗೆ ಬಂದಿಳಿದು ವಸಾಹತು ಸ್ಥಾಪಿಸಿದ ಯುರೋಪಿಯನ್ನರು, ತಾವು ಬರುವಾಗ ತಂದ ಅನೇಕ ವಸ್ತುಗಳಂತೆ (ತರಕಾರಿ, ಹಣ್ಣು ಬೀಜಗಳು. ಗೊಬ್ಬರ. ಒಳ್ಳೆ ಜಾತಿಯ ಆಕಳುಗಳು ಮುಂತಾದವುಗಳು)
ಕುರಿಗಳನ್ನೂ ಅವುಗಳ ತಳಿಯನ್ನೂ ಇಲ್ಲಿಗೆ ತಂದಿದ್ದಾರೆ. ಉಣ್ಣೆ ತೆಗೆಯಲೆಂದೇ ಹೆಸರಾಂತ ತಳಿಗಳನ್ನು ಇಲ್ಲಿ ಸಾಕಿದ್ದಾರೆ. ಅಸ್ಟ್ರೇಲಿಯದ ಉಣ್ಣೆ ಜಗತ್ಪಸಿದ್ಧ. ಉಣ್ಣೆಯನ್ನು ನಿರ್ಯಾತ ಮಾಡುವ ದೇಶಗಳಲ್ಲಿ ಆಸ್ಟ್ರೇಲಿಯಾ ಪ್ರಧಾನ ದೇಶ ಎನ್ನುವರು. ಇದರ ಬಗೆಗೆ ಸಾಕಷ್ಟು ವಿವರಣೆ ಬಂದಿದೆ.

ಟಿ.ಮಹಾಬಲೇಶ್ವರ ಭಟ್ಟರ ‘ಅಸ್ಟೇಲಿಯಾದಲ್ಲಿ ಎಪ್ಪತ್ತು ದಿನಗಳು’ ಕೃತಿಯ ಮುಖಾಂತರ ಆದಷ್ಟು ಅಲ್ಲಿಯ ಸಾಮಾಜಿಕ ರಾಜಕೀಯ ಪರಿಚಯವನ್ನು ಮಾಡಿಕೊಳ್ಳಬಹುದಾಗಿದೆ. ಅಸ್ಟೇಲಿಯಾದ ರಾಜಧಾನಿ ಕ್ಯಾನ್ಬೆರಾ. ‘ಕೆನ್‌ಬರಾ’ ಎಂದರೆ ಆದಿವಾಸಿಗಳ ಬಾಷೆಯಲ್ಲಿ ಕೂಡುವ ಸ್ಥಳ (Meeting place) ಎಂದರ್ಥವಂತೆ. ಆದಿವಾಸಿ ಬಾಷೆಯ ಅನೇಕ ಹೆಸರುಗಳನ್ನು ಬೀದಿಗಳಿಗೆ ಇಟ್ಟಿದ್ದಾರೆ ಎನ್ನುವರು. ಇಲ್ಲಿಯ ಪಾರ್ಲಿಮೆಂಟ್ ಭವನಕ್ಕೆ ಸಾರ್ವಜನಿಕರು ಪ್ರವೇಶಿಸುವಾಗ ಯಾರ ಅಪ್ಪಣೆಯನ್ನು ಪಡೆಯಬೇಕಾದ್ದಿಲ್ಲ. ಅಸ್ಟ್ರೇಲಿಯದ ಪ್ರಧಾನ
ಮಂತ್ರಿ ಈ ಭವನಕ್ಕೆ ಬರಲು ಎಷ್ಟು ಅವಕಾಶ ಇದೆಯೋ, ಅಷ್ಟೇ ಅವಕಾಶ ಆಸ್ಟ್ರೇಲಿಯಾದ ಜನತೆಗೂ ವಿದೇಶಿಯರಿಗೂ ಇದೆ. ಇಲ್ಲಿ ಒಳಪ್ರವೇಶಿಸುವ ಯಾರೂ ತಮ್ಮ ಹೆಸರು ವಿಳಾಸ ಸಹಿ ನೀಡುವುದಾಗಲೀ ನಮ್ಮಲ್ಲಿಯಂತೆ ಪಾರ್ಲಿಮೆಂಟ್ ಸದಸ್ಯರ ಅನುಮತಿ ಪತ್ರವಾಗಲೀ ರಕ್ಷಣಾ ಇಲಾಖೆಯ ಅಪ್ಪಣೆ ಪತ್ರವಾಗಲೀ
ತರಬೇಕಾಗಿಲ್ಲ. ದೇವಾಲಯಗಳಿಗೆ ಹೋಗಿ ಬರುವಂತೆ ಇಲ್ಲಿಗೆ ಹೋಗಿ ಬರಬಹುದು. ಪಾರ್ಲಿಮೆಂಟ್ ಭವನದಲ್ಲಿ ಎಲ್ಲಿ ಬೇಕಾದರೂ ಫೋಟೋ ತೆಗೆಯಲು ಯಾರ ಅಭ್ಯಂತರವೂ ಇಲ್ಲ. ದೇಶದ ಜನರಿಗೆ ನಿಜವಾದ ಸ್ವಾತಂತ್ರ್ಯ
ಇಲ್ಲಿ ಇದೆ. ಮಂತ್ರಿಗಳು ಇಲ್ಲಿ ಸಾಮಾನ್ಯ ಜನರಂತೆಯೇ ಇರುತ್ತಾರೆ. ಅವರೇ ಕುಟುಂಬದ ಸಮೇತ ಮಾರ್ಕೆಟ್ಟಿಗೆ ಹೋಗಿ ತಮ್ಮ ಸಾಮಾನುಗಳನ್ನು ಕೊಂಡು ತರುತ್ತಾರೆ. ಅಸ್ಟ್ರೇಲಿಯಾದ ಪ್ರಜೆಗೆ ಮತದಾನ ಹಕ್ಕು  ಬರಲು 18
ವರ್ಷವಾಗಿರಬೇಕು. ರಾಜಕೀಯದಲ್ಲಿ ಸತ್ಯಾಗ್ರಹ. ಪ್ರತಿಭಟನೆ, ವಿರೋಧ ಪಕ್ಷಗಳಿದ್ದರೂ ವಿನಾಕಾರಣ ಪ್ರತಿಭಟನೆ ಸತ್ಯಾಗ್ರಹ ನಡೆಯುವುದಿಲ್ಲ. ಪ್ರಧಾನ ಮಂತ್ರಿಯಾದವರು ಪ್ರತಿಭಟನಾಕಾರರ ಸಮಸ್ಯೆಯನ್ನು ಅರಿಯಲು ಅವರೇ
ಬರುತ್ತಾರೆ. ಸರಿ ಎಂದು ಕಂಡರೆ, ನ್ಯಾಯಸಮ್ಮತವಾಗಿದ್ದರೆ ಅಂತಹುದಕ್ಕೆ ಸರಕಾರ ಮಾನ್ಯತೆ ಕೊಡುತ್ತದೆ. ಅದರೆ ಸತ್ಯಾಗ್ರಹ ನಡೆಸುವವರ ಬೇಡಿಕೆ ಸೂಕ್ತವಲ್ಲವೆಂದು ಕಂಡುಬಂದರೆ ಅಷ್ಟೇ ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸುತ್ತಾರೆ ಎಂದು ಅಲ್ಲಿಯ ರಾಜಕೀಯ ವ್ಯವಸ್ಥೆ ಬಗೆಗೆ ತಿಳಿಸಿಕೊಟ್ಟಿರುವರು.

ಅಲ್ಲಿಯ ದಾಂಪತ್ಯ ಜೀವನ ಎಷ್ಟೊಂದು ಸಹಜಾವಸ್ಥೆಗೆ ಇಳಿದುಬಿಟ್ಟಿದೆ. ಎಂಬುದು ವಿವರವಾಗಿಯೇ ಹೇಳಿದ್ಧಾರೆ. ವಿವಾಹಕ್ಕೆ ಮುನ್ನ 15ನೆಯ ವಯಸ್ಸಿನಲ್ಲಿಯೇ ಮಕ್ಕಳನ್ನು ಹಡೆದವರ ಸಂಖ್ಯೇ ಇಲ್ಲೇನು ಕಡಿಮೆ ಇಲ್ಪ 22 ವರ್ಷಕ್ಕೆ ಎರಡು ಅಥವಾ ಮೂರು ಮಕ್ಕಳ ತಾಯಂದಿರಾಗಿ ಅನಂತರ ಅಧಿಕೃತವಾಗಿ ವಿವಾಹವನ್ನು ಮಾಡಿಕೊಂಡವರೇ ಇಲ್ಲಿ ಬಹಳಷ್ಟು ಮಂದಿ ಇದ್ದಾರೆ. ಇಲ್ಲಿಯ ಮದುವೆಯ ರಿಜಿಸ್ಟ್ರೇಷನ್ ಫಾರಂನಲ್ಲಿ ನಿಮಗೆ ಇದು ಮೊದಲನೆಯ ಮದುವೆಯೆ?  ನಿಮಗೆ ಇದು ಎಷ್ಟನೆಯ ಮದುವೆ? ನಿಮಗೆ ಎಷ್ಟು ಮಂದಿ ಮಕ್ಕಳಿದ್ದಾರೆ ? ಎಂಬ ಕಾಲಂಗಳು ಮುದ್ರಿಸಿರುತ್ತಾರೆ. ವಿವಾಹವಾಗಲಿ ದಾಂಪತ್ಯ ಜೀವನವಾಗಲಿ ಇಲ್ಲಿ ಸುಖಕರವಾಗಿಲ್ಲ. ಪ್ರೇಮ ಕಾಮ ಇವುಗಳಿಗೆ ವಿಶೇಷವಾದ ಮಹತ್ವ ಇಲ್ಲ. ವಿವಾಹದಲ್ಲಿ ಮಹಿಳೆ ಕಡಿಮೆ ವರ್ಷದವಳಿರಬೇಕೆನ್ನುವ ನಿಯಮವೇನಿಲ್ಲ. ಪರಸ್ಪರ ಪ್ರೀತಿ ಮಾಡಿದರೆ ಸಾಕು. ಅತಿ ಚಿಕ್ಕ ವಯಸ್ಸಿನ ಹುಡುಗಿಯನ್ನು 45, 50 ವರ್ಷದ ಪುರುಷ ಮದುವೆಯಾಗುವುದೂ ಇಲ್ಲಿ
ಸಾಮಾನ್ಯ ಸಂಗತಿ ಎನ್ನುತ್ತಾರೆ.

ಪದ್ಮಾ ಗುರುರಾಜ್‌ರ ಪ್ರವಾಸ ಕೃತಿ ‘ಕಾಂಗರೂಗಳ ನಾಡಿನಲ್ಲಿ’ ಆಸ್ಟ್ರೇಲಿಯಾದ ಬಗೆಗೆ ಅನೇಕ ವಿಷಯಗಳು ಪರಿಚಯಿಸಿದ್ದಾರೆ. ಅವರು ತಿಳಿಸಿದಂತೆ ಆಸ್ಟ್ರೇಲಿಯಾದ ನಿರುದ್ಯೋಗ ವೇತನ ವೃದ್ಧಾಪ್ಯವೇತನದ ಬಗೆಗೆ ತಿಳಿದುಕೊಳ್ಳಬೇಕು. ಇಲ್ಲಿಯ ಸರಕಾರ ಉದಾರವಾಗಿ ವಲಸೆ ಬಂದವರಿಗೆ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವವರೆಗೆ ವಾರಕ್ಕೆ ಇಷ್ಟು ಎಂದು ನಿರುದ್ಯೋಗ ಭತ್ಯೇ ನೀಡುತ್ತದೆ. ಅದು ಹೊಟ್ಟೆ  ಕನಿಪ್ಟ ಸೌಲಭ್ಯಗಳಿಗಾಗುವಷ್ಟು ಇರುತ್ತದೆಯಾದುದರಿಂದ ಎಷ್ಟೋ ಜನ ಆಲಸಿಗಳು ಕೆಲಸ ಹುಡುಕುವ, ಕೆಲಸ ಮಾಡುವ ಗೋಜಿಗೆ ಹೋಗುವುದಿಲ್ಲ ಮತ್ತು ಎಷ್ಟೋ ಜನ ಕೆಲಸಮಾಡಿಕೊಂಡೂ ಸಂಪಾದನೆ ಇದ್ದರೂ ಸರಕಾರಕ್ಕೆ ಮೋಸ ಮಾಡಿ ವೇತನ ತೆಗೆದು ಕೊಳ್ಳುವವರ ಪ್ರಸಂಗಗಳೂ ಉಂಟು.ಸರಕಾರ ಕನಿಷ್ಟ ಜೀವನ ಸೌಲಭ್ಯಗಳನ್ನು ರಿಯಾಯತಿಗಳನ್ನು ಒದಗಿಸುವುದ- ರಿಂದ ಈ ದೇಶದಲ್ಲಿ ಎಲ್ಲೂ ದೀನರು ದರಿದ್ರರು ಭಿಕ್ಷರಿಕರು ಇಲ್ಲವೇ ಇಲ್ಲ. ಕಳ್ಳತನ, ಸುಲಿಗೆ, ದರೋಡೆ ಮುಂತಾದ ಅಪರಾಧಗಳ ಪ್ರಮಾಣ ಸಹ ತುಂಬಾ ಕಡಿಮೆ.

ಆಗಾಗ ಒಂದಷ್ಟು ಕೇಳಿಬರುವುದಾದರೂ ಲೈಂಗಿಕ ಅಪರಾದಗಳು, ರೇಪ್. ಕಾಡಿನಲ್ಲಿ ತಿರುಗಾಡಲು ಹೋಗಿ ಕಳೆದು ಹೋದವರು, ಬೈಕಿಗಳ ಗ್ಯಾಂಗ್‌ವಾರ್‌ಗಳು ಇತ್ಯಾದಿ ಪ್ರಸಂಗಗಳು ಕಾಣುತ್ತಲೇ ಇರುತ್ತವೆ ಎನ್ನುತ್ತಾರೆ ಲೇಖಕಿ.

ನಮ್ಮ ಹಾಗೆ ಅಲ್ಲಿ ಕೂಡು ಕುಟುಂಬದ ಪದ್ಧತಿ ಇಲ್ಲ. ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆಯೇ ಹೆತ್ತವರಿಂದ  ಬೇರೆಯಾ- ಗುತ್ತಾರೆ. ಎಲ್ಲರಿಗೂ ಸ್ಥತಂತ್ರ ಜೀವನದ ಹಂಬಲ. ಹಿರಿಯರೂ ಸಹ ಮಕ್ಕಳೊಂದಿಗೆ ಇರಲು ಇಚ್ಛಿಸುವುದಿಲ್ಲ. ಆದರೆ ಇಲ್ಲಿಯ ಸರಕಾರ ವೃದ್ಧರಿಗೆ ಸಾಕಷ್ಟು ಸವಲತ್ತುಗಳು ಕೊಡುತ್ತದೆ. ವೃದ್ಧಾಪ್ಯ ವೇತನದ ಜೊತೆಗೆ ಸೀನಿಯರ್ ಸಿಟಿಜನ್ ಎಂದು ಬಸ್ಸು, ರೈಲು, ಸಿನಿಮಾ, ವೈದ್ಯಕೀಯ ಶುಶ್ರೂಷೆ, ಮತ್ತೆ ಎಲ್ಲೇ ಹೋದರೂ ರಿಯಾಯಿತಿಯೋ ರಿಯಾಯಿತಿ ನೀಡುತ್ತದೆ ಎಂದು ಅಲ್ಗೆಲ್ಲ ಅಡ್ಡಾಡುವಾಗ ಲೇಖಕಿ ಗಮನಿಸಿದ್ದಾರೆ.

ಪ್ರಭಾಮೂರ್ತಿಯವರ ‘ಹಸಿರು-ಹವಳ’ ಪ್ರವಾಸ ಕಥನ ಆಸ್ಟ್ರೇಲಿಯಾದ ವಿವಿದ ಭಾಗಗಳಲ್ಲಿ ಅಡ್ಡಾಡಿ ಸಂತಸಪಟ್ಟ ಸಂದರ್ಭಗಳನ್ನು ಹೇಳುತ್ತಾ ಹೋಗುತ್ತಾರೆ. ಲೇಖಕಿ ವಕೀಲರಾಗಿ ಇಡೀ ದಿವಸ ಕೋರ್ಟು ಕಚೇರಿ ಕೆಲಸಗಳಲ್ಲಿ,
ಕಕ್ಷಿದಾರರೊಡನೆ ಇರುವ ಸಂದರ್ಭಗಳೇ ಹೆಚ್ಚಿರುವಾಗ ಅವರ ಸಾಹಿತ್ಯಾಸಕ್ತಿ ಇಲ್ಲಿ ಕಂಡು ಸಂತೋಷವಾಗುತ್ತದೆ. ಪ್ರತಿ ವರ್ಷಕ್ಕೊಮ್ಮೆ ದೇಶ ವಿದೇಶಗಳ ಪ್ರವಾಸಿ ತಾಣಗಳಿಗೆ ಹೋಗುವ ರೂಡಿ ಇಟ್ಟುಕೊಂಡಿರುವ ಪ್ರಭಾ ಮತ್ತು ಅವರ ಪತಿ ಡಾ. ಮೂರ್ತಿಯವರು ಆಸ್ಟ್ರೇಲಿಯಾಕ್ಕೂ ಹೋಗಿ ಬಂದಿದ್ದಾರೆ. ಸಿಡ್ನಿ, ಕ್ಯಾನಬೆರಾ ಪಟ್ಟಣಗಳು ಅಲ್ಲಿಯ  ಹಸಿರು ಹುಲ್ಲು ಗಾವಲುಗಳು ನೋಡುತ್ತ ನಮ್ಮ ದೇಶದ ಕೊಳಚೆ ಪ್ರದೇಶಗಳು, ಗಿಜಿಗುಟ್ಟುವ ವಾತಾವರಣ ನೆನಪಿಸಿಕೊಳ್ಳುತ್ತ ಇಡೀ ನಮ್ಮ ಪ್ರವಾಸದಲ್ಲೆಲ್ಲ ನನ್ನಲ್ಲಿ ಈ ಯೋಚನೆ ಕೊರೆಯುತ್ತಲೇ ಇತ್ತು ಎಮ್ನತ್ತಾರೆ.
ಪ್ರತಿಯೊಬ್ದ ಭಾರತೀಯನು ಹೊರದೇಶಗಳಲ್ಲಿ ಪ್ರವಾಸಿಸುವಾಗಾಗಲೀ ಅಲ್ಲಿಯೇ ಇರಬೇಕಾದ ಸಣದರ್ಭಗಳ- ಲ್ಲಾಗಲೀ ಅಗಾಗ ಸಾಂದರ್ಭಿಕವಾಗಿ ಭಾರತದ ಇಂತಹ ದೃಶ್ಯಗಳನ್ನು ಪದೇ ಪದೇ ನೆನಪಿಸಿಕೊಳ್ಳುತ್ತ ಪೇಚಾಡಿಕೊಳ್ಳುವುದು ಇದ್ದೇ ಇದೆ. ಕೆಲವರಂತೂ ಭಾರತದ ವ್ಯವಸ್ಥೆಯ ಬಗೆಗೆ ಆಕ್ರೋಶಗೊಂಡು ಸಿಕ್ಕಾಪಟ್ಟೆ
ಕೂಗಾಡಿಕೊಂಡು ಬರೆದವರೂ ಇದ್ದಾರೆ. ಕೊನೆಗೆ ಛಾರತಕ್ಕೆ ಬಂದು ಮೋಕ್ಷ ಪಡೆಯಲು ಸ್ವತಂತ್ರವಾಗಿ ಅಡ್ಡಾಡಲೂ ಹವಣಿಸುತ್ತಾರೆ, (ಇದು ಯಾವತ್ತೂ ಹೀಗೆ).

ಪ್ರಭಾಮೂರ್ತಿ ವಕೀಲೆಯಾದುದರಿಂದ ಅಸಕ್ತಿಯಿಂದ ಅಲ್ಲಿಯ ಹೈಕೋರ್ಟು, ಸುಪ್ರೀಂಕೋರ್ಟು ಮತ್ತು ಕೌಂಟೆ ಕೋರ್ಟುಗಳನ್ನು ನೋಡಿ ಅಲ್ಲಿಯ ವ್ಯವಸ್ಥೆಗಳ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿರುವರು. ಪ್ರವಾಸಿ ಬಸ್ಸುಗಳ ಮುಖಾಂತರ ಅಲ್ಲಲ್ಲಿ ಹೋಗಿ ಕಾಂಗರೂ. ಕೊವಾಲಾ ಪ್ರಾಣಿಗಳ ಫಾರಂ ನೋಡಿದ್ದಾರೆ. ಅಲ್ಪಕಾ ಪ್ರಾಣಿಗಳು ಮೇಯುವ ಹುಲ್ಲುಗಾವಲಿನಲ್ಲಿ ಅಡ್ಡಾಡಿದ್ದಾರೆ. ಗೋಲ್ಡ್ ಕೋಸ್ಟದ ಸುಂದರ ತಾಣಗಳಲ್ಲಿ ಸುತ್ತಾಡಿದ್ದಾರೆ. ಪ್ರಪಂಚದ ನೈಸರ್ಗಿಕ
ಅಚ್ಚರಿಗಳಲ್ಲೊಂದಾದ ಗ್ರೇಟ್ ಬ್ಯಾರಿಯರ್ ರೀಫ್‌ನ್ನು ಹಡಗಿನಲ್ಲಿರುವ ಸಬ್‌ಮೆರಿನ್ ಕೆಳ ಅರಿತಸ್ತಿನ ಗಾಜಿನ ತಳದ ಮುಖಾಂತರವೇ ಹವಳ ದಿನ್ನೆಗಳನ್ನು ನೋಡಿ ತೃಪ್ತಿಪಟ್ಟುಕೊಳ್ಳುತ್ತಾರೆ. ಹೀಗೆ ಇದೊಂದು ಸಂತೋಷವಾಗಿ ಅಡ್ಡಾಡಿ
ಬಂದು ಬರೆದ ಪುಸ್ತಕವೆನ್ನಬಹುದಾಗಿದೆ.

‘ದಿವ್ಯ ಮೌನದ ದೇಶಗಳಲ್ಲಿ’ ಇದು ತ್ರೀವೇಣಿ ಶಿವಕುಮಾರರ ಪ್ರವಾಸ ಕಥನ. ಕುಟುಂಬದ ಸದಸ್ಯರು ಹಾಗೂ ಸಂಬಂಧಿಗಳು ಮತ್ತು ಕೆಲವು ಲೇಖಕಿಯರ ಒಂದು ದೊಡ್ಡ ಗುಂಪಿನಲ್ಲಿ ಅಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳ
ಪ್ರವಾಸ ಮಾಡಿ ಬಂದ ಅನುಭವದ ಪ್ರವಾಸ ಕಥನ ಇದಾಗಿದೆ. ‘ದಿ ಗ್ರೇಟ್ ಬ್ಯಾರಿಯರ್’ರೀಫ್’ ನೋಡುವ ಸಂಭ್ರಮದ ಮುಖಾಂತರ ಅವರ ಪ್ರವಾಸ ಕಥನ ಅರಂಭವಾಗುತ್ತದೆ. ಸಮುದ್ರದೊಳಗಿನ ಮಾಯಾನಗರಿ ನೋಡಿ ಅಬ್ಬಾ! ಎಂದು ಬೆರಗಾಗಿದ್ದಾರೆ ತ್ರೀವೇಣಿ. ಸಬ್‌ಮೆರೀನ್ ದೋಣಿಯ ತಳದಲ್ಲಿ ಅಗಲ ಹಾಸಿದ್ದ ಗಾಜಿನೆಡಿಯಿಂದ ಸಮುದ್ರದಾಳದ ಹವಳದ ಕಣಿವೆ. ಕಣಿವೆಗಳ ಮಧ್ಯೆ ಅಸಂಖ್ಯಾತ ಬಣ್ಣ ಬಣ್ಣದ ಮೀನುಗಳು, ಬದುಕಿರುವ ಹವಳದ ಗೊಂಚಲುಗಳು, ನೀಲಿ, ಕೇಸರಿ, ಬಿಳಿ, ಕಂದು ಗುಲಾಬಿ ಇತ್ಯಾದಿ ವೈವಿಧ್ಯಮಯ ಬಣ್ಣಗಳ ಹವಳಗಳು ಪೊದೆಗಳಂತೆ, ಜೊಂಪೆಗಳಂತೆ. ಹೂಗಳಂತೆ. ಹುತ್ತಗಳಂತೆ ಬೆಳೆದು ಹೊಸದೊಂದು ಲೋಕವನ್ನೇ ಸೃಷ್ಠಿಮಾಡಿಬಿಟ್ಟಿದ್ದನ್ನು ನೋಡಿ ಸಂತಸಪಟ್ಟಿದ್ದಾರೆ.

ನ್ಯೂಜಿಲ್ಯಾಂಡಿನಲ್ಲಿ ಅಡ್ಡಾಡುವಾಗ ಸುಮಾರು 800 ವರ್ಷಗಳ ಹಿಂದೆ ಚೀನಾದೇಶದಿಂದ ಥೈವಾನ್ ದೇಶದ ಪೆಸಿಪಿಕ್ ಸಾಗರದ ಮೇಲೆ ಪ್ರಯಾಣ ಮಾಡಿ ಇಲ್ಲಿ ನೆಲೆಸಿರುವ ‘ಮಾರಿ’ ಜನಾಂಗದವರ ಬಗೆಗೆ ಪರಿಚಯ ಕೊಡುತ್ತಾರೆ. ಸೊಂಟಕ್ಕೆ ತೆಂಗಿನ ಗರಿಯಿಂದ ಮಾಡಿರುವ ತುಂಡುಲಂಗದಂಥ ವಸ್ತುವನ್ನು ಸುತ್ತಿ ಕೊರಳಿಗೆ ವಿಚಿತ್ರವಾದ ಮಣಿಸರಗಳನ್ನು ಧರಿಸಿ. ಹಚ್ಚೆ ಹಾಕಿಕೊಂಡ ಜನ ಇವರು. ಇವರದೇ ಆದರಿತಹ ನತ್ಯ ಶೈಲಿ. ಅಡುಗೆ, ಮರದ ಮೇಲಿನ ಸುಂದರ ಕೆತ್ತನೆಯ ಕೆಲಸ ಮುಂತಾದ ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದದ್ಧಾಗಿ ತಿಳಿಸುತ್ತಾರೆ. ಅದರೆ ಯುರೋಪಿಯನ್ನರು ಅಲ್ಲಿ ಕಾಲಿಟ್ಟನಂತರ ಅವರನ್ನು ಹತ್ತಿಕ್ಕಿ ತಮ್ಮ ಸಾಮ್ರಾಜ್ಯಿ ಸ್ಥಾಪಿಸಿದ್ಧಾರೆ. ಸಮಾಜದ ಮುಖ್ಯವಾಹಿನಿಯಲ್ಲಿ ಅವರನ್ನು ಪೂರ್ತಿಯಾಗಿ ಬೆರೆಯಲು ಬಿಡುವುದಿಲ್ಲ. ಪ್ರವಾಸಿಗರಿಗೆ ತಮ್ಮ ವೇಷ
ಭೂಷಣಗಳಿಂದ ಮನರಂಜನೆ ನೀಡಿ ತೃಪ್ತಿಪಟ್ಟುಕೊಳ್ಳುತ್ತಾರಷ್ಟೇ ಎಂದಿರುವರು ಲೇಖಕಿ. ಪ್ರಪಂಚದ ಎಲ್ದಾ ರಾಷ್ಟ್ರಗಳ ಮೂಲ ನಿವಾಸಿಗಳ ಮೇಲಾದ ಯುರೋಪಿಯನ್ನರ ದಬ್ಬಾಳಿಕೆ ನೆನಪಿಸಿಕೊಳ್ಳುತ್ತ ಮರುಕಪಟ್ಟು ಅಯ್ಯೋ !
ಎಂದು ಬೇಸರಪಟ್ಟುಕೊಂಡಿದ್ದಾರೆ.

ಸಿಡ್ನಿಯ ಓಪೇರಾ ಹೌಸ್. ಬ್ಲೂ ಮೌಂಟನ್ಸ್ ನೋಡುತ್ತಾ ಕಾಂಗರೂ ಕೋಲಾಗಳನ್ನು ನೋಡುತ್ತಾ. ನಿಸರ್ಗ ಸೌಂದರ್ಯದಲ್ಲಿ ಸಂತಸದಿಂದ ಅಡ್ಡಾಡಿ ಬಂದಿದ್ದಾರೆ. ಸ್ಥಿತ ಪ್ರಜ್ಞರಂತೆ ಗೊಂಬೆಗಳಂತೆ ಕಾಣುವ ಮಾನವರ ಈ ದಿವ್ಯ
ಮೌನದ ದೇಶಗಳಲ್ಲಿ ಸಂಚರಿಸಿ ಬಂದ  ಮೇಲೆ ಅಲ್ಲಿನ ನೀರವ ಸ್ಮಶಾನ ಮೌನಕ್ಕಿಂತ ನಮ್ಮ ಗೌಜು ಗದ್ದಲದ ಭಾರತ ಎಷ್ಟು ಚಂದವಿದೆ! ಈ ಗಲಾಟೆ ಹಿತವಾಗಿದೆ ಎನಿಸಿದ್ದು ಸುಳ್ಳಲ್ಲ ಎಂದು ಬಹಳ ಆತ್ಮೀಯವಾಗಿ ಒಪ್ಪಿಕೊಂಡಿದ್ದಾರೆ.
ಉಳಿದವರಂತೆ ಏರ್‌ಪೋರ್ಟಿನಲ್ಲಿ ಇಳಿಯುತ್ತಿದ್ದಂತೆಯೇ ‘ಛೀ ಥೂ! ನಮ್ಮ ದೇಶ’ ಎಂದು ಅಬ್ದರದ ಮಾತುಗಳನ್ನು ಅಡುತ್ತ ಕೊನೆಯವರೆಗೂ ಇಲ್ಲಿಯದೇ ಗಾಳಿ ಸೇವಿಸುತ್ತ ಬದುಕುವ ಕೆಲವು ಪ್ರವಾಸ ಲೇಖಕರು ಇಲ್ಲಿ ಕಣ್ಮುಂದೆ
ತೇಲಿಹೋದರು.

ಪಿ.ಎಂ.ನಾಗಭೂಷಣಯ್ಯನವರ ‘ನಾ ಕಂಡ ನ್ಯೂಜಿಲ್ಯಾಂಡ್ ‘ ಕೃತಿ ನ್ಯೂಜಿಲ್ಯಾಂಡಿನ ಭೌಗೋಳಿಕ ಪರಿಚಯದಿಂದ ಸುರುವಾಗುತ್ತದೆ. ಅಲ್ಲಿಯ ಹವಾಮಾನ, ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಅಲ್ಲಿಯ ರಸ್ತೆಗಳ, ವಾಹನಗಳ, ಸೊಬಗಿನ ಪ್ರವಾಸಿ ತಾಣಗಳ ಬಗೆಗೆ ಮಾಹಿತಿಗಳಿವೆ. ನ್ಯೂಜಿಲ್ಯಾಂಡಿನ ಮನೆಗಳೆಲ್ತಾ ಕಟ್ಟೆಗೆಯ ಮನೆಗಳಿದ್ದು ಭೂಕಂಪನ, ಚಳಿಗೆ ತಡೆದು ಕೊಳ್ಳುವಂತೆ ವ್ಯವಸ್ಥೆ ಮಾಡಿದ್ದಾರಂತೆ. ಇಲ್ಲಿ ಪ್ರತಿ ಮನೆಯ ಮುಂದೆ ಕೈ ತೋಟ ಹೊಂದಿರುವುದು ಕಡ್ಡಾಯ. ಕೈ ತೋಟ ದೊಡ್ಡದಿದ್ದಷ್ಟು ಕೊಡುವ ತೆರಿಗೆ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಅಲಂಕಾರಿಕ ಗಿಡಗಳು, ಹಣ್ಣಿನ ಗಿಡಗಳು ಹೆಚ್ಚಾಗಿ ಬೆಳೆಯುತ್ತಾರೆ. ಹಣ್ಣುಗಳು ಹೆಚ್ಚಾಗಿ  ಳೆಯುವವರು ಪ್ಲಾಸ್ಟಿಕ್ ಚೀಲಗಳಲ್ಲಿ ಹಣ್ಣುಗಳನ್ನಿಟ್ಟು ಮನೆಯ ಹೊರಗಡೆ ರಸ್ತೆಗೆ ಸಮೀಪ ಇಟ್ಟು ಉಚಿತ ತೆಗೆದುಕೊಂಡು ಹೋಗಬಹುದು ಎಂದು ಬೋರ್ಡ್ ಹಾಕಿರುತ್ತಾರೆ. ಇಲ್ಲಿ ದ್ರಾಕ್ಷಿಯನ್ನು ಹೆಚ್ಚಾಗಿ ಬೆಳೆಯುವುದರಿಂದ ವೈನ್ ಫ್ಯಾಕ್ಟರಿಗಳು ಬಹಳಷ್ಟಿವೆ ಎಂದಿದ್ದಾರೆ.

ನ್ಯೂಜಿಲ್ಯಾಂಡ್‌ನ ಜನಸಂಖ್ಯೆ 38 ಲಕ್ಷ. ಇದರಲ್ಲಿ ಭಾರತೀಯ ಜನಸಂಖ್ಯೆ ಸುಮಾರು 20 ಸಾವಿರ ಎಂದು ಅಂದಾಜು. ಇದರಲ್ಲಿ ಸುಮಾರು 600 ಜನ ಕನ್ನಡಿಗರಿರಬಹುದು. ಉಳಿದೆಲ್ಲ ಭಾರತೀಯ ಭಾಷಿಕರಂತೆ ಕನ್ನಡಿಗರೂ ಕನ್ನಡ ಸಂಘ ಸ್ಥಾಪಿಸಿಕೊಂಡಿದ್ಧಾರೆ. ಗುಜರಾತಿಗಳು ತಮ್ಮ ಸಂಘದ ವತಿಯಿಂದ ಭಾರತೀಯ ಮಂದಿರ ಎಂಬ ದೊಡ್ಡ ದೇವಸ್ಥಾನವನ್ನು ಅಕ್ಷೆಂಡಿನಲ್ಲಿ ಕಟ್ಟಿದ್ದಾರೆ. ಈ ದೇವಸ್ಥಾನದಲ್ಲಿ ಪರಮೇಶ್ವರ, ಪಾರ್ವತಿ, ಗಣೇಶ, ನಂದಿ, ದುರ್ಗೆ. ರಾಮ ಲಕ್ಷಣ ಸೀತೆ, ಕೃಪ್ಟ ರಾಧ. ಮಹಾವಿಷ್ಣು ಲಕ್ಷೀ ಮತ್ತು ಆಂಜನೇಯ ವಿಗ್ರಹಗಳು ಅಮೃತ ಶಿಲೆಯಲ್ಲಿ ತಯಾರಿಸಿ ಪ್ರತಿಷ್ಠಾಪಿಸಿದ್ದಾರೆ. ಅಲ್ಲಿ ಪ್ರತಿ ದಿವಸ ಪೂಜಾ ವ್ಯವಸ್ಥೆ ಇದೆ. ಅಕ್ಲೆಂಡಿನಿಂದ 10 ಕಿ.ಮೀ. ದೂರದಲ್ಲಿ ಇಸ್ಕಾನ್ ದೇವಾಲಯುದೆ. ಬಹಳ ಜನ ಭಕ್ತರು ದಿನ ನಿತ್ಯವೂ ಭೇಟಿ ಕೊಡುತ್ತಾರೆ ಎನ್ನುತ್ತಾರೆ ಲೇಖಕರು.

ನ್ಯೂಜಿಲ್ಯಾಂಡ್‌ದ ಕನ್ನಡದ ಕೂಟದಲ್ಲಿ ನಡೆಯುತ್ತಿರುವ ಅನೇಕ ಕಾರ್ಯಕ್ರಮಗಳ ಬಗೆಗೆ ಲೇಖಕರು ಬಹಳ ಸಂತೋಷಪಟ್ಟುಕೊಂಡಿದ್ದಾರೆ. ಅಲ್ಲಿಯ ಗುಜರಾತಿಗಳು, ತಮಿಳರು ಹೇಗೆ ತಮ್ಮ ತನವನ್ನು ಮಾತೃಭಾಷೆಯಲ್ಲಿ
ಉಳಿಸಿಕೊಂಡಿದ್ದಾರೋ ಹಾಗೆಯೇ ಕನ್ನಡಿಗರೂ ಮನೆಯಲ್ಲಿ, ಮಕ್ಕಳೊಂದಿಗೆ ಉಳಿಸಿಕೊಳ್ಳಿರಿ ಎಂದು ಪ್ರಾಮಾಣಿಕ ಕಳಕಳಿಯಿಂದ ಅವರಿಗೆ ತಿಳಿಸಿಬಂದಿದ್ದಾರೆ ನಾಗಭೂಷಣಯ್ಯನವರು.

ಕೆಲವೇ ಪ್ರವಾಸ ಕಥನಗಳು ಮೂಲಕವಾದದೂ ಆಸ್ಟ್ರೇಲಿಯಾದ ಅನೇಕ ಮಹತ್ವದ ವಿಷಯಗಳನ್ನು ತಿಳಿದುಕೊಂಡಂತಾಯ್ತು.

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿಸರದ ಉಳಿವಿಗೆ ಮಂಗಳೂರಿಗೊಂದು ಓಟ
Next post ಶ್ರಮದ ಹಿರಿಮೆ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

cheap jordans|wholesale air max|wholesale jordans|wholesale jewelry|wholesale jerseys