ಕೊರಳಲ್ಲಿ ಹಾಕಿಕೊಳ್ಳಬಹುದಾದ ಮಿನಿಕಂಪ್ಯೂಟರ್‌!!

ಕೊರಳಲ್ಲಿ ಹಾಕಿಕೊಳ್ಳಬಹುದಾದ ಮಿನಿಕಂಪ್ಯೂಟರ್‌!!

ಸಾಮಾನ್ಯವಾಗಿ ಮೊಬೈಲ್ ಫೋನ್‌ಗಳನ್ನು, ಗುರುತಿನ ಚೀಟಿಗಳನ್ನು ಕೊರಳಲ್ಲಿ ಹಾಕಿಕೊಂಡು ತಿರುಗಾಡುವವರನ್ನು ನೋಡಿದ್ದೇವೆ. ಈ ರೀತಿ ಕಂಪ್ಯೂಟರ್‌ಗಳನ್ನೇ ಕೊರಳಲ್ಲಿ ನೇತು ಹಾಕಿಕೊಂಡು ತಿರುಗಾಡುವುದನ್ನು ಕಂಡಿಲ್ಲ. ಹಾಗೇನಾದರೂ ಇದ್ದರೆ ಸೂಕ್ಷ್ಮ ಯಂತ್ರಗಳನ್ನು ತಯಾರಿಸುವ ಜಪಾನ್ ದೇಶಕ್ಕೆ ಮೀಸಲು ಎನ್ನಬಹುದು. ನಿಜ ಜಪಾನ್ ದೇಶದ National Electronic Corporation ಸಂಸ್ಥೆಯು ದೇಹದ ಮೇಲೆ ಧರಿಸಬಹುದಾದ ವಯಕ್ತಿಕ ಕಂಪ್ಯೂಟರ್ಗಳನ್ನು (P.C.) ವಿನ್ಯಾಸಗೊಳಿಸಿದೆ. ಈ P.C. ಗಳು ಉದ್ಯಮಿಗಳಿಗೆ ಅವಶ್ಯಕವಾಗಿಬೇಕಾಗುತ್ತವೆ ಎಂದು ಬಳಸುವವರು ಹೇಳುತ್ತಾರೆ. ಇದನ್ನು ಕತ್ತಿನಲ್ಲಿಯೂ, ಸೊಂಟದಲ್ಲಿಯೂ ಸಿಕ್ಕಿಸಿಕೊಳ್ಳಬಹುದು. ವೈದ್ಯಕೀಯ ರಂಗದಲ್ಲಿ ಇದು ಹೆಚ್ಚು ಪ್ರಯೋಜನವಾಗುತ್ತದೆ. ಚಿಕಿತ್ಸೆಯಗುಣಮಟ್ಟವನ್ನು ಹೆಚ್ಚಿಸುತ್ತದೆಂದು ಅಲ್ಲಿಯ ವೈದ್ಯರು ಹೇಳುತ್ತಾರೆ. ವೈದ್ಯರು ರೋಗಿಗಳಿಂದ ಸಾವಿರಾರು ಕಿ.ಮೀ. ಗಳ ದೂರವಿದ್ದರೂ ರೋಗಿಯ ಶರೀರದ ಮೇಲೆ ಅಳವಡಿಸಿದ ಕಂಪ್ಯೂಟರ್ ಮೂಲಕ ರೋಗಿಯ ದೇಹಸ್ಥಿತಿಯ ಬಗೆಗೆ ಮಾಹಿತಿಗಳನ್ನು ಸಂಗ್ರಹಿಸಿ ಕಂಪ್ಯೂಟರ್ ಮೂಲಕವೇ ಪರಿಹಾರ ನೀಡಬಲ್ಲದು.

ಈ ಕಂಪ್ಯೂಟರ್‌ ಮಿನಿಕೀರ್ಬೊರ್ಡ್‌, ಡಾಯ್ಸ್‌ಬೋರ್ಡ್, ಟೆಲಿಫೋನ್, ಫ್ಯಾಕ್ಸ್ ಸಿ.ಡಿ. ರೋಮ್ಸ್ ಕ್ಯಾಮರಾ ಇಂಥಹ ವೈವಿಧ್ಯಮಯ ವಸ್ತುಗಳನ್ನು ಹೊಂದಿದೆ, ಎಂದರೆ ಆಶ್ಚರ್ಯವಾಗಬಹುದು. ಇವೆಲ್ಲವೂ ಸೇರಿ ಕೊರಳಲ್ಲಿ ಒಂದು ಕೆ.ಜಿ. ಭಾರವಾಗಬಹುದೆಂದು ಹೇಳುತ್ತಾರೆ. ಇವು ಬಲಿಷ್ಟವಾದ ಪ್ಲಾಸ್ಟಿಕ್‌ನಿಂದ ತಯಾರಾಗಿರುತ್ತವೆ. ಮಾತ್ರವಲ್ಲ ಶರೀರ ಸೆನ್ಸರ್‌ಗಳು, ರೋಗಿಯ ಚಿತ್ರಗಳನ್ನು ರವಾನಿಸಲು ವಿಡಿಯೋ ಕ್ಯಾಮರಾ ವೈದ್ಯಕೀಯ ವಿಶ್ವಕೋಶ ಇವುಗಳನ್ನು ಸಹ ಇದರಲ್ಲಿ ಅಳವಡಿಸಲಾಗಿದೆ. ಇದೊಂದು ಕ್ರಾಂತಿಕಾರಿ ಶೋಧನೆಯಲ್ಲವೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅವಾರ್ಡ್
Next post ನಮ್ಮ ಕೇರಿಯ ಚಂದ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…