ಅಮೆರಿಕಾ

ಜಗತ್ತಿನ ಶ್ರೀಮಂತ ರಾಷ್ಟ್ರ ಸಂಯುಕ್ತ ರಾಷ್ಣ ಅಮೆರಿಕ ಹಾಗೂ ಅಬಿವೃದ್ಧಿ ಹೊಂದಿದ ರಾಷ್ಟ್ರ ಕೆನಡ, ಈ ಖಂಡದ ಪ್ರಮುಖ ದೇಶಗಳು. ಹೀಗಾಗಿ ಯಾವುದೇ ಬಾಷೆಯ ಪ್ರವಾಸ ಸಾಹಿತ್ಯವನ್ನು ತೆರೆದು ನೋಡಿದರೆ ಸಂಯುಕ್ತ ರಾಷ್ಟ್ರ ಅಮೆರಿಕದ ಬಗೆಗೆಯೇ ಹೆಚ್ಚಾಗಿದ್ದದು ಕಾಣುತ್ತದೆ. ಹಾಗೆಯೇ ಕನ್ನಡ ಪ್ರವಾಸ ಸಾಹಿತ್ಯದಲ್ಲಿಯೂ ಅಮೆರಿಕಾ ಕುರಿತಾಗಿ ಬರೆದ ಕೃತಿಗಳೇ ಹೆಜ್ಜನ ಸಂಖ್ಯೆಯಲ್ಲಿವೆ.

ಅದೊಂದು ವಿಶ್ವಮಾನವ ಪ್ರದೇಶ. ಅಮೆರಿಕಾದಲ್ಲಿ ಅಮೆರಿಕನ್ನರು ಇರುವುದು ಶೇಕಡ 25ರಷ್ಟು ಮಾತ್ರ. ಉಳಿದವರು ಜಗತ್ತಿನಾದ್ಯಂತ ಬಂದ ವಲಸೆಗಾರರು. ಅಮೆರಿಕ ತನ್ನಲ್ಲಿ ಬಂದವರನ್ನು ಪೂರ್ಣವಾಗಿ ತನ್ನವರನ್ನೇ ಮಾಡಿಕೊಂಡು ಬಿಡುತ್ತದೆ. ಅವರು ತಮ್ಮ ಸ್ವಂತ ಏಳಿಗೆಯನ್ನು ಮಾಡಿಕೊಳ್ಳುತ್ತಾರೆ. ಅಮೆರಿಕದ ಏಳಿಗೆಯನ್ನು ಮಾಡುತ್ತಾರೆ. ಹೀಗೆ ಎಲ್ಲ ಜನಾಂಗದವರ ದೃಷ್ಟಿ ಅಮೆರಿಕದ ಸಮಷ್ಟಿಯಲ್ಲಿ ಮೂರ್ತಿಭವಿಸುತ್ತದೆ. ಅಮೆರಿಕದ ಅಭಿವೃದ್ಧಿ ತಮ್ಮ ಅಭಿವೃದ್ಧಿ ಅವರಿಗೆ ಒಂದೇ ಆಗಿ ಬಿಡುತ್ತದೆ. ಇದಕ್ಕೆ ಕಾರಣ ಅಮೆರಿಕದ ಸರ್ವಶಕ್ತ ಡಾಲರ್ ಎಂದು ಒಂದೆಡೆ ಗೊರೂರರು ಹೇಳಿದ್ದಾರೆ. ಪ್ರಪಂಚದ ಎಲ್ಲ ಕಡೆಗಳಿಂದಲೂ ಜನರನ್ನು ಅಮೆರಿಕ ಸೆಳೆಯುತ್ತಲೇ ಇದೆ. ಇಂತಹ ಅಮೆರಿಕಕ್ಕೆ
ಹೋಗಿ ಬಂದ ನಮ್ಮ ಪ್ರವಾಸಿ ಲೇಖಕರು ಸಾಕಷ್ಟು. ಗೊರೂರು ರಾಮಸ್ವಾಮಿ ಅಯ್ಯಂಗಾರ್ (ಅಮೆರಿಕಾದಲ್ಲಿ ಗೊರೂರು), ಎ.ಎನ್.ಮೂರ್ತಿರಾವ್ (ಅಪರ ವಯಸ್ಸಿನ ಅಮೆರಿಕಾ ಯಾತ್ರೆ) ಬಿ.ಜಿಎಲ್.ಸ್ವಾಮಿ (ಅಮೆರಿಕದಲ್ಲಿ ನಾನು) ನಾಡಿಗ ಕೃಷ್ಣಮೂರ್ತಿಯವರ (ಸಾಗರದಾಚೆ) ಕೃಷ್ಣಾನಂತ ಕಾಮತ್ (ನಾನು ಅಮೆರಿಕೆಗೆ ಹೋಗಿದ್ದೆ) ಲಲಿತ ಸುಬ್ಬರಾವ್ (ನಾನು ಮತ್ತು ಅಮೆರಿಕ) ಕೆ.ಜಿ. ಗುರುಮೂರ್ತಿ (ಅಮೆರಿಕೆಯಲ್ಲಿ ಪ್ರವಾಸ) ಪ್ರೊ.ಎನ್‌.ನಂಜುಂಡ ಶಾಸ್ತ್ರಿ (ಅಮೆರಿಕಾ ಭಾರತೀಯನ ದೃಷ್ಟಿಯಲ್ಲಿ) ಟಿ.ಕೆ.ರಾಮರಾವ್ (ಗೋಳದ ಮೇಲೊಂದು ಸುತ್ತು) ಜಿ.ಎಸ್.ಶಿವರುಪ್ರಪ್ಪ (ಅಮೆರಿಕದಲ್ಲಿ ಕನ್ನಡಿಗ) ಎಚ್‌.ಎಲ್‌.ನಾಗೇಗೌಡ (ನಾ ಕಂಡ ಪ್ರಪಂಚ) ಪ್ರಭುಶಂಕರ (ಅಮೆರಿಕದಲ್ಲಿ ನಾನು ಶಾಂತಿ) ವ್ಯಾಸರಾಯ ಬಲ್ಲಾಳ್ (ನಾನೊಬ್ದ ಭಾರತೀಯ) ದೇ.ಜ.ಗೌ (ವಿದೇಶದಲ್ಲಿ ನಾಲ್ಕುವಾರ) ವಸಂತಿಚಂದ್ರ (ಭೋಗ ಭೂಮಿಯ ಮಡಿಲಲ್ಲಿ) ಬಿ.ಎಸ್.ಸಣ್ಣಯ್ಯ (ನಾನೂ ಹೋಗಿದ್ದೆ ಅಮೆರಿಕೆಗೆ) ದೇವೇದ್ರಪ್ಪ ಬಸವಂತಪ್ಪ ಷಾಟಿಲ (ಸಪ್ತ ಸಾಗರದಾಚೆ) ರಾ.ಯ.ಧಾರವಾಡಕರ (ನಾನು ಕಂಡ ಅಮೆರಿಕ) ಕೆ.ಗಣೇಶ ಮಲ್ಯ (ಅಮೆರಿಕಾದಲ್ಲಿ ಅರವತ್ತು ದಿನಗಳು) ಶಿವರಾಮ ಕಾರಂತ (ಪಾತಾಳಕ್ಕೆ ಪಯಣ) ಸುಧಾ ಮೂರ್ತಿ (ಅಟ್ಲಾಂಟಿಕ್‌ದಾಚೆ) ನೀಳಾದೇವಿ (ನಾ ಕಂಡ ಆ ಖಂಡ) ರಾಜನ್‌ಭಟ್ಟ (ಕುಬೇರ ರಾಜ್ಯದ ಚಿತ್ರ -ವಿಚಿತ್ರ) ಪ್ರೋ.ಪುಟ್ಟ ಮಾದಪ್ಪನವರ (ನೆಮ್ಮುಗೆಯ ನಾಡು)
ಕೆ.ಎನ್.ಕೃಷ್ಣಮೂರ್ತಿ (ಅಮೆರಿಕಾ ಪ್ರವಾಸದ ಅನುಭವಗಳು) ಹೋ.ಶ್ರೀನಿವಾಸಯ್ಯ (ಜಯಶ್ರೀ ಕಂಡ ಅಮೆರಿಕ) ಸುಶಿಲಾ ಕೊಪ್ಪರ (ಪಡುವಣದ ಪತ್ರ ಮಾಲೆ) ಜಯಾ ರಾಜಶೇಖರ (ಮರಳಿಬಂದ ಮಧುರ ಮಾಸ) ಶ್ರೀಮತಿ ರಾಜಾರಮಣಿ (ಸುವರ್ಣ ಮಧು ಚಂದ್ರ) ಮ.ನಾಗರಾಜ್ (ನಾರಿ ನಿನಗೆ ನಮೋ ನಮೋ) ಎಚ್.ಕೆ.ರಂಗನಾಥ (ಪರದೇಶಿಯಾದಾಗ) ವಿ.ಕೃ.ಗೋಕಾಕ್ (ಇಂದಲ್ಲ ನಾಳೆ) ಶ್ರೀಮಿತ್ತೂರ (ಅಮೆರಿಕಾ, ನಾನು ಕಂಡಂತೆ). ಕುಲಶೇಖರಿ (ಬೊಗಸೆ ಬುತ್ತಿ), ಎನ್.ನಂಜುಂಡ ಶಾಸ್ತ್ರಿ (ಅಮೆರಿಕಾ ಭಾರತೀಯನ ದೃಷ್ಟಿಯಲ್ಲಿ) ಬಿ.ವಿರೂಪಾಕ್ಷಪ್ಪ (ನಾ ಕಂಡ ಅಮೆರಿಕಾ) ವೈ.ಎಸ್.ಲೂಯಿಸ್ (ಕೊಲಂಬಿಯಾ ಯಾತ್ರೆ) ಗುರುಮೂರ್ತಿ ಪೆಂಡಕೂರ (ಅವಕಾಶಗಳ. ಅಮರಾವತಿ, ಓ ಕೆನಡಾ) ವೆಂಕಟಸ್ವಾಮಿ (ಅಮೆರಿಕದಲ್ಲಿ ನನ್ನ ಅನುಭವಗಳು). ದೊಡ್ಡ ರಂಗೇಗೌಡ (ಲೋಕಾಯಣ) ವನಜಾರಾಜ್ (ಕಣ್ಣಂಚಿನಲ್ಲಿ ಪೂರ್ವ  ಪಶ್ಚಿಮ) ಬಿ.ವಿ. ನಾಗರಾಜ್ (ಕೆನಡಾದಲ್ಲಿ ಬಿ.ವಿ.ದಿನಚರಿ). ಬಿ.ಎಸ್. ಸ್ವಾಮಿ (ಅಮರ ನೆನಪು ಅಮೆರಿಕಾ) ವಿಶ್ವಾಸ್ (ಪಿಡಿದು ಸಂಸ್ಕೃತಿ ಸೂತ್ರವ), ಉಮಾರಾವ್ (ರಾಖೀ ಪರ್ವತಗಳ ನಡುವೆ) ನೇಮಿಚಂದ್ರ (ಪೇರು ಪ್ರವಾಸ) ನುಗ್ಗೇಹಳ್ಳಿ ಪಂಕಜಾ ಅವರ ಕಾಲ್ಪನಿಕ ಪ್ರವಾಸ ಕಥನ (ಕಾವೇರಮ್ಮನ ಅಮೆರಿಕ ಪ್ರವಾಸ) ಜಿ.ವಿ.ಕುಲಕರ್ಣಿ (ಅಮೇರಿಕಾದಲ್ಲಿ ಜಿ.ವಿ.)  ಲಲಿತಾಶಾಸ್ತ್ರಿ (ಉತ್ತರ ಅಮೆರಿಕಾದಲ್ಲಿ ಚಾತುರ್ಮಾಸ್ಯ)
ಪರಮೇಶ್ವರಿ ಲೋಕೇಶ್ವರ (ಅಮೇರಿಕದಲ್ಲಿ ಅರವತ್ತು ದಿನಗಳು) ರಾಜಲಕ್ಷ್ಮಿ ಗೋಪಾಲ (ಅಮರಲೋಕದಲ್ಲಿ ಅಧ್ಯಾಪಕಿ)

ಹೀಗೆ ಅಮೆರಿಕವನ್ನು ಸುತ್ತಾಡಿದ ಪ್ರವಾಸ ಕಥನಕಾರರ ಪಟ್ಟಿ ಇನ್ನೂ ಬೆಳೆಯುತ್ತಲೇ ಹೋಗುತ್ತದೆ. ಎಲ್ಲರೂ ಅಮೆರಿಕದ ಬಗೆಗೆ ಬರೆದವರೆ ಅದರೆ ಅವರವರ ದೃಷ್ಟಿಕೋನಗಳು ಬರವಣಿಗೆಯಲ್ಲಿ ಹೇಗೆ ಬೇರೆ ಬೇರೆಯಾಗಿ ಕಾಣುತ್ತದೆ ಎಂದು ಓದಿದಾಗ ಆಶ್ಚರ್ಯವಾಗುತ್ತದೆ.

ಕೆ.ಜಿ.ಗುರುಮೂರ್ತಿ ಅವರ ‘ಅಮೆರಿಕೆಯಲ್ಲಿ ಪ್ರವಾಸ’ ಅಮೆರಿಕದ ಬಗೆಗೆ ಸಮಗ್ರವಾದ ಚಿತ್ರಣಕೊಡುವ ಕೃತಿ 20ನೆಯ ಶತಮಾನದ ಅಮೆರಿಕಾ ಎಲ್ಲಾ ಕ್ಷೇತ್ರಗಳಲ್ಲಿಯೂ ಬಹಳ ಮುಂದುವರಿದ ದೇಶ. ಆರ್ಥಿಕವಾಗಿ, ವೈಜ್ಞಾನಿಕವಾಗಿ, ಸಾಮಾಜಿಕವಾಗಿ, ಹಲವು ರೀತಿಯ ನಿಸರ್ಗ ಸಂಪತ್ತಿನಿಂದ ಮತ್ತು ಮಾನವ ಶಕ್ತಿಯಿಂದ ಶ್ರೀಮಂತವಾಗಿರುವ ಈ ವಿಶಾಲ ದೇಶದ ವಿಸ್ತೀರ್ಣ ಭಾರತದ ಮೂರರಷ್ಟಿದ್ದರೂ ಅಲ್ಲಿಯ ಜನಸಂಖ್ಯೆ ನಮ್ಮ ದೇಶದ ಮೂರನೆಯ ಒಂದು ಬಾಗದಷ್ಟು ಮಾತ್ರ. ಜೊತೆಗೆ ಅಲ್ಲಿಯ ಜನ ಒಂದು ಜನಾಂಗಕ್ಕಾಗಲೀ, ಒಂದೇ ಸಂಸ್ಕೃತಿಗಾಗಲೀ ಸೇರಿದವರಲ್ಲ. ವಿಭಿನ್ನ ಸಂಸ್ಕೃತಿಯ ವಿಭಿನ್ನ ಶಕ್ತಿ ಮತ್ತು ಬುದ್ಧಿ ಮಟ್ಟದ ಜನ ಒಂದುಗೂಡಿ ಇಂದಿನ ಸಂಪದ್ಭರಿತ ರಾಷ್ಟ್ರವಾದ ಅಮೆರಿಕಾವನ್ನು ಕಟ್ಟಿದ್ದಾರೆ. ಹಲವಾರು ಹತ್ತು ರೀತಿಯ ಶಕ್ತಿಗಳ ಒಕ್ಕೂಟ  ದೇಶಕ್ಕೆ ನಿಜವಾದ ಬಲ ಮತ್ತು ಚೇತನವನ್ನು ನೀಡಿದೆ. ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಯಾವ ಒಂದು ಗುಂಪನ್ನು ಅಲಕ್ಷಿಸಿಲ್ಲ. ಅಥವಾ ಅಲ್ಲಗಳೆಯುವುದಿಲ್ಲ. ಕರಿಯರ ವಿಷಯದಲ್ಲಿ ಸ್ವಲ್ಪ ಅನಾದರ ಕಾಣಿಸಬಹುದಾದರೂ ಆ ದೇಶದಲ್ಲಿ ಒಬ್ದ ವ್ಯಕ್ತಿ ಮುಂದೆ ಬರಬೇಕಾದರೆ, ಕೀರ್ತಿ ಯಶಸುಸ್ಸುಗಳಿಸಬೇಕಾದರೆ ಆ ವ್ಯಕ್ತಿಯ ನಿಜವಾದ ಯೋಗ್ಯತೆ, ಶಕ್ತಿ ಸಾಮರ್ಥ್ಯಗಳಿಂದ ಮಾತ್ರ! ಯಾವ ವಿಧವಾದ ಪ್ರಬಾವ ಅಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ ಎನ್ನುತ್ತಾರೆ ಲೇಖಕರು.

ನಿಜವಾದ ಪ್ರಜಾಪ್ರಭುತ್ವವನ್ನು ಬೆಳೆಸಿ, ದಕ್ಷತೆ ಮತ್ತು ಅರ್ಹತೆಗೆ ಮನ್ನಣೆ ನೀಡಿ ದೇಶದ ಅಖಂಡ ಅಭ್ಯುದಯಕ್ಕೆ ಹೇಗೆ ಮನಸಾರೆ ಶ್ರಮಿಸಬೇಕು ಎಂಬುದನ್ನು ಅಮೆರಿಕಾದಲ್ಲಿ ಪ್ರತ್ಯಕ್ಷ ಕಾಣಬಹುದು. ದೇಶಾಭಿಮಾನ, ದುಡಿದು ತಿನ್ನಬೇಕೆನ್ನುವ ಛಲ, ಸ್ವಾವಲಂಬನೆ ಮತ್ತು ಸ್ಥಾತಂತಿತ್ರ್ಯಾಭಿಲಾಷೆ ಅಲ್ಲಿಯ ಬಹುತೇಕ ಜನರಲ್ಲಿ ಕಾಣಿಸುತ್ತದೆ. ಇದರಿಂದ ದೇಶದಲ್ಲಿ ಸಂಪತ್ತು ಸಮೃದ್ಧಿ ಉಂಟಾಗಿದೆ. ಇದಕ್ಕೆ ಅಲ್ಲಿರುವ ರಾಜಕೀಯ, ಸಾಮಾಜಿಕ. ಮತ್ತು ಅರ್ಥಿಕ ವಾತಾವರಣ ಕಾರಣವೆನ್ನಬಹುದು. ರಾಜಕೀಯವಾಗಿ ಅವರು ಪ್ರಜಾಪ್ರಭುತ್ಪದ ತತ್ವಗಳನ್ನು ನಿಷ್ಠೆಯಿಂದ ಪರಿಪಾಲಿಸುವರು. ಈ ತತ್ವದ ಆಧಾರ ಸ್ತಂಭಗಳಾದ ಪ್ರಜಾಭಿಪ್ರಾಯ, ಪತ್ರಿಕಾ ಸ್ಪಾತಂತ್ರ್ಯ, ಕಾನೂನುಗಳಲ್ಲಿ ಕಟ್ಚುನಿಟ್ಟಾದ ಪರಿಪಾಲನೆ ಮತ್ತು ಸ್ಥಾಭಿಮಾನಗಳಿಂದ ರಕ್ಷಿಸಿ ಬಲಪಡಿಸಿದ್ಧಾರೆ. ಅರ್ಥಿಕವಾಗಿ ಅಲ್ಲಿ ಅನುಸರಿಸುವ
ತತ್ವ ಕ್ಯಾಪಿಟಲಿಸಮ್ (ಬಂಡವಾಳಶಾಹಿ ರಾಜ್ಯ) ಅದರಿಂದಾಗಿ ಅಲ್ಲಿ ಎಲ್ಲ ಉದ್ಯಮಗಳೂ ಖಾಸಗೀ ಕ್ಷೇತ್ರಕ್ಕೆ ಒಳಪಟ್ಟಿವೆ. ಹಣದ ಉತ್ಪಾದನೆ ಲಾಭ ಸಂಪಾದನೆ ಇವೇ ಅಲ್ಲಿಯ ಜನರ ಮುಖ್ಯ ಉದ್ದೇಶ. ದೇಶದ ಅರ್ಥಿಕ ಅಭಿವೃದ್ದಿಗೆ ನೆರವಾಗುವ ಎಲ್ಲಾ ಯೋಜನೆಗಳಿಗೂ ಸರಕಾರದ ಸಹಾಯ ಮತ್ತು ಉತ್ತೇಜನ ದೊರೆಯುತ್ತದೆ.
ಅಮೆರಿಕಾದಲ್ಲಿ ಅಭಿವ್ಯಕ್ತಿ; ಸ್ವಾತಂತ್ರ್ಯಕ್ಕೆ ಬೆಲೆ ಇದೆ ಮತ್ತು ಎಲ್ಲಾ ಸಾರ್ವಜನಿಕ ವಿಷಯದಲ್ಲಿ ಪಾರದರ್ಶಕತೆ ಇದೆ ಎಂದಿದ್ದಾರೆ. ಪ್ರಜಾ ಪ್ರಭುತ್ವದಲ್ಲಿ ಈ ಸ್ಪಾತಂತ್ರ್ಯ ಬೇಕೆ ಬೇಕು. ಸ್ವಾತಂತ್ರ್ಯ ಇದೆಯೆಂದು ಅಮೆರಿಕಾದಲ್ಲಿ ಹೊಣೆಗೆಟ್ಟು
ಮಾತನಾಡುವವರು ಇಲ್ಲ. ಹಾಗೆ ಹೊಣೆಗೆಟ್ಟು ಮಾತನಾಡಿದರೆ ನಡೆದುಕೊಂಡರೆ ಬಾರೀ ದಂಡ ಮತ್ತು ಪರಿಹಾರ ಕೊಡಬೇಕಾಗುತ್ತದೆ. ಹೀಗಾಗಿ ಅಮೆರಿಕದವರು ಎಲ್ಲಾ ವಿಷಯದಲ್ಲೂ ತಮ್ಮ ಹಕ್ಕು ಹೊಣೆಗಳನ್ನು ತಪ್ಪದೇ ಕರಾರುವಕ್ಕಾಗಿ ತಿಳಿದುಕೊಂಡಿರುತ್ತಾರೆ. ಮನೆ ಕಟ್ಟುವಾಗ. ವ್ಯವಹಾರ ಮಾಡುವಾಗ, ಅಷ್ಟೇ ಏಕೆ ಮಾತನಾಡುವಾಗ ಕೂಡಾ. ವೈದ್ಯ ತನ್ನ ಹೊಣೆ ತಪ್ಪಿದರೆ ದಂಡ ಮತ್ತು ಪರಿಹಾರ ಕೊಡಬೇಕು. ತಪ್ಪು ಮಾಡಿದವರು ಸಾಮಾನ್ಯ ಪ್ರಜೆಯಾಗಿರಲಿ, ಗೌರ್ವರ್ ಅಥವಾ ರಾಷ್ಟಪತಿಯೇ ಅಗಿರಲಿ ಶಿಕ್ಷೆಯನ್ನು ಅನುಭವಿಸಬೇಕು. ಅನುಭವಿಸಿದ್ಧಾರೆ. ಎನ್ನುತ್ತಾರೆ ಲೇಖಕರು.

ಅಲ್ಲಿಯ ನಗರ ಸಭೆಯ ಕಾನೂನಿನ ಬಗೆಗೆ ಒಂದಿಷ್ಟು ಹೀಗೆ ತಿಳಿಸಿ ಕೊಡುತ್ತಾರೆ. ಅಮೆರಿಕಾದ ಮನೆಗಳು ಬಹು ವಿಧದಲ್ಲಿ ಮಹಾಭಾರತದ ಅರಗಿನ ಮನೆಗಳು. ಕೇವಲ ಮರ. ಪ್ಲಾಸ್ಟಿಕ್ ಬಳಸಿ ಕಟ್ಟಿದ ವಸತಿಗಳು  ಅದ್ದರಿಂದ
ಅವುಗಳಲ್ಲಿ ಕೆಲವೊಂದು ವಸ್ತುಗಳನ್ನು ಸಂಗ್ರಹಿಸಿ ಇಡಕೂಡದಂತೆ. ಮನೆಯಲ್ಲಿ ಅಂದಿನ ಪತ್ರಿಕೆ ಅಥವಾ ಒಂದೆರಡು ಪುಸ್ತಕಗಳಿರಬಹುದು. ಅದಕ್ಕಿಂತಲೂ ಹೆಚ್ಚೆಗೆ ಇದ್ದರೆ ಆಕಸ್ಮಾತ್ ಮನೆಗೆ ಬೆಂಕಿ ಬಿದ್ದರೆ, ಅವರಿಗೆ ಒಂದು ಪೈಸೆಯೂ ಮನೆಯ ಹಾಗೂ ಅಲ್ಲಿಯ ವಸ್ತುಗಳ ಮೇಲೆ ಮಾಡಿದ ವಿಮಾ ಹಣ ಸಿಗುವುದಿಲ್ಲ. ಏಕೆಂದರೆ ಮನೆಯ ಹೆಚ್ಚಿನ ಪುಸ್ತಕಗಳು ಪುಸ್ತಕಾಲಯದಲ್ಲಿರಬೇಕು. ಇಲ್ಲವೇ ಅಂಗಡಿಯಲ್ಲಿರಬೇಕು. ಕಾನೂನು ಹೀಗಿದ್ದಾಗ ನೀವು ಈ ಬಾರೀ ಸಂಖ್ಯೆಯಲ್ಲಿ ಪುಸ್ತಕಗಳನ್ನು ವಾಸದ ಮನೆಯಲ್ಪಿ ಸಂಗ್ರಹಿಸಿಟ್ಟುಕೊಂಡ ಉದ್ದೇಶವಾದರೂ ಏನು ಎಂದು ನಿಮ್ಮನ್ನು ಹಣ ಕೊಡುವವನು ಪ್ರಶ್ನಿಸುತ್ತಾನೆ. ಅದ್ದರಿಂದ ಅಲ್ಲಿ ಯಾವ ವಸ್ತು ಎಲ್ಲಿರಬೇಕೋ ಅಲ್ಲಿಯೇ ಇರಬೇಕು. ಹಳೆಯ ವಸ್ತು ಕಸದ ಬುಟ್ಟಿಯಲ್ಲಿ, ರೋಗಿ ಅಸತ್ರೆಯಲ್ಲಿ, ವೃದ್ಧರು ವೃದ್ಧರ ಗೃಹದಲ್ಲಿ ಇರಬೇಕು. ಇಲ್ಲಿದಿದ್ಧರೆ ಇದರ ಉದ್ದೇಶ ಪ್ರಶ್ನೆಗೆ ಬರುತ್ತದೆ.

ಅಮೆರಿಕೆಯಲ್ಲಿ ಬಾಡಿಗೆಗೆ ಮನೆಗಳು ಸಿಗುವಂತೆ ಗೃಹ ಬಳಕೆಗೆ ಬೇಕಾದ ಕುರ್ಚಿ, ಟೇಬಲ್, ಕಾಟು, ಪ್ರಿಜ್ ಮುಂತಾದ ವಸ್ತುಗಳು ಬಾಡಿಗೆಗೆ ಸಿಗುತ್ತವೆ. ಅವರು ಹೋದಲ್ಲಿ ಈ ವಸ್ತುಗಳನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ. ಅಲ್ಲಿಂದ ಬಿಟ್ಟು ಬೇರೆ ಕಡೆಗೋ ಸ್ಥದೇಶಕ್ಕೋ ಹೊರಡುವಾಗ ಅವುಗಳನ್ನು ವಾಪಸ್ಸು ಕೊಟ್ಟು ಲೆಕ್ಕ ಚುಕ್ತಾ ಮಾಡಿ ಬಿಡುತ್ತಾರೆ ಎಂದು ವಿವರಿಸುತ್ತಾರೆ. ಅಮೆರಿಕದ ಮಹಿಳೆಯರ ಬಗೆಗೆ ಹೇಳುತ್ತ – ಇಲ್ಲಿಯ ಮಹಿಳೆಯರು ಸ್ಥತಂತ್ರರು ಮಾತ್ರವಲ್ಲಿ ಎಲ್ಲ ವಿಧದಿಂದಲೂ ಸ್ವಾವಲಂಬಿಗಳು. ಮಹಿಳೆಯರು ದುಡಿಯಲು, ಆಸ್ತಿಗಳಿಸಲು ಉಳಿಸಲು, ಬಂಡವಾಳದಲ್ಲಿ ತೊಡಗಿಸಲು, ದಾನಮಾಡಲು, ಮದುವೆಯಾಗಲು, ವಿಚ್ಛೇದನ ಪಡೆಯಲು, ಅವಿವಾಹಿತ ಮಾತೆಯಾಗಲು. ಬೇಕಾದ ಪೋಷಾಕ ಧರಿಸಲು, ಟ್ರಕ್ ಡ್ರೈವರ್, ಪೈಲಟ್ ಆಗಲು, ಮುಷ್ಠಿಯುದ್ಧ, ಶರೀರ ಬೆಳೆಸುವುದು, ಕುಸ್ತಿ, ಕತ್ತಿವರಸೆ, ಸೈನ್ಯ ಸೇವೆ – ಹೀಗೆ ಎಲ್ಲ ರಂಗದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುತ್ತಿದ್ದಾರೆ. ಇಷ್ಟೇ ಅಲ್ಲ ನಾವೇನು ಕಡಿಮೆ ಎಂದು ಗಂಡಸರು ಮಾಡುವ ಮಾದಕ ಪೇಯ, ತಂಬಾಕು ಸೇವನೆ, ಜೂಜು ಆಡುವುದು ಹೀಗೆ ಎಲ್ಲ ಚಟವನ್ನು ಕಲಿತರು. ಯಾರೂ ಯಾರೊಬ್ದರ ಮೇಲೆ ಆವಲಂಬಿಸುವಂತಿಲ್ಲ. ಹಕ್ಕು ಸ್ಥಾಪಿಸುವಂತಿಲ್ಲ. ಹೀಗೆ ಗುರುಮೂರ್ತಿಯವರು ಅಮೆರಿಕದ ಒಳನೋಟಗಳನ್ನು ಇನ್ನೂ ಅನೇಕ ವಿಷಯಗಳಲ್ಲಿ ತಿಳಿಸಿಕೊಟ್ಟಿದ್ದಾರೆ.

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಅಮೆರಿಕಾ ಕೆನಡಾ ಪ್ರವಾಸಗಳನ್ನು ಮಾಡಿ ‘ಅಮೆರಿಕದಲ್ಲಿ ಗೊರೂರು’ ಪ್ರವಾಸ ಕಥನ ದಚಿಸಿದ್ದಾರೆ. ಇರೋದು ವಿಶಿಷ್ಟವಾದ ಪ್ರವಾಸ ಕೃತಿ ಎನ್ನಬಹುದಾಗಿದೆ. ವಿದೇಶಕ್ಕೆ ಹೊರಡುವವರು ಸಾಮಾನ್ಯವಾಗಿ ಸೂಟು ಬೂಟು ಟಾಯ್ ಧರಿಸಿಕೊಂಡು ಹೊರಡುತ್ತಾರೆ. ಅದರೆ ಗೊರೂರರು ತಮ್ಮದೇ ಅದಂತಹ ಸಾಂಪ್ರದಾಯಿಕ  ಬಟ್ಟೆರೆಗಳಲ್ಲಿಯೇ ಹೊರಟಿದ್ದಾರೆ. ಅಗಲವಾದ ಎಂಟೂವರೆ ಮೊಳ ಉದ್ದದ ದಪ್ಪನೂಲಿನ ಖಾದಿಯ ಪಂಚೆಕಜ್ಜೆ, ಕಾವಿಬಣ್ಣದ ನೀಳವಾದ ಜುಬ್ದ. ಚಳಿಗಾಗಿ ತಲೆಗೆ ಒಂದು ಉಣ್ಣೆ ಶಾಲು ಮಫ್ಲರ್, ಹಣೆಗೆ ಕೆಂಪು ನಾಮ, ಕಾಲಿಗೆ ದಪ್ಪವಾದ ಎಕ್ಕಡ (ಚಪ್ಪಲಿ) ಹಾಗೆಯೇ ಒಮ್ಮೊಮ್ಮೆ ದಾಡಿ ಮಾಡಿಕೊಳ್ಳಲಾಗದ ಬಿಳಿ ಗಡ್ಡ ಮೀಸೆ ಬೆಳೆದ ಮುಖ, ಕೆದರಿನಿಂತ ಬಿಳಿ ತಲೆಗೂದಲು. ಹೀಗೆ ತಮ್ಮದೇ ಆದ ವೇಷಭೂಷಣಗಳಲ್ಲಿ ಅಡ್ಡಾಡಿದ್ದಾರೆ. ಇವರ ಈ ವೇಷವನ್ನು ನೋಡಿದ ಮಕ್ನಳು ಪೈಡ್ ಪೈಪರ್, ಸಾಂಟಾಕ್ಲಾಸ್ ಎಂದೆಲ್ಲ ಕೂಗುತ್ತಿದ್ದವಂತೆ. ಅವರೊಡನೆ ಇವರು ಬೇಗ ಪ್ರೀತಿ ಸ್ನೇಹ ಬೆಳಸಿಕೊಳ್ಳುತ್ತಿದ್ದರಂತೆ.

ಗೊರೂರು ಹಾಸ್ಯಪ್ರಿಯುರೆನ್ನುವುದಕ್ಕೆ ಅವರ ಪುಸ್ತಕದ ತುಂಬೆಲ್ಲಿ ಅನೇಕ ಹಾಸ್ಯ ಪ್ರಸಂಗಗಳು ಕಾಣಸಿಗುತ್ತವೆ. ವಯಸ್ಸಾದ ಈ ಅಜ್ಜನ ಹಲ್ಲುಗಳನ್ನು ಎಲ್ಲರೂ ನೋಡುತ್ತಿದ್ದರಂತೆ. ಅವರೇ ಅಶ್ಚರ್ಯ ಪಟ್ಟುಕೊಂಡು ಯಾಕೆ ಹೀಗೆ ಎಂದು ಕೇಳಿದಾಗ ‘ನಿಮ್ಮ ಹಲ್ಲುಗಳು ಎಷ್ಟು ನೀಟಾಗಿ ಚೆಂದಾಗಿ ಕಟ್ಟಿದ್ಧಾರೆ’ ಎಂದರಂತೆ, ಅಗ ಇವರು ಹೇಳಿದ್ದು – ಇಲ್ಲ ಇವು ಕಟ್ಟಿದ ಹಲ್ಲುಗಳಲ್ಲ, ನನ್ನ ಹಲ್ಲುಗಳೇ ಸ್ವಂತ ಹಲ್ಲುಗಳೇ ಎಂದರಂತೆ. (ಅಲ್ಲಿ ಚಾಕಲೇಟ್ಸ್ ಇನ್ನಿತರ ಸಿಹಿ ತಿಂಡಿ
ತಿನಿಸುಗಳು ತಿಂದು ಹಲ್ಲು ಕೆಟ್ಟುಹೋಗಿ, ಅವುಗಳನ್ನು ಕೀಳಿಸಿ ಹೊಸ ಹಲ್ಲು ಕಟ್ಟಿಸಿಕೊಳ್ಳುವುದು ಸಾಮಾನ್ಯ.

ಮತ್ತೊಮ್ಮೆ ಗೊರೂರರು ಪೋಲೀಸ್ ಲಾಕಪ್ಪಿನಲ್ಲಿ ಕಳೆದ ಸಂಧರ್ಭ, ಇನ್ನೊಮ್ಮೆ ಲಿಫ್ಟಿನಲ್ಲಿ ಇದ್ದಾಗ ಸರಿಯಾದ ಗುಂಡಿ ಒತ್ತಲು ತಿಳಿಯದೆ ನೆಲಮಾಳಿಗೆಯಲ್ಲಿ ಹಳೆ ಕಾರ್ ಪಾರ್ಕ್ ಮಾಡಿರುವ ಸ್ಥಳದಲ್ಲಿ ಇಳಿಯಬೇಕಾದ ಸಂದರ್ಭ, ಮಾಸ್ಕೋ ಸರ್ಕಸ್ ನೋಡಲು ಹೋದಾಗ ಅಲ್ಲಿನ ಬಾತ್ರೂಂಗೆ ಹೋಗಿದ್ದಾರೆ. ಒಳಗಿನಿಂದ ಆ ಬಾಗಿಲು ತೆರೆಯಲು ಬರದೆ ಗಾಬರಿಯಲ್ಲಿ ಫೈರ್ ಅಲಾರಾಂ ಗುಂಡಿ ಒತ್ತಿ ಸರ್ಕಸ್ಸ್ ಕಾಂಟ್ರಾಕ್ಟದಾರನ ಕೋಪಕ್ಕೆ ಸಿಕ್ಕು ಹಾಕಿಕೊಂಡು
ಕೊನೆಗೆ ತಮ್ಮ ಹಾಸ್ಯ ಸ್ಥಬಾವದಿಂದ ಅವನ ಮನಸ್ಸು ಗೆದ್ದುದಾಟಿ ಬರುತ್ತಾರೆ. ಹೀಗೆ ಇನ್ನೂ ಅನೇಕಾನೇಕ ಸಂದರ್ಭಗಳು ಓದುತ್ತಿದ್ದಂತೆ ನಗೆ ಬರುತ್ತದೆ. ಗೊರೂರರು ತಮ್ಮ ಹಾಸ್ಯ ಸಂದರ್ಭಗಳ ಜೊತೆ ಜೊತೆಯಲ್ಲಿಯೇ ಅಮೆರಿಕಾದ ಸಾಂಸ್ಕೃತಿಕ ಚಿತ್ರಣವನ್ನು ವಿವರವಾಗಿ ತಿಳಿಸಿದ್ದಾರೆ.

ಅಮೆರಿಕದವರ ಜೀವನ ಕ್ರಮವನ್ನು ನೋಡಿದ ಗೊರೂರರು ಹೀಗೆ ಹೇಳುತ್ತಾರೆ. ‘ಅವರ ದೇಶವನ್ನು ಅವರು ಹೇಗೆ ಮಾಡಿಕೊಂಡಿದ್ಧಾರೆ ಎಂಬುದು ಮಾತ್ರ ನನ್ನ ಕಣ್ಣಿಗೆ ಬೆಳ್ಳಂಬೆಳಕಾಗಿ ತೋರುತ್ತಿತ್ತು. ಪ್ರತಿಯೊಬ್ದರಿಗೂ ವಿದ್ಯೆ, ಉದ್ಯೋಗ, ಟೆಲಿಫೋನ್, ಟಿಲಿವಿಶನ್, ಮನೆ, ಕಾರು, ವೈದ್ಯಕೀಯ ಸೌಲಭ್ಯ ಇವೆಲ್ಡವನ್ನೂ ಅಂಗಡಿಯಲ್ಲಿ ಬಾಳೆಹಣ್ಣು ಅಥವಾ ಬೋಂಡಾಗಳನ್ನು ಕೊಂಡುಕೊಳ್ಳುವಂತೆ ಕೊಳ್ಳಬಹುದು. ಇವು ಸರ್ವರಿಗೂ ಸಮಾನ. ಇದರಲ್ಲಿ ಹಿಂದುಳಿದವ ಮುಂದೆ ಬಂದವ ಎಂಬ ತಾರತಮ್ಯವಿರುವುದಿಲ್ಲ. ‘ಸರ್ವೋವೈಸುಖಿನಸ್ಸಂತು’ ಅಮೆರಿಕನ್ನರು ಇದನ್ನು ಸ್ಥಾಬಾವಿಕವಾಗಿ ಯಾವ ಬೊಬ್ದಾಟ ಘೋಷಣೆ ಪ್ರಚಾರ ಅಡಂಬರದ ಮೆರವಣಿಗೆ, ರಸ್ತೆಗಳಲ್ಗೆಲ್ಲ ದೊಡ್ಡ ದೊಡ್ಡ ಫಲಕಗಳು ಇವುಗಳಿಲ್ಲದೆ ಮೌನವಾಗಿ ಸಾಧಿಸಿದ್ದಾರೆ. ಅವರು ಬಹುಮಟ್ಟಿಗೆ ಪ್ರಾಮಾಣಿಕರು, ಕಷ್ಟ ಜೀವಿಗಳು. ನಿರಸೂಯರು ಎನ್ನುತ್ತಾರೆ. ಹಾಗೆಯೇ ಅಲ್ಲಿಯ ಸರಕಾರಿ ಅಧಿಕಾರಿಗಳ ಕಾರ್ಯ ವೈಖರಿಯ ಬಗೆಗೆ “ಜನರ ಕಾರ್ಯಗಳನ್ನು ತುಂಬ ವಿನಯ ಮತ್ತು ಚುರುಕಿನಿಂದ ಮಾಡಿಕೊಡುತ್ತಾರೆ, ಯಾವ ಅಫೀಸಿನಲ್ಲಿಯೂ ನೂಕು ನುಗ್ಗಲು ಜನಜಂಗುಳಿ, ತೀರ್ಮಾನವಾಗದ ಕಡತದ ರಾಶಿ ಇರುವುದಿಲ್ಲ. ಅಲ್ಲಿಯ ಜನ ಅಧಿಕಾರಿಗಳನ್ನು ಕಾಡುವುದು, ಬೇಡುವುದು, ಅವರೊಂದಿಗೆ ಸವಿಮಾತನಾಡುವುದು ಯಾವುದೂ ಅವಶ್ಯವಿಲ್ಲ. ಕೆಲಸ ಆಗುವುದಾದರೆ ಇಪ್ಪತ್ತು ನಿಮಿಷಗಳಲ್ಲಿ ಮಾಡಿಕೊಟ್ಟು ಕಳುಹಿಸುತ್ತಾರೆ. ಇಲ್ಲಿದಿದ್ದರೆ ಸಮಯ ಕೊಟ್ಟು ಕಳಿಸುತ್ತಾರೆ. ಯಾವ ಅಧಿಕಾರಿಯೂ ಆಪೀಸಿನಿಂದ ಗೈರು ಹಾಜರು ಆಗುವುದಿಲ್ಲ. ಕೆಲಸದ ಹೊರತು ಉಳಿದ ಸಲ್ಲಾಪಕ್ಕೆ ಎಡೆಯಿಲ್ಲ” ಎಂದು ಗೊರೂರರು ತಮ್ಮ ದೀರ್ಘ ಪ್ರವಾಸದಲ್ಲಿ ಕಂಡ ಅನೇಕ ಅನುಭವಗಳನ್ನು ಪುಸ್ತಕದ ಕೊನೆಗೆ ಬಹಳ ಆತ್ಮೀಯವಾಗಿ ನಿರೂಪಿಸಿರುವರು.

ಎ.ಎನ್.ಮೂರ್ತಿರಾಯರೂ ಕೂಡಾ “ಅಪರ ವಯಸ್ಕನ ಅಮೆರಿಕ ಯಾತ್ರೆಯಲ್ಲಿ ಅಲ್ಲಿಯ ಅಚ್ಚುಕಟ್ಟುತನದ ಬಗೆಗೆ ಮೆಚ್ಚಿಕೊಂಡು ಹೇಳಿದ್ದಾರೆ. ಅಮೆರಿಕ ಕಾಮಧೇನು ಕಲ್ಪವೃಕ್ಷಗಳ ನಾಡು. ಅಲ್ಲಿ ಹಾಲು ಜೇನಿನ ಹೊಳೆ ಹರಿಯುತ್ತದೆ. ಅಮೆರಿಕಾದಲ್ಲಿರುವ ಅಪಾರ ಪ್ರಕೃತಿದತ್ತ ಸಂಪತ್ತು ಅಲ್ಲಿಯೇ ಜನಶಕ್ತಿ, ವೈಜ್ಞಾನಿಕ ಮುನ್ನಡೆ. ದಕ್ಷತೆ, ತಮ್ಮ ಸರಕನ್ನು ಮಾರುವ ಚಾಕಚಕ್ಯತೆ ಇವುಗಳನ್ನು ಕಂಡು ಪ್ರಪಂಚ ಬೆರಗಾಗಿದೆ ಎನ್ನುತ್ತಾರೆ. ಭೋಗ ಜೀವನ ಅಮೆರಿಕಾದಲ್ಲಿ ಪರಮಾವಧಿ ತಲುಪಿ ಹೋಗಿದೆ ಎನ್ನುವುದಕ್ಕೆ ಅವರು ಕಂಡಿರುವ ಪರಿಯೆಂದರೆ ಪ್ರತಿ ಮನೆಗೂ ಕುಟುಂಬದಲ್ಲಿ ಅವರವರಿಗೆ ಅನುಕೂಲವಾಗುವಂತೆ ಎರಡೋ ಮೂರೋ ಕಾರುಗಳು, ರೆಫ್ರಿಜರೇಟರ್ಗಳು. ಬಟ್ಟೆ ಒಗೆಯುವ, ತಟ್ಟೆ ತೊಳೆಯುವ ಕಸಗುಡಿಸುವ ಯಂತ್ರಗಳು. ಕಂಪ್ಯೂಟರ್, ಟೆಲಿಫೋನ್. ಟೆಲಿವಿಷನ್‌ಗಳು. ಹಾಗೆಯೇ ಪ್ರತಿ ಕೊಠಡಿಗೂ ಏರ್ ಕಂಡಿಷನರ್, ಬೇಕಿದ್ದರೆ ಸೆಂಟ್ರಲ್ ಹೀಟಿಂಗ್ ವ್ಯವಸ್ಥೆ ಇರುತ್ತದೆ. ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗುವ ಬಗೆ ಬಗೆಯ ಊಟ ತಿಂಡಿ ತಿನಿಸುಗಳು ಓವನ್‌ಗಳಲ್ಲಿಟ್ಟು ಕೆಲವೇ ನಿಮಿಷಗಳಲ್ಲಿ ಬಿಸಿ ಮಾಡಿ ತಿನ್ನಬಹುದು. ಕಾರಿನ ಗ್ಯಾರೇಜ್ ಬಾಗಿಲು ತೆಗೆಯಲು ಹಾಕಲು ರಿಮೋಟ್ ಕಂಟ್ರೋಲ್, ಅಟೋಮೆಟಿಕ್ ಆಗಿ ಸೋಪು, ನೀರು ಬ್ರಷ್‌ಗಳಿಂದ ಕಾರು
ತೊಳೆಯುವ ವ್ಯವಸ್ಥೆಯ ಸೌಲಭ್ಯ. ಹಾಗೆಯೇ ಭೋಗ ಜೀವನಕ್ಕೆ ಹೊಸ ಹೊಸ ಸಾಮಗ್ರಿಗಳನ್ನು ಸೃಷ್ಠಿಸುವ ಚಟ ಇಷ್ಟಕ್ಕೇ ನಿಲ್ಲದೇ ಸ್ನಾನ ಮಾಡುವಾಗ ತಲೆಗೆ ಸಾಬೂನು ನೊರೆ ಬೀಳುವುದಕ್ಕೊಂದು ಉಪಕರಣ, ನೀರಿನ ಉಷ್ಣಾಂಶ ಇಷ್ಟಿರಬೇಕೆಂದು ಬಾಯಲ್ಲಿ ಹೇಳಿದರೆ ಅದು ಅಷ್ಟೇ ಅಗುವಂತೆ ವ್ಯವಸ್ಥೆ. ಹಲ್ಲುಜ್ಜುವದಕ್ಕೆಂದು ಇಲೆಕ್ಟ್ರಿಕ್ ಬ್ರಷ್, ಬೆನ್ನು ಕೆರೆದುಕೊಳ್ಳುವುದಕ್ಕೊಂದು ಬ್ರಷ್ ಹೀಗೆ ಉದ್ದನೆಯ ಪಟ್ಟಿ ಬೆಳೆಸಿಕೊಂಡು ಹೇಳುತ್ತಾ ಹೋಗುತ್ತಾರೆ.
ಮೂರ್ತಿರಾಯರು ಇಂಥವುಗಳನ್ನೆಲ್ಲಾ ಒಂದು ಮಗ್ಗಲಲ್ಲಿ ನೋಡಿದಂತೆ ಮತ್ತೊಂದು ಕಡೆಗೆ ಮಾನವ ಸಂಬಂಧಗಳ ಬಗೆಗೆ ಆಚಾರ ವಿಚಾರ, ನಡೆನುಡಿಗಳು, ಧರ್ಮ ಬದುಕುಗಳ ಬಗೆಗೆ ಭಾರತ ಅಮೆರಿಕದ ಸಾಂಸ್ಕೃತಿಕ ಬದುಕಿನ ಬಗೆಗೆ ಆಳವಾಗಿ ಅಲ್ಲಲ್ಲಿ ಚರ್ಚಿಸುತ್ತಾ ಹೋಗಿದ್ಧಾರೆ. ಇವರ ಸೊಸೆ ಅಮೆರಿಕದವಳು. ಬೀಗರ ಮನೆಗೆ ಹೋದಾಗಿನ ಸಂದರ್ಭಗಳಿಂದ ಹಿಡಿದು ಇನ್ನು ಅನೇಕ ವಿಧಗಳಲ್ಲಿ ಸಾಂಸ್ಕೃತಿಕವಾಗಿ ಸಂಬಂಧಗಳು ವ್ಯಾತ್ಯಾಸಗಳು ತಿಳಿಸುತ್ತಾ
ಹೋಗಿದ್ಧಾರೆ. ಇದೊಂದು ಆತ್ಮೀಯವಾಗಿ ಓದಿಸಿಕೊಂಡು ಹೋಗುವಂತಹ ಪ್ರವಾಸ ಕಥನ.

ಕೃಷ್ಣಾನಂದ ಕಾಮತರ ‘ನಾನೂ ಅಮೆರಿಕೆಗೆ ಹೋಗಿದ್ದೆ’ ಕಥನದಲ್ಲಿ ಅಮೆರಿಕಾದ ಜೀವನ ಶೈಲಿಯನ್ನು ವಿವರಿಸುತ್ತಲೇ ತಮ್ಮ ಹಾಸ್ಯ ಶೈಲಿಯಿಂದ ಓದುಗರನ್ನು ಅಲ್ಲಲ್ಲಿ ರಂಜಿಸುತ್ತಾರೆ. ಕೃಷ್ಣ-ಕ್ರಿಸ್, ಹರಿ-ಹ್ಯಾರಿ, ಆನಂದ-ಆಯಾಂಡಿ,
ಕಾಮತ್-ಕಾಮೆಟ್ ಆಗುವದು ಅಲ್ಲಿಯವರ ಶೈಲಿಯಲ್ಲಿಯೇ ಹೇಳುತ್ತ ರಂಜಿಸುತ್ತಾರೆ. ಉದಾಹರಣೆಗೆ- ಅಮೆರಿಕನ್ ಮಹಿಳೆಯೊಬ್ಬಳನ್ನು ಸಂದರ್ಶಿಸಿದ ವಿದೇಶೀಯನೊಬ್ಬ ಅವಳ ಮನೆ, ಹುಟ್ಟಿದ ಊರು ಇತ್ಯಾದಿಗಳ ಬಗೆಗೆ ಕೇಳಿದನಂತೆ. ಅದಕ್ಕೆ ಅವಳು ‘ನಾನು ರೂಪಗೊಂಡದ್ದು ಕಾರಿನಲ್ಲಿ, ಹುಟ್ಟಿದ್ದು ಆಸ್ಪತ್ರೆಯಲ್ಲಿ, ಬೆಳೆದದ್ದು ಮಕ್ಕಳಾಡಿಸುವವರ ಆರೈಕೆಯಲ್ಲಿ ಆಟವಾಡಿದ್ದು ಕಿಂಡರ್‌ಗಾರ್ಟನ್ನಿನಲ್ಲಿ, ವಿದ್ಯಾಭ್ಯಾಸ ನಡೆದಿದ್ದು ಶಾಲೆ ಕಾಲೇಜು
ವಿಶ್ವವಿದ್ಯಾಲಯಗಳಲ್ಲಿ, ಮದುವೆಯಾದದ್ದು ಚರ್ಚಿನಲ್ಲಿ ಈಗ ವಾಸಿಸುತ್ತಿರುವುದು ಟ್ರೇಲರ್‌ನಲ್ಲಿ ……. .. ಹೀಗಿರುವಾಗ ನನಗೆ ಮನೆ ಊರು ಎಲ್ಲಿದೆ ?’ ಎಂದಳಂತೆ. ಇಂತಹ ಅನೇಕ ಉದಾಹರಣೆಗಳ ಮೂಲಕ ಕಾಮತ್ ಅವರು  ಕಂಡುಕೊಂಡ ಸತ್ಯವೆಂದರೆ ಅಮೆರಿಕನ್ನರ ಬದುಕು ಕಾಣುವಷ್ಟು ಸುಖಮಯವಾಗಿಲ್ಲ. ವೈಜ್ಞಾನಿಕವಾಗಿ ಅವರು ಎಷ್ಟೇ ಮುಂದುವರಿದಿದ್ದರೂ, ಆರ್ಥಿಕ ಸ್ಥಿತಿ ಎಷ್ಟೇ ಉತ್ತವಾಗಿದ್ದರೂ, ಸುಖ-ಸೌಲಭ್ಯಗಳಿದ್ದರೂ ಬದುಕು ಯಾಂತ್ರಿಕವಾಗಿ ಸಾಗುತ್ತಿದೆ ಎನ್ನುವರು.

ಶ್ರೀ ಕೆ.ಗಣೇಶ ಮಲ್ಯ ಅವರ ‘ಅಮೆರಿಕದಲ್ಲಿ ಅರವತ್ತು ದಿನಗಳು’ ಕೃತಿಯಲ್ಲಿ ಅಮೆರಿಕಾ ಕೆನಡಾ ದೇಶಗಳನ್ನು ಸುತ್ತಿ ಅಲ್ಲಿಯ ಐಶಾರಾಮಿ ಬದುಕನ್ನು ಕಂಡು ಆದರೂ ಒಳಗೊಳಗೆ ಅವರು ನರಳುತ್ತಿರುವ ಚಿತ್ರಣವನ್ನು ಕೊಡುತ್ತಾರೆ. ತಮ್ಮದೇ ಆದ ಪ್ರಾಚೀನ ಸಂಸ್ಕೃತಿ ಇಲ್ಲದ ಆ ಜನ ಭಾರತದತ್ತ ಆಸಕ್ತಿಪೂರ್ಣ ದೃಷ್ಟಿ ಹರಿಸಿರುವುದನ್ನು, ಭಾರತೀಯ ದರ್ಮ ಹಾಗೂ ವೇದಾಂತಗಳ ಬಗೆಗೆ ತಿಳಿದುಕೊಳ್ಳುವ ಅವರ ಕುತೂಹಲ ಅಲ್ಲಿಲ್ಲಿ ಹೇಳುತ್ತಾ ಹೋಗುತ್ತಾರೆ.

ಶಿವರಾಮ ಕಾರಂತರ  ‘ಪಾತಾಳಕ್ಕೆ ಪಯಣ’ದಲ್ಲಿ ಅವರೇ ಹೇಳಿಕೊಂಡಂತೆ ಇದೊಂದು ವಿಹಂಗಮ  ನೋಟವೆನ್ನುತ್ತಾರೆ. ಒಂದು ತಿಂಗಳ ಅವದಿಯಲ್ಲಿ ಅವರು ಅಲ್ಲಿಯ ಬದುಕನ್ನು ಪೂರ್ಣ ತಿಳಿದುಕೊಳ್ಳಲಾಗಲಿಲ್ಲ- ವೆಂದಿದ್ದಾರೆ. ಅವರ ಪ್ರವಾಸದ ಮುಖ್ಯ ಉದ್ದೇಶ ಚಿತ್ರಶಾಲೆಗಳನ್ನು. ನೋಡುವುದು, ಅಮೆರಿಕನ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ನೋಡುವುದು. ನಾಟಕಗಳನ್ನು ನೋಡುವುದು, ಪ್ರಕೃತಿಯ ಸಂಭ್ರಮ ನೋಡುವುದೇ ಅಗಿತ್ತು. ‘ಅಲ್ಲಿ ಏನೆಲ್ಲ ಕೊಳಚೆ ಇದೆ ಎಂದು ಹುಡುಕಿ ತೋರಿಸಲು ಇಲ್ಲವೆ ನೋಡಲು ನಾನು ಹೋದಂತವನು ಅಲ್ಲ’ ಎಂದು
ಮೊದಲೇ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಕಂಡ ತಮ್ಮ ಅಭಿರುಚಿಗೆ ಒಪ್ಪುವಂತೆ ಅಡ್ಡಾಡಿದ  ಅನುಭವಗಳು ಹೇಳುತ್ತ ಈ ಕೃತಿ ಮೂಲಕ ನಮ್ಮನ್ನು ಸಂತೋಷಪಡಿಸುತ್ತಾರೆ.

ಬಿ.ಜಿ.ಎಲ್.ಸ್ವಾಮಿಯವರೂ  ಕೂಡಾ ‘ಅಮೆರಿಕದಲ್ಲಿ ನಾನು’ ಕೃತಿಯಲ್ಲಿ ಅನೇಕ ಅನುಭವಗಳನ್ನು ಹಾಸ್ಯದಲ್ಲಿಯೇ ಹೇಳುತ್ತಾ ಹೋಗುತ್ತಾರೆ. ಅಮೆರಿಕದ ಮಹಿಳೆಯರ ಟೋಪಿಯ ಹುಚ್ಚು, ಸೀರೆಯ ಹಗರಣ ಮುಂತಾದವುಗಳನ್ನು ಗುರುತಿಸಬಹುದಾಗಿದೆ. ಅಮೆರಿಕಾದಂತಹ ನಾಗರಿಕ ದೇಶದಲ್ಲೂ ಕಳ್ಳತನ ದರೋಡೆಗಳು ನಡೆಯುತ್ತವೆ ಎಂಬುದಕ್ಕೆ ತಮಗೇ ಅದಂತಹ ಒಂದು ಉದಾಹರಣೆ ಕೂಡಾ ಕೂಡುತ್ತಾರೆ. ರಾತ್ರಿ ಹನ್ನೊಂದರ ಸಮಯಕ್ಕೆ ಲ್ಯಾಬ್‌ದಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ಸುಮಾರು 20-45 ವಯಸ್ಸಿನ ಮೂವರು ಯುವಕರು ಮುಖವಾಡ ಧರಿಸಿ ಇವರಿಗೆ ಅಡ್ಡಗಟ್ಟಿ ಪಿಸ್ತೂಲ ತೋರಿಸಿ ಜೇಬಿನಲ್ಲಿರುವ ಹಣ ಕೊಡುವಂತೆ ಬೆದರಿಸಿದರು. ಇವರು ಕೊಡಲೇಬೇಕಾಯಿತು. ಅಮೆರಿಕಾದ ಬಗೆಗೆ ಒಳ್ಳೆಯದನ್ನೇ ಕಂಡವರಿಗೆ ಇಂಥದು ನಡೆಯುತ್ತದೆ ಎನ್ನುವ ಚಿತ್ರ ಸ್ಪಷ್ಟವಾದುದು. ಇತ್ತೀಚಿನ ವರ್ಷಗಳಲ್ಲಿಯಂತೂ ಅಲ್ಲಿ ನೆಲೆಸಿರುವ ಕರಿಯರಿಂದ ಕಳ್ಳತನ. ದರೋಡೆ, ಅತ್ಮಾಚಾರಗಳು ಅತೀ ಕ್ರೂರಮಟ್ಟಕ್ಕೆ ತಲುಪಿರುವುದು ತಿಳಿದು ಬರುತ್ತಲೇ ಇದೆ.

ಆದರೆ ಮತ್ತೊಂದೆಡೆ ಪತ್ರಿಕಾಕರ್ತರಾದ ಮ.ನಾಗರಾಜ್‌ರವರು’ನಾರಿ ನಿನಗೆ ನಮೋ ನಮೋ’ ಎಂಬ ಕೃತಿಯಲ್ಲಿ ತಮ್ಮ ಅಮೆರಿಕ ಪ್ರವಾಸದ ಸುತ್ತಾಟದಲ್ಲಿ ಕೇವಲ ಒಳ್ಳೆಯದನ್ನು ಮಾತ್ರ ಹೇಳುತ್ತಾ ಹೊಳಗುತ್ತಾರೆ. ಅವರ ಅಭಿಪ್ರಾಯದಂತೆ ಅಲ್ಲಿನ ಹಿಂಸಾಚಾರ. ಅತ್ಯಾಚಾರ, ವೈಭೋಗಗಳ ಬಗೆಗೆ ಏನೂ ಹೇಳದೆ ‘ಇವುಗಳನ್ನು ವರ್ಣಿಸುವುದರಿಂದ ನಮಗೇನು ಪ್ರಯೋಜನ?’ ಎನ್ನುವರು. ನಮ್ಮದು ಹಿಂದುಳಿದ ದೇಶ ಇತರರಲ್ಲಿಯ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ನಾವು ನಮ್ಮ ದೇಶವನ್ನು ಮುಂದೆ ತರಬೇಕಾಗಿದೆ. ದೇಶದ ಅಭಿವೃದ್ಧಿಗಾಗಿ ಎಷ್ಟು ಶ್ರಮಿಸಿದರೂ ಸಾಲದು. ಈ ದೃಷ್ಟಿಯಿಂದ ನಾನು ಅಮೆರಿಕೆಯ ಇನ್ನೊಂದು ಮುಖವನ್ನು ವರ್ಣಿಸುವ ಗೋಜೆಗೆ ಹೋಗಿಲ್ಲವೆಂದು ತಾವೇ ಹೇಳಿಕೊಂಡಿದ್ಧಾರೆ.

ಸುಧಾ ಮೂರ್ತಿಯವರ ‘ಅಟ್ಲಾಂಟಕದಾಚೆಗೆ’ ಪ್ರವಾಸ ಕಥನ ದಿಟ್ಟ ಮಹಿಳೆಯೊಬ್ಬಳ ಏಕಾಂಗಿ ಪ್ರವಾಸ ಕಥನ. ಸುಮಾರು 15,000 ಮೈಲುಗಳಷ್ಟು ಪ್ರವಾಸವನ್ನು ಏಕಾಂಗಿಯಾಗಿ ಬಸ್ಸಿನಿಂದ, ವಿಮಾನದಿಂದ, ರೈಲಿನಿಂದ,
ಹೆಲಿಕಾಪ್ಟರಿನಿಂದ,  ಹಡಗಿನಿಂದ ಮಾಡಿದ ಸಾಹಸ ಇವರದು. ಅಮೆರಿಕದ ಪ್ರಮುಖ ಪಟ್ಟಣಗಳನ್ನೆಲ್ಲಾ ಸುತ್ತಾಡಿದ್ದಾರೆ. ಅದರೆ ಈ ಸುತ್ತಾಡುವಿಕೆ ಸುಧಾ ಅವರಿಗೆ ಸಹಜವಾಗಿರಲಿಲ್ಲ. ಒಂದೆಡಗೆ ಅವರೇ ಹೀಗೆ ಹೇಳಿದ್ಧಾರೆ.  ಕೆಟ್ಟ ಅನುಭವಗಳು ನನ್ನ ಧೈರ್ಯ, ಮಾನಸಿಕ ಸ್ವಾಸ್ಥ್ಯಗಳನ್ನೇ ಹಲವಾರು ಬಾರಿ ಅಲುಗಿಸಿದವು. ಅಪರಿಚಿತ ದೇಶದಲ್ಲಿ ಹೋಟೆಲ್‌ನಲ್ಲಿ ಒಂಟಿಯಾಗಿರಬೇಕಾಗಿ ಬಂದಾಗ ಅಳುಕಿದ್ದೇನೆ. ಗ್ರ್ಯಾಂಡ್  ಕೊಳ್ಳದ ಹೋಟೆಲ್ ಹತಿರದಲ್ಲಿದ್ದ ಬಂಗಲೆಯಲ್ಲಿ ನಾನೊಬ್ಬಳೇ ಇದ್ದೆ. ದಟ್ಟ ಅರಣ್ಯದ ಹೊರತು ಮತ್ತೇನೂ ಗೋಚರಿಸಲಿಲ್ಲ. ಅಂತೆಯೇ ಲಾಸ್ ಏಂಜಲ್‌ನ ಕಿರು ಮನೆಯಲ್ಲಿ ಕೇವಲ ಒಂದು ಮುದಿಬೆಕಕ್ಕಿನ ಜೊತೆಯಲ್ಲಿ ಎಂಟು ದಿನ ಕಳೆದಿರುವೆ. ರಾತ್ರೆಯ ವೇಳೆ ವಾಷಿಂಗ್ಟನ್ನಿನಲ್ಲಿ ಲಿಂಕನ್ನಿನ ಜೆಫರ್‌ಸನ್‌ನ ಸ್ಮಾರಕ ನೋಡಲು ಹೋದಾಗ ಆ ಭವ್ಯ ಸ್ಮಾರಕದೆದುರು ನಾನೊಬ್ದಳೇ ಇದ್ದದ್ದು ಈಗ ನೆನಪಾದರೆ ಅದ್ಹೇಗೆ ಹೋಗಿ ಬಂದೆನೋ ಅನಿಸುವುದು. ನ್ಯೂಯಾರ್ಕಿನ ಅನುಭವವಂತೂ ಮರೆಯಲಾಗದು ಎಂದು ಹೇಳುತ್ತ ಇವರೊಬ್ದರೇ ಅಡ್ಡಾಡುವುದನ್ನು ನೋಡಿ ಸಂಶಯದಿಂದ ಒಬ್ದ
ಸಿ.ಬಿ.ಐ. ಆಫೀಸರ್ ಬಂದು ಕೊನೆಗೆ ಇವರಿಗೆ ಎಚ್ಚರಿಕೆಯ ಮಾತು ಹೇಳಿದನಂತೆ, Never travel by train at Newyork after 6.30. ಆದರೂ ಮತ್ತೊಂದೆಡೆ ಹೀಗೆ ಹೇಳುತ್ತಾರೆ, ಪ್ರವಾಸದ ಸಿಹಿಕಹಿ ಅನುಭವಗಳು ಪಾಠ
ಕಲಿಸಿದ್ದರೂ ನಾನು ಮತ್ತೆ ಮತ್ತೆ ಪ್ರವಾಸ ಮಾಡಲು ಬಯಸುತ್ತೇನೆ. (ಅವರು ಈಗ ಜಗತ್ತನ್ನು ಎಷ್ಟೋ ಬಾರಿ ಸುತ್ತಾಡಿದ್ಧಾರೆ. ಅವರಿಂದ  ನಾಲ್ಕು ಪ್ರವಾಸ ಕಥನಗಳು ಬಂದಿವೆ). ತಾವು ನೋಡಿದ ಪ್ರೇಕ್ಷಣೀಯ ಸ್ಥಳಗಳ ಬಗೆಗೆ
ವಿವರಣೆ ಕೊಡುತ್ತಾ ಹೋಗುತ್ತಾರೆ. ಅದೇನೇ ಇರಲಿ ಸುಧಾ ಅವರಂತೆ ನಮ್ಮ ಮಹಿಳಾ ಪ್ರವಾಸ ಸಾಹಿತಿಗಳಲ್ಲಿ ಯಾರೂ ಏಕಾಂಗಿಯಾಗಿ ದಿಟ್ಟವಾಗಿ ವಿದೇಶಗಳಲ್ಲಿ ಹೋಗಿ ಅಡ್ಡಾಡಿ ಬಂದಿಲ್ಲ. ಅವರ ಸಾಧನೆ ನಿಜಕ್ಕೂ ಹೆಮ್ಮೆ ತರುವಂಥದು’.

ವ್ಯಾಸರಾಯ ಬಲ್ಲಾಳರ ‘ನಾನೊಬ್ದ ಭಾರತೀಯ ಪ್ರವಾಸಿ’ ಕೃತಿಯಲ್ಲಿ, ಭಾರತದಿಂದ ಅಮೆರಿಕಕ್ಕೆ ಹೋಗಿ ನೆಲೆಸಿರುವ ಭಾರತೀಯರು ಹೇಗೆ ಎರಡು ಸಂಸ್ಕೃತಿಯ ಸಂಘರ್ಷಕ್ಕೆ ಒಳಪಡುತ್ತಾರೆ ಎಂಬುದನ್ನು ಹೇಳಿರುವರು. ಅನೇಕ
ಸಂದರ್ಭಗಳಲ್ಲಿ ಅವರಿಗೆ ಅಲ್ಲಿಯ ಭಾರತೀಯರ ಸಂಪರ್ಕ ಬಂದಿದೆ. ಅವರೊಂದಿಗೆ ಸಾಕಷ್ಟು ಚರ್ಚಿಸಿದ್ದಾರೆ. ಒಂದೆಡೆಗೆ ಅವರು ಸಂಪರ್ಕಿಸಿದ ಡಾ|| ದೀಕ್ಷಿತ್ ಅವರು ಹೀಗೆ ಹೇಳುತ್ತಾರೆ. ತಮ್ಮದೇ ಅದಂತಹ ಒಂದು ಐಡಂಟಿಟಿಗೆ ಸ್ವಂತಿಕೆಗೆ, ಇಲ್ಲಿದ್ದವರೆಲ್ಲಾ ಮಾನಸಿಕವಾಗಿ ತೊಳಲಾಡುತ್ತಿದ್ದೇವೆ ಎಂದು. ತಮ್ಮತನ ಉಳಿಸಿ ಕೊಳ್ಳುವುದಕ್ಕಾಗಿ ಪಿಟ್ಸ್‌ಬರ್ಗ್‌ದಲ್ಲಿ ವೆಂಕಟೇಶ ದೇವಾಲಯ, ನ್ಯೂಯಾರ್ಕ್‌ದ ಪ್ಲಶಿಂಗ್‌ದಲ್ಲಿ ಗಣೇಶ ದೇವಾಲಯ, ಹ್ಯೂಸ್ಟನ್‌ದಲ್ಲಿ ಮೀನಾಕ್ಷಿ ದೇವಾಲಯಗಳನ್ನು ಕಟ್ಟಿ ಆಗಾಗ ಭಾರತೀಯರೆಲ್ಲ ಒಂದೆಡೆ ಬೆರತು ಸಂಭ್ರಮಿಸುವ ಸಮಾಧಾನಿಸಿಕೊಳ್ಳುವ ಒಂದು ಮಾಧ್ಯಮವಾಗಿ ಕಂಡುಕೊಳ್ಳುತ್ತಾರೆ ಎನ್ನಬಹುದಾಗಿದೆ.

ಬಲ್ಲಾಳರು ಪ್ರವಾಸಿ ತಂಡದೊಂದಿಗೆ ಪ್ರವಾಸ ಮಾಡಿದುದರಿಂದ ಮಾರ್ಗದರ್ಶಕರು ಏನು ಎಷ್ಟು ತೋರಿಸುತ್ತಾರೊ ಅಷ್ಟಕ್ಕೆ ಸುಮ್ಮನಾಗಬೇಕಾಗುತ್ತದೆ ಎನ್ನವರು. ಇಲ್ಲಿ ನಿರ್ದಿಷ್ಟ ಅವಧಿಯಲ್ಲಿ ನೋಡಬೇಕಾಗುವ, ಪ್ರೇಕ್ಷಣೀಯವೆಂದು
ಜನ ಸಾಮಾನ್ಯರ ದೃಷ್ಟಿಯಲ್ಲಿ ಅನಿಸುವ ಅಕರ್ಷಣೆಗಳಿಗಷ್ಟೇ ಒತ್ತು. ಹೀಗಾಗಿ ಹೋಗುವ ಸ್ಥಳಗಳಲ್ಲಿ ಮುಖ್ಯವಾದ ಎಲ್ಲವನ್ನೂ ನೋಡಲು ಸಾಧ್ಯವಾಗುವುದೆಂದು ಆಸೆ ಕಟ್ಟಿಕೊಳ್ಳುವಂತಿಲ್ಲ ಎಂದು ಹೇಳುತ್ತ ಆಮ್‌ಸ್ಟರ್‌ಡ್ಯಾಂನಲ್ಲಿದ್ದೂ ನನಗೆ ರೆಂಬ್ರಾಟ್ ಸಂಗ್ರಹಾಲಯ ನೋಡಲಾಗಲಿಲ್ಲ. ಲಂಡನ್ನಲ್ಲಿದ್ದು ಬ್ರಿಟಿಷ್ ಮ್ಯೂಸಿಯಂ, ವಾಷಿಂಗ್ಟನ್ ತಿರುಗಿಯೂ ಸ್ಮಿತ್ಸೋನಿಯನ್ ಇನ್‌ಸ್ಟಿಟ್ಯೂಟ್ ನೋಡಲಾಗಲಿಲ್ಲವೆಂದು ಹೇಳಿಕೊಂಡಿದ್ದಾರೆ. ಐದು ತಿಂಗಳುಗಳಷ್ಟು ಯುರೋಪ
ಅಮೆರಿಕ ಪ್ರವಾಸ ಮಾಡಿದ ಬಲ್ಲಾಳರು ಹೆಚ್ಚಾಗಿ ತಮ್ಮ ಸಂಬಂದಿಕರ ಮನೆಯಲ್ಲಿಯೇ ಇದ್ದುದಾಗಿ ತಿಳಿದು ಬರುತ್ತದೆ. ಅಮೆರಿಕದ ಬಗೆಗೆ ಹೆಚ್ಚಿನ ವಿವರ ಇವರು ದಾಖಲಿಸುತ್ತ ಹೋಗಿಲ್ಲ. ಅದಷ್ಟು ಭಾರತೀಯರೊಂದಿಗೆ ಇದ್ದು ಅಲ್ಲಿಯ
ಅವರ ಅಭಿಪ್ರಾಯಗಳು ತಿಳಿಸಿರುವರು.

ಪ್ರೋ|| ಎನ್‌.ನಂಜುಂಡ ಶಾಸ್ತ್ರಿಯವರ ‘ಅಮೆರಿಕ-ಭಾರತೀಯನ ದೃಷ್ಟಿಯಲ್ಲಿ’ ಕೂಡಾ ಶಾಸ್ತ್ರಿಯವರು ತಮ್ಮ’ಭಾರತೀಯ ಒಳಮನಸ್ಸಿನಿಂದ ಅಲ್ಲಿಯ ಥಳಕು ಬೆಳಕು ಬಿನ್ನಾಣ ನೋಡುತ್ತಾ ಅಲ್ಲಲ್ಲಿ ಬೇಸರ ಪಟ್ಟುಕೊಂಡದ್ದು ಕಂಡು ಬರುತ್ತದೆ. ನಮ್ಮ ಸಂಸ್ಕೃತಿಯ ಬಗೆಗೆ, ಅಲ್ಲಿಯೇ ನೆಲೆಸಲು ಬಯಸಿರುವ ಯುವಕರಿಗೆ “ಯೌವನಾವಸ್ಥೆ- ಯಲ್ಲಿಯೇ ಅಲ್ಲಿಗೆ ಹೋಗಿ ತಮ್ಮ ಜ್ಞಾನ  ಕ್ಷೇತ್ರದ ಪರಿಪೂರ್ಣತೆ ಮತ್ತು ಪರಿಪಕ್ಟತೆಯನ್ನು ಪಡೆದು ಹೆಸರು ಗಳಿಸಿ ಹಣವನ್ನು ಹೇರಳವಾಗಿ ಸಂಪಾದಿಸಿ, ನಮ್ಮ ಜನ ತಾಯ್ನಾಡಿಗೆ ಮರಳಿ ತಮ್ಮ  ಜ್ಞಾನಾರ್ಜನೆಯ ಲಾಭವನ್ನು ನಮ್ಮ ಪ್ರಜೆಗಳಿಗೆ ಹಂಚಬೇಕು” ಎಂದು ಹೇಳುತ್ತಾರೆ.

‘ಅಮೆರಿಕಾದಲ್ಲಿ ನಾನು, ಶಾಂತಿ’ ಇದು ಪ್ರಭುಶಂಕರ ಅವರ ಪ್ರವಾಸ ಕಥನ. ಅಮೆರಿಕ ಸಮಾಜದ ರೀತಿ ನೀತಿಗಳನ್ನು ಸಾಕಷ್ಟು ವಿವರವಾಗಿ ತಿಳಿಸಿಕೊಟ್ಟಿದ್ದಾರೆ. ಬಹಳ ಹತ್ತಿರದಿಂದ ನೋಡಿರುವರು. ತಾವು ನಡೆಸಿದ ಅನೇಕ ಸಂದರ್ಶನಗಳಿಂದಲೂ ಅಮೆರಿಕ ಜನರ ಒಳನೋಟಗಳು ನಮಗೆ ಕಾಣಸಿಗುತ್ತವೆ. ಒಂದೇ ಉದಾಹರಣೆ ನೋಡಬಹುದು. ಟ್ಯಾಕ್ಸಿ ಚಾಲಕಿ ಕಪ್ಪು ಮಹಿಳೆ ಮಾತಿನ ನಡುವೆ “ನಿಮ್ಮ ದೇಶದಲ್ಲಿ ಜನ ಇನ್ನೂ ಹಸಿವಿನಿಂದ ಸಾಯುತ್ತಿದ್ದಾರೆಯೇ ?” ಎಂದು ಕೇಳಿದಳಂತೆ. ನಿಮಗೆ ಯಾರು ಹೇಳಿದರು? ಎಂದು ಪ್ರಭುಶಂಕರ ಅವರು ಕೇಳಿದ್ದಕ್ಕೆ ‘ಚರ್ಚಿನ ಪಾದ್ರಿಗಳು’ ಎಂದಳಂತೆ. ಇಂಡಿಯಾ ಅಪ್ರಿಕಾದಲ್ಲಿ ಬಡತನದಿಂದ ಹೊಟ್ಟೆಗೆ ಹಿಟ್ಟಿಲ್ಲಿದೆ ಜನ ಸಾಯುತ್ತಿದ್ದಾರೆ ಎಂದು ಪಾದ್ರಿಗಳು ಅಪಪ್ರಚಾರ ಮಾಡಿ. ಇಂಡಿಯಾದವರನ್ನು ಉದ್ಧಾರ ಮಾಡಲು ಪ್ರತಿಯೊಬ್ದರಿಂದಲೂ ತಿಂಗಳಿಗೆ ಕನಿಷ್ಟ ಹತ್ತು ಡಾಲರ್ ವಸೂಲಿ ಮಾಡುತ್ತಿರುವ ವಿಷಯ ತಿಳಿದುಕೊಳ್ಳುತ್ತಾರೆ. ಪಾದ್ರಿಗಳು ಮಾಡುವ ಅಪಪ್ರಚಾರ ಮೋಸದ ವಿಷಯ ಕೇಳಿ ಲೇಖಕರು ನೊಂದುಕೊಂಡಿದ್ದಾರೆ. ಅಮೆರಿಕನ್ನರಿಗೆ ತಿಳುವಳಿಕೆ ಕೊಡುವುದಕ್ಕೆ ನಮ್ಮ ಸರ್ಕಾರ ಏನು ಮಾಡಿದೆ ? ಎಂದು ಚರ್ಚಿಸಿರುವರು. ಪ್ರಭುಶಂಕರ ಅವರು ಅಲ್ಲಿಯ ರಾಮಕೃಷ್ಣ ಅಶ್ರವು ವೇದಾಂತ ಸಂಘಗಳಿಗೆ ಭೇಟಿ ನೀಡಿದ್ದಾರ. ಅಲ್ಲಲ್ಲಿ ಕಾಲೇಜುಗಳಲ್ಲಿ ಉಪನ್ಯಾಸವೂ ನೀಡಿದ್ಧಾರೆ. ಅಲ್ಲಿಯ ಕೆಲವು ಬಾರತೀಯ
ಕಂಟುಂಬಗಳನ್ನು ಕಂಡು ಮಾತನಾಡಿದ್ದಾರೆ. ಅವರ ಜೀವನ ವಿಥಾನವನ್ನು ಹತ್ತಿರದಿಂದ ಕಂಡಿದ್ದಾರೆ. ಭಾರತೀಯರು ಅಮೆರಿಕದಲ್ಲಿ ಕೈತುಂಬ ಸಂಬಳ, ಸುಸಜ್ಜಿತವಾದ ಮನೆ ಎರಡು ಮೂರು ಕಾರುಗಳು ಎಂದು ಏನೆಲ್ಲ ಹೊಂದಿದ್ದರೂ
ಯಾಕೋ ಅವರ ಬದುಕು ಸಮಾಧಾನಕರವಾಗಿಲ್ಲವೆಂದು ಕಂಡಿದ್ದಾರೆ.

ಅಮೆರಿಕ ಎಷ್ಟೇ ಪ್ರಗತಿ ಸಾಧಿಸಿದರೂ ಸಾಧಿಸುತ್ತಿದ್ದರೂ ಮಾನವ ಸಂಬಂಧಗಳು ಮಾತ್ರ ಅಷ್ಟಕ್ಕಷ್ಟೆ. ಎಂದು ಹೇಳುತ್ತ ಒಂದು ಉದಾಹರಣೆ ಹೇಳುವರು. ಅಮೆರಿಕ ಸಮಾಜದಲ್ಲಿ ತಂದೆಗೋ ತಾಯಿಗೋ ಆರೋಗ್ಯ ಸರಿ ಇಲ್ಲ ಅಸ್ಪತ್ರೆಯಲ್ಲಿದ್ದಾರೆ ಎಂದು ತಿಳಿದರೆ ಸಾಕು. ಹತ್ತಿರದ ಹೂವಿನ ಅಂಗಡಿಯವನಿಗೆ ಫೋನ್ ಮಾಡಿ ಹೂಗುಚ್ಛ ಕೊಡಲು ಹೇಳಿ ಬಿಡುತ್ತಾರೆ. ಇಲ್ಲಿಗೆ ಮಗನ ಕರ್ತವ್ಯ ತೀರಿದಂತೆ. ಹೀಗೆ ನೆನಪಿನಲ್ಲಿಡುವ ಅನೇಕ ವಿಷಯಗಳನ್ನು ಲೇಖಕರು ಹೇಳುತ್ತಾ ಹೋಗುತ್ತಾರೆ.

ಜಿ,ಎಸ್‌.ಶಿವರುದ್ರಪ್ಪ ಅವರ ‘ಅಮೆರಿಕದಲ್ಲಿ ಕನ್ನಡಿಗ’ ಪ್ರವಾಸ ಕಥನ, ಅಲ್ಲಿಯ ಕನ್ನಡಿಗರ ಜೊತೆಯಲ್ಲಿಯೇ ಇದ್ದು ಅನುಭವಿಸಿದ ಅನೇಕ ಅನುಭವಗಳನ್ನು ಇಲ್ಲಿ ಬರೆದಿದ್ದಾರೆ. ತಾವು ಭೇಟಿ ಮಾಡಿದ ಕನ್ನಡಿಗರ ನಡುವೆ ಇದ್ದು ಅವರೊಂದಿಗೆ ಅಮೆರಿಕದ ಕೆಲವು ಭಾಗಗಳನ್ನು ಸುತ್ತಾಡಿಕೊಂಡು ಬಂದಿದ್ದಾರೆ. ಅಲ್ಲಿಯ ಕನ್ನಡ ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗೆಗೆ ಬರೆದಿರುವರು. ಹಬ್ದಗಳಂದು ಅಥವಾ ಯಾವುದಾದರೂ ಸಾಹಿತ್ಯ ಸಂಗೀತದಂತಹ ಸಾಂಸ್ಕೃತಿಕ ಸಂದರ್ಭಗಳಲ್ಲಿ ನೂರಾರು ಮೈಲಿಗಳಷ್ಟು ದೂರದಿಂದ ಬಂದು ಕನ್ನಡಿಗರು ಸಂಭ್ರಮಿಸುವ ರೀತಿ ತಿಳಿಸಿಕೊಡುತ್ತಾರೆ. ಹೀಗಾಗಿ ಕನ್ನಡಿಗರ ಬದುಕು ಅಲ್ಲಿ ಹೇಗೆ ಏನು ಅನ್ನುವುದು ತುಂಬಾ ಹತ್ತಿರದಿಂದ ನೋಡಿದವರಾಗಿದ್ದಾರೆ. ಅಮೆರಿಕದಲ್ಲಿ ಸಾಕಷ್ಟು ಪ್ರವಾಸಿ ತಾಣಗಳನ್ನು ನೋಡಿದ ವಿವರಗಳು ನಮಗಿಲ್ಲಿ ಸಿಕ್ಕರೂ ಮುಖ್ಯವಾಗಿ ಕನ್ನಡ ಮನಸ್ಸಿನ ಕನ್ನಡಿಗನೊಬ್ದ ಅಮೆರಿಕಾದ ಕನ್ನಡಿಗರೊಂದಿಗೆ ಇದ್ದು ಅವರ ಬದುಕನ್ನು
ಗುರುತಿಸುತ್ತ ಹೋಗಿರುವುದು ಕಂಡು ಬರುತ್ತದೆ.

ಟಿ.ಕೆ. ರಾಮರಾಮ್‌ರ ‘ಗೋಳದ ಮೇಲೊಂದು ಸುತ್ತು’ ವಿನಲ್ಲಿ ಅಮೆರಿಕನ್ ಪ್ರಜಾಪ್ರಭುತ್ವವು ನೀಡಿರುವಂತಹ ಜನತಾ ಸ್ವಾತಂತ್ರ್ಯ ಸಮಾನತೆಗಳನ್ನು ಮತ್ತೆಲ್ಲಿಯೂ ಕಾಣೆವು ಎಂದು ಗುರುತಿಸಿದ್ದಾರೆ. ಬೀದಿ ಗುಡಿಸುವವನಿಂದ
ರಾಷ್ಟ್ರಾದ್ಯಕ್ಷನವರೆಗೆ ಪ್ರತಿಯೋರ್ವನೂ ಸೂಟುಥಾರಿ ಹಾಗೂ ಕಾರುಗಳ ಒಡೆಯ. ಇವರ ಉಡುಗೆ ತೊಡುಗೆಗಳನ್ನು ನೋಡಿದರೆ ಇವರಲ್ಲಿ ಶ್ರೀಮಂತರು ಯಾರು, ಸೆನೆಟರ್ ಯಾರು, ಮದ್ಯಮ ವರ್ಗದವರು ಯಾರು, ಎಂದು ಹೇಳಲು ಸಾದ್ಯವೇ ಇಲ್ಲ. ರಾಷ್ಟ್ರಾಧ್ಯಕ್ಷನೂ ಸಾಮಾನ್ಯ ಪ್ರಜೆಯಂತೆ. ಹಾಗೆಂದ ಮಾತ್ರಕ್ಕೆ ಅವನಿಗೆ ಗೌರವವಿಲ್ಲವೆಂದಲ್ಲ. ನಮ್ಮಲ್ಲಿರುವಂತೆ ವ್ಯಕ್ತಿಪೂಜೆ ಅಲ್ಲಿಲ್ಲ. ಅಮೆರಿಕದ ಪೂರ್ವದಿಂದ ಪಶ್ಚಿಮದವರೆಗೆ ಸುಮಾರು ಮೂರುವರೆ ಸಾವಿರ ಮೈಲು ಪ್ರಯಾಣಮಾಡಿದಾಗ ನಾನಾವರ್ಗದ ಅಮೆರಿಕನ್ ಪ್ರಜೆಗಳನ್ನು ಕಾಣಬಹುದು. ಎಲ್ಲಿಗಾದರೂ ಬಂದು ವಿಷಯ ಗಮನಿಸಿ ನೋಡಿ ರಾಷ್ಟ್ರಾಧ್ಯಕ್ಷ ಎಲ್ಲಾ ಮೂಲೆಗಳಲ್ಲಿಯೂ ಗೌರವಾನ್ವಿತ ವ್ಯಕ್ತಿ. ಅವನ ಬಗೆಗೆ ಸಾಮಾನ್ಯ ಪ್ರಜೆಗಳು ಎಂದೂ ಕೀಳು ರೀತಿಯಲ್ಲಿ ಅಡುವುದಿಲ್ಲ. ಇಷ್ಟು ಗೌರವ ಸಲ್ಲಿಸಿದರೂ ಅವನು ಪ್ರೆಸಿಡೆಂಟ್ ನಿಕ್ಸನ್ ಅಲ್ಲ, ಯಾವಾಗಲೂ ಮಿಸ್ಟರ್ ನಿಕ್ಸನ್ ಎಂದೇ ಗುರುತಿಸುವುದನ್ನು ಲೇಖಕರು ಗಮನಿಸಿದ್ದಾರೆ.

ಅಲ್ಲಿಯ ವಿದ್ಯಾಭ್ಯಾಸದ ಬಗೆಗೆ ತಿಳಿದುಕೊಂಡಿರುವ ಇವರು ಅಮೆರಿಕದ ಹೈಸ್ಕೂಲ್ ವಿದ್ಯಾಭ್ಯಾಸಗಳ ಪಠ್ಯಕ್ರಮಗಳೇ ಬೇರೆ. ವೇಗದ ಬುದ್ಧಿಶಕ್ತಿಗೆ ಇಲ್ಲಿ ಪ್ರಾಧಾನ್ಯತೆ ಇದೆ. ಆದ್ದರಿಂದಲೇ ಅಮೆರಿಕನ್ ಪರೀಕ್ಷಾ ಪತ್ರಿಕೆಗಳಲ್ಲಿ ತುಂಡು ಪ್ರಶ್ನೆಗಳು ಅಧಿಕವಾಗಿರುತ್ತವೆ. ಅತಿ ಕಡಿಮೆ ಕಾಲಾವಧಿಯಲ್ಲಿ ಅಧಿಕ ಸಂಖ್ಯೆಯ ಪ್ರಶ್ನೆಳನ್ನು ಉತ್ತರಿಸಬೇಕಾಗುತ್ತದೆ. ಉದ್ದನೆಯ ಉತ್ತರಗಳಿಗೆ ಮಹತ್ವವಿಲ್ಲ. ವೇಗದ ರಾಷ್ಟ್ರಕ್ಕೆ ವೇಗದ ವಿದ್ಯಾಭ್ಯಾಸದ ಕ್ರಮವನ್ನು ಅಳವಡಿಸಿದ್ದಾರೆ ಎಂದಿದ್ಧಾರೆ.

ಹಾಗೆಯೇ ‘ಗ್ರೆಹಾಂಡ್’ ಎಂಬುದು .ಅಮೆರಿಕಾ ನಡೆಸುತ್ತಿರುವ ಅತ್ಯಂತ ಹಿರಿಯ ಹೆಮ್ಮೆಯ ಮಹಾಸಾರಿಗೆ ಸಂಸ್ಥೆಯ ಬಗೆಗೆ ತಿಳಿಸಿಕೊಟ್ಟಿದ್ದಾರೆ. ಇದಕ್ಕೆ ಸಮಾನವಾದ ಸಾರಿಗೆ ಸಂಸ್ಥೆ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲವಂತೆ ಪ್ರಪಂಚದ
ಅತಿದೊಡ್ಡ ಈ ಸಂಸ್ಥೆಯನ್ನು ಸರ್ಕಾರ ನಡೆಸುವುದಿಲ್ಲ. ಇದೊಂದು ಶೇರ್ ಹೋಲ್ಡರ್‌ಗಳ ಸಂಸ್ಥೆ. ಅಮೆರಿಕದಲ್ಲಿ ಸಾಮಾನ್ಯವಾಗಿ ಪ್ರತಿಯೊಂದು ದೊಡ್ಡ ವಹಿವಾಟನ್ನೂ ಖಾಸಗಿಯವರು ನಡೆಸುತ್ತಾರೆ. ಭೂಮಿ ಉಳುವುದರಿಂದ ಹಿಡಿದು ವಿಮಾನ ನಿರ್ಮಾಣದವರೆಗೆ ಶ್ರೀಮಂತರ ಕೂಟ ಅಥವಾ ಪಾಲುದಾರರ ಸಂಸ್ಥೆ ಕಾರ್ಯ ನಿರ್ವಹಣೆ ನಡೆಸುತ್ತದೆ. ಇಲ್ಲಿ ರಾಷ್ಟ್ರೀಕರಣ ಎಂಬ ಪದ ಸಹಸ್ರ ಮೈಲಿ ದೂರಕ್ಕೆ. ಆ ಮಾತು ಕೇಳಿದರೆ ಅಮೆರಿಕ ಸಿಡಿದೇಳುತ್ತದೆ. ಭಾರತ ಮತ್ತು ಇತರ ದೇಶಗಳಲ್ಲಿ ರಾಜ್ಯಗಳಿಗೊಂದು ಬಗೆಯ ರಸ್ತೆ ಸಾರಿಗೆಯ  ಇದೆ. ಅದರೆ ಅಮೆರಿಕದಲ್ಲಿ ಇಡೀ ರಾಷ್ಟ್ರಕ್ಕೆ ಗ್ರೇಹಾಂಡ್ ಒಂದೆ. ಗ್ರೇಹಾಂಡ್ ಪ್ರಯಾಣ ವಿಮಾನ ಪ್ರಯಾಣದ ಏರ್ಪಾಡುಗಳಂತೆ. ಬಸ್ ಹಿಂಭಾಗದಲ್ಲಿ ಶೌಚಗೃಹ. ಬಸ್ ಚಲಿಸುತ್ತಿರುವುದು ತಿಳಿಯುವುದೇ ಇಲ್ಲ ಎನ್ನುತ್ತಾರೆ. ಇಂತಹ ಅನೇಕ ಹೊಸತನಗಳನ್ನು ಓದುಗರಿಗೆ ತಿಳಿಸಿಕೊಡುತ್ತ ಬೆರಗುಗೊಳಿಸಿದ್ದಾರೆ ಲೇಖಕರು.

ಗುರುಮೂರ್ತಿ ಪೆಂಡಕೂರು ಅವರ ‘ಅವಕಾಶಗಳ ಅಮರಾವತಿ’ ಪ್ರವಾಸ ಕಥನ ಓದುಗರನ್ನು ಪ್ರತಿ ಹಂತದಲ್ಲೂ ಲವಲವಿಕೆಯಿಂದ ಇಡುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಪ. ಲೇಖಕರೇ ಹೇಳುವಂತೆ ಅಲ್ಲಿಯದೆಲ್ಲಾ ಶ್ರೇಷ್ಠವಲ್ಲ ಪರಮ ಪವಿತ್ರವಲ್ಲ ಮತ್ತು ಅನುಕರಣೀಯವೂ ಅಲ್ಲ. ಈ ಸಮದೃಷ್ಟಿಯ ಹಿನ್ನೆಲೆಯಲ್ಲಿ ಮುಕ್ತ ಮನಸ್ಸಿನಿಂದ ಪ್ರವಾಸದ ಅನುಭವ ಸವಿದಿದ್ದೇನೆ, ಸಂತೋಷಪಟ್ಟಿದ್ದೇನೆ ಎಂದಿದ್ದಾರೆ. ಅಮೆರಿಕ ಸಮಾಜದ ರೀತಿ ನೀತಿಗಳನ್ನು ಅತಿ ಹತ್ತಿರದಿಂದ ನೋಡಿದ್ದಾರೆ. ಸೊಸೆ ವಿದೇಶಿಯಳು ಮಗ ಸೊಸೆಯ ಪ್ರೀತಿಗೆ ಲೇಖಕರು ಪೂರ್ವ ಪಶ್ಚಿಮಗಳು ಒಂದಾದವು ಎಂದು ಆತ್ಮೀಯವಾಗಿ ಒಪ್ಪಿಕೊಂಡು ಅವರೊಂದಿಗೆ ಸುತ್ತಾಡಿರುವರು. ಅಮೆರಿಕದ ವಿಜ್ಞಾನ ತಂತ್ರಜ್ಞಾನಗಳ ಬಗೆಗಾಗಲಿ, ಪ್ರೇಕ್ಷಣೀಯ ಸ್ಥಳಗಳ ಬಗೆಗಾಗಲಿ ಓದುವಾಗ ನಾವು ಅಲ್ಲೆಲ್ಲ ಸುತ್ತಾಡುತ್ತಿದ್ದಂತೆಯೇ
ಅನಿಸುವುದು.

‘ಅಮೆರಿಕ ಇತಿಹಾಸ ಮತ್ತು ಇಂದಿನ ಜೀವನ ಇದು ಪಾರ್ವತಮ್ಮ ಮಹಾಲಿಂಗಶೆಟ್ಟಿಯವರ ಅಮೆರಿಕ ಪ್ರವಾಸ ಕಥನ. ಲೇಖಕಿ ಇಪ್ಪತ್ತು ವರ್ಷಗಳಲ್ಲಿ ಏಳು ಸಲ ಅಮೆರಿಕೆಗೆ ಹೋಗಿ ಬಂದಿದ್ಧಾರೆ. ಅಂತೆಯೇ ಅಮೆರಿಕದ ಬಗೆಗೆ ಅನೇಕ ವಿಷಯಗಳು ಈ ಪುಸ್ತಕದಲ್ಲಿ ಇವೆ. ಅಮೆರಿಕದ ಇತಿಹಾಸದಿಂದ ಹಿಡಿದು ಅಲ್ಲಿಯ ಜೀವನ ಶೈಲಿ ಸಾಮಾಜಿಕ ರೀತಿ ನೀತಿಗಳು. ವಿದ್ಯಾಭ್ಯಾಸ, ವೃದ್ಧರು, ಮುಂತಾದ ಹತ್ತು ಹಲವಾರು ವಿಷಯಗಳಲ್ಲಿಯ ತಮ್ಮ ಅನುಭವಗಳನ್ನು
ಹೇಳುತ್ತಾ ಹೋಗಿರುವರು.

‘ಅಮೆರಿಕಾ! ಅಮೆರಿಕಾ!’ ನಾಗತಿಹಳ್ಳಿ ಚಂದ್ರಶೇಖರ ಅವರ ಅಮೆರಿಕಾ ಪ್ರವಾಸ ಕಥನ ಓದುಗರನ್ನು ಸೆರೆಹಿಡಿದುಕೊಳ್ಳುವುದರಲ್ಲಿ ಯಶಸ್ಥಿಯಾಗಿದೆ (ಹಾಗೆಯೇ ಇದೇ ಹೆಸರಿನ ಅಮೆರಿಕಾ ಅಮೆರಿಕಾ ಚಿತ್ರವೂ ಕೂಡಾ ಚಿತ್ರ ಪ್ರಿಯರನ್ನು ಮತ್ತೆ ಮತ್ತೆ ನೋಡುವಂತೆ ಮಾಡುವುದರಲ್ಲೂ ಯಶಸ್ಥಿಯಾಗಿದೆ) ಕೆಟ್ರೇಶಿ ಕನಸು ಸಿನಿಮಾವನ್ನು ಅಮೆರಿಕದಲ್ಲಿ ಪ್ರದರ್ಶಿಸಲು ಹೋದ ಲೇಖಕರು ಅಲ್ಲಿಯ ಅನೇಕ ವಿಷಯಗಳನ್ನು ಓದುಗರಿಗೆ ತಿಳಿಸಿಕೊಡುತ್ತಾ ಹೋಗುತ್ತಾರೆ. ನಯಗಾರಾ ಜಲಪಾತದ ಬಗೆಗಾಗಲಿ, ಗ್ರಾಂಡ್‌ಕ್ಯಾನಿಯನ್ ಕೊರಕಲುಗಳ ಬಗೆಗಾಗಲೀ ತಮ್ಮ ಅನುಭವ ಬರೆಯುತ್ತ ಅದನ್ನು ನಾವು ಹೇಗೆ ನೋಡುತ್ತೇವೆ ಅನ್ನುವುದು ಮುಖ್ಯವಾಗುವದು ಎನ್ನುವರು. ಅಮೆರಿಕನ್ನರ ಜೀವನ ಶೈಲಿ, ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು, ಅವರ ಕನ್ನಡ ಸಂಘಗಳು ಮುಂತಾದ ಹತ್ತು ಹಲವಾರು ವಿಷಯಗಳು ಗಮನ ಸೆಳೆಯುತ್ತವೆ.

‘ಗಗನ ಸಖಯರ ಸೆರಗ ಹಿಡಿದು’ ಇದು ನಾಗೇಶ ಹೆಗಡೆಯವರ ಪ್ರವಾಸ ಕಥನ. ಇದರಲ್ಲಿ ಸಿಂಗಪೂರದಿಂದ- ಅಮೆರಿಕಾ ವರೆಗೆ ಸುತ್ತಾಡಿ ಬಂದ ಅನುಭವ ಲೇಖನಗಳಿವೆ. ಸಿಂಗಾಪೂರದ ಬಗೆಗೆ ಹೇಳುತ್ತ, ಇದು ಜಗತ್ತಿನ ಅತ್ಯಂತ
ಚೊಕ್ಕಟನಗರ ಇಲ್ಲಿ ನೊಣಗಳೇ ಇಲ್ಲ. ಎಲ್ಲೂ ದುರ್ವಾಸನೆ ಇಲ್ಲ.  ಕಸಕಡ್ಡಿ ಬಿಸಾಕುವಾಗ. ಉಗುಳುವಾಗ ಹುಷಾರಾಗಿರಿ, ಮಾದಕ ವಸ್ತುಗಳನ್ನು ಮಾರುವಾಗ ಸಿಕ್ಕಿಬಿದ್ದ ಈ ವರ್ಷದ 42ನೇಯ ವ್ಯಕ್ತಿಗೆ ಇಂದು ಮುಂಜಾನೆ ನೇಣು ಹಾಕಲಾಗಿದೆ. ಸಿಂಗಾಪೂರ ಸ್ಥಚ್ಚವಷ್ಟೇ ಅಲ್ಲ ಕಾಯ್ದೆ ಕಾನೂನುಗಳಿಗೆ ಗೌರವ ಕೊಡುತ್ತದೆ. ಇದು ಸೌಜನ್ಯಶೀಲ ನಗರವೂ ಹೌದೆನ್ನುವರು.

ಹಾಗೆಯೇ ಅಮೆರಿಕಾದ ಅನುಭವ ಹೇಳುತ್ತಾರೆ. ” ನೋ ಬಡಿ ಈಸ್ ಅಮೆರಿಕನ್ ಇನ್ ಅಮೆರಿಕಾ-ಅಮೆರಿಕಾದಲ್ಲಿ ಯಾರೂ ಅಮೆರಿಕದವರಲ್ಲ. ಇದೊಂದು ದೊಡ್ಡ ಮೆಲ್ಟಿಂಗ್ ಪಾಟ್. ಇದಕ್ಕೆ ಪ್ರಪಂಚದ ಎಲ್ಲಾ ಕಡೆಗಳಿಂದ ಚಿನ್ನ, ಬೆಳ್ಳಿ, ಸುಣ್ಣ, ಕಲ್ಲಿದ್ದಲು, ವಜ್ರ, ತಾಮ್ರ, ಕಬ್ದಣ ಎಲ್ಲಾ ಬಂದು ಬಿದ್ದು ಕ್ರಮೇಣ ಕರಗಿ ರೂಪ ರಹಿತವಾಗುತ್ತದೆ. ಪ್ರೆಂಚ್. ಜರ್ಮನ್. ಚೀನೀ. ಜಪಾನ್, ಐರಿಶ್, ಹಿಂದೂ, ಯಹೂದಿ. ಕರಿಯ. ಬಿಳಿಯ ಎಲ್ಲಾ ಕ್ತಮೇಣ ಅಮೆರಿಕನ್ನರಾಗುತ್ತಾರೆ. ಎಲ್ಲರೂ ಒಂದಾಗುವ ಈ ದೇಶದಲ್ಲಿ ಎಲ್ಲರ ತಾಯ್ನಾಡೂ ಬೇರೆಲ್ಲೋ ಇರುತ್ತದೆ. ಇಲ್ಲಿಯವರು ಇಲ್ಲಿ ಯಾರೂ ಇಲ್ಲ” ಎಂದರಂತೆ ಅಲ್ಲಿ ಹಬ್ಬದಲ್ಲಿ ಭಾಗವಹಿಸಿದ ಹುಡುಗರು.

ಮಾನವ ಚರಿತ್ರೆಯಲ್ಲಿ ಮೂರು ಬಾರಿ ಹೆಸರು ಬದಲಿಸಿಕೊಂಡ ನಗರ ಇಸ್ತಾಂಬೂಲ್- ಮೂರು ಸಾವಿರ ವರ್ಷಗಳ ಹಿಂದೆ ಗ್ರೀಕರು ಇಲ್ಲಿಗೆ ಬಂದು ‘ಬೈಝಾಂಟೈನ್’ ಎಂಬ ಪಟ್ಟಣ ನಿರ್ಮಿಸಿದರು. ನಂತರ ಇದು ರೋಮ ಸಾಮ್ರಾಜ್ಯದ ಬಹುಮುಖ್ಯ ನಗರವಾಯಿತು ಕ್ರಿಶ. 324 ರಲ್ಲಿ ರೋಮ್ ಚಕ್ರವರ್ತಿ ಕಾನ್‌ಸ್ಟಾಂಟಿನ್ ಎಂಬಾತ ಇದನ್ನೇ ತನ್ನ ರಾಜಥಾನಿಯನ್ನಾಗಿ ಮಾಡಿಕೊಂಡ. ನಂತರ ಇದು ‘ಕಾನ್‌ಸ್ಟಾಂಟಿನೋಪಲ್’ ಆಯಿತು. ಆಮೇಲೆ ಅರಬ್ಬರು. ಪರ್ಶಿಯನ್ನರು, ಈ ನಗರದ ಮೇಲೆ ಪದೇ ಪದೇ ದಾಳಿ ಮಾಡಿ ಓಟೋಮನ್ ತುರ್ಕರು ಇದನ್ನು ಕೈವಶ ಮಾಡಿಕೊಂಡು ‘ಇಸ್ತಂಬೂಲ್’ ಎಂಬ ಹೊಸ ಹೆಸರಟ್ಟರೆನ್ನುತ್ತ ಇದರ ಇತಿಹಾಸವನ್ನು ವಿವರವಾಗಿ ತಿಳಿಸಿಕೊಟ್ಟಿದ್ದಾರೆ.

‘ಉತ್ತರ ಅಮೆರಿಕಾದಲ್ಲಿ ಚಾತುರ್ಮಾಸ್ಯ’ ಲಲಿತಾ ಶಾಸ್ತ್ರಿಯವರ ಅಮೆರಿಕ ಪ್ರವಾಸ ಅಮೆರಿಕದಲ್ಲಿ ನಾಲ್ಕು ತಿಂಗಳು ಮಗನ ಮನೆಯಲ್ಲಿದ್ದು ಸ್ಯಾನಪ್ರಾನ್ಸಿಸ್ಕೊ. ಲಾಸ್‌ವೇಗಾಸ್. ಷಿಕ್ಕಾಗೋ, ವಾಶಿಂಗ್ಟನ್, ಬಾಸ್ಟನ್. ಡೆಟ್ರಾಯಿಟ್.  ಲಾಸ್ ಎಂಜಲೀಸ್. ಪೋರ್ಟಲ್ಯಾಂಡ್ ಮುಂತಾದ ರಾಜ್ಯಗಳಲ್ಲಿ ವಾರವಾರವೂ ಪ್ರವಾಸಿಸಿ ಪ್ರತಿಯೊಂದನ್ನು ಕುತೂಹಲ ಕಣ್ಣು ಮನಸ್ಸುಗಳೊಂದಿಗೆ ವೀಕ್ಷಿಸಿದ್ದಾರೆ. ಅಲ್ಲಿಯ ಒಳಿತು ಕೆಡಕುಗಳನ್ನು ಗುರುತಿಸಿದ್ಧಾರೆ. ಅಲ್ಲಿಯ
ತಂತ್ರಿಜ್ಞಾನ, ಸೊಗಸಾದ ಜೀವನಕ್ರಮ, ಅತೀ ಹತ್ತಿರದಿಂದ ಕಂಡವರಾಗಿದ್ದಾರೆ. ಆದರೆ ಇವರ ಭಾರತೀಯ ಸಹೃದಯ ಮನಸ್ಸು ಭಾರತದ ಒಗ್ಗಟ್ಟು ಸೇವಾ ಮನೋಭಾವದ ಬಗೆಗೆ ಹೆಮ್ಮೆ ಪಟ್ಟುಕೊಳ್ಳುತ್ತದೆ. ಬಡತನ ನಿರಕ್ಷರತೆಗೆ ಕಾರಣ ರಾಜಕೀಯ ಸ್ಥಾರ್ಥಿಗಳ ವ್ಯವಸ್ಥೆಯದ್ದು ಎಂದು ಹೇಳುತ್ತಾ ಬೇಸರಿಸಿರುವರು. ಹೊರದೇಶಗಳಲ್ಲಿ ಅಡ್ಡಾಡಿ ಬಂದ ಮೇಲೆಯೇ ಅಲ್ಲವೆ ನಮ್ಮ ರಾಜಕೀಯ ವ್ಯವಸ್ಥೆಗಳು, ಸಾಮಾಜಿಕ ಸಮಸ್ಯೆಗಳು ತಿಳಿಯುವುದು. ಆದರೆ ನಮ್ಮ ಸಾಂಸ್ಕೃತಿಕ ಸಮೃದ್ಧತೆಯ ಬಗೆಗೆ ಹೆಮ್ಮೆ ಪಟ್ಟುಕೊಳ್ಳಲೇ ಬೇಕಾಗುತ್ತದೆ. ಅದೇ ನಮಗೆ ಸಂತೋಷ ಕೊಡುವ ವಿಷಯ.

ಹೋ.ಶ್ರೀನಿವಾಸಯ್ಯನವರ ‘ಜಯಶ್ರೀ ಕಂಡ ಅಮೆರಿಕ’ದಲ್ಲಿ ತಮ್ಮ ಸ್ನೇಹಿತರ, ಪರಿಚಿತರ ಮನೆಯಲ್ಲಿ ಇದ್ದು ಅಮೆರಿಕಾದ ಕೆಲವು ಪ್ರಮುಖ ಪಟ್ಟಣಗಳಲ್ಲಿ ಸುತ್ತಾಡಿದ್ಧಾರೆ. ಕೆಲವು ಪ್ರವಾಸಿ ತಾಣಗಳ ಬಗೆಗೆ ಅಲ್ಲಲ್ಲಿಯೇ ಸಿಕ್ಕಿರುವ ಮಾಹಿತಿ ಪತ್ರಗಳ ಮುಖಾಂತರ ಸಂಗ್ರಹಿಸಿ ವಿವರವಾಗಿ ಬರೆಯುತ್ತಾ ಹೋಗಿದ್ಧಾರೆ.

“ಅಮೆರಿಕಾ ನಾನು ಕಂಡಂತೆ’ ಶ್ರೀಮಿತ್ತೂರರ ಪ್ರವಾಸ ಕಥನ. ಅಮೆರಿಕಾದ ಪ್ರಥಮ ಸಂದರ್ಶನ ಯಾರನ್ನೂ ತಬ್ಬಿಬ್ಬುಗೊಳಿಸುವಂತೆ ಇವರಿಗೂ ಆ ಅನುಭವ ಆಗಿದೆ. ಆ ಹಿನ್ನೆಲೆಯಲ್ಲಿ ನಮ್ಮ ಬಡ ಭಾರತದೊಡನೆ ಆ ದೇಶದ ಸುಖ ಸೌಕರ್ಯಗಳನ್ನು ಹೋಲಿಕೆ ಮಾಡಿದ್ದಾರೆ. ಅಂತೆಯೇ ಅವರು ಎರಡೂ ರಾಷ್ಟ್ರಗಳಲ್ಲಿರುವ ರಾಜಕೀಯ ಹಾಗೂ ಸಾಮಾಜಿಕ ಕುಂದು ಕೊರತೆಗಳನ್ನು ಗುಣ ದೋಷಗಳಮ್ನ ನನಗೆ ತಿಳಿದಂತೆ ಎತ್ತಿ ತೋರಿಸಲು ಪ್ರಯತ್ನಿದ್ದೇನೆ ಎನ್ನುತ್ತಾರೆ. ನಿರ್ಲಿಪ್ತ ಮನಸ್ಸಿನಿಂದ, ನಿರ್ವಿಕಾರ ಬುದ್ಧಿಯಿಂದ ಯೋಚಿಸಿದಾಗ ಭೌತಿಕವಾಗಿಯೂ, ಆರ್ಥಿಕವಾಗಿಯೂ ಅಮೆರಿಕಾ ದೇಶ ಬಹಳ ಮುನ್ನಡೆದಿದ್ದರೂ ಸಾಂಸ್ಕೃತಿವಾಗಿ, ಸಾಮಾಜಿಕ ರೀತಿ ನೀತಿಗಳಿಂದಾಗಲಿ ಅದು ನಮಗಿಂತ ಬಹಳಷ್ಟು ಹಿಂದೆ ಇದೆ ಎಂಬ ಸತ್ಯವನ್ನು ತಿಳಿಸಿಕೊಟ್ಟದ್ದಾರೆ.

ಶ್ರೀಮತಿ ಜಯಾರಾಜಶೇಖರ್ ಅವರ ‘ಮರಳಿ ಬಂದ ಮಧುಮಾಸ’ ಪ್ರವಾಸ ಕಥನದಲ್ಲಿ ಇಂಗ್ಲೆಂಡ್ ಮತ್ತು ಅಮೆರಿಕಾದಲ್ಲಿ ತಾವು ಕಳೆದ ಅನುಭವಗಳ ಸಂಗ್ರಹವಿದೆ. ಹೆಚ್ಚಾಗಿ ಕೌಟುಂಬಿಕ ಚಿತ್ರಣಗಳೇ ಇಲ್ಲಿ ಕಂಡು ಬಂದಿವೆ. ಅಮೆರಿಕ ಬಗೆಗಾಗಲಿ ಇಂಗ್ಲೆಂಡ್ ಬಗೆಗಾಗಲಿ ಉಳಿದ ಕೆಲವು ಲೇಖಕ ಲೇಖಕಿಯರಂತೆ ಯಾವುದನ್ನು  ವೈಭವೀಕರಿಸುವದಾಗಲೀ ವಿವರಣೆಗಳ ಪಟ್ಟಿಕೊಡುವುದಾಗಲೀ ಮಾಡಿಲ್ಲ. ಕೌಟುಂಬಿಕ ಪರಿಸರದಲ್ಲಿದ್ದು (ಮಗ ಸೊಸೆಯ ಹತ್ತಿರ) ನಾವು ಭಾಗ್ಯವಂತರು ಎಂದು ಸಂಭ್ರಮ ಪಡುವ ವಿವರಣೆಗಳು ಸಿಗುತ್ತವೆ.

ಪತ್ರಕರ್ತೆಯರಾದ ಸುಶಿಲಾ ಕೊಪ್ಪರ ಅವರು ‘ಪಡುವಣದ ಪತ್ರಮಾಲೆ’ಯಲ್ಲಿ ಪತ್ರಗಳ ಮುಖಾಂತರ ತಾವು ಅಮೆರಿಕಾ ಕೆನಡಾದಲ್ಲಿ ಸುತ್ತಾಡಿದ ಅನೇಕ ಅನುಭವಗಳನ್ನು ಬರೆಯುತ್ತಾ ಹೋಗಿದ್ಧಾರೆ.

ದೇವಕಿ ಮೂರ್ತಿಯವರ ‘ಅಮೆರಿಕಾ ಇಣಕು ನೋಟ’ದಲ್ಲಿಯೂ ಅಮೆರಿಕದ ಬಗೆಗೆ ಪರಿಚಯ ಮಾಡಿಕೊಡಲು ಪ್ರಯತ್ನಿಸಿದ್ದಾರೆ.

ನೀಳಾದೇವಿಯವರ ‘ನಾ ಕಂಡ ಆಖಂಡ’ದಲ್ಲಿ ಅಲ್ಲಿಯ ಸಾಮಾಜಿಕ ಜೀವನದ ಪರಿಚಯದೊಂದಿಗೆ ತಮ್ಮ ಅನುಭವಗಳನ್ನು ತಿಳಿಸಿರುವರು. ಅಲ್ಲಲ್ಲಿ ಭಾರತೀಯ ಸಾಮಾಜಿಕ ಜೀವನದ ಬಗೆಗೆಯೂ ಹೋಲಿಕೆ ಮಾಡಿದ್ದಾರೆ.

‘ಪರಮೇಶ್ಚರಿ ಲೋಕೇಶ್ವರ’ ರವರ ‘ಅಮೆರಿಕಾದಲ್ಲಿ ಅರವತ್ತು ದಿನಗಳು’ ಪ್ರವಾಸ ಕೃತಿ ಓದಲು ಹಿತವೆನಿಸುತ್ತದೆ. ಮಗನ ಅಹ್ವಾನದ ಮೇರೆಗೆ ಅಮೆರಿಕಾಕ್ಕೆ ಎರಡು ಸಲ ಹೋಗಿಬಂದಿದ್ಧಾರೆ. (87ರಲ್ಲಿ, ಮತ್ತೊಮ್ಮೆ 99 ರಲ್ಲಿ) ಅಲ್ಲಿ
ಕಂಡದ್ದನ್ನೆಲ್ಲಾ ಸರಳವಾದ ನಿರೂಪಣೆಯಲ್ಲಿ ಹೇಳುತ್ತ ಹೋಗಿರುವರು ಅಮೆರಿಕದಲ್ಲಿ ಭದ್ರವಾದ ಕಾನೂನಿನ ಚೌಕಟ್ಟು ನಿಷ್ಠಾವಂತ ಗೃಹರಕ್ಷಕದಳ, ಇಷ್ಟೇ ಅಲ್ಲದೆ ಹೆಲಿಕಾಪ್ಟರ್, ಕಂಪ್ಯೂಟರ್ಗಳು ಅಪರಾಧ ಶೋಧದಲ್ಲಿ ತೊಡಗಿದ್ದರೂ
ಇವೆಲ್ಲವುಗಳಿಂದ ನುಸಳಿಕೊಂಡು ಒಮ್ಮೊಮ್ಮೆ ಕೊಲೆಸುಲಿಗೆಗಳು ನಡೆಯುವ ವಿಷಯ ತಿಳಿಸುವರು. ಇಲ್ಲಿ ಹೆಚ್ಚು ಕಳುವಾಗುವ ವಸ್ತುಗಳೆಂದರೆ ಕಾರುಗಳಂತೆ. ಸೇಂಟ್‌ಲೂಯಿಸ್ ಒಂದು ರಾಜ್ಯದಲ್ಲಿಯೇ ಒಂದು ವರ್ಷದಲ್ಲಿ 500 ಕಾರುಗಳು ಕಳುವಾಗುತ್ತವೆಯೆಂದು ಲೇಖಕಿ ಸೂಕ್ಷ್ಮವಾಗಿ ಗೃಹಿಸಿದ್ದಾರೆ. ಹಾಗೆಯೇ ಅಮೆರಿಕ ದೇಶದವರ ಕರ್ತವ್ಯ  ಪ್ರಾಮಾಣಿಕತೆಗೆ ಸಂತೋಷಿಸಿದ್ದಾರೆ. ಅಲ್ಲಿಯ ಶಾಪಿಂಗ್ ಸ್ಥಳಗಳು, ಬೀಚ್‌ಗಳು, ಮ್ಯೂಸಿಯಂಗಳು, ಬಹುಗಾತ್ರದ ದಿನಪತ್ರಿಕೆಗಳು ಕಂಡು ಬೆರಗಾಗಿರುವರು. ಹೆಮ್ಮೆಯ ತಾಯಿ ಪರಮೇಶ್ಚರಿಯವರು ತನ್ನ  ವಿಜ್ಞಾನಿ ಮಗ ಬಾಬೂ ಅವರನ್ನು ಪ್ರೀತಿಯಿಂದ ಕೊಂಡಾಡಿದ್ದು ಓದುತ್ತಿದ್ದಂತೆ ನಮಗೂ ಸಂತೋಷವೆನಿಸುತ್ತದೆ. ಎರಡು ಸಲ ಅಮೆರಿಕಕ್ಕೆ ಹೋಗಿ ಬಂದ ಸಾರ್ಥಕತೆಯಿಂದ ಲೇಖಕಿ ಇಲ್ಲಿ ಕೃತಜ್ಞರಾಗಿದ್ದಾರೆ.

‘ಅಮರ ಲೋಕದಲ್ಲಿ ಅದ್ಯಾಪಕಿ’ ರಾಜಲಕ್ಷ್ಮಿ ಗೋಪಾಲ್ ಅವರ ಕೃತಿ. ಅಮೆರಿಕೆಯ ಬಗೆಗೆ ಕನ್ನಡ ಸಾಹಿತ್ಯದಲ್ಲಿ ನಾರಾರು ಕೃತಿಗಳಿದ್ದರೂ ಪ್ರತಿಯೊಂದು ಕೃತಿಗಳ ವೈಷಿಷ್ಟವೇ ಬೇರೆ ಬೇರೆ. ಅನುಭವಗಳು ಬೇರೆ ಬೇರೆ. ಶಿಕ್ಷಕಿ ರಾಜಲಕ್ಷ್ಮಿ ಇದನ್ನೆಲ್ತಾ ನಮ್ರವಾಗಿಯೇ ಹೇಳಿಕೊಂಡಿದ್ಧಾರೆ. ತಾವು ಅಮೆರಿಕದ ಉದ್ದಗಲದಲ್ಲಿ ಕಂಡದನ್ನೆಲ್ದಾ ಆತ್ಮೀಯವಾಗಿ ನಿವೇದಿಸಿರುವರು. ಲೇಖಕಿ ಅಧ್ಯಾಪಕಿಯಾದುದರಿಂದ ಅಲ್ಲಿಯ ಶಿಕ್ಷಣ ವ್ಯವಸ್ಥೆಯ ಬಗೆಗೆ, ಅಲ್ಲಿಯ ಮಕ್ಕಳಿಗೆ ಸಿಗುವ ಶಿಕ್ಷಣ ಸೌಲಭ್ಯಗಳ ಬಗೆಗೆ ತಿಳಿಸಿರುವರು. ಒಟ್ಚಾರೆ ಈ ಪುಸ್ತಕ ಅಮೆರಿಕದ ಬಗೆಗೆ ಸಾಕಷ್ಟು
ವಿಷಯಗಳನ್ನು ತಿಳಿಸಿಕೊಡುವಲ್ಲಿ ಯಶಸ್ಥಿಯಾಗಿದೆ.

ಆದರೆ ಕುಲಶೇಖರಿ ಅವರ ‘ಬೊಗಸೆ ಬುತ್ತಿ’ ಪ್ರವಾಸ ಕಥನ ಮನಕಲಕುವಂತಹ ಘಟಣೆಗಳಿಂದಲೇ ಸುರುವಾಗುತ್ತದೆ. ಇವರ ಮಗ ಅಮೆರಿಕದಿಂದ ಬಂದು ಮದುವೆಯಾದ ನಾಲ್ಕನೆಯ ದಿನಕ್ಕೆ ಕಾರು ಅಪಘಾತಕ್ಕೊಳಗಾಗಿ ನಡೆದಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ತಾಯಿಯ ಸಂಕಟ ಹೇಳತೀರದು. ಕೆಲವು ತಿಂಗಳುಗಳ ನಂತರ ದೈರ್ಯವಾಗಿ ಮಗ ಸೊಸೆ ಅಮೆರಿಕೆಗೆ ಹೋಗಿದ್ದಾರೆ. ಮಗನನ್ನು ನೋಡುವ ಬಯಕೆಯಿಂದ ಲೇಖಕಿ ಅಲ್ಲಿ ಹೋಗುತ್ತಾರೆ. ಅಪಘಾತಕ್ಕೀಡಾಗಿ ಅಂಗಾಂಗಗಳ ಚಲನೆ ಕಳೆದುಕೊಂಡವರಿಗೆ ಬದುಕಿನಲ್ಲಿ ಸಹಜವಾಗಿ ‘ಎಲ್ಲರಂತೆ ಇರಬಲ್ಲೆ’ ಎಂಬ ಮಾತು ಅಮೆರಿಕ ಹೇಗೆ ದಯಪಾಲಿಸಿದೆ ಎಂಬುದನ್ನು ಅನೇಕ ಸಂದರ್ಭಗಳಲ್ಲಿ ತಿಳಿಸಿಕೊಡುವರು. ಅಮೆರಿಕದ ಪ್ರಮುಖ ನಗರಗಳಲ್ಲಿ ಅಡ್ಡಾಡಿದ ಅನುಭವಗಳನ್ನು ಅಲ್ಲಲ್ಲಿ ಪರಿಚಯಿಸುವರು. ಗ್ರಾಂಡ್ ಕ್ಯಾನಿಯನ್‌ದ ರುದ್ರ ರಮಣೀಯ ಕೊರಕಲುಗಳ ಬಗೆಗೆ ಹೇಳುತ್ತ ನಿಸರ್ಗಕ್ಕೆ ಮೈದೆರೆದು ನಿಂತು ಋತುಮಾನದ ಚಳಿಗಾಳಿಗೆ ಪಕ್ಕಾಗಿ
ತವಗೈವ ಶಿಲೆಯ ಬೆಟ್ಟಗಳು ಶಿವ,  ಬ್ರಹ್ಮ, ದೇಗುಲ, ಪಗೋಡ ಹೆಸರಿನ ಸಂಕೇತ ಪಡೆದಿವೆ ಎಂದು ಹೇಳುತ್ತಾರೆ. ಭಾರತದ ಈ ದೇವರುಗಳ ಹೆಸರನ್ನು ಗ್ರಾಂಡ್ ಕ್ಯಾನಿಯನ್‌ದ ಬೆಟ್ಟಗಳಿಗೆ ಇಟ್ಟಿರಬೇಕಾದರೆ ನಾವು ಹೆಮ್ಮೆ ಮಾಬೇಕಾದಂತ ಸಂದರ್ಭ ಇದು.

ಉಮಾರಾವ್ ಅವರ ‘ರಾಖೀ ಪರ್ವತಗಳ ನಡುವೆ ಕ್ಯಾಬರೆ’ ಪ್ರವಾಸ ಕೃತಿಯಲ್ಲಿ ಕೆನಡಾದಲ್ಲಾದ ತಮ್ಮ ಅನುಭವ ಅನಿಸಿಕೆಗಳನ್ನೆಲ್ದಾ ಚಿಕ್ಕ ಚಿಕ್ಕ ತುಣುಕುಗಳಲ್ಲಿ ಹಿಡಿದಿಟ್ಟಿದ್ದಾರೆ. ಕೆನಡಾ ಬಹು ಸಂಸ್ಕೃತಿಯ ನಾಡು. ಅಲ್ಲಿ ಬ್ರಿಟಿಷ್,
ಪ್ರೆಂಚ್ ಹಿನ್ನೆಲೆಯ ಜನರ ರೀತಿ ನೀತಿಗಳೊಡನೆ ಹಲವಾರು ದೇಶಗಳಿಂದ ವಲಸೆ ಬಂದ ಲಕ್ಷಾಂತರ ಜನರ ವಿಭಿನ್ನ ಸಂಸ್ಕೃತಿಯ ಕುರುಹುಗಳು ಎದ್ದು ಕಾಣುತ್ತವೆ. ಜೊತೆಗೆ ಸಾವಿರಾರು ವರ್ಷಗಳ ಹಿಂದೆಯೇ ಇಲ್ಲಿ ನೆಲೆಸಿದ್ದು. ಯುರೋಪಿಯನ್ನರ ಆಕ್ರಮಣದ ನಂತರ ಅಲ್ಪ ಸಂಖ್ಯಾತರ ಗುಂಪಿಗೆ ಸೇರಿರುವ ಮೂಲನಿವಾಸಿಗಳ ವೈಶಿಷ್ಟ್ಯಪೂರ್ಣ ಜೀವನ ಶೈಲಿಯೂ ಬೆರೆತಿದೆ. ಇಂದು ಕೆನಡಾ ದೇಶ ‘ಕಲ್ಚರಲ್ ಮೊಸೇಕ್’ ತತ್ಪವನ್ನು ತನ್ನದಾಗಿಸಿಕೊಂಡು ಪ್ರತಿಯೊಬ್ದನೂ ತಮ್ಮ ಅಪ್ಪಟ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಸ್ಥಾತಂತ್ರ್ಯ ನೀಡಿರುವುದು ಅಲ್ಲಿನ ಹಿರಿಮೆ
ಎನ್ನುತ್ತಾರೆ ಲೇಖಕಿ.

‘ಜಗತ್ತಿನ ನಡು ನೆತ್ತಿಯ ಮೇಲೆ’ ಇದು ದೇ.ಜವರೇಗೌಡರ ಸುಂದರವಾದ ಪ್ರವಾಸ ಕಥನ. ಆಗಲೇ ಅಮೆರಿಕೆಗೆ ಐದು ಸಲ ಹೋಗಿ ಬರಿದಿದ್ಧಾರೆ. ಅಮೆರಿಕ ಕುರಿತಾಗಿ ಬೇರೆ ಪ್ರವಾಸ ಕಥನಗಳೂ ಬರೆದಿದ್ಧಾರೆ. ಅದರೆ ‘ಅಲಾಸ್ಕಾ’ ಕುರಿತಾಗಿ ಬರೆದ ಇವರ ಪ್ರವಾಸ ಕಥನ ಬೇರೆ ಯಾರೂ ಬರೆಯದೇ ಇದ್ದಂತಹ ಸಂದರ್ಭದಲ್ಲಿ ನಮಗೆ ಹೆಚ್ಚಿನ ಮಾಹಿತಿಗಳು ಸಿಕ್ಕು ಸಂತೋಷಪಡುವಂತಾಗುತ್ತದೆ. ಅಮೆರಿಕೆಯ ಸಂಸ್ಥಾನಗಳ ಪೈಕಿ ವಿಸ್ತೀರ್ಣದಲ್ಲಿ ಅಲಾಸ್ಕಾವೇ ದೊಡ್ಡದು. ಇಲ್ಲಿ ಇಪ್ಪತ್ತು ಎಕರೆಗಿಂತ ಹೆಚ್ಚು ದೊಡ್ಡದಾಗಿರುವ ಮೂವತ್ತು ಲಕ್ಷ  ಸರೋವರಗಳು, ಮೂರು ಸಾವಿರ ನದಿಗಳು, ಒಂದು ಲಕ್ಷ ಹೆಕ್ಟೇರ್ ಹೆಪ್ಪುಗಟ್ಟಿದ ಹಿಮ ಭೂಮಿ, ಕೆಲವು ಕಡೆ ಹಿಮದ ಹೆಪ್ಪುಗಳ ಅಳ ಒಂದು ಮೈಲಿಗೂ ಮಿಕ್ಕಿದೆ ಎಂದು ಬೌಗೋಳಿಕ ವಿವರಣೆ ತಿಳಿಸಿಕೊಡುತ್ತಾರೆ. ‘ಇಂತಹ ಭೂ ಪ್ರದೇಶಕ್ಕೆ ಹದಿನೈದು ಸಾವಿರ ವರ್ಷಗಳ ಹಿಂದೆಯೇ ಮಾನವ ಕಾಲಿಟ್ಟಿರಬೇಕೆಂದು ತಜ್ಞರು ಹೇಳುತ್ತಾರೆ. ಸೈಬೇರಿಯಾದಿಂದ ಜನ ತಂಡೋಪತಂಡವಾಗಿ ಈ ಮಾರ್ಗವಾಗಿ ಬಂದು ದಕ್ಷಿಣ ಅಮೆರಿಕೆಯ ದಕ್ಷಿಣ ತುದಿಯ ತನಕ ಹರಡಿಕೊಂಡಿದ್ದಾರೆ. ಅವರನ್ನು ರೆಡ್ ಇಂಡಿಯನ್ನರು ಎಂದು ಕರೆಯಲಾಗಿದೆ. ಅವರಲ್ಲಿ ಅನೇಕ ಬುಡಕಟ್ಟಗಳಿವೆ. ಅಲ್ಲಿರುವ ಎಸ್ಕಿಮೋಗಳೂ ಕೂಡ ಸೈಬೇರಿಯಾದಿಂದಲೇ  ಬಂದವರು ಎನ್ನುತ್ತಾರೆ.

ಅಲಾಸ್ಕಾದಲ್ಲಿ ಮುಖ್ಯವಾಗಿ ಪೂರ್ವದ ಇಂಡಿಯನ್ನರ ಜಾನಪದ ಕಲೆಗಳನ್ನು ನೋಡಬೇಕು, ಅಲ್ಲಿರುವ ಟೋಟೆಮ್ ಸ್ತಂಭಗಳ ಮೂಲ ಸ್ವರೂಪ ಇತಿಹಾಸವನ್ನು ಅಧ್ಯಯನ ಮಾಡಬೇಕೆಂಬ ಗೀಳಿನ ಮೇಲೆ ಲೇಖಕರು ಅಲ್ಲಿಗೆ ಹೋಗಿದ್ಧಾರೆ. ಸಾಮಾನ್ಯವಾಗಿ ಟೋಟೆಮ್ ಎಂದರೆ ಕುಲಲಾಂಛನ. ಲಾಂಛನಗಳ ಆಧಾರದ ಮೇಲೆ ಕುಲಗಳನ್ನು ಗುರುತಿಸುವ ಪದ್ಧತಿ ಬುಡಕಟ್ಟು ಜನಾಂಗಗಳಲ್ಲಿ ಚಾಲ್ತಿಯಲ್ಲಿತ್ತು.

ಸ್ತಂಭಗಳಲ್ಲಿ ಕಾಣುವ ಕಲಾಶೈಲಿ ಪುರಾತನವಾದದ್ದೆಂದೂ, ಎಲ್ಲ ಕಾಲಕ್ಕೂ ಸಲ್ಪತಕ್ಕದ್ದೆಂದೂ ತಜ್ಞರ ಅಭಿಪ್ರಾಯವಾಗಿದೆ. ಅ ಕಲೆಯಲ್ಲಿ ಒಂದು ಜನಾಂಗದ ಬದುಕು. ಬದುಕಿನ ರೀತಿ, ಅವರ ಮನೋಧರ್ಮ, ಅದು ಕಂಡ ತತ್ವ ಹಾಗೂ ಅದರ ಇತಿಹಾಸ ಸಾಕಾರಗೊಂಡಿವೆಯೆಂಬ ಯೋಚನೆಯೂ ಇದೆ.

ಸಾಮಾವ್ಯವಾಗಿ ಗೃಹ ನಿರ್ಮಾಣದೊಂದಿಗೆ ಅಥವಾ ಸಾರ್ವಜನಿಕ ಸಂಸ್ಥೆಯೊಂದಿಗೆ ಸ್ಥಂಬಗಳು  ಪ್ರತಿಷ್ಠಾಪನೆಗೊಳ್ಳುತ್ತಿದ್ದವೆಂದು ತೋರುತ್ತದೆ. ಕುಲಲಾಂಛನಗಳನ್ನು ಪೌರಾಣಿಕ ಮತ್ತು ಐತಿಹಾಸಿಕ ಘಟನೆಗಳನ್ನು ದಾಖಲಿಸುವ ಸ್ತಂಭವೇ ಟೊಟೆಮ್ ಸ್ತಂಭ. ಸಾಮಾನ್ಯವಾಗಿ ರಣಹದ್ದು ಎಲ್ಲ ಇಂಡಿಯನ್ ಪಂಗಡಗಳ ಗೌರವದ
ಪಕ್ಷಿಯಾಗಿ, ಟೊಟೆಮ್ ಸ್ತಂಭಗಳ ಮೇಲೆ ಸವಾರಿಮಾಡುತ್ತದೆ. ಸ್ತಂಭದ ಮೇಲ್ಗಡೆ ರಣಹದ್ದು ಇರುತ್ತದೆ. ಅಥವಾ ಕುಲದ ಲಾಂಛನ ತಿಮಿಂಗಲ, ಕರಡಿ ಮೊದಲಾದ ಪ್ರಾಣಿಗಳಲ್ಲೊಂದಿರಬಹುದು. ಅನಂತರ ಕಾವಲುಗಾರರೂ, ಯಜಮಾನನ ಸಂಕೇತವೂ ಬರುತ್ತದೆ. ಇವುಗಳ ಕೆಳಗಿನ ಜಾಗವನ್ನು ಕತೆಯಲ್ಲಿ ಬರುವ ಷಾತ್ರಗಳೂ ಘಟನೆಗಳನ್ನೂ ಸೂಚಿಸುವ ವಸ್ತಗಳೂ ಅಕ್ರಮಿಸಿಕೊಳ್ಳುತ್ತವೆ. ಕೊನೆಯಲ್ಲಿ ಯಜಮಾನನ ಮಡದಿಯ ತವರಿನ ಕುಲಲಾಂಛನಗಳು ಸ್ಥಾನ ಪಡೆಯುತ್ತವೆ ಎಂದು ವಿವರಿಸಿದ್ದಾರೆ ಲೇಖಕರು.

ನಂತರ ನೂರು ವರ್ಷಗಳ ಹಿಂದಿನ ಮೀನಿನ  ಬೇಟೆಯಾಡುವ ಹಳ್ಳಿಯಾದ ‘ಸ್ಕಗವೇ’ಗೇ ಭೇಟಿ ನೀಡುತ್ತಾರೆ. ಅಂದು ಅಲ್ಲಿ ಹಳದಿ ಲೋಹ (ಚಿನ್ನ) ಥಾರಾಳವಾಗಿ ಸಿಗುತ್ತದೆ ಎಂಬ ಸುದ್ದಿ ಅಮೆರಿಕೆಯ ಮನೆಗಳಿಗೆ ಪ್ರವೇಶಿಸುತ್ತಿದ್ದಂತೆ
ಚಿನ್ನ ಬಾಕ ಜನ ನೂಕು ನುಗ್ಗಲಾಗಿ ‘ಸ್ಕಗವೇ’ ಕಡೆಗೆ ದೌಡಾಯಿಸಿ ಅಲ್ಲಿಯ ನಿರ್ಮಲ ವಾತಾವರಣ ಹೇಗೆ ಕದಡಿದರು ಎನ್ನುವುದು ಬಹಳ ಸೊಗಸಾಗಿ ವಿವರವಾಗಿ ತಿಳಿಸಿಕೊಟ್ಟೆದ್ದಾರೆ. ಸುವರ್ಣ ಶೋಧವನ್ನು ಕುರಿತ ಕತೆಗಳು ಹೇಳುತ್ತ
ಓದುಗರನ್ನು ರಂಜಿಸಿದ್ದಾರೆ. ಹೀಗೆ ಹಡಗಿನ ಮುಖಾಂತರ ಹೋಗುತ್ತ ಅಲ್ಲಲ್ಲಿ ಇಳಿದು ಒಳನಾಡುಗಳನ್ನು ನೋಡುತ್ತ, ಹಡಗಿನ ಡೆಕ್ ಮೇಲೆ ನಿಂತು ಹಿಮಪರ್ವತಗಳು ಪ್ರಾಣಿ ಪಕ್ಷಿಗಳನ್ನು ನೋಡುತ್ತ ಬಹಳಷ್ಟು ಸಂತೋಷ ಪಟ್ಟದ್ದು
ಇಲ್ಲಿ ಕಂಡು ಬರುತ್ತದೆ.

ಗುರುವಮೂರ್ತಿ ಪೆಂಡಕೂರರ ಪ್ರವಾಸ ಕಥನ ‘ಓ ! ಕೆನಡಾ’ ಗುರುಮೂರ್ತಿಯವರು ಎರಡನೆಯ ಸಲ ಕೆನಡಾಕ್ಕೆ ಹೋಗಿದ್ಧಾರೆ (1969 ರಲ್ಲಿ ಮೊದಲು ಸಲ. ಈಗ ಪತ್ನಿಯೊಂದಿಗೆ) 1950 ರಿಂದಲೂ ಕೆನಡಾ ಇವರಿಗೆ ಕುತೂಹಲ ಕೆರಳಿಸಿದ ದೇಶವೆಂದು ಹೇಳಿಕೊಂಡಿದ್ದಾರೆ. ಕೆನಡಾದಲ್ಲಿ ಸುತ್ತಾಡುವಾಗ ಇವರಿಗೆ ಅನೇಕ ಭಾರತೀಯರ ಸಂಪರ್ಕ ಬಂದಿದೆ. ಅಲ್ಲಿ ದೇವಸ್ಥಾನಗಳು, ಮಸೀದಿಗಳು, ಶಿಖರ ಗುರುದ್ದಾರಗಳ ಬಗೆಗೆ ಪರಿಚಯಿಸಿರುವರು. ಭಾರತೀಯ
ಎಲ್ಲ ದಿನಸಿ ಅಂಗಡಿಗಳು ಅಲ್ಲಿವೆಯೆನ್ನುತ್ತಾರೆ ಅವುಗಳ ಬೋರ್ಡುಗಳ ಮೇಲೆ ಹಿಂದಿ ಅಕ್ಷರಗಳು ಕಂಡಿರುವರು. ಭಾರತೀಯ ನೃತ್ಯ. ಸಂಗೀತ ನಾಟಕಗಳ ಕಾರ್ಯಕ್ರಮಗಳ ಬಗೆಗೆ ಹೇಳಿರುವರು. ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮವೆಲ್ಲ ಭಾರತದಲ್ಲಿದ್ದಂತೆಯೇ ನಡೆಸಿಕೊಡುವ ರೀತಿ ವಿವರಿಸಿರುವರು. ಜೊತೆಗೆ ಅಲ್ಲಿ ತಾವು ಕಂಡ ಅನುಭವಿಸಿದ ಕೆನಡದ ಅನೇಕ ಇನ್ನಿತರ ವಿಷಯಗಳನ್ನು ಬರೆದು ಓದುಗರ ಗಮನ ಸೆಳೆದಿದ್ದಾರೆ.

‘ನಾ ಕಂಡ ಬ್ರಝಲ್’ ಸಿ.ನಾಗಭೂಷಣ ಅವರ ಪ್ರವಾಸ ಕೃತಿ ಲೇಖಕರು ದಕ್ಷಿಣ ಅಮೆರಿಕಾದ ಬ್ರಝಲ್‌ನಲ್ಲಿ ಸುತ್ತಾಡಿರುವರು. ಅಲ್ಲಿಯ ಹವಾಮಾನ ಕಾಫಿ. ಕಬ್ಬು, ಆದಿವಾಸಿಗಳನ್ನು ನೋಡುವಾಗ ಎಲ್ಲವೂ ಭಾರತವನ್ನು ಹೋಲುವಂತಿದೆ ಎನ್ನುವರು. ಅಲ್ಲಿಯ ಮ್ಯೂಸಿಯಂಗಳ ಬಗೆಗೆ, ಸಾಮಾಜಿಕ ಬದುಕಿನ ಬಗೆಗೆ, ಜೊತೆಗೆ ತಾವು ವೀಕ್ಷಿಸಿದ ಗಣಿಗಳ ಬಗೆಗೆ. ಹೀಗೆ ಅನೇಕ ವಿವರಗಳನ್ನು ತಿಳಿಸಿರುವರು.

ಎಚ್.ಎಲ್.ನಾಗೇಗೌಡರು ‘ನಾ ಕಂಡ ಪ್ರಪಂಚ’ದಲ್ಲಿ ತಾವು ಪ್ರಪಂಚ ಸುತ್ತಾಡಿದ ಅನೇಕ ಅನುಭವಗಳನ್ನು ಬರೆಯುತ್ತಾ ಹೋಗಿದ್ದಾರೆ. ಅಮೆರಿಕದಲ್ಲಿ ಮಗನ ಮನೆಯಲ್ಲಿದ್ದು ಅಮೆರಿಕದ ಒಳನೋಟಗಳನ್ನು ಸಾಕಷ್ಟು ಗ್ರಹಿಸಿ
ಚರ್ಚಿಸುತ್ತಾ ಹೋಗಿರುವುದು ಕಂಡು ಬರುತ್ತದೆ.

‘ಯಕ್ಷರಂಗಕ್ಕಾಗಿ ಪ್ರವಾಸ’ ಶಿವರಾಮ ಕಾರಂತರು ತಮ್ಮ ಯಕ್ಷರಂಗ ತಂಡದೊಡನೆ ರಶಿಯಾ ಕೊಲ್ಲಿ ರಾಷ್ಟ್ರಗಳಲ್ಲಿ ಅಡ್ಡಾಡಿ ಕೊನೆಗೆ ಬಹಳಷ್ಟು ದಿವಸಗಳು (ಒಂದೂವರೆ ತಿಂಗಳು) ದಕ್ಷಿಣ ಅಮೆರಿಕೆಯ ಪೇರು, ಬ್ರೆಜಿಲ್‌ನಲ್ಲಿ ಕಳೆದ ಸಂದರ್ಭಗಳ ಪ್ರವಾಸ ಕಥನ ಇದಾಗಿದೆ. ಉತ್ತರ ಅಮೆರಿಕೆಯ ಬಗೆಗೆ ನೂರಾರು ಕನ್ನಡ ಪ್ರವಾಸ ಪುಸ್ತಕಗಳು ನಮಗೆ ಒದಲು ಸಿಗುತ್ತವೆ. ಹೆಚ್ಚಾಗಿ ವಿಷಯಗಳು ಪುನರಾವರ್ತನೆಯೇ. ಆದರೆ ದಕ್ಷಿಣ ಅಮೆರಿಕೆಯ ಬಗೆಗೆ ಬರೆದ ಪುಸ್ತಕಗಳು ನಮ್ಮಲ್ಲಿ ಇಲ್ಲವೇ ಇಲ್ಲ. ಅಲ್ಲಿಯ ದೇಶಗಳ ಬಗೆಗೆ ಒಂದಿಷ್ಟು ತಿಳಿದುಕೊಳ್ಳಬೇಕೆನ್ನುವ ಹಂಬಲ ಇರುವಾಗಲೇ ಶಿವರಾಮಕಾರಂತರ ‘ಯಕ್ಷ್ಲರಂಗಕ್ಕಾಗಿ ಪ್ರವಾಸ ಕಥನ’ ಓದಲು ಸಿಕ್ಕು ಸಂತೋಷವಾಯಿತು.

ಪೇರುವಿನ ರಾಜಧಾನಿ ಲೀಮಾದಲ್ಲಿ ಯಕ್ಷರಂಗ ತಂಡದೊಡನೆ ಇಳಿದ ಕಾರಂತರು ಸ್ಪಾನಿಷ್ ಬಾಷೆಯ ಮಧ್ಯವರ್ತಿಗಳ ಮುಖಾಂತರ ಅಲ್ಲಲ್ಲಿ ಯಕ್ಷರಂಗದ ಆಟಗಳನ್ನು (ನಾಟಕಗಳನ್ನು, ಪ್ರಸಂಗಗಳನ್ಪು) ಅಡಿ ತೋರಿಸಿದ್ದಾರೆ.

ಬ್ರೆಜಿಲ್, ಪೇರೂನ ಬಗೆಗೆ ಹೆಚ್ಚು ಮಾಹಿತಿ ಇಲ್ಲದ ನಮ್ಮ ಓದುಗರಿಗೆ ಕಾರಂತರು ಬಹಳ ಚೆನ್ನಾಗಿ ಆ ದೇಶಗಳ ಪರಿಚಯ ಮಾಡಿಕೊಟ್ಟಿದ್ದಾರೆ. ಸುವರ್ಣ ಸಂಪತ್ತು ದಕ್ಷಿಣ ಅಮೆರಿಕದಲ್ಲಿದೆ ಎಂಬ ಪ್ರಸಿದ್ಧಿ ಸ್ಪೇನ್ ನೌಕಾವಿಹಾರಿಗಳಿಂದ 15ನೆಯ ಶತಮಾನದಲ್ಲಿ ಯುರೋಪಿಗೆ ತಿಳಿಯಿತು. ಮುಂದೆ ಸ್ಪೇನ್ ನೌಕಾ ವಿಹಾರಿಗಳು ಮೆಕ್ಸಿಕೋವಿಗೆ ಕಾಲಿರಿಸಿ ಅಲ್ಲಿನ ಎಜೆಟಿಕ್ ಮತ್ತು ಮಾಯಾ ನಾಗರಿಕತೆಗಳನ್ನು ಕಂಡು ಅಸೂಯೆಗೊಂಡರು. ಅನಂತರ ಪೆರುವಿನ ತನಕವೂ ಹೋಗಿ. ಅಲ್ಲಿನ ಇಂಕಾ ಸಾಮ್ರಾಜ್ಯ ವೈಭವವನ್ನು ಕಂಡು ಇನ್ನಷ್ಟು ಬೆರಗಾದರು.
ಬರಿಯ ಅಷ್ಟಕ್ಕೆ ಅವರ ಬೆರಗು ನಿಲ್ಲದೆ, ಆ ದೇಶದ ತೀರ ಅನಾದಿ ಕಾಲದ ನಾಗರಿಕತೆಯನ್ನು, ಅದಮ್ನ ಮೀರಿ ಅಲ್ಲಿನ ಚಿನ್ನ, ಬೆಳ್ಳಿ ಮೊದಲಾದ ಸಂಪತ್ತನ್ನೂ ಕಂಡು ರಾಕ್ಷಸರಂತೆ ವರ್ತಿಸಿ ಇಂಕಾ ನಾಗರಿಕತೆಯನ್ನೇ ಅವರು
ಕೊನೆಗೊಳಿಸಿದರು. ಅಲ್ಲಿನ ಕೊನೆಯ ದೊರೆಯನ್ನು ಕೊಂದು, ಬಂಡಿಗಟ್ಟಲೆ ಚಿನ್ನ ಬೆಳ್ಳಿಗಳನ್ನು ತಮ್ಮ ನಾಡಿಗೆ ಒಯ್ದರು. ಆ ಮೂಲಕ ಯುರೋಪಿನ ಅನ್ಯ ರಾಷ್ಟ್ರಗಳ ಅಸೂಯೆಯನ್ನು ಕೆರಳಿಸಿದರು.

ಕ್ರಿ.ಶ.ಅರಂಭದ ತರುವಾಯ ಕ್ರಿಶ. 1500 ವರ್ಷಗಳ ತನಕವೂ ಅದ್ದುತ ರೀತಿಯಿಂದ ಮೆರೆದ ನಾಗರೀಕತೆಯ ವಿವಿಧ ಸಂಸ್ಕಾರಗಳನ್ನು, ಹಿರಿಮೆಯನ್ನು ಪ್ರದರ್ಶಿಸಿದ ಎಜೆಟಿಕ್. ಮಣಿಯದೆ ನಾಗರಿಕತೆಗಳ ಇತಿಹಾಸ ಎಷ್ಟು ವೈಭವವೊ.
ಅದಕ್ಕಿಂತ ಕಡಿಮೆ ಇಲ್ಲದ ವೈಭವ ಕ್ರಿ.ಪೂ. ಸಾವಿರಾರು ವರ್ಷಗಳ ಇತಿಹಾಸ. ಸಂಸ್ಕೃತಿ, ಕಲಾ ಸಂಪತ್ತು, ಧನ ಕನಕಾದಿ ಲೋಹಗಳ ಸಂಪತ್ತು ಪೇರುವಿನದೆಂಬುದು ಪ್ರಕಟಗೊಂಡಿತು. ಆದರೆ ಅದೇನೆ ಆ ದೇಶಗಳ ಸಂಪತ್ತು.
ವೈಭವ, ನಾಗರಿಕತೆಗಳಿಗೆ ಮಾರಕವಾಗಿ ಬಂತೆಂಬುದು ಮಾತ್ರ ನಾಗರಿಕ ಜನಾಂಗಗಳು ನಾಚಲೇ ಬೇಕಾದೊಂದು ಪಿಡುಗಾಯಿತು ಎನ್ನುತ್ತಾರೆ ಕಾರಂತರು.

ಆಯ್‌ಂಡೀಸ್ ಪರ್ವತಾವಳಿಗಳ ಸಾಲಿನಲ್ಲಿ ಇನ್ನೂ 10,000 ಅಡಿ ಉನ್ನತಿಯನ್ನು ಏರಿದರೆ ಅದೊಂದು ಪ್ರಸ್ತಭೂಮಿ ಕಾಣುತ್ತದೆ. ಅದು ವಿಖ್ಯಾತ ಇ೧ಕಾ ಸಾಮ್ರಾಜ್ಯ ಹಬ್ಬಿ ಮೆರೆದ ಭೂಮಿ. ಆ ಬಯಲುಗಾವಲಿನ ಶೀತ ಹವೆಯಲ್ಲಿ ಅಲ್ಲಿನ ಜನತೆ ಲಾಮಾ, ವಿಕೂನ, ಅಲ್ಟಕಾದಂತಹ ದೇಶಿಯ ಮೃಗಗಳನ್ನೂ ಸಾಕಿಯೋ ಬೇಟೆ ಆಡಿಯೋ ಜೀವಿಸಬೇಕು. ಇಂಥ ಒಂದು ರಾಜ್ಯದ ಗುಡ್ಡಗಾಡು ಮತ್ತು ಕಣಿವೆಗಳಲ್ಲಿ ಬದುಕಿದ ಜನರು, ಒಂದೊಂದು ಕಾಲದಲ್ಲಿ ಒಂದಕ್ಕಿಂತ ಒಂದು ಹೆಚ್ಚೆನಿಸುವ ನಾಗರಿಕತೆಗಳನ್ನು ಬೆಳೆಸಿ ಬಂದರಂದರೆ ಆಶ್ಚರ್ಯವಾಗುತ್ತದೆ. ಅವರ ಭೂಮಿಯ ಕೆಳಗೆ ಹುದುಗಿದ ಚಿನ್ನ,  ತಾಮ್ರ, ಪಾದರಸ, ಸೀಸಗಳ ಸಂಪತ್ತು ಅಂದು ಅವರಿಗೆ ಅಮೂಲ್ಯ ವಸ್ತುವಾಗಿಯೇ ಕಾಣಿಸಿರಲಿಲ್ಲ. ತಮ್ಮ ದೊರೆ ಮೈಗೆ ಅಂಟು ಸವರಿಕೊಂಡು ಕುಳಿತರೆ, ಅವನ ಮೇಲೆ ಚಿನ್ನದ ಹುಡಿ ಸೇಚನ ಮಾಡಿ ಅವನಿಗೆ ಸುವರ್ಣ ಸ್ನಾನ ಮಾಡಿಸುತ್ತಿದ್ದವರು ಅವರು ! ಕೊನೆಗೆ ಆ ಸುವರ್ಣ ನಿಧಿಯೇ ಸ್ಪೇನಿನ ಜನರನ್ನು ಸೆಳೆದು ಇಂಕಾ ನಾಗರಿಕತೆಯನ್ನು ಕೊನೆಗೊಳಿಸಿತು.

ಕುಬೇರನ ಸುವರ್ಣಕೋಶವನ್ನು ತನ್ನ ಹೃದಯದಲ್ಲಿ ಹೊತಿಟ್ಟ ಈ ನಾಡು, ಈಗ ದಟ್ಟ ದಾರಿದ್ರ್ಯ ತುಂಬಿದ ನಾಡು! ನೂರರಲ್ಲಿ ಮೂವರು ಸಿರಿವಂತರಿರಬಹುದು. ಪಾಶ್ಚಾತ್ಯ ನಾಗರಿಕತೆಯ ಅನುಕರಣೆಗೆ ಹೊರಟ ಈ ದೇಶ, ಇಂದು ಮಾತ್ರ ಬಡವರ ನರಕವಾಗಿದೆ. ಹಾಗೆಂದು ಅಲ್ಲಿನ ಆಧುನಿಕ ಮಗ್ಗುಲಿಗೆ ಹೋದರೆ, ಗಗನ ಚುಂಬಿಗಳು, ಸೌಧಗಳು, ವಿಶಾಲವಾದ ಹಾದಿ ಬೀದಿಗಳು, ಸಾಲು ಮರಗಳು ಶ್ರೀಮರಿತಿಕೆಯಿಂದ ಮೆರೆದಾಡುತ್ತಿದೆ. ನಗರದ ಹಳೆಯ ಭಾಗದಲ್ಲಿ ಸ್ಪೇನ್ ವಿದೇಶಿಯರು ಬಂದು 16-17ನೆಯ ಶತಮಾನಗಳಲ್ಲಿ ನಿರ್ಮಿಸಿದ ನಗರ, ಹಾದಿ ಬೀದಿಗಳು ಕಟ್ಟಡಗಳು ಯುರೋಪಿನ ಮಿಶ್ರ ಸಂಪ್ರದಾಯದ ಚೊಕ್ಕಟ ದೃಶ್ಯಗಳನ್ನು ಬೀರುತ್ತವೆ.

ಪುರಾತನ ಯುಗದಲ್ಲಿ ಇಂಕಾ ನಾಗರಿಕರ ಪೂರ್ವಜರು ತಮ್ಮ ಪ್ರತಿಷ್ಠಿತರ ಸಮಾದಿಗಳನ್ನು ರಚಿಸುವಾಗ ಬದುಕಿನಲ್ಲಿ ಅವರು ಬಳಸುತ್ತಿದ್ದ ಯಾವತ್ತೂ ಸೊತ್ತುಗಳ ಜತೆಯಲ್ಲಿ ಶವಗಳಮ್ನ ಹೂಳುವ ವಾಡಿಕೆಯಿತ್ತು. ಶವದ ಕೊಳೆಯುವ
ಭಾಗಗಳನ್ನು ಕಿತ್ತೆಸೆದು, ಉಳಿದ ಬಾಗ ಕೆಡದಂತೆ ಏನೇನೋ ಅಂಜನಗಳನ್ನು ಲೇಪಿಸಿ ಮೃತರಿಗೆ ಬಟ್ಟೆ ಬರೆ ಆಭರಣಗಳನ್ನು ತೊಡಿಸಿ ಮಲಗಿಸುತ್ತಿದ್ದರು. ಮುಖದ ಮೇಲೆ ಅವನ ಚಿನ್ನದ ಮುಖವಾಡ ಇರಿಸಿ, ದೇಹದ ಉಳಿದ ಭಾಗವನ್ನು ಬರಿದೆ ಬಿಡುತ್ತಿದ್ದರು. ಅವುಗಳ ಜತೆಯಲ್ಲಿ ಮೃತರ ಚರ ಸೊತ್ತುಗಳನ್ನು ಬೆಲೆ ಬಾಳುವ ಒಡವೆಗಳನ್ನು ಹೂತಿಡುತ್ತಿದ್ದುದರಿಂದ ಮುಂದಿನ ಕಾಲದ ಡಕಾಯಿತರಿಗೆ ಅವು ಆಕರ್ಷಣೆಯಾದವು. (ಇಜಿಪ್ತಿನಲ್ಲಿಯೂ ಮಮ್ಮಿಗಳನ್ನು ಮಾಡಿದ್ದು ಹೀಗೆಯೆ) ಎಂದು ವಿವರವಾಗಿ ತಿಳಿಸಿದ್ದಾರೆ.

ಕಾರಂತರು ಬ್ರೆಜಿಲ್‌ಗೆ ಹೋಗಿದ್ದಾರೆ. ಉತ್ತರ ಭಾಗದಲ್ಲಿ ಹರಿಯುವ ಅಮೆಜಾನ್ ನದಿ, ಅದರ ಶಾಖೆಗಳು, ಅಲ್ಲಿಯ ಅರಣ್ಯವಲಯದ ಬಗೆಗೆ ಪರಿಚಯಿಸಿದ್ದಾರೆ. ಇಲ್ಲಿ ಬಿಳಿಯರು, ನಿಗ್ರೋಗಳು, ಜಪಾನೀಯರು ತಂಡ ತಂಡವಾಗಿ ಇದ್ಧಾರೆ. ಇವರೆಲ್ಲರ ಸಮ್ಮಿಶ್ರ ಜನಾಂಗ, ವರ್ಣದ್ದೇಷವಿಲ್ಲದ ಒಂದು ಜನ ಸಮುದಾಯ ಬೆಳೆಯಿತು ಎಂದಿದ್ದಾರೆ ಕಾರಂತರು. ಬ್ರೆಜಿಲಿನ ದೊಡ್ಡ ದೊಡ್ಡ ನಗರಗಳಲ್ಲಿ ಕಾರಂತರ ಯಕ್ಷರಂಗ ತಂಡ ನಾಟಕವಾಡಿದ್ದಾರೆ. ಅಲ್ಲಿಯ ನಾಟಕ ಗೃಹಗಳು ನವೀನ. ಸುಖದಾಯಕ ಅಸನಗಳಿಂದಲೂ ಸುಸಜ್ಜಿತ ರಂಗ ಪರಿಕರದಿಂದಲೂ ಕೂಡಿದಂತವು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

‘ಪೇರುವಿನ ಪವಿತ್ರ ಕಣಿವೆಯಲ್ಲಿ’ ಇದು ನೇಮಿಚಂದ್ರರ ಪ್ರವಾಸ ಕಥನ. ಪೇರುವಿನ ಬಗೆಗೆ ಅನೇಕ ಮಾಹಿತಿಗಳನ್ನು ಕುತೂಹಲಗಳನ್ನು ಒಳಗೊಂಡ ಕೃತಿ. ಆಯ್ಂಡೀಸ್ ಬೆಟ್ಟಗಳ ನಡುವಿನ ನೆಲದಲ್ಲಿ ಕ್ರಿ.ಪೂರ್ವದಿಂದ ಕ್ರಿಶ. 800ರ
ವರೆಗೆ ನಾಸ್ಕಾ ಸಂಸ್ಕೃತಿ ಅಲ್ಲಿದ್ದುದಾಗಿ ಹೇಳಿದ್ದಾರೆ. ಈ ಸಂಸ್ಕೃತಿಯಲ್ಲಿಯೂ ಸತ್ತವರನ್ನು ಮಮ್ಮಿಗಳನ್ನಾಗಿ ಮಾಡಿ, ಅವರ ಪ್ರೀತಿಯ ವಸ್ತುಗಳನ್ನೆಲ್ಲಾ ಇಟ್ಟು ಹೂಳುವ ಸಂಪ್ರದಾಯವಿತ್ತು. ‘ಚೌಚೀಲಾ’ ಎಂಬ ಮರಳುಗಾಡಿನ ಪ್ರದೇಶದ
ನೆಲದಲ್ಲಿ ತೆರೆದಿಟ್ಟು ಸಮಾಧಿಗಳಿವೆಯಂತೆ. ಅಚ್ಚ ಬಿಳಿಯ ಮೂಳೆಗಳು ಎಲ್ಲೆಲ್ಲೂ ಬಿದ್ದಿವೆ. ಕೆಲವು ಸಮಾಧಿಗಳಲ್ಲಿ ಕೆಡದೆ ಸುರಕ್ಷಿತವಾಗಿ ಉಳಿದ ಮಮ್ಮಿಗಳು ಇವೆ. ಪೇರುವಿನಲ್ಲಿ ಹೆಜ್ಜೆ ಹೆಜ್ಜೆಗೂ ಉತ್ಖನನದ ತಾಣಗಳಿವೆ. ಅವೆಲ್ಲವನ್ನೂ ಕಾದಿರಿಸಲು ಸರಕಾರ ಅಸಮರ್ಥವಾಗಿದೆ ಎನ್ನುವರು. ಪೇರೂನ ಇತಿಹಾಸ ರಾಜಕೀಯ, ಸಾಮಾಜಿಕ, ಇಂದಿನ ಪರಿಸ್ಥಿತಿಗಳ ಬಗೆಗೆ ವಿವರವಾಗಿ ಹೇಳಿದ್ದಾರೆ.

ಕೆ.ಪಿ.ಪೂರ್ಣಚಂದ್ರತೇಜಸ್ಥಿಯವರು ‘ದೇಶ ವಿದೇಶಗಳ ಪರಿಚಯ’ದಲ್ಲಿ ದಕ್ಷಿಣ ಅಮೆರಿಕದ ಬಗೆಗೆ ದೀರ್ಘವಾಗಿ ಪರಿಚಯಿಸಿದ್ದಾರೆ. ಮನುಷ್ಯನ ಚಿನ್ನದ ಆಸೆ ಅವನನ್ನು ಅನೇಕ ಸಾಹಸಗಳಿಗೆ ಅನ್ವೇಷಣೆಗಳಿಗೆ ತೊಡಗುವಂತೆ ಮಾಡಿದ್ದವು ಎನ್ನುತ್ತ ಅಲ್ಲಿಯ ದೇಶಗಳ ಅದ್ದುತ ಲೋಕವನ್ನೇ ತೆರೆದಿಟ್ಟೆದ್ದಾರೆ. ಪೇರು ಬ್ರೆಜಿಲ್‌ಗಳ ಇತಿಹಾಸ ಕಣ್ಣಿಗೆ ಕಟ್ಟುವಂತಿದೆ.

ಜಿ.ಎಸ್.ಮೋಹನ್ ಅವರದು ‘ನನ್ನೊಳಗಿನ ಹಾಡು ಕ್ಯೂಬಾ’ ಪ್ರವಾಸ ಕಥನ. ಉತ್ತರ ಅಮೆರಿಕ ಖಂಡಕ್ಕೆ ಸಮೀಪದಲ್ಲಿರುವ ಕೆರಿಬಿಯನ್-ವೆಸ್ಟ್ ಇಂಡೀಸ್ ದ್ವೀಪ ಸಮೂಹಗಳಲ್ಲಿರುವ ಅತ್ಯಂತ ದೊಡ್ಡ ದ್ವೀಪ ಕ್ಯೂಬಾಕ್ಕೆ ಹೋಗಿದ್ದಾರೆ. ಕ್ಯೂಬಾದಲ್ಲಿ ನಡೆದ ಅಂತರಾಷ್ಟ್ರೀಯ ಯುವಜನ ಉತ್ಸವದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದ ಯುವ ಪತ್ರಕರ್ತರ ಸಮಾವೇಶದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅ ಜನರ ಸ್ವಾಭಿಮಾನದ, ಹೋರಾಟದ ಮುಗ್ಗಲುಗಳನ್ನು ಪರಿಚಯ ಮಾಡಿಕೊಡುತ್ತಾರೆ.

ತಮ್ಮ ಸ್ಥಾತಂತ್ರ್ಯಕ್ಕಾಗಿ ಕ್ಯೂಬಾ ಸ್ಪೇನದ ವಿರುದ್ಧ ಒಂದು ಶತಮಾನ ಹೋರಾಟ ನಡೆಸಿ ಸ್ವಾತಂತ್ರ್ಯ- ರಾಗುತ್ತಿದ್ದಂತೆಯೇ ಕ್ಯೂಬಾ ಅಮೆರಿಕದ ಪಾಲಾಯಿತು. 1902ರಲ್ಲಿ ಪೂರ್ಣ ಸ್ವತಂತ್ರ್ಯ ರಾಷ್ಟ್ರವಾದರು ಪ್ರಮುಖ ಅರ್ಧಿಕ ಕ್ಷೇತ್ರವೆಲ್ಲ ಅಮೆರಿಕದ ಬಹುರಾಷ್ಟ್ರೀಯ ಸಂಸ್ಥೆಗಳ ಕೈಯಲ್ಲಿದೆ. 1959ರಲ್ಲಿ ಕಮ್ಯೂನಿಸ್ಟ್ ನಾಯಕ ಫೀಡಲ್ ಕ್ಯಾಸ್ಟ್ರೋ ಮತ್ತು ಆತನ ಸಂಗಾತಿ ಜೆ ಗುವೇರ್ ನೇತೃತ್ವದಲ್ಲಿ ಜರುಗಿದ ಕ್ರಾಂತಿಯಿಂದಾಗಿ ಹೊಸಯುಗ ಪ್ರಾರಂಭವಾಯಿತು. ಅಮೆರಿಕ ಆಕ್ರೋಶ ಕಡಿಮೆಯಾಗಲಿಲ್ಲ. ಕ್ಯೂಬಾ ಅಮೆರಿಕದ ದಿಗ್ಭಂಧನದಲ್ಲಿದ್ದರೂ ತನ್ನ ಸ್ವಂತ
ಪ್ರಯತ್ನದ ಮೇಲೆ ಸಾಕ್ಷರತೆಯಲ್ಲಿ, ಕ್ರೀಡಾಕೂಟಗಳಲ್ಲಿ. ಆರೋಗ್ಯ ರಕ್ಷಣೆಯಲ್ಲಿ ಅಮೆರಿಕದವರನ್ನು ಹಿಂದೆ ತಳ್ಳುತ್ತಿದೆ. ವಿದೇಶಗಳಲ್ಲಿ ಲಕ್ಷಾದೀಶರಾಗಿರುವ ವೈದ್ಯರಿದ್ಧಾರೆ. ಇಲ್ಲಿಯೂ ವಿಜ್ಞಾನಿಗಳು, ವೈದ್ಯರು ಇದ್ಧಾರೆ. ಆದರೇ ಎಷ್ಟೋ
ಜನಕ್ಕೆ ಕಾರುಗಳಿಲ್ಲ ಕಾರುಗಳಿದ್ದವರಿಗೆ ಪೆಟ್ರೋಲ್ ಇಲ್ಲ. ಆದರೂ ಸಹ ಇವರು ದೇಶಕ್ಕೆ ಮೋಸ ಮಾಡಲು ಇಚ್ಛಿಸುವುದಿಲ್ಲ. ಇಲ್ಲಿರುವ ಎಷ್ಟೋ ವೈದ್ಯರು ಸಿರಿವಂತಿಕೆಯ ಹಾದಿಯನ್ನು ತುಳಿಯಬಹುದಿತ್ತು. ಹಣ ಹುಡುಕುತ್ತಾ ದೇಶಬಿಟ್ಟು ಹೋಗಬಹುದಿತ್ತು. ಆದರೆ ಯಾರೂ ಹಾಗೆ ಮಾಡುವುದನ್ನು ಎಂದೂ ಯೋಚಿಸುವುದಿಲ್ಲ. ‘ನೋಡಿ ನಾವು ಗುಲಾಮರು ಎಷ್ಟು ದೂರ ಸಾಗಿ ಬಂದಿದ್ದೇವೆ’ ಎನ್ನುತ್ತಾರೆ ಕ್ಯಾಸ್ಟ್ರೋ ಎಂದು ಮೋಹನ ತಿಳಿಸಿಕೊಡುತ್ತಾರೆ’.

ಕ್ಯೂಬಾ ಪುಸ್ತಕ ಪ್ರಿಯದೇಶ. ಯಾವುದೇ ಪುಸ್ತಕದ 20,000 ಪ್ರತಿಗಳನ್ನು ಮುದ್ರಿಸುತ್ತಿದ್ದ ಪ್ರಕಾಶಕರು ಅಮೆರಿಕದ ದಿಗ್ಭಂಧನದಿಂದ ಮುದ್ರಣ ಸಾಮಗ್ರಿಗಳು ಕೊರತೆಯಾಗಿ 2000ಕ್ಕೆ ಇಳಿದಿದೆ ಎನ್ನುತ್ತಾರೆ. ಅಮೆರಿಕದ ಸಾಹಿತಿ ಅರ್ನೆಸ್ಟ್ಥ ಹೆಮ್ಮಿಂಗ್ವೆ ಕ್ಯೂಬಾವನ್ನು ಎದೆ ತುಂಬ ಪ್ರೀತಿಸಿದ್ದು, ಅದಮ್ಯ ಕನಸುಗಾರ ಚೇಗವಾರನನ್ನು, ಹಸಿರು ಬಟ್ಟೆಯ ಹರಕುಗಡ್ಡದ ಪಿಡೆಲ್‌ನನ್ನು, ಗ್ರಾನ್ಮಾ ನೌಕೆಯನ್ನು, ನೆರುದಾನ ಕಾವ್ಯವನ್ನು, ಸದಾ ಜೊತೆಗಾರನಾಗಿ ನಿಂತ
ಮೆಕ್ಸಿಕೋವನ್ನು, ಲ್ಯಾಟಿನ್ ಅಮೆರಿಕಾದ ಒಳಬೇಗುದಿಯನ್ನು. ಅಷ್ಟೇ ಅಲ್ಲ ಅಮೆರಿಕಾ ಎಂಬ ದೊಡ್ಡಣ್ಣನ ಪರಿಚಯವನ್ನು ಲೇಖಕರು ತಾವು ಮಾಡಿಕೊಳ್ಳುತ್ತಲೇ ನಮಗೂ ಈ ಪ್ರವಾಸ ಕಥನ ಮೂಲಕ ಮಾಡಿಕೊಟ್ಟಿದ್ದಾರೆ.

ಹೀಗೆ ಉತ್ತರ ದಕ್ಷಿಣ ಅಮೆರಿಕದ ಕೆಲವು ಒಳನೋಟಗಳನ್ನು ನೋಡಬಹುದಾಗಿದೆ.

****Kannada, Lata Gutti, Travelogue

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಮಾರ ಪರ್ವತದಲ್ಲಿ ಅದೊಂದು ರಾತ್ರಿ
Next post ಭೂತ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys