ವಿಟಾಮಿನ ‘ಸಿ’ ಯು ರಕ್ತದಲ್ಲಿಯ ಸೀಸದ ಪ್ರಮಾಣದ ಮೇಲೆ ನೇರವಾದ ಪರಿಣಾಮ ಬೀರುತ್ತದೆ ಎಂದು ಇತ್ತೀಚಿನ ಸಂಶೋಧನಗಳಿಂದ ದೃಢಪಟ್ಟಿದೆ. ಅಮೇರಿಕಾ ಪರಿಸರ, ಪರಿಸರ ರಕ್ಷಣಾ ಸಂಸ್ಥೆಯ ಹೊಸ ಅಧ್ಯಯನ ಪ್ರಕಾರ “ಎಸ್ಕಾರ್ಬಿಕ್ ಆಮ್ಲ” (ವಿಟಾಮಿನ್-ಸಿ) ಕಡಿಮೆಯಾಗುವುದು ರಕ್ತದಲ್ಲಿ ಸೀಸದ ಪ್ರಮಾಣವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಸೀಸದಿಂದ ಕೂಡಿದ ಧೂಳು, ಸೀಸದಿಂದ ಕೂಡಿದ ಪೆಂಟ್‌ಗಳು ರಕ್ತದಲ್ಲಿ ಸೀಸದ ಪ್ರಮಾಣವನ್ನು ಹೆಚ್ಚಿಸುತ್ತದೆ. ವೈದ್ಯಕೀಯ ಪ್ರಯೋಗವೊಂದು ವಿಟಾಮಿನ್ – ಸಿ ಮತ್ತು ರಕ್ತದಲ್ಲಿರುವ ಸೀಸದ ಪ್ರಮಾಣದ ಸಂಬಂಧವನ್ನು ದೃಢಗೂಳಿಸಿದೆ. ಆದರೂ 1000 mg ವಿಟಾಮಿನ್-ಸಿಯು, ಧೂಮಪಾನಿಗಳ ರಕ್ತದಲ್ಲಿರುವ ಸೀಸದ ಪ್ರಮಾಣವನ್ನು ಕಡಿಮೆಗೊಳಿಸುತ್ತ ಹೋಗುತ್ತದೆ. ಧೂಮಪಾನವು ವಿಟಾಮಿನ್ ಸಿಯು ಜೈವಿಕ ವಿಭಜನೆಯನ್ನು ಅಧಿಕಗೊಳಿಸವದೇ ಹೆಚ್ಚು, ಇದರಿಂದ ಸೀಸದ ಪ್ರಮಾಣವು ದೇಹ ಸೇರುವುದೆಂದು ಸಂಶೋಧನೆಗಳಿಂದ ದೃಢಪಟ್ಟಿದೆ.

ಸೀಸದ ಪ್ರಮಾಣವು ದೇಹದಲ್ಲಿ ಹೆಚ್ಚುವುದು ಅನಾರೋಗ್ಯಕ್ಕೆ ಪ್ರಮುಖ ಕಾರಣವಾಗಿ ತಲೆನೋವು, ಅನೀಮಿಯಾ, ನೆನಪಿನ ಶಕ್ತಿಕಡಿಮೆಗೊಳಿಸುವಿಕೆ, ಕಿಡ್ನಿ-ರೋಗ, ಹೊಟ್ಟೆ ನೋವು ಮುಂತಾದವುಗಳು ಕಾಣಸಿಕೊಳ್ಳುವ ಸಾಧ್ಯತೆಗಳಿವೆ. ಮಾನವನಲ್ಲಿ ಕೆಲವು ಸಸ್ತನಿಗಳಂತೆ ವಿಟಾಮಿನ್ ‘ಸಿ’ ದೇಹದಲ್ಲಿಯೇ ಉತ್ಪತ್ತಿಯಾಗುವುದಿಲ್ಲ. ಇದು ಆಹಾರದಿಂದಲೇ ಲಭ್ಯವಾಗುತ್ತದೆ. ಧೂಮಪಾನಿಗಳಲ್ಲಿ ೬೦೦ ಮಿ. ಗ್ರಾಂ ಧೂಮಪಾನವಮ್ನ ಸೇವಿಸಿದಾಗ ೧೦೦ ಗ್ರಾಂ ವಿಟಾಮಿನ್ ಸಿ, ಅನ್ನು ಪ್ರತಿದಿನ ತೆಗೆದುಕೊಳ್ಳಬೇಕಾಗುತ್ತದೆ. (ಅದನ್ನು ಆರ್.ಡಿ ಎ. ಅಥವಾ ರೆಕಮಂಡೆಡ್ ಡೈಲಿ ಎಲಿವನ್ಸ್ ಎನ್ನುತ್ತಾರೆ) ಮಕ್ಕಳಿಗೆ ದಿನವೊಂದಕ್ಕೆ ೪೫ ಮಿ.ಗ್ರಾಂ. ವಿಟಾಮಿನ್ ‘ಸಿ’ ಆರೋಗ್ಯಕ್ಕೆ ಒಳ್ಳೆಯದು. ಸಮಗಾತ್ರದ ಕಿತ್ತಳೆ ಹಣ್ಣು ೬೦ ರಿಂದ ೮೦ ಮಿ. ಗ್ರಾ. ವಿಟಾಮಿನ್ ‘ಸಿ’ ಅನ್ನು ಹೊಂದಿರುತ್ತದೆ.
*****