ಈ ವಿಷಯ ಮನಸ್ಸಿನ ಭಾವಗಳಮ್ನ ಪ್ರತಿಫಲನಗೊಳಿಸುವ ಸೂಕ್ಷ್ಮಕ್ರಿಯೆಯಿಂದ ಕೂಡಿದೆ. ಜಗತ್ತಿನಲ್ಲಿ ಆತ್ಮಹತ್ಯೆಗೊಳಗಾಗುವ, ಆದ ಕೋಟ್ಯಾಂತರ ಜನರ ಧ್ವನಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ವ್ಯತ್ಯಾಸಗಳು ಕಂಡು ಬರುತ್ತವೆ ಎನ್ನುವದಕ್ಕೆ ಅಮೇರಿಕಾದ ಟೆನ್ನೇಸಿ ನಗರದ ವಿಶ್ವವಿದ್ಯಾನಿಲಯದಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನೀಯರ್‌ಗಳಾದ ಸ್ವಿರ್‌ಮನ್ ಮತ್ತು ಮಿಷರ್‌ಮಿಲ್ಕ್ ಅವರು ಸಂಶೋಧನೆಗಳಿಂದ ಸಾಬೀತುಪಡಿಸಿದ್ದಾರೆ.

ವ್ಯಾಕುಲತೆಗೆ ತುತ್ತಾಗಿರುವ ೬೪ ಮಂದಿ ರೋಗಿಗಳು ಮತ್ತು ಮಾನಸಿಕವಾಗಿ ಸುಸ್ಥಿತಿಯಲ್ಲಿದ್ದ ೩೨ ಮಂದಿಯ ಜತೆ ಇಬ್ಬರು ವಿಜ್ಞಾನಿಗಳು ಮಾತುಕತೆ ನಡೆಸಿದರು. ಕೊನೆಗೆ ಪರೀಕ್ಷಿಸಿದಾಗ ಈ ಜನರಲ್ಲಿ೨೨ ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದರು. ಈ ಎಲ್ಲ ವ್ಯಕ್ತಿಗಳ ಮಾತುಕತೆಗಳನ್ನು ಟೇಪರಿಕಾರ್ಡ್‌ರ್ ಮಾಡಿಕೊಳ್ಳಲು ೨೨ ಮಂದಿ ರೋಗಿಗಳ ಜೀವನದಲ್ಲಿ ಮುಂದೆ ನಡೆವ ಘಟನೆಗಳನ್ನು ಆ ಇಬ್ಬರು ಸಂಶೋಧಕರು ಪರಿಶೀಲಿಸಿದ್ದರು. ಆತ್ಮಹತ್ಯಗೆ ತಯರಾಗಿದ್ದವರ ಧ್ವನಿಯಲ್ಲಿ ಇತರರಿಗಿಂತ ಬದಲಾವಣೆ ಕಂಡು ಬಂದಿತು. ಆತ್ಮಹತ್ಯೆಮಾಡಿಕೊಳ್ಳಲಿರುವ ಮತ್ತು ಸಾದಾ ವ್ಯಕ್ತಿಗಳಿಗೆ ಒಂದು ವಾಕ್ಯವನ್ನು ಓದಲು ಹೇಳಿದಾಗ ಈ ಇಬ್ಬರ ಧ್ವನಿಯಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣಲಾಯಿತು. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುವವರ ಧ್ವನಿ ಕ್ಷೀಣಗತಿಯಲ್ಲಿತ್ತು. ಆ ಧ್ವನಿ ರೀಕಾರ್ಡಿನಲ್ಲಿ ಪೊಳ್ಳಾಗಿರುವಂತೆ ಸ್ಪಷ್ಟವಾಯಿತು. ಮತ್ತು ಅದೇ ವ್ಯಕ್ತಿಗಳು ಆರೋಗ್ಯವಾಗಿದ್ದು ಯಾವ ದುರಾಲೋಚನೆ ಇಲ್ಲದೇ ಇರುವಾಗ ಮಾತನಾಡಿದ ಧ್ವನಿಗೂ ಮತ್ತು ಆತ್ಮಹತ್ಯೆಗೆ ತಯಾರಾಗಿದ್ದ ಸಮಯದಲ್ಲಿ ಮಾತನಾಡಿದ ಧ್ವನಿಗಳಿಗೆ ವ್ಯತ್ಯಾಸಗಳಿದ್ದವು.

ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದಾದ ವ್ಯಕ್ತಿಯ ಧ್ವನಿಯನ್ನು ಪರೀಕ್ಷಿಸಿದಾಗ ಈತ ಮುಂದೆ ಸಾಯಲಿದ್ದಾನೆ ಎಂದು ತಿಳಿದು ರಕ್ಷಿಸಬಹುದು. ಇದು ತೀರ ಸರಳವಾದ ವಿಧಾನ ಮತ್ತು ಸೂಕ್ಷ್ಮವಾದ ಮಾನಸಿಕ ಸ್ಥಿತಿಯನ್ನು ಅರಿಯಬಲ್ಲವಿಧಾನ.
*****