ಕುಮಾರ ಪರ್ವತದಲ್ಲಿ ಅದೊಂದು ರಾತ್ರಿ

ರೋಟರಿ ಜಿಲ್ಲೆ 3180ರ ವಲಯ 5ರಲ್ಲಿ ಕಾಣಿಸಿಕೊಳ್ಳುವ ಸುಳ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷರು ನಡೆಸಿದ ಚಾರಣ ಮತ್ತು ಬೈಸಿಕಲ್ಲು ಜಾಥಾಗಳಿಂದ ಅತ್ಯಂತ ಥ್ಥಿಲ್ಲು ಅನುಭವಿಸಿದವರು ಉಪರಾಜ್ಯಪಾಲ ರಾಮಣ್ಣ ರೈಗಳು. ಬಂಟವಾಳ ಕಡೆಯ ರಾಮಣ್ಣ ರೈಗಳನ್ನು ಕಂಡಾಗ ಹಸ್ತಲಾಘವ ಮಾಡುವ ಬದಲು ನಾನು ಆಲಿಂಗಿಸಿಕೊಳ್ಳುತ್ತಿದ್ದೆ. ಕಾನ್‌ಕೇವ್‌ ಆಕಾರದ ವಿಶಾಲೋದರ ರಾಮಣ್ಣ ರೈಗಳನ್ನು ಆಲಂಗಿಸಿ ಕೊಂಡಾಗೆಲ್ಲಾ ಒಂದು ಅವರ್ಣನೀಯ ಆನಂದ ದೊರೆಯುತ್ತಿತ್ತು.

ರಾಮಣ್ಣ ರೈಗಳ ಕಾರ್ಯವ್ಯಾಪ್ತಿಗೆ ಮೂಡಬಿದಿರೆ, ಬೆಳ್ತಂಗಡಿ, ಉಪ್ಪಿನಂಗಡಿ, ಪುತ್ತೂರು, ಕಡಬ, ಸುಬ್ರಹ್ಮಣ್ಯ ಮತ್ತು ಸುಳ್ಯ ಕ್ಲಬ್ಬುಗಳು ಒಳಪಡುತ್ತವೆ. ನನ್ನ ಜಲಲಧಾರೆ ಕೃತಿ ಹೊರಬಂದ ಬಳಿಕ ರಾಮಣ್ಣರೈಗಳು ಫೋನಿನಲ್ಲಿ ಪೀಡಿಸತೊಡಗಿದರು. ‘ಬರೀ ಮಕ್ಕಳಿಗಾಗಿ ಕಾರ್ಯಕ್ರಮ ಹಾಕಿಕೊಳ್ಳುತ್ತೀರಿ. ನಮ್ಮ ವಲಯದ ರೊಟೇರಿಯನ್ನರಿ ಗೊಂದು ಸಾಹಸಕ್ಕೆ ಅವಕಾಶ ಮಾಡಿಕೊಡಿ.’

ಅವರು ಪದೇ ಪದೇ ಹೇಳುತ್ತಿರುವಾಗ ಕ್ಲಬ್ಬು ಅಧ್ಯಕ್ಷ ಉಪರಾಜ್ಯಪಾಲರಿಗೆ ಗೌರವ ತೋರಿಸದಿದ್ದರೆ ಹೇಗೆ? ಹೊಸ ಸಾಹಸವೆಂದಾದರೆ ಕುಮಾರ ಪರ್ವತವೇ ಸರಿ. ಸುಳ್ಯ ಕ್ಲಬ್ಬು ಒಂದು ವಿಶ್ವದಾಖಲೆ ಮಾಡಬೇಕು. ಅದರ ಒಂದು ಭಾಗವಾಗಿ ಕುಮಾರ ಪರ್ವತ ಚಾರಣವಿರಬೇಕು.

ನಾನು ಕಾರ್ಯದರ್ಶಿ ಸಂಜೀವ ಕುದ್ಪಾಜೆಗೆ ತಿಳಿಸಿ ಮಾರ್ಚ್ ತಿಂಗಳ 31 ದಿನಗಳಿಗೆ ದಿನಕ್ಕೊಂದರಂತೆ ಕಾರ್ಯಕ್ರಮ ನಿಗದಿ ಮಾಡಿದೆ. ಮಾರ್ಚ್‌ 4ಮತ್ತು 5 ಕುಮಾರ ಪರ್ವತ ಆರೋಹಣವೆಂದು ದಿನ ನಿಗದಿ ಮಾಡಿ ಆಮಂತ್ರಣದಲ್ಲಿ ಅಚ್ಚು ಹಾಕಿಸಿ ರಾಮಣ್ಣ ರೈಗಳೂ ಸೇರಿದಂತೆ ಎಲ್ಲಾ ಪ್ರಮುಖರಿಗೆ ಕಳುಹಿಸಿಕೊಟ್ಟೆ. ಅದು ರೋಟರಿ ಜಿಲ್ಲೆ 3180ರಲ್ಲಿ ಒಂದು ಕಂಪನವನ್ನು ಉಂಟು ಮಾಡಿತು. ವಿಶ್ವದ ಯಾವ ರೋಟರಿ ಕ್ಲಬ್ಬೂ ದಿನಕ್ಕೊಂದ ರಂತೆ ಇಡೀ ಒಂದು ತಿಂಗಳ ಕಾರ್ಯಕ್ರಮ ಈ ವರೆಗೆ ಹಮ್ಮಮಿಕೊಂಡಿರಲಿಲ್ಲ. ರಾಮಣ್ಣ ರೈಗಳ ಆನಂದಕ್ಕೆ ಪಾರವಿರಲಿಲ್ಲ. ಒಂದು,ಕುಮಾರ ಪರ್ವತ ಚಾರಣವನ್ನು ಈ ವರೆಗೆ ಯಾವ ಉಪರಾಜ್ಯಪಾಲನೂ ಹಮ್ಮಮಿಕೊಂಡಿರಲಿಲ್ಲ. ಎರಡು ಮೂವತ್ತೊಂದು ದಿನ ಕಾರ್ಯಕ್ರಮ ಹಮ್ಮಮಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ.

ಕಾರ್ಯಪ್ಪ ಮಾಮನ ಪುಂಡಿ

ಕುಮಾರ ಪರ್ವತ ಚಾರಣಕ್ಕೆ ಏರ್ಪಾಡು ಮಾಡಿದ್ದು ಸುಬ್ರಹ್ಮಣ್ಯ ರೋಟರಿ ಕ್ಲಬ್ಬು. ಅದರ ಅಧ್ಯಕ್ಷ ಕಿಶೋರ್‌ ಕೂಜುಗೋಡು ಮತ್ತು ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರರದು ಅಪೂರ್ವವಾದ ಸುಬ್ರಹ್ಮಣ್ಯದ ಎಕುಲ್ಕುಂದ ಜೋಡಿ. ಅವರಿಗೆ ಬೆನ್ನೆಲು ಬಾಗಿ ನಿಂತದ್ದು ಕ್ಲಬ್ಬಿನ ಮೊದಲ ಅಧ್ಯಕ್ಷ ಪಿ.ಯಸ್‌. ಕಾರಿಯಪ್ಪ. ಸದಾ ನಗುವ ಸುಂದರ ಮೊಗದ ಕಾರಿಯಪ್ಪರು ಸಹಕಾರಿ ರಂಗದಲ್ಲಿ, ಸಾಮಾಜಿಕ ಸೇವೆಯಲ್ಲಿ ಹೆಸರುಗಳಿಸಿದವರು. ಅವರು ನನ್ನ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸದವರು. ಸುಬ್ರಹ್ಮಣ್ಯದ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರನಿಗೆ ಅವರು ಮಾವನಾಗಬೇಕು. ರಾಮಕೃಷ್ಣನಿಂದಾಗಿ ನಮಗೆಲ್ಲರಿಗೂ ಅವರು ಕಾರ್ಯಪ್ಪ ಮಾಮನಾಗಿ ಬಿಟ್ಟರು.

ಮಾರ್ಚ್‌ ನಾಲ್ಕರಂದು ಬಾಪೂ ಸಾಹೇಬರ ಕಾರಲ್ಲಿ ನಾನು, ಎ.ಎಂ. ಭಟ್‌ ಮತ್ತು ಬಾಪೂ ಸಾಹೇಬರು ಬೆಳ್ಳಂಬೆಳಗ್ಗೆ ಸುಬ್ರಹ್ಮಣ್ಯಕ್ಕೆ ಹೊರಟೆವು. ಸಾರ್ವಜನಿಕ ಸೇವೆಯೇ ತನ್ನ ಜೀವಿತದ ಏಕೈಕ ಉದ್ದೇಶ ಎಂದೇ ತಿಳಕೊಂಡಿರುವ ಬಾಪೂಜಿ ಅರಂಬೂರು ತೂಗುಸೇತುವೆ ನಿರ್ಮಾಣಕ್ಕೆ ಪ್ರಮುಖ ಕಾರಣಕರ್ತರು. ಅರುವತೈದರ ಆಜೂಬಾಜಿನಲ್ಲಿರುವ ಬಾಪೂಜಿಗೆ ಇಂತಹ ಸಾಹಸಗಳಲ್ಲಿ ಇನ್ನಿಲ್ಲದ ಆಸಕ್ತಿ. ಅವರಿಗಿಂತ ಸ್ವಲ್ಪ ಸೀನಿಯರ್‌ ಆದ ಎ.ಎಂ. ಭಟ್ಟರು ಮಧ್ಯಪ್ರದೇಶದ ಕೊರ್ಬಾ ಕಬ್ಬಿಣ ಕಾರ್ಖಾನೆಯಲ್ಲಿ ಉನ್ನತ ಅಧಿಕಾರಿಯಾಗಿ ಎಲ್ಲಾ ಲಕ್ಸುರಿಗಳನ್ನು ಅನುಭವಿಸಿದರು. ನಿವೃತ್ತರಾದ ಮೇಲೆ ಸುಳ್ಯಕ್ಕೆ ಬಂದು ಪುಟ್ಟ ಮನೆ ಮಾಡಿಕೊಂಡು ಬಂಧು ಬಾಂಧವರ ನಡುವೆ ಮಧ್ಯಪ್ರದೇಶದ ಲಕ್ಷುರಿ ಜೀವನ ನಡೆಸಲಾಗದೆ ತಹತಹಿಸುತ್ತಿದ್ದವರು ರೋಟರಿ ಮಿತ್ರರ ಫೆಲೋಶಿಪ್ಪಿನಲ್ಲಿ ಸಾಂತ್ವನ ಕಂಡು ಕೊಳ್ಳುತ್ತಿದ್ದರು. ಅವರು ಸಾಹಸ ಕಾರ್ಯಗಳೆಂದರೆ ಯುವಕರಿಗಿಂತ ಮೊದಲು ಗೆಜ್ಜೆ ಕಟ್ಟುವವರು. ಸುಳ್ಯ ರೋಟರಿಯಲ್ಲಿನ ಐವತ್ತೆರಡು ಸದಸ್ಯರಲ್ಲಿ ಕುಮಾರ ಪರ್ವತಕ್ಕೆ ಹೊರಟವರು ಮೂವರೇ! ‘ಮೂರು ಅಪಶಕುನ ಎನ್ನುತ್ತಾರೆ ನಿಜವಾ’ ಎಂದು ಬಾಪೂಜಿ ಹಾದಿಯಲ್ಲಿ ನನ್ನನ್ನು ಕೇಳಿದರು.’ಮೋಸ ಹೋಗುವುದಕ್ಕೆ ಮೂರು ನಾಮ ಹಾಕಿಸಿಕೊಳ್ಳುವುದು ಎನ್ನುವುದುಂಟು. ಮೂರು ಅಪಶಕುನ ಎಂದಾದರೆ ತ್ರಿಮೂರ್ತಿಗಳು ಎಂಬ ಪರಿಕಲ್ಪನೆಯೇ ಇರುತ್ತಿರಲಿಲ್ಲ’ ಎಂದು ಎ.ಎಂ. ಭಟ್ಟರು ವೈಚಾರಿಕ ನೆಲೆಯಲ್ಲಿ ಹೇಳಿದರು. ‘ನಿಮ್ಮ ಕಾರನ್ನು ತಳ್ಳುವುದಕ್ಕೆ ಇನ್ನೊಬ್ಬರು ಬೇಕಾದೀತಾ ಸಾಹೇಬರೇ’ ಎಂದು ನಾನು ಪ್ರಶ್ನಿಸಿದೆ.

ಸುಬ್ರಹ್ಮಣ್ಯದಲ್ಲಿ ರಾಮಣ್ಣ ರೈಗಳು ನಮ್ಮನ್ನು ಕಾಯುತ್ತಿದ್ದರು. ಅವರು ನೆನ್ನೆಯೇ ಬಂದು ಅಲ್ಲಿ ಉಳಕೊಂಡಿದ್ದರು. ಕಿಶೋರ್‌, ರಾಮಕೃಷ್ಣ ಅತ್ತಿಂದಿತ್ತ ಚಡಪಡಿಸುತ್ತಾ ಓಡಾಡುತ್ತಿದ್ದರು. ಸುಬ್ರಹ್ಮಣ್ಯದ ಇನ್ನೂ ನಾಲ್ವರು ಯುವಕರು ನಮ್ಮೊಡನೆ ಹೊರಟಿದ್ದರು. ಸ್ವಲ್ಪ ಹೊತ್ತಿನಲ್ಲಿ ಕಾರ್ಯಪ್ಪ ಮಾಮ ಕಾಣಿಸಿಕೊಂಡರು. ಅವರು ದೊಡ್ಡ ಬಿಳಿ ಪ್ಲಾಸ್ಟಿಕ್ಕಿನ ಎರಡು ಚೀಲಗಳಲ್ಲಿ ಅದೇನನ್ನೋ ರವುಂಡಾದ ವಸ್ತುಗಳನ್ನು ಹಾಕಿ ಅವುಗಳ ಭಾರಕ್ಕೆ ತತ್ತರಿಸುತ್ತಿದ್ದರು. ದೂರಕ್ಕೆ ಅವು ಹಂದಿಗಳನ್ನು ಕೊಲ್ಲಲು ಬಳಸುವ ಸ್ಫೋಟಕ ಪೊಟ್ಟಾಸ್‌ ನಂತೆ ಕಾಣುತ್ತಿದ್ದವು. ಅವುಗಳ ಭಾರದಿಂದ ಕಾರ್ಯಪ್ಪ ಮಾಮ ಕೈ ಎತ್ತಿ ನಮಸ್ಕರಿಸುವಂತೆಯೂ ಇರಲಿಲ್ಲ. ನಾವೇ ಅವರನ್ನು ಸಮೀಪಿಸಿದ ಮೇಲೆ ಗೊತ್ತಾಯಿತು ಅವು ಪುಂಡಿಗಳೆಂದು ಅ ಒಂದು ಚೀಲದಲ್ಲಿ ಬಿಳಿ ಪುಂಡಿಗಳಿದ್ದರೆ ಇನ್ನೊಂದರಲ್ಲಿ ಚಟ್ನಿಯಲ್ಲೋ, ಸಾಂಬಾರಲ್ಲೋ ಗಂಟೆಗಳ ಕಾಲ ಮುಳುಗಿಸಿಟ್ಟ ಕೆಂಪು ಬಣ್ಣದ ಭಯೋತ್ಪಾದಕ ಪುಂಡಿಗಳಿದ್ದವು! ಪಾಪ, ಕಾರ್ಯಪ್ಪ ಮಾವ ಅವನ್ನು ಮನೆಯಲ್ಲಿ ಮಾಡಿಸಿ ತಂದಿದ್ದರು. ಮನೆಯಲ್ಲಿ ಎಷ್ಟು ಬಾರಿ ಅವರಿಗೆ ಸಹಸ್ರ ನಾಮಾರ್ಚನೆಯಾಗಿತ್ತೊ!

ನಾವು ಹೆಗ್ಡೆಮನೆ ಕಡೆಯಿಂದ ಕುಮಾರ ಪರ್ವತ ಹತ್ತಿ ಗಿರಿಗದ್ದೆ ಕಡೆಯಲ್ಲಿ ಇಳಿದು ಬರುವುದೆಂದು ತೀರ್ಮಾನಿಸಿದ್ದೆವು. ಆಚೆ ಕಡೆಯಿಂದ ಹತ್ತುವುದು ಸುಲಭ. ಈಚೆ ಇಳಿಯೋದು ಸುಲಭವೆಂದು ಕಿಶೋರ್‌ ಮುಂಚಿತವಾಗಿ ನಿರ್ಧರಿಸಿದ್ದರು. ನಾವು ಸಾಕಷ್ಟು ಸಿದ್ಧತೆಯೊಂದಿಗೆ ಎರಡು ಜೀಪುಗಳಲ್ಲಿ ಬಿಸಿಲೆ ಹಾದಿಯಾಗಿ ಹೆಗ್ಡೆಮನೆಯತ್ತ ಧಾವಿಸಿದೆವು. ಸುಮಾರು ಹತ್ತು ಕಿ. ಮೀ. ಕ್ರಮಿಸಿದಾಗ ದ. ಕ. ಹಾಸನ ಗಡಿ ಸಿಕ್ಕಿತು. ಅಲ್ಲಿನ ದೇವಾಲಯದ ಗಡಿದೇವಿ ಚೌಡೇಶ್ವರಿಯ ಸಂಪ್ರೀತಿಗಾಗಿ ನಾವು ಇಳಿದಾಗ ಕಿಶೋರ್‌ ನೆನಪಿಸಿಕೊಂಡರು.

‘ಟಾರ್ಪಾಲು ತರಲೇ ಇಲ್ಲ.’

‘ಹೋಗಲಿ. ದೊಡ್ಡದಲ್ಲ’ ಎಂದೆವು ನಾವು.

‘ಕುಮಾರ ಪರ್ವತದ ಮೇಲೆ ಅಸಾಧ್ಯ ಚಳಿಯಿದೆ. ಮಳೆ ಬಂದರೆ ನಮ್ಮನ್ನು ರಕಿಸಿಕೊಳ್ಳಲು ಮರಗಿಡ ಕಟ್ಟಡಗಳಿಲ್ಲ. ಟಾರ್ಪಾಲು ಬೇಕೇ ಬೇಕು’ ಎಂದು ನಮ್ಮನ್ನು ಅಲ್ಲಿ ಇಳಿಸಿ ಕಿಶೋರ್‌ ಜೀಪು ತಿರುಗಿಸಿದರು. ‘ನೋಡಿ ಸುಳ್ಯ ಮೂವರು ಹೊರಟದ್ದೇ ಅಪಶಕುನ’ ಎಂದು ಬಾಪೂಜಿ ನಕ್ಕರು!

ಪ್ರಾಣಕ್ಕಿಂತ ದೊಡ್ಡದಿಲ್ಲಅ

ಮಧ್ಯಾಹ್ನ ಒಂದು ಗಂಟೆಗೆ ನಮ್ಮನ್ನು ಹೆಗ್ಡೇಮನೆ ದೇವಾಲಯದ ಬಳಿ ಬಿಟ್ಟು ಎರಡು ಜೀಪುಗಳು ಹಿಂದಿರುಗಿದವು. ನಮ್ಮ ತಂಡದಲ್ಲಿದ್ದವರು ಸುಳ್ಯದಿಂದ ಮೂವರು, ಸುಬ್ರಹ್ಮಣ್ಯ ಕ್ಲಬ್ಬಿನ ನಾಲ್ವರು, ಪುತ್ತೂರಿಂದ ವಸಂತಕುಮಾರ್‌ ರೈ ಮತ್ತು ದಿವಾಕರ ನಿಡ್ವಣ್ಣಾಯ, ಬಂಟವಾಳದಿಂದ ಸಾಕ್ಷಾತ್‌ ಉಪರಾಜ್ಯಪಾಲ ರಾಮಣ್ಣ ರೈಗಳು ಅಲ್ಲದೆ ಸುಬ್ರಹ್ಮಣ್ಯದ ಉತ್ಸಾಹಿಗಳು ನಾಲ್ವರುಒಟ್ಟು 14 ಮಂದಿ. ಹಸಿದ ಹೊಟ್ಟೆಯನ್ನು ಕಾರ್ಯಪ್ಪ ಮಾಮನ ಪುಂಡಿ ತಣಿಸಿತು. ಎಷ್ಟು ತಿಂದರೂ ಮುಗಿಯದಷ್ಟು ಅಕಯ ಪುಂಡಿ. ‘ನಾಳೆ ನಾವು ಗಿರಿಗದ್ದೆಗೆ ಮುಟ್ಟುವವರೆಗೆ ಬೇಕಾಗುತ್ತದೆ. ಆದರೆ ನೀವೂ ಯಾರಾದರೂ ಇದನ್ನು ತೆಗೆದು ಕೊಳ್ಳಬೇಕು. ಒಬ್ಬನೇ ಎಂದಾದರೆ ನನ್ನನ್ನೇ ನೀವು ಹೊರಬೇಕಾದೀತು.’

ಕಾರ್ಯಪ್ಪ ಮಾಮನ ಸಂಕಟ ನಮಗರ್ಥವಾಗಿತ್ತು. ಅಲ್ಲದೆ ಆ ಪುಂಡಿ ಬಿಟ್ಟರೆ ನಾಳೆ ಮಧ್ಯಾಹ್ನದವರೆಗೆ ನಮಗೆ ‘ಅನ್ಯಥಾ ಶರಣಂ ನಾಸ್ತಿ!’ ನಾವು ಕಂತಿನಲ್ಲಿ ಪುಂಡಿ ಸಾಗಾಟಕ್ಕೆ ಸ್ವ ಇಚ್ಢೆಯಿಂದ ಒಪ್ಪಿಕೊಂಡೆವು.

ಹೆಗ್ಡೇಮನೆ ದೇವಾಲಯ ತುಂಬಾ ಪ್ರಶಾಂತವಾದ ಪ್ರಕೃತಿಯ ಮಧ್ಯದಲ್ಲಿದೆ. ಅಲ್ಲಿ ವಾಯು, ಜಲ, ಶಬ್ದ ಮತ್ತು ದೃಶ್ಯ ಮಾಲಿನ್ಯಗಳಿಲ್ಲ. ಅಂತಹ ಸ್ಥಳದಲ್ಲಿ ದೇವರು ಇರುವ ಸಾಧ್ಯತೆಗಳಿವೆಅ ದೊಡ್ಡ ದೇವಾಲಯದ ಬಾಗಿಲು ಹಾಕಿತ್ತು. ಹೊರಗಡೆ ವಿಶಾಲ ವಾದ ಅಂಗಣ. ಅಲ್ಲಿ ಏನಿಲ್ಲವೆಂದರೂ 150 ವರ್ಷ ದಾಟಿದ ಬೃಹತ್ತಾದ ಸಂಪಿಗೆ ಮರವೊಂದಿತ್ತು. ಅದು ಎಂತೆಂತಹ ಇತಿಹಾಸಕ್ಕೆ ಸಾಕಿಯಾಗಿದೆಯೊ?

ಹೊರಗಿನ ಕಲ್ಲುಹಾಸುಗಳಲ್ಲಿ ನಾವು ಯಥೇಚ್ಢ ಪುಂಡಿ ತಿಂದು ಕಾರ್ಯಪ್ಪ ಮಾಮನಿಗೆ ಆಗಿರಬಹುದಾದ ಸಹಸ್ರ ನಾಮಾರ್ಚನೆಗೆ ತಾರ್ಕಿಕ ಸಮರ್ಥನೆ ನೀಡಿದೆವು. ಅಲ್ಲಿಂದ ನಿಧಾನವಾಗಿ ಕಾಲನಡಿಗೆಯಲ್ಲಿ ಮುಂದುವರಿದೆವು.

ದೇವಾಲಯದಿಂದ ಕುಮಾರ ಪರ್ವತದವರೆಗೆ ಕಾಲು ಹಾದಿಯೊಂದಿದೆ. ಐತಿಹಾಸಿಕ ವಾಗಿ ಹಾಸನಸಕಲೇಶಪುರದವರು ಬಿಸಿಲೆಯನ್ನು ಸುಬ್ರಹ್ಮಣ್ಯಕ್ಕೆ ಹಾದಿಯಾಗಿಸಿಕೊಂಡರೆ, ಶನಿವಾರ ಸಂತೆ, ಕೊಡ್ಲಿಪೇಟೆ ಕಡೆಯ ಏಳು ಸಾವಿರ ಸೀಮೆಯವರು ಬಹುಶಃ ಇದೇ
ದಾರಿಯಲ್ಲಿ ಕುಮಾರ ಪರ್ವತವನ್ನು ಬಳಸಿಕೊಂಡು ಗಿರಿಗದ್ದೆ ಹಾದಿಯಾಗಿ ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದಿರಬೇಕು.

ಸುಮಾರು ಹತ್ತು ಕಿ.ಮೀ. ಹಾದಿಯನ್ನು ನಿರಾಯಾಸವಾಗಿ ಕ್ರಮಿಸಿದ ನಮ್ಮ ಕಾಲು ಗಳಲ್ಲಿ ಸಾಕಷ್ಟು ಬಲ ವುಳಿದಿತ್ತು. ಹಾದಿಯುದ್ದಕ್ಕೂ ಗಿಡ ಮರಗಳು ನಮ್ಮನ್ನು ಸೂರ್ಯನ ಕಿರಣಗಳಿಂದ ರಕಿಸಿದ್ದವು. ಬೇಸಿಗೆಯ ಆರಂಭದ ದಿನಗಳವು. ಸಂಜೆಯ ಆ ಹೊತ್ತಲ್ಲಿ ಪೂರ್ವದ ಕಡೆಯಿಂದ ಕುಮಾರ ಪರ್ವತದ ಹಾದಿಯನ್ನು ತುಳಿಯುತ್ತಿದ್ದ ನಮ್ಮನ್ನು ಪಶ್ಚಿಮಾಂಬುಧಿಯತ್ತ ಧಾವಿಸುತ್ತಿದ್ದ ಸೂರ್ಯನಿಂದ ಏನೂ ಮಾಡಲು ಸಾಧ್ಯವಿರಲಿಲ್ಲ.

ಹಾದಿಯುದ್ದಕ್ಕೂ ಬಾಪೂ ಸಾಹೇಬರ ಜೋಕುಗಳು. ಅವರನ್ನು ಜೋಕುಗಳ ಅಕಯ ಪಾತ್ರೆ ಎಂದು ನಾನು ಕರೆಯುತ್ತಿದ್ದೆ. ನಾನು ಎಷ್ಟೋ ಜೋಕು ಕೇಳಿದ್ದುಂಟು, ಓದಿದ್ದುಂಟು. ಆದರೆ ಅವನ್ನು ಹೇಳುವ ಅವಕಾಶ ಸಿಕ್ಕಾಗ ಪರಶುರಾಮನ ಶಾಪಕ್ಕೊಳಗಾಗಿ ಅಸ್ತ್ರಗಳ ಮಂತ್ರ ಮರೆತು ಹೋದ ಕರ್ಣನ ಪಾಡು ನನ್ನದಾಗುತ್ತಿತ್ತು. ಬಾಪೂಜಿ ಹಾಗಲ್ಲಯಾವಾಗ ಬೇಕಾದರೂ ಜೋಕು ಹಾರಿಸಬಲ್ಲವರು. ರೋಟರಿ ಸಾಪ್ತಾಹಿಕ ಸಭೆಯ ಬಹುತೇಕ ಕ್ರಿಯೆಗಳು ಕೇವಲ ರಿಚುವಲ್. ಅದಕ್ಕಾಗಿ ವಂದನಾರ್ಪಣೆಗೆ ಮುನನ ಲಾಸ್ಟ್‌ ಜೋಕು ಇರಿಸಿಕೊಳ್ಳಲಾಗುತ್ತಿತ್ತು. ಬಾಪೂ ಸಾಹೇಬರ ಜೋಕುಗಳೆಂದರೆ ನಮ್ಮ ಕ್ಲಬ್ಬಿನ ಎಲ್ಲರ ಕಿವಿಗಳು ನೆಟ್ಟಗಾಗುತ್ತಿದ್ದವು.

ಬಾಪೂ ಸಾಹೇಬರ ಜೋಕಿಗೆ ರಾಮಣ್ಣ ರೈಗಳು ಹೊಟ್ಟೆ ಕುಣಿಸಿ ನಗುವುದನ್ನು ನೋಡುವುದೇ ಒಂದು ಸೊಬಗು. ಅಂದು ಅವರೆಂದ ಅನೇಕ ಜೋಕುಗಳಲ್ಲಿ ಮೂರು ಮತ್ತೆ ಮತ್ತೆ ನೆನಪಾಗುತ್ತವೆ.

1. ಪೋಲೀಸ A: ಬೈಸಿಕಲ್ಲು ತಳ್ಕೂಂಡು ಎಲ್ಲಿಗೆ ಹೋಗ್ತಿದ್ದೀಯಾ?

ಪೋಲೀಸ B: ಎಸ್ಸೈ ಬೈಸಿಕಲ್ಲು ತಗೊಂಡು ಲೈಟರ್‌ ಪೋಸ್ಟು ಮಾಡಿ ಬಾ ಅಂದ್ರು. ಅದಕ್ಕೇ.

ಪೋಲೀಸ A: ಬೈಸಿಕಲ್ಲು ಮೇಲೆ ಹೋಗಬಹುದಲ್ಲಾ?

ಪೋಲೀಸ B ನಂಗೆ ಬೈಸಿಕಲ್ಲು ಬಿಡಕ್ಕೆ ಬರಲ್ಲ!

2. ಎಸ್ಸೈ : ಅಲ್ಲಯ್ಯ 420, ಅಷ್ಟು ಜನರು ಆ ಹುಡುಗಿಯನ್ನು ರೇಪ್‌ ಮಾಡುವಾಗ ನೀನು ಏನೂ ಮಾಡ್ತಿದ್ದೆ?

420 : ನಾನು ನನ್ನ ಸರದಿಗಾಗಿ ಕಾಯ್ತಯಿದ್ದೆ ಸರ್‌!

3. ಪೋಲೀಸ : ಅಲ್ಲಜ್ಜೀ, ನಾನು ವಿಷಲ್‌ ಹಾಕ್ತಾನೇ ಇದ್ರೂ ನೀನು ಹಾಗೇ ರಸ್ತೆ ದಾಟಿ ಬಿಟ್ಟೆಯಲ್ಲಾ!

ಮುದುಕಿ : ವಿಷಲ್‌ ಹಾಕಿದಾಗ ತಿರುಗಿ ನೋಡುವ ಪ್ರಾಯವಾ ಮಗೂ ನಂದುಲ

ಈ ತರದ ಜೋಕುಗಳು ಮಕ್ಕಳೊಡನೆ ಚಾರಣ ಹೋಗುವಾಗ ಸಿಗುವುದಿಲ್ಲ. ನಾವು ಅಷ್ಟೂ ಮಂದಿ ಗಂಡಸರೇ ಆಗಿದ್ದುದರಿಂದ ನಾನ್‌ವೆಜ್ಜು ಜೋಕುಗಳಿಗೆ ಬರವಿರ ಲಿಲ್ಲ. ವಯಸ್ಸಾದಂತೆ ನಾವು ಆಡಿಕೊಳ್ಳೋದೇ ಹೆಚ್ಚು. ಅನುಭವಿಸೋದು ಕಡಿಮೆ!

ಹಾದಿ ಮುಗಿದು ನಾವು ಪರ್ವತವನ್ನೇರ ತೊಡಗಿದೆವು. ಕಡಿದಾದ ಪರ್ವತವನ್ನೇರು ವಾಗ ನಮ್ಮನ್ನು ಈ ವರೆಗಿರದಿದ್ದ ಆಯಾಸ ಕಾಡತೊಡಗಿತು. ಕಡಿದಾದ ಬಂಡೆಯೊಂದನ್ನು ಏರುವಾಗಲಂತೂ ನಾವು ಚತುಷ್ಪಾದಿಗಳಾಗಬೇಕಾಯಿತು. ಬಂಡೆಯ ಕೊನೆಯಲ್ಲಿ ಕೂತು ಆಯಾಸ ಪರಿಹರಿಸತೊಡಗಿದಾಗ ಒಮ್ಮೆಲೇ ಆಕಾಶವೆಲ್ಲಾ ಕಪ್ಪಾಗಿ ಮಿಂಚು ಸಿಡಿಲು ಸಹಿತ ಧೋ ಎಂದು ಕುಂಭದ್ರೋಣ ಸುರಿಯ ತೊಡಗಿತು. ನನಗೆಎನಿತು ಸಂಭ್ರಮವೊ ಇಳೆಗೆ, ವಸಂತದಲಿ ಬರುವ ಮಳೆಗೆಎಂಬ ನನ್ನ ಕವನವೊಂದರ ಎರಡು ಸಾಲುಗಳು ನೆನಪಾದವು. ಅವೆರಡು ಸಾಲುಗಳನ್ನು ಬಿಟ್ಟರೆ ಅಲ್ಲಿಂದ ಮುಂದಕ್ಕೆ ಹೋಗಲು ನನಿನಂದ ಸಾಧ್ಯವಾಗಿರಲಿಲ್ಲಅ

ಮಳೆ ಮುಗಿಯುವ ಲಕಣವೇ ಕಾಣಲಿಲ್ಲ. ಅಲ್ಲೆಲ್ಲೂ ಮರ ಗಿಡಗಳಿಲ್ಲ, ಸಂದು ಗೊಂದುಗಳಿಲ್ಲ. ಗುಡಿ, ಗುಹೆ, ಗಂಹ್ವರಗಳಿಲ್ಲ. ಇನ್ನು ಹದಿನೈದುಇಪ್ಪತ್ತು ನಿಮಿಷ ನಡೆದರೆ ನಾವು ಪರ್ವತ ಶಿಖರದಲ್ಲಿರುತ್ತೇವೆ. ಅದು ಬಟಾ ಬಯಲುಅ ಭರ್ರನೆ ಬೀಸುವ ಗಾಳಿಗೆ ಒಂದು ಹೆಜ್ಜೆ ಮುಂದಿಡಲಾಗುತ್ತಿಲ್ಲ.

ಕಿಶೋರ್‌ ಟರಪಾಲು ಬಿಚ್ಚಿದರು. ನಾವೆಲ್ಲರೂ ಅದರೊಳಗೆ ಸೇರಿಕೊಂಡೆವು. ಮಳೆಯ ನೀರು ಪರ್ವತದಲ್ಲಿ ಸಂಚಯವಾದದ್ದು ಬಂಡೆಯಿಂದ ಹರಿದು ಬರತೊಡಗಿತು. ನಮ್ಮೆಲ್ಲರ ಬುಡಕ್ಕೇ ನೀರು ಬಂತುಅನೀರ ಹಾದಿಯನ್ನು ತಪ್ಪಿಸಿ ನಾವು ಟರಪಾಲಿನೊಳಗೆ ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ತಿಣಕಾಡಿದೆವು. ತಲೆ, ಮೈ, ಬುಡ ಎಲ್ಲವೂ ಒದ್ದೆ ಯಾಗಿ ಚಳಿಯಲ್ಲಿ ನಡುಗತೊಡಗಿದೆವು. ಪರ್ವತದ ಆ ಎತ್ತರದಲ್ಲಿ ಯಾವ ಕಣದಲ್ಲೂ ನಮಗೆ ಮಿಂಚು ಹೊಡೆಯಬಹುದಿತ್ತು. ನಮ್ಮ ಹತ್ತಿರದಿಂದ ಮಿಂಚುಗಳು ಸಂಚರಿಸುತ್ತಿ ದ್ದವು. ಸಿಡಿಲುಗಳ ಆರ್ಭಟಕ್ಕೆ ನಾವು ಪದೇ ಪದೇ ಬೆಚ್ಚಿ ಬೀಳತೊಡಗಿದೆವು. ಒಂದು ಮೇಘ ಸೊೇೕಟ, ಒಂದು ಸಿಡಿಲಾರ್ಭಟ, ಒಂದು ಮಿಂಚಿನ ಹೊಡೆತ, ಒಂದು ಬಿರುಗಾಳಿ…… ನಮ್ಮ ಪ್ರಾಣಗಳು ವಸ್ತುಶಃ ಪ್ರಕೃತಿಯ ಕೈಯಲ್ಲಿದ್ದವು.

‘ದೇವರನ್ನು ಧ್ಯಾನಿಸುವುದೊಂದೇ ನಮಗೆ ಉಳಿದಿರುವ ಹಾದಿ’ ಎಂದರು ಎ.ಎಂ. ಭಟ್ಟರು. ‘ನಾವು ಮೂವರೇ ಸುಳ್ಯದಿಂದ ಹೊರಟದ್ದು ತಪ್ಪಾಯಿತು’ ಎಂದರು ಬಾಪೂಜಿ. ‘ಆಗ ನಿಮ್ಮ ಜೋಕಿಗೆ ಹಾಗೆ ನಗುವಾಗ ಏನಾದರೂ ಗಂಡಾಂತರ ಬಂದೇ ಬರುತ್ತದೆ ಎಂದು ನಾನಂದುಕೊಂಡಿದ್ದೆ ‘ ಎಂದರು ಉಪರಾಜ್ಯ ಪಾಲರು. ಎಲ್ಲರ ಹಲ್ಲುಗಳು ಕಟಕಟಿಸುತ್ತಿದ್ದವು.

ರಾಮಕೃಷ್ಣ ಬ್ಯಾಗಿನ ಜಿಪ್ಪು ಬಿಚ್ಚಿದ. ‘ನಮಗೆ ಚಳಿಯಿಂದ ಬಚಾವಾಗಲು ಇರುವುದು ಇದೊಂದೆ ಹಾದಿ’ ಎಂದ. ದೇವರ ಧ್ಯಾನದ ಬದಲು ಪರಮಾತ್ಮನ ಸೇವನೆ ಆರಂಭವಾಯಿತು. ‘ಬರಗಾಲದಲ್ಲಿ ವಿಶ್ವಾಮಿತ್ರ ಮಹರ್ಷಿಗಳು ಚಂಡಾಲನಿಂದ ನಾಯಿಮಾಂಸ ಬೇಡಿ ತಿಂದರಂತೆ’ ಎಂದರು ವಸಂತಕುಮಾರ್‌.

ಎರಡು ಗಂಟೆಗಳ ಕಾಲ ಸತತ ತನ್ನ ಉಗ್ರ ಪ್ರತಾಪ ತೋರಿದ ಮಳೆ ನಿಂತು ಹೋಯಿತು. ಶುಭ್ರ ಆಕಾಶದಲ್ಲಿ ಚಂದ್ರ ಮಂದಹಾಸ ಬೀರುತ್ತಿದ್ದ. ನಾವು ನಿಧಾನವಾಗಿ ಮೇಲೆದ್ದೆವು. ‘ದೇವರು ದೊಡ್ಡವನು’ ಎಂದು ನಿಡ್ವಣ್ಣಾಯರು ಉದ್ಗಾರ ತೆಗೆದರು. ುದೇವರು ದೊಡ್ಡವನೋ, ಪರಮಾತ್ಮನೋು ಎಂದು ರಾಮಕೃಷ್ಣ ಪ್ರಶ್ನಿಸಿದ. ಅಷ್ಟೂ ಮಂದಿ ಗಟ್ಟಿಯಾಗಿ ನಕ್ಕು ಬಿಟ್ಟೆವು.

ಇದು ಬರೀ ಬೆಳಗಲ್ಲೋ

ಪರ್ವತದ ತುದಿಯ ತಟ್ಟು ಜಾಗಕ್ಕೆ ನಾವು ಬಂದು ತಲುಪಿದೆವು. ಆಗಲೇ ರಾತ್ರಿ ಎಂಟು ದಾಟಿತ್ತು. ಅಲ್ಲಿ ದೇವರ ಎರಡು ಪುಟ್ಟ ಗೂಡುಗಳು ಮತ್ತು ಮೂರ್ತಿಗಳಿವೆ. ಅಲ್ಲಿನ ಬಂಡೆಗಳಲ್ಲಿ ನೀರು ನಿಂತಿರಲಿಲ್ಲ. ನಾವು ಟಾರ್ಪಾಲಿನ ಡೇರೆ ರಚಿಸಲು ಯತಿನಸಿದೆವು. ರೊಯ್ಯಯೋಂ ಎಂದು ಬೀಸುವ ತುಂಟ ಗಾಳಿ ನಮ್ಮ ಯತನವನ್ನು ವಿಫಲ ಗೊಳಿಸಿತು. ಬಂಡೆಯಲ್ಲಿ ಅಡ್ಡಕ್ಕೆ ಮಲಗಿ ಟಾರ್ಪಾಲು ಹೊದ್ದುಕೊಂಡು ಚಳಿಯಿಂದ ಬಚಾವಾಗುವುದು ಎಂದು ನಾವು ತೀರ್ಮಾನಿಸಿಕೊಂಡೆವು.

ನಮಗಿಂತ ಸ್ವಲ್ಪ ದೂರದಲ್ಲೇ ಪಡ್ಡೆ ಹುಡುಗರ ತಂಡವೊಂದು ಪ್ಲಾಸ್ಟಿಕ್ಕ್‌ ಟೆಂಟು ಹಾಕಿಕೊಂಡು ಝುಂಡಾ ಊರಿತ್ತು. ಅವರು ಬೆಂಗಳೂರಿನವರು. ಅದಾಗಲೇ ಗುಂಡು ಹಾಕಿದ್ದು ಅತಿಯಾಗಿ ಅವರ ಸುತ್ತಮುತ್ತ ಏನು ನಡೆಯುತ್ತಿದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದ ಸ್ಥತಿಗೆ ಅವರು ಮುಟ್ಟಿದ್ದರು. ಆದರೂ ಚಳಿಯಿಂದ ಅವರು ಗದಗುಟ್ಟುತ್ತಿದ್ದರು.

ನಾವು ಅಲ್ಲೆಲ್ಲಾ ಅಲೆದಾಡಿ ಸಿಕ್ಕಿದ ಕಸಕಡ್ಡಿ ಸೌದೆ ತಂದು ರಾಶಿ ಒಟ್ಟಿದೆವು. ಅಲ್ಲಿದ್ದದ್ದೇ ಕಡಿಮೆ. ಇದ್ದದ್ದೂ ಒದ್ದೆಯಾಗಿ ಸರಿಯಾಗಿ ಉರಿಯದ ಸ್ಥತಿ. ಅಲ್ಲಿರುವ ದೇವರ ಗೂಡುಗಳಲ್ಲಿ ಏನಾದರೂ ಇರಬಹುದೇ ಎಂದು ಕತ್ತಲಲ್ಲಿ ಕೈ ಹಾಕಿದೆ. ‘ಹಾವಿರ ಬಹುದು’ ಎಂದಾರೋ ಎಚ್ಚರಿಸಿದರು. ಹಾವಿರಲಿಲ್ಲ. ಕುಡುಕರು ಪೇರಿಸಿಟ್ಟಿದ್ದ ರಾಶಿ ರಾಶಿ ಬಾಟಲುಗಳಿದ್ದವು. ಸಿಗರೇಟು ಪ್ಯಾಕೇಟುಗಳಿದ್ದವು. ಅಲ್ಲಿಗೆ ಬಂದ ಆಸ್ತಿಕ ಭಕ್ತಾಭಿಮಾನಿಗಳು ಗೂಡುಗಳ ದೇವರ ವಿಗ್ರಹಗಳಿಗೆ ಗುಂಡು ನೈವೇದ್ಯ ನೀಡಿ ಸಿಗರೇಟಿನ ಆರತಿ ಎತ್ತಿದ್ದರುಅ

ಸಿಗರೇಟು ಪ್ಯಾಕುಗಳು ಬೆಂಕಿ ಉರಿಸಲು ನೆರವಾದವು. ಇಲ್ಲಿ ಬೆಂಕಿಯ ಜ್ವಾಲೆಗಳೆ ದ್ದಾಗ ಆಚೆಗಿದ್ದ ಪಡ್ಡೆಗಳು ಓಡೋಡಿ ಬಂದವು. ನಮ್ಮ ದೇಹದ ಮುಂಭಾಗದಲ್ಲಿ ರೊಟ್ಟಿ ಸುಡಬಹುದಿತ್ತು ಮತ್ತು ಹಿಂಭಾಗದಲ್ಲಿ ಕೊಳ್ಕೇ ಬೀಜ ಬಿತ್ತಬಹುದಿತ್ತುಅ ಒಂದಷ್ಟು ಹೊತ್ತು ಶಾಖ ನೀಡಿದ ಅಗಿನಯೆದುರು ಕುಳಿತು ನಾವು ಕಾರ್ಯಪ್ಪ ಮಾಮ ಮಾ್ಮಾನ್ಯು ಫ್ಯಾಕ್ಚರ್ಡ್‌ ಪುಂಡಿ ಕಡುಬು ತಿನನತೊಡಗಿದೆವು. ುರಿಯಲೀ ಟೇಸ್ಟಿ ಯಾು ಎಂದು ಬೆಂಗಳೂರು ಪಡ್ಡೆಗಳು ಸುಳ್ಯದ ಕಡುಬು ಖಾಲಿ ಮಾಡ ತೊಡಗಿದರು. ಕಾರ್ಯಪ್ಪ ಮಾಮನ ಅಕಯ ಪುಂಡಿ ಮಾತ್ರ ಮುಗಿಯಲೇ ಇಲ್ಲ.

ಬೆಂಕಿ ನಂದ ತೊಡಗಿತು. ಪಡ್ಡೆಗಳು ಉರಿಸಲು ಏನಾದರೂ ಸಿಕ್ಕೀತೆಂದು ಅತ್ತಿತ್ತ ಅರಸತೊಡಗಿದರು. ಅವರಲ್ಲೊಬ್ಬ ಹಾಳೆತಟ್ಟೆ, ನ್ಯೂಸು ಪೇಪರು ಇನ್ನೂ ಏನೇನೋ ತಂದು ಬೆಂಕಿಗೆ ಸುರಿದ. ಬೆಂಕಿ ಧಗ ಧಗಿಸುವಾಗ ಇನೊನಬ್ಬ ‘ಅಯ್ಯಯೋ ನನ್ನ ಮೊಬೈಲು’ ಎಂದು ಓಡುತ್ತಾ ಬಂದು ಬೆಂಕಿಯನ್ನು ಕೆದಕಿ ಮೊಬೈಲು ಹೊರತೆಗೆದ. ಅದು ಮುಕ್ಕಾಲು ಭಾಗ ಕರಗಿ ಹೋಗಿತ್ತು. ಅವನ ನಿಶೆ ಇಳಿದಿತ್ತು. ತಲೆಗೆ ಕೈ ಹೊತ್ತು ಅವನು ‘ಹೌ ಟು ಫೇಸ್‌ ಮೈ ಪಪ್ಪಾ’ ಎಂದು ಬಂಡೆ ಮೇಲೆ ಕುಸಿದು ಕುಳಿತ.

ಗಂಟೆ ಹನ್ನೆರಡು ದಾಟಿತ್ತು. ಚಂದ್ರ ಪ್ರಕಾಶ ಮಾನವಾದ ಬೆಳಕು ಚೆಲ್ಲುತ್ತಿದ್ದ. ಅಸಾಧ್ಯ ಚಳಿ ಮತ್ತು ಗಾಳಿಯಿಂದ ನಮ್ಮನ್ನು ರಕಿಸಿಕೊಳ್ಳಲು ನಮ್ಮಲ್ಲೇನೂ ಇರಲಿಲ್ಲ. ರಾಮಕೃಷ್ಣ ಮಾತ್ರ ತನಗೆ ಬೇಕಾದಷ್ಟನ್ನು ಅದು ಹೇಗೋ ಉಳಿಸಿಕೊಂಡಿದ್ದಅ ಅವನು ಅತ್ಯಂತ ಪ್ರಾಮಾಣಿಕನಾದ ಪರಮಾತ್ಮ ಭಕ್ತಅ ನಾವು ಬಂಡೆಯ ಮೇಲೆ ಮಲಗಿ ನಮ್ಮ ಮೇಲೆ ಟರ್ಪಾಲು ಎಳಕೊಂಡು ನಮ್ಮನ್ನು ರಕಿಸಿಕೊಳ್ಳಲು ಯತಿನಸಿದೆವು.

ಬೆಳಿಗ್ಗೆ ನಾಲ್ಕಕ್ಕೆ ಎಚ್ಚರವಾಯಿತು. ಪ್ರಭಾಕರನ ಸಾರಥಿ ಅರುಣನ ಆಗಮನಕ್ಕೆ ಸಾಕಿಯಾಗಿ ಪೂರ್ವ ದಿಕ್ಕು ಕೆಂಪಾಗತೊಡಗಿತು. ಸೂರ್ಯೋದಯಕ್ಕೆ ಮುನನ ಕುಮಾರ ಪರ್ವತದ ಪೂರ್ವಕ್ಕೆ ಕಣ್ಣು ಕಾಣಿಸುವಷ್ಟು ದೂರಕ್ಕೆ ಬೆಳ್ಳನೆಯ ಮೋಡ ಪದರ ಪದರವಾಗಿ ಹಬ್ಬಿಕೊಂಡಿತ್ತು. ಬೆಳಗಾಗುತ್ತಿದ್ದಂತೆ ಒಂದೊಂದೇ ಪದರ ಮೇಲಕ್ಕೆ ಬಂದು ವಿಶಾಲ ಆಕಾಶದಲ್ಲಿ ಎತ್ತರೆತ್ತರಕ್ಕೆ ಹೋಗಿ ನೀಲಾಕಾಶದಲ್ಲಿ ಲೀನವಾಗುವ ದೃಶ್ಯ ಮೂಡಿಸಿದ

ಅನುಭೂತಿ ನನ್ನ ಹೃದಯಾಂತರಾಳದಿಂದ ಇದು ಬರೀ ಬೆಳಗಲ್ಲೊ ಅಣ್ಣಾಎಂಬ ಬೇಂದ್ರೆ ವಾಣಿಯನ್ನು ಮೊಳಗಿಸಿತು. ಅಷ್ಟು ಹೊತ್ತಿಗೆ ಸೂರ್ಯ ತೀರಾ ತಡವಾಯಿತೆಂಬಂತೆ ಅವಸರವಸರವಾಗಿ ಮೇಲಕ್ಕೇರಿ ತನ್ನ ಕೆಂಪು ಬಣ್ಣವನ್ನು ಕಳಕೊಂಡು ಬರಿಗಣ್ಣಿನಿಂದ ವೀಕಿಸಲಾಗದ ಹಳದಿ ಬಣ್ಣಕ್ಕೆ ತಿರುಗಿಕೊಂಡ.

ಬೆಳಿಗ್ಗೆ ಉಪಾಹಾರಕ್ಕೆ ಅದೇ ಪುಂಡಿ. ಸಾಂಬಾರಿನಲ್ಲಿ ಮೊನ್ನೆ ರಾತ್ರಿ ನೆನೆಹಾಕಿದ್ದ ಪುಂಡಿ ಇಂದು ಬೆಳಿಗ್ಗೆ ನೋಡುವಾಗ ಕೆಮಿಕಲ್‌ ರಿಯಾಕನಿನ್ನಿಂದಾಗಿ ಡಿಕಂಪೋಸಾಗಿ ರಂಜಕದ ಸುವಾಸನೆ ಹೊರಡಿಸ ತೊಡಗಿತ್ತುಅ ಪುಣ್ಯಕ್ಕೆ ಬಿಳಿ ಪುಂಡಿಗಳು ನಮಗೆ ಮಾತ್ರವಲ್ಲದೆ ಬೆಂಗಳೂರಿನ ಪುಂಡರಿಗೂ ಆಗಿ ಮಿಗುವಷ್ಟಿತ್ತು. ಪುಂಡಿ ತಿಂದು ನೀರು ಕುಡಿದು ಕುಮಾರ ಪರ್ವತದಿಂದ ಕೆಳಗಿಳಿಯ ತೊಡಗಿದವು. ಕುಮಾರ ಪರ್ವತದ ಪೂರ್ವಕ್ಕೆ ಹಾಸನ, ಉತ್ತರಕ್ಕೆ ಉಜಿರೆ, ಶಿಶಿಲ, ದಕಿಣಕ್ಕೆ ಸೋಮವಾರ ಪೇಟೆ, ಪೂರ್ವಕ್ಕೆ ಸುಬ್ರಹ್ಮಣ್ಯ. ಎಂತಹ ಚೆಲುವುಅ ಪರ್ವತ ಇಳಿವಾಗಲೂ ಚೆಲುವಿನದ್ದೇ ದರ್ಶನ. ಶೇಷ ಪರ್ವತ, ಸಿದ್ಧ ಪರ್ವತ, ಭತ್ತದ ರಾಶಿಒಂದೊಂದರದು ಒಂದೊಂದು ಕತೆಗಳು.

ನಾವು ಹತ್ತಿದ್ದು ಪೂರ್ವದಿಂದ, ಇಳಿದದ್ದು. ಪಶ್ಚಿಮದಿಂದ. ಹೋದ ದಾರಿಯಲ್ಲೇ ಬರುವಾಗಿನ ಬೋರು ನಮಗಾಗಲು ಸಾಧ್ಯವಿರಲಿಲ್ಲ. ಆದರೆ ಇಳಿವ ದಾರಿ ಇನ್ನೂ ಕಡಿದಾದುದು. ಕಾಲು ಜಾರಿದರೆ ಹಿಡಕೊಳ್ಳಲು ಅಕ್ಕ ಪಕ್ಕದಲ್ಲಿ ಏನೂ ಇಲ್ಲ. ಆ ಭೀತಿ ಅಲ್ಲಿಂದ ಕಾಣುವ ಬೆಳ್ಳಾರೆ, ಬಂಟಮಲೆ, ಸುಳ್ಯಗಳ ಚೆಲುವನ್ನು ದೂರದಿಂದ ಸವಿಯಲು ಅಡ್ಡಿಯಾಗಲಿಲ್ಲ. ಕೊಡಗಿನ ಅರಸ ಬಂದರೆ ತಂಗುತ್ತಿದ್ದ ಮಹಾರಾಜ ಮಂಟಪವನ್ನು ನೋಡಿ ಕಲ್ಪನೆಯ ಕತೆ ಹೆಣೆಯಲು ತೊಂದರೆಯಾಗಲಿಲ್ಲ.

ಕುಮಾರ ಪರ್ವತಕ್ಕೆ ಹೋಗಿ ಬರುವವರಿಗೆ ಎಲ್ಲಾ ಸಹಾಯಕ್ಕೆ ಇಪ್ಪತ್ತನಾಲ್ಕು ಗಂಟೆಯೂ ಸಿಗುವ ಗಿರಿಗದ್ದೆ ಭಟ್ಟರಲ್ಲಿಗೆ ಮುಟ್ಟುವಾಗ ಹನ್ನೆರಡು ದಾಟಿತ್ತು. ಅಲ್ಲಿ ಸ್ನಾನ ಮತ್ತು ಊಟ. ಇನ್ನೇನು ಭೂಮಿಯನ್ನು ಮುಟ್ಟಿ ಬಿಡುತ್ತಾರೆ ಎನ್ನುವಷ್ಟು ಬಾಗಿದ ಬೆನಿನ್ನ ಭಟ್ಟರ ಚಿಕ್ಕಮ್ಮ ಅಷ್ಟು ಚುರುಕಿನಿಂದ ರುಚಿಯಾದ ರಸಗವಳ ಸಿದ್ಧಪಡಿಸಿ ನಮಗೆ ಬಡಿಸಿದ ವೈಖರಿಗೆ ನಾವು ಬೆರಗಾಗದಿರಲು ಸಾಧ್ಯವಿರಲಿಲ್ಲ.

ಮೂರು ಗಂಟೆಗೆ ಗಿರಿಗದ್ದೆಯಿಂದ ಹೊರಟ ನಾವು ಐದು ಗಂಟೆಗೆ ಸುಬ್ರಹ್ಮಣ್ಯ ದಲ್ಲಿದ್ದೆವು. ಉಪರಾಜ್ಯಪಾಲ ರಾಮಣ್ಣ ರೈ, ಪುತ್ತೂರಿನ ವಸಂತ ಕುಮಾರ್‌ ಮತ್ತು ದಿವಾಕರ ನಿಡ್ವಣ್ಣಾಯ ಸಾಧನೆಯ ಸಂತೃಪ್ತಿಯಲ್ಲಿದ್ದರು. ಕಿಶೋರ್‌, ರಾಮಕೃಷ್ಣ ಮತ್ತು ಕಾರ್ಯಪ್ಪ ಮಾಮನ ಪ್ರಯತ್ನದಿಂದ ುಒಂದಷ್ಟು ರೊಟೇರಿಯನನರು ಎಲ್ಲವನ್ನು ಮರೆತು ಒಂದು ವಿಶಿಷ್ಟ ಅನುಭವಕ್ಕೆ ನಮ್ಮನ್ನು ಒಡ್ಡಿಕೊಳ್ಳಬೇಕು ು ಎಂಬ ನಮ್ಮ ಉದ್ದೇಶ ಈಡೇರಿತ್ತು. ನಾವು ಅಕರಶಃ ಸಾವನ್ನು ಸಮೀಪಿಸಿ ಬಂದಿದ್ದೆವುಅ

ಬಾಪೂಜಿಯ ಕಾರಲ್ಲಿ ಸುಳ್ಯಕ್ಕೆ ವಾಪಾಸಾಗುವಾಗ ಎ. ಎಂ. ಭಟ್ಟರು ‘ಮೂವರು ಹೋದರೆ ಅಪಶಕುನ ಎಂಬ ನಿಮ್ಮ ನಂಬಿಕೆ ಸುಳ್ಳಾಯಿತಲ್ಲಾ ಸಾಹೇಬರೇ’ ಎಂದು ಕೇಳಿದರು.

ನಾನು ಕುಮಾರ ಪರ್ವತದ ಮೇಲಿನಿಂದ ಕಂಡ ಮೋಡಗಳ ಪಯಣದ ಗುಂಗಿ ನಲ್ಲಿದ್ದೆ. ಜತೆಗೊಂದು ಯೋಚನೆಯೂ ಹೊಳೆಯಿತು. ಸುಬ್ರಹ್ಮಣ್ಯದಿಂದ ಕುಮಾರ ಪರ್ವತ ಕ್ಕೊಂದು ರೋಪುವೇ ಮಾಡಿದರೆ ಪರ್ವತದ ಪಾವಿತ್ರ್ಯ ಉಳಿಸಬಹುದು. ಸರಕಾರಕ್ಕೆ ಕೋಟಿಗಟ್ಟಲೆ ಗಳಿಸಬಹುದು. ಕೇಳಿಸಿಕೊಳ್ಳುವ ಕಿವಿಗಳೆಲ್ಲಿವೆ?

ಕುಮಾರಪರ್ವತ ಆರೋಹಿ ರೊಟೇರಿಯನನರು

ರಾಮಣ್ಣರೈ ಬಂಟವಾಳ, ಪುತ್ತೂರು ದಿವಾಕರ ನಿಡ್ವಣ್ಣಾಯ, ಏನೆಕಲ್‌ ಕಾರ್ಯಪ್ಪ, ವಸಂತಕುಮಾರ್‌ ರೈ ಪುತ್ತೂರು, ಅರಂಬೂರು ಬಾಪೂ ಸಾಹೇಬ, ಮಾಲಿಂಗೇಶ್ವರ ಭಟ್‌ ಸುಳ್ಯ, ಕಿಶೋರ ಕೂಜುಗೋಡು ಮತ್ತು ರಾಮಕೃಷ್ಣ ಮಲ್ಲಾರ.

ಕೀಲಿಕರಣ : ಎಮ್.ಎನ್.ಎಸ್.ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗನ್ ಪ್ಪೂಷ್ ಶಟ್೯!
Next post ಅಮೆರಿಕಾ

ಸಣ್ಣ ಕತೆ

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ಮಿಂಚು

  "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…